• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಅಗ್ನಿವೀರರಿಗೆ ಕೇಂದ್ರದ ಭರ್ಜರಿ ಗಿಫ್ಟ್: ಸೇವಾವಧಿ ಇನ್ನು 2 ವರ್ಷ ವಿಸ್ತರಣೆ!

ಅಗ್ನಿವೀರರಿಗೆ ಕೇಂದ್ರದ ಭರ್ಜರಿ ಗಿಫ್ಟ್: ಸೇವಾವಧಿ ಇನ್ನು 2 ವರ್ಷ ವಿಸ್ತರಣೆ!

ಕೇಂದ್ರ ಸರ್ಕಾರ ಅಗ್ನಿವೀರರ ಸೇವಾವಧಿಯನ್ನು ನಾಲ್ಕರಿಂದ ಆರು ವರ್ಷಗಳಿಗೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಅಗ್ನಿವೀರರಿಗೆ ಹೆಚ್ಚುವರಿ ಎರಡು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ. ಜೊತೆಗೆ ಸುಧಾರಿತ ವೇತನ, ಹೆಚ್ಚುವರಿ ಸೇವಾ ನಿಧಿ ಹಾಗೂ ಕಾಯಂ ಸೇನಾ ನೇಮಕಾತಿಗೆ ಮತ್ತೊಂದು ಅವಕಾಶ ದೊರೆಯಲಿದೆ. ಈ ನಿರ್ಧಾರ ಸೇನಾ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಬದಲಾವಣೆಯಾಗಲಿದೆ.

Written ByPuttaraj K Alur
Published: Nov 04, 2026, 04:50 PM IST|Updated: Nov 04, 2026, 05:11 PM IST
joinshare
ಅಗ್ನಿವೀರರಿಗೆ ಕೇಂದ್ರದ ಭರ್ಜರಿ ಗಿಫ್ಟ್: ಸೇವಾವಧಿ ಇನ್ನು 2 ವರ್ಷ ವಿಸ್ತರಣೆ!
Image Credit: Agnipath Scheme

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಪಶ್ಚಿಮ ಬಂಗಾಳದಲ್ಲಿ ಖಾಕಿ ಭರ್ಜರಿ ಬೇಟೆ; TMC ಕಚೇರಿಯಲ್ಲಿ ₹1.02 ಕೋಟಿ, ರೈಲು ನಿಲ್ದಾಣದಲ್ಲಿ ₹1.40 ಕೋಟಿ ಪತ್ತೆ!

ಪಶ್ಚಿಮ ಬಂಗಾಳದಲ್ಲಿ ಖಾಕಿ ಭರ್ಜರಿ ಬೇಟೆ; TMC ಕಚೇರಿಯಲ್ಲಿ ₹1.02 ಕೋಟಿ, ರೈಲು ನಿಲ್ದಾಣದಲ್ಲಿ ₹1.40 ಕೋಟಿ ಪತ್ತೆ!

2

‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರಕ್ಕೆ ಪಡೆದ ಸಂಭಾವನೆ ಎಷ್ಟು?

3

ಲವರ್‌ ಜೊತೆ ಬೆಡ್‌ ಮೇಲೆ ಮಗಳು.. ನೆತ್ತಿಗೇರಿತು ಕಣ್ಣಾರೆ ಕಂಡ ಅಪ್ಪನ ಸಿಟ್ಟು..! ಮುಂದಾಗಿದ್ದು ಮಾತ್ರ ದುರಂತ

4

ಅಗ್ನಿವೀರರಿಗೆ ಕೇಂದ್ರದ ಭರ್ಜರಿ ಗಿಫ್ಟ್: ಸೇವಾವಧಿ ಇನ್ನು 2 ವರ್ಷ ವಿಸ್ತರಣೆ!

5

ಐತಿಹಾಸಿಕ ದೇವೀರಮ್ಮ ಜಾತ್ರೆಗೆ ಕ್ಷಣಗಣನೆ : ವಯೋಮಿತಿ, ಸಮಯ ಸೇರಿ ಮಹತ್ವದ ಮಾರ್ಗಸೂಚಿ ಬಿಡುಗಡೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Agniveer Service Extension: ದೇಶದ ಯುವಜನತೆಗೆ ಹಾಗೂ ಭಾರತೀಯ ಸೇನೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿಯೊಂದನ್ನ ನೀಡಿದೆ. ಕೇಂದ್ರದ ಅಗ್ನಿವೀರ್ (Agniveer) ಯೋಜನೆಯಡಿ ನೇಮಕಗೊಂಡಿರುವ ಅಗ್ನಿವೀರರ ಸೇವಾವಧಿಗೆ ಹೆಚ್ಚುವರಿಯಾಗಿ ಎರಡು ವರ್ಷಗಳ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಎನ್.ಎಸ್.ರಾಜಾ ಸುಬ್ರಮಣಿ ಅವರು ಪರಿಷ್ಕೃತ ಯೋಜನೆಯ ಪ್ರಮುಖ ವಿವರಗಳನ್ನ ಪ್ರಕಟಿಸಿದ್ದಾರೆ. ಈ ನಿರ್ಧಾರದಿಂದ 4 ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರ ಸೇನೆಯಿಂದ ಹೊರಬರಬೇಕಿದ್ದ ಅಗ್ನಿವೀರರಿಗೆ ಮತ್ತೆರಡು ವರ್ಷಗಳ ಕಾಲ ದೇಶಸೇವೆ ಮುಂದುವರಿಸುವ ಅವಕಾಶ ದೊರೆಯಲಿದೆ.

ನಾಲ್ಕರಿಂದ ಆರು ವರ್ಷಕ್ಕೆ ಸೇವಾವಧಿ ಹೆಚ್ಚಳ

2022ರಲ್ಲಿ ಜಾರಿಗೆ ಬಂದ ಅಗ್ನಿವೀರ್‌ ಯೋಜನೆಯಡಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಅಗ್ನಿವೀರರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ನಾಲ್ಕು ವರ್ಷಗಳ ಸೇವೆ ಪೂರ್ಣಗೊಂಡ ಬಳಿಕ ಶೇ.25ರಷ್ಟು ಅಭ್ಯರ್ಥಿಗಳನ್ನು ಮಾತ್ರ ಅರ್ಹತೆ, ಕಾರ್ಯಕ್ಷಮತೆ ಹಾಗೂ ಸೇನೆಯ ಅಗತ್ಯಗಳ ಆಧಾರದ ಮೇಲೆ ಕಾಯಂ ಸೇವೆಗೆ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಇತ್ತು. ಉಳಿದ ಶೇ.75ರಷ್ಟು ಅಗ್ನಿವೀರರು ನಾಲ್ಕು ವರ್ಷಗಳ ನಂತರ ಸೇನೆಯಿಂದ ನಿರ್ಗಮಿಸಬೇಕಾಗಿತ್ತು. ಆದರೆ ಇದೀಗ ಪರಿಷ್ಕೃತ ವ್ಯವಸ್ಥೆಯಡಿ ಈ ಶೇ.75ರಷ್ಟು ಅಗ್ನಿವೀರರಿಗೆ ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಂದರೆ ಆರಂಭಿಕ ನಾಲ್ಕು ವರ್ಷಗಳ ಸೇವೆಯೊಂದಿಗೆ ಮತ್ತೆರಡು ವರ್ಷಗಳನ್ನ ಸೇರಿಸಿದರೆ ಒಟ್ಟು ಸೇವಾವಧಿ ಆರು ವರ್ಷಗಳವರೆಗೆ ವಿಸ್ತರಣೆಯಾಗಲಿದೆ. ಈ ಮೂಲಕ ಈ ಹಿಂದೆ ನಾಲ್ಕು ವರ್ಷಕ್ಕೆ ಸೀಮಿತವಾಗಿದ್ದ ಸೇವೆಯ ಅವಧಿಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.

ಕಾಯಂ ಸೇನಾ ಸೇವೆಗೂ ಮತ್ತೊಂದು ಅವಕಾಶ

ಈ ಹೊಸ ನಿರ್ಧಾರದ ಪ್ರಮುಖ ವಿಶೇಷವೆಂದರೆ, ಹೆಚ್ಚುವರಿ ಎರಡು ವರ್ಷಗಳ ಸೇವೆ ಪೂರ್ಣಗೊಳಿಸಿದ ಅಗ್ನಿವೀರರಿಗೂ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕಾಯಂ ನೇಮಕಾತಿ ಪಡೆಯಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ಅವಧಿಯ ಸೇವೆಯ ನಂತರವೂ ಸೇನೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳನ್ನ ನಿಗದಿತ ಅರ್ಹತಾ ಮಾನದಂಡಗಳು ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನದ ಆಧಾರದ ಮೇಲೆ ಕಾಯಂ ಸೇವೆಗೆ ಪರಿಗಣಿಸಲಾಗುತ್ತದೆ.

ಈ ಹಿಂದೆ ನಾಲ್ಕು ವರ್ಷಗಳ ಸೇವೆ ಮುಗಿದ ಬಳಿಕ ಕಾಯಂ ನೇಮಕಾತಿಗೆ ಆಯ್ಕೆಯಾಗದ ಅಭ್ಯರ್ಥಿಗಳಿಗೆ ಸೇನೆಯಲ್ಲೇ ಮುಂದುವರಿಯುವ ಅವಕಾಶ ಸೀಮಿತವಾಗಿತ್ತು. ಆದರೆ ಹೊಸ ವ್ಯವಸ್ಥೆಯು ಅಂತಹ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನ ಒದಗಿಸಲಿದೆ. ಇದರಿಂದ ಅಗ್ನಿವೀರರು ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಲು ಹೆಚ್ಚಿನ ಸಮಯ ಸಿಗಲಿದೆ. ಆದರೆ ಹೆಚ್ಚುವರಿ ಎರಡು ವರ್ಷಗಳ ಸೇವೆ ಅಥವಾ ಕಾಯಂ ನೇಮಕಾತಿ ಸ್ವಯಂಚಾಲಿತವಾಗಿ ದೊರೆಯುವುದಿಲ್ಲ ಎಂಬುದನ್ನ ಗಮನಿಸಬೇಕು. ಆಯ್ಕೆ ಪ್ರಕ್ರಿಯೆ ನಿಗದಿತ ಮಾನದಂಡಗಳಿಗೆ ಒಳಪಟ್ಟಿರುತ್ತದೆ.

ಅಗ್ನಿವೀರರಿಗೆ ಸಿಗುವ ಪ್ರಮುಖ ಲಾಭಗಳೇನು?

ಸೇವಾವಧಿ ವಿಸ್ತರಣೆಯಿಂದ ಅಗ್ನಿವೀರರಿಗೆ ಹಲವು ರೀತಿಯ ಪ್ರಯೋಜನಗಳು ದೊರೆಯಲಿವೆ. ಮೊದಲನೆಯದಾಗಿ ನಾಲ್ಕು ವರ್ಷಗಳ ನಂತರ ಉದ್ಯೋಗದ ಮುಂದಿನ ಹಂತದ ಬಗ್ಗೆ ಎದುರಾಗುತ್ತಿದ್ದ ಅನಿಶ್ಚಿತತೆ ಕಡಿಮೆಯಾಗಲಿದೆ. ಹೆಚ್ಚುವರಿ ಎರಡು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶದಿಂದ ಅವರಿಗೆ ಹೆಚ್ಚಿನ ಅನುಭವ ಮತ್ತು ತರಬೇತಿ ಪಡೆಯಲು ಸಾಧ್ಯವಾಗಲಿದೆ.

ಎರಡನೆಯದಾಗಿ, ಹೆಚ್ಚುವರಿ ಸೇವಾವಧಿಯಲ್ಲಿ ಸುಧಾರಿತ ವೇತನ ಸೌಲಭ್ಯವನ್ನ ಒದಗಿಸುವುದಾಗಿಯೂ ಘೋಷಿಸಲಾಗಿದೆ. ಇದರೊಂದಿಗೆ ಎರಡು ವರ್ಷಗಳ ವಿಸ್ತೃತ ಅವಧಿ ಪೂರ್ಣಗೊಳಿಸಿದ ನಂತರ ಸೇನೆಯಿಂದ ನಿರ್ಗಮಿಸಲು ನಿರ್ಧರಿಸುವವರಿಗೆ ಹೆಚ್ಚುವರಿ ಸೇವೆಗೆ ಅನುಗುಣವಾಗಿ ಸುಧಾರಿತ ಸೇವಾ ನಿಧಿ (Seva Nidhi) ಪ್ಯಾಕೇಜ್ ದೊರೆಯಲಿದೆ. ಹೀಗಾಗಿ ಅಗ್ನಿವೀರರಿಗೆ ಆರ್ಥಿಕವಾಗಿಯೂ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ.

ಮೂರನೆಯದಾಗಿ ಕಾಯಂ ಸೇನಾ ಸೇವೆಗೆ ಸೇರುವ ಆಸಕ್ತ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಸಿಗಲಿದೆ. ಈ ಹಿಂದೆ ಶೇ.25ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಲಭ್ಯವಿದ್ದ ಕಾಯಂ ನೇಮಕಾತಿಯ ಅವಕಾಶದ ಹೊರತಾಗಿ, ಉಳಿದ ಅಭ್ಯರ್ಥಿಗಳಿಗೂ ಹೆಚ್ಚುವರಿ ಸೇವೆಯ ನಂತರ ಅರ್ಹತೆ ಆಧರಿಸಿ ಪರಿಗಣನೆಗೆ ಒಳಪಡುವ ಅವಕಾಶ ದೊರೆಯಲಿದೆ.

ಸೇನಾ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಬದಲಾವಣೆ

ಅಗ್ನಿವೀರ್ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಯುವಕರಿಗೆ ಹೆಚ್ಚಿನ ಕಾಲ ಸೇನೆಯೊಂದಿಗೆ ಗುರುತಿಸಿಕೊಳ್ಳಲು ಈ ನಿರ್ಧಾರ ನೆರವಾಗಲಿದೆ. ನಾಲ್ಕು ವರ್ಷಗಳ ಸೇವೆಯಲ್ಲಿ ಪಡೆದ ಅನುಭವವನ್ನು ಮುಂದಿನ ಎರಡು ವರ್ಷಗಳಲ್ಲಿಯೂ ವಿಸ್ತರಿಸಿಕೊಳ್ಳಬಹುದು. ಸೇನೆಯ ಕಾರ್ಯವೈಖರಿ, ಶಿಸ್ತು, ತರಬೇತಿ ಹಾಗೂ ಜವಾಬ್ದಾರಿಗಳಲ್ಲಿ ಮತ್ತಷ್ಟು ಪರಿಣತಿ ಗಳಿಸಲು ಇದು ನೆರವಾಗಲಿದೆ.

ಒಟ್ನಲ್ಲಿ ಅಗ್ನಿವೀರರ ಸೇವಾವಧಿಯನ್ನ ನಾಲ್ಕರಿಂದ ಆರು ವರ್ಷಗಳವರೆಗೆ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರವು ಅಗ್ನಿವೀರ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೆಚ್ಚುವರಿ ಸೇವಾವಕಾಶ, ಸುಧಾರಿತ ವೇತನ, ಸೇವಾ ನಿಧಿಯ ಪ್ರಯೋಜನ ಹಾಗೂ ಕಾಯಂ ಸೇನಾ ನೇಮಕಾತಿಗೆ ಮತ್ತೊಂದು ಅವಕಾಶ ಈ ಪರಿಷ್ಕೃತ ವ್ಯವಸ್ಥೆಯ ಪ್ರಮುಖ ಅಂಶಗಳಾಗಿವೆ. ಇದರಿಂದ ಸಾವಿರಾರು ಅಗ್ನಿವೀರರಿಗೆ ತಮ್ಮ ಸೇನಾ ವೃತ್ತಿಜೀವನವನ್ನ ಮುಂದುವರಿಸಲು ಹೊಸ ಅವಕಾಶ ದೊರೆಯಲಿದೆ.

Add Zee News as a Preferred Source
TAGS:
Kannada News