SOCIAL MEDIA

Newsletter

PARTNER SITES
Select Language Select State

BBK 13 : ಮನೆಯವರಿಂದ ಬಂದ ಪತ್ರಕ್ಕಾಗಿ ರೇಸ್‌.. ಯಾರ ಕೈಗೆ ತಲುಪುತ್ತೆ ಲೆಟರ್‌

‘ಬಿಗ್ ಬಾಸ್’ ಮನೆಯ ಪತ್ರ ಪಡೆಯುವ ರೇಸ್ ಮತ್ತಷ್ಟು ರೋಚಕ ಹಂತಕ್ಕೆ ತಲುಪಿದೆ. ಈ ಮೊದಲು ನಡೆದ ಟಾಸ್ಕ್‌ನಲ್ಲಿ ನಿರಾಸೆ ಅನುಭವಿಸಿದ್ದ ಕ್ಯಾಪ್ಟನ್ ಜಗದೀಶ್‌ಗೆ ಮನೆಯವರ ಸಂದೇಶವನ್ನು ಪಡೆದುಕೊಳ್ಳಲು ಬಿಗ್ ಬಾಸ್ ಮತ್ತೊಂದು ಸುವರ್ಣ ಅವಕಾಶವನ್ನು ನೀಡಿದೆ. ಜಗದೀಶ್ ಮತ್ತು ಸೋನಿಕಾ ಅವರ ಲೆಟರ್ ಪಡೆಯಲು ಮನೆಯ ಇತರ ಸದಸ್ಯರು ಈ ಟಾಸ್ಕ್ ಅಲ್ಲಿ ಭಾಗಿಯಾಗಿದ್ದಾರೆ.

Written By Yashaswini V
Published: Nov 04, 2026, 02:58 PM IST | Updated: Nov 04, 2026, 03:05 PM IST
Join

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಲೆಟರ್‌ ಟಾಸ್ಕ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮನೆಯವರಿಂದ ಬಂದಿರುವ ಲೆಟರ್‌ ಅನ್ನು ಪಡೆಯಲು ಸ್ಪರ್ಧಿಗಳ ಹೋರಾಟ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಈ ಹಿಂದೆ ನಡೆದ ಟಾಸ್ಕ್‌ನಲ್ಲಿ ಕ್ಯಾಪ್ಟನ್ ಜಗದೀಶ್ ಗೆ  ನಿರಾಸೆಯಾಗಿತ್ತು. ಇದೀಗ ಬಿಗ್ ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಈ ಬಾರಿ ಜಗದೀಶ್ ಮಾತ್ರವಲ್ಲದೆ ಸೋನಿಕಾ ಅವರಿಗೂ ಮನೆಯವರಿಂದ ಬಂದ ಪತ್ರ ಪಡೆಯುವ ಅವಕಾಶ ಸಿಕ್ಕಿದೆ. ಹೀಗಾಗಿ ಮನೆಯ ಸದಸ್ಯರು ಈ ಸವಾಲನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಕಳೆದ ಎರಡು ತಿಂಗಳಿಂದ ಕುಟುಂಬದವರಿಂದ ದೂರ ಉಳಿದಿದ್ದು ಇದೀಗ ಅವರಿಗೆ ಮನೆಯವರ ಪತ್ರ ಸಿಕ್ಕಿರುವುದು ಭಾವನಾತ್ಮಕ ಕ್ಷಣಗಳಿಗೆ ಕಾರಣವಾಗಿದೆ. ಆದರೆ ಈ ಪತ್ರಗಳನ್ನು ನೇರವಾಗಿ ಸ್ಪರ್ಧಿಗಳ ಕೈಗೆ ನೀಡದೆ, ಮನೆಯವರ ಲೆಟರ್ ಪಡೆಯಲು ವಿವಿಧ ಟಾಸ್ಕ್‌ಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ನ ಬಿಗ್ ಬಾಸ್ ನೀಡಿದ್ದಾರೆ.

ಕ್ಯಾಪ್ಟನ್‌ ಜಗದೀಶ್‌ಗೆ ಸಿಗದ ಲೆಟರ್!
ಈ ಹಿಂದೆ ನಡೆದ ಲೆಟರ್‌ ಟಾಸ್ಕ್‌ನಲ್ಲಿ ಕ್ಯಾಪ್ಟನ್ ಜಗದೀಶ್ ಗೆ ಜಯ ಸಿಕ್ಕಿರಲಿಲ್ಲ. ಹೀಗಾಗಿ ಮನೆಯವರಿಂದ ಬಂದಿರುವ ಸಂದೇಶವನ್ನು ಓದುವ ಅವಕಾಶ ಅವರ ಕೈತಪ್ಪಿತ್ತು. ಇದರಿಂದ ನಿರಾಸೆಗೊಂಡಿದ್ದ ಜಗದೀಶ್ ಗೆ ಇದೀಗ ಬಿಗ್ ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಈ ಬಾರಿ ಸೋನಿಕಾ ಅವರಿಗೂ ಪತ್ರ ಪಡೆಯುವ ಅವಕಾಶ ಸಿಕ್ಕಿರುವುದು ವಿಶೇಷ.

ಈ ಬಾರಿಯ ಟಾಸ್ಕ್ ಸಾಕಷ್ಟು ವಿಭಿನ್ನವಾಗಿದ್ದು, ಟಾಸ್ಕ್‌ನಲ್ಲಿ ಸ್ಪರ್ಧಿಗಳು ಕಣ್ಣಿಗೆ ಪಟ್ಟಿ ಧರಿಸಿ ಬಳಿಕ ಹಗ್ಗಗಳ ಸಹಾಯದಿಂದ ಬೋರ್ಡ್ ಮೇಲಿರುವ ಚೆಂಡನ್ನು ನಿಯಂತ್ರಿಸುತ್ತಾ ಸಾಗಿಸಬೇಕು. ಬೋರ್ಡ್‌ನಲ್ಲಿ ಹಲವು ರಂಧ್ರಗಳನ್ನು ಮಾಡಲಾಗಿದ್ದು, ಚೆಂಡು ಯಾವುದೇ ರಂಧ್ರದೊಳಗೆ ಬೀಳದಂತೆ ಎಚ್ಚರಿಕೆಯಿಂದ ಅಂತಿಮ ಗುರಿ ತಲುಪಿಸಬೇಕು. ಈ ವೇಳೆ ಕಣ್ಣಿಗೆ ಪಟ್ಟಿ ಧರಿಸಿರುವ ಸ್ಪರ್ಧಿಗಳಿಗೆ ಉಳಿದ ಮನೆಯ ಸದಸ್ಯರು ಧ್ವನಿಯ ಮೂಲಕ ಮಾರ್ಗದರ್ಶನ ನೀಡಬೇಕಿದೆ.

ಸಣ್ಣ ತಪ್ಪು ಮಾಡಿದರೂ ಚೆಂಡು ರಂಧ್ರದೊಳಗೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಬ್ಬ ಸ್ಪರ್ಧಿಯೂ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಒಬ್ಬರ ಸೂಚನೆಯನ್ನು ಮತ್ತೊಬ್ಬರು ಸರಿಯಾಗಿ ಅರ್ಥಮಾಡಿಕೊಂಡು ಆಟವಾಡುವುದು ಇಲ್ಲಿ ಅತ್ಯಂತ ಮುಖ್ಯವಾಗಿದೆ.

ಮನೆಯವರಿಂದ ಬಂದಿರುವ ಪತ್ರವನ್ನು ಓದಲು ಜಗದೀಶ್ ಮತ್ತು ಸೋನಿಕಾ ಕಾತುರದಿಂದ ಕಾಯುತ್ತಿದ್ದಾರೆ. ಇಷ್ಟು ದಿನ ಕುಟುಂಬದವರನ್ನು ನೋಡದೆ, ಅವರ ಧ್ವನಿ ಕೇಳದೆ ಬಿಗ್ ಬಾಸ್ ಮನೆಯಲ್ಲಿ ದಿನ ಕಳೆಯುತ್ತಿರುವ ಸ್ಪರ್ಧಿಗಳಿಗೆ ಮನೆಯವರ ಸಂದೇಶ ಎಂದರೆ ಅದೊಂದು ಭಾವನಾತ್ಮಕ ಕ್ಷಣವೇ ಸರಿ.

ಹೀಗಾಗಿ ಈ ಬಾರಿ ಟಾಸ್ಕ್ ಗೆಲ್ಲಿಸುವ ಜವಾಬ್ದಾರಿ ಉಳಿದ ಸ್ಪರ್ಧಿಗಳ ಮೇಲಿದೆ. ಕಣ್ಣಿಗೆ ಪಟ್ಟಿ ಧರಿಸಿರುವ ಸದಸ್ಯರಿಗೆ ಸರಿಯಾದ ಮಾರ್ಗದರ್ಶನ ನೀಡಿ ಬಾಲ್ ಅನ್ನು ಗುರಿ ತಲುಪಿಸುವುದು ಮನೆಯವರ ಮುಂದಿರುವ ದೊಡ್ಡ ಸವಾಲಾಗಿದೆ.

ಈ ಟಾಸ್ಕ್‌ನಲ್ಲಿ ಯಾರು ಎಷ್ಟು ಚೆನ್ನಾಗಿ ಹೊಂದಾಣಿಕೆ ಮಾಡಿಕೊಂಡು ಆಡುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿದೆ. ಹಿಂದಿನ ಟಾಸ್ಕ್‌ನಲ್ಲಿ ನಿರಾಸೆ ಅನುಭವಿಸಿದ್ದ ಜಗದೀಶ್ ಅವರಿಗೆ ಈ ಬಾರಿ ಅದೃಷ್ಟ ಒಲಿಯುತ್ತಾ? ಸೋನಿಕಾ ಅವರಿಗೂ ಮನೆಯವರ ಪತ್ರ ಸಿಗುತ್ತಾ? ಅಥವಾ ಸಣ್ಣ ತಪ್ಪಿನಿಂದ ಮತ್ತೆ ಅವಕಾಶ ಕೈತಪ್ಪುತ್ತಾ? ಎಂದು ಕಾದು ನೋಡಬೇಕಿದೆ. 
‌
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES