• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಲವರ್‌ ಜೊತೆ ಬೆಡ್‌ ಮೇಲೆ ಮಗಳು.. ನೆತ್ತಿಗೇರಿತು ಕಣ್ಣಾರೆ ಕಂಡ ಅಪ್ಪನ ಸಿಟ್ಟು..! ಮುಂದಾಗಿದ್ದು ಮಾತ್ರ ದುರಂತ

ಲವರ್‌ ಜೊತೆ ಬೆಡ್‌ ಮೇಲೆ ಮಗಳು.. ನೆತ್ತಿಗೇರಿತು ಕಣ್ಣಾರೆ ಕಂಡ ಅಪ್ಪನ ಸಿಟ್ಟು..! ಮುಂದಾಗಿದ್ದು ಮಾತ್ರ ದುರಂತ

ಆಕೆಗಿನ್ನೂ 19 ವರ್ಷ.. ಅವನಿಗೆ 24 ವರ್ಷ.. ಅವನು ಆ ಯುವತಿಯ ಅಪ್ಪನ ಬಳಿಯೇ ಕೆಲಸ ಮಾಡಿಕೊಂಡಿದ್ದ. ಇದೆಲ್ಲಾ ಗೊತ್ತಿದ್ದರೂ ಎಲ್ಲವನ್ನು ಮೀರಿ ಆಕೆ ಅವನ ಸಂಘ ಬೆಳೆಸಿಬಿಟ್ಟಿದ್ಲು‌. ಈ ವಿಷಯ ಅವರಪ್ಪನಿಗೆ ಗೊತ್ತಾಗಿ ಇಬ್ಬರನ್ನು ಲಾಕ್ ಮಾಡಬೇಕು ಪಕ್ಕಾ ಪ್ಲಾನ್ ಮಾಡಿದ್ದ. ಆದರೆ ಅಲ್ಲಿ ಮುಂದಾಗಿದ್ದೆ ಬೇರೆ..

Written ByKrishna NK
Published: Nov 04, 2026, 05:18 PM IST|Updated: Nov 04, 2026, 05:25 PM IST
joinshare
ಲವರ್‌ ಜೊತೆ ಬೆಡ್‌ ಮೇಲೆ ಮಗಳು.. ನೆತ್ತಿಗೇರಿತು ಕಣ್ಣಾರೆ ಕಂಡ ಅಪ್ಪನ ಸಿಟ್ಟು..! ಮುಂದಾಗಿದ್ದು ಮಾತ್ರ ದುರಂತ
Image Credit: Crime News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಡತನ ನಿರ್ಮೂಲನೆಗೆ ಭಾರತದಲ್ಲಿ ಮಹತ್ವದ ಪ್ರಗತಿ : 27.1ರಿಂದ ಶೇ.2.6ಕ್ಕೆ ಇಳಿದ ಕಡು ಬಡತನ

ಬಡತನ ನಿರ್ಮೂಲನೆಗೆ ಭಾರತದಲ್ಲಿ ಮಹತ್ವದ ಪ್ರಗತಿ : 27.1ರಿಂದ ಶೇ.2.6ಕ್ಕೆ ಇಳಿದ ಕಡು ಬಡತನ

2

ಅಡಿಕೆ ಬೆಲೆಯಲ್ಲಿ ಏರಿಳಿತ; ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಇಂದಿನ ಧಾರಣೆ? ಇಲ್ಲಿದೆ ಸಂಪೂರ್ಣ ಮಾಹಿತಿ!

3

ಪಶ್ಚಿಮ ಬಂಗಾಳದಲ್ಲಿ ಖಾಕಿ ಭರ್ಜರಿ ಬೇಟೆ; TMC ಕಚೇರಿಯಲ್ಲಿ ₹1.02 ಕೋಟಿ, ರೈಲು ನಿಲ್ದಾಣದಲ್ಲಿ ₹1.40 ಕೋಟಿ ಪತ್ತೆ!

4

‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರಕ್ಕೆ ಪಡೆದ ಸಂಭಾವನೆ ಎಷ್ಟು?

5

ಲವರ್‌ ಜೊತೆ ಬೆಡ್‌ ಮೇಲೆ ಮಗಳು.. ನೆತ್ತಿಗೇರಿತು ಕಣ್ಣಾರೆ ಕಂಡ ಅಪ್ಪನ ಸಿಟ್ಟು..! ಮುಂದಾಗಿದ್ದು ಮಾತ್ರ ದುರಂತ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಹರೆಯದ ವಯಸ್ಸು ಹುಚ್ಚುಕೋಡಿ ಮನಸ್ಸು ಅಂತಾರೆ. ಅಂತೆಯೇ ಮೈಸೂರಲ್ಲಿ ಇದ್ಕೊಂಡು ಓದುತ್ತಿದ್ದ ಯುವತಿ ತನ್ನ ಅಪ್ಪನ ಕೈಕೆಳಗೆ ಕೆಲಸ ಮಾಡುತ್ತಿದ್ದ ಯುವಕನ ಸ್ನೇಹ, ಸಲುಗೆ ಬೆಳೆಸಿಬಿಟ್ಟಿದ್ಲು‌. ‌ಇದು ಅಪ್ಪ ಆನಂದನಿಗೆ ಗೊತ್ತಿಲ್ಲ ಅಂತಾ ಅಂದುಕೊಂಡು ಮೈಸೂರಿನಿಂದ ರಜೆಗೆ ಬಂದವಳು ಅಪ್ಪ-ಅಮ್ಮ ಮನೆಯಲ್ಲಿ ಇಲ್ಲಾ ಅಂತಾ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ಲು. ಆಗಲೇ ನೋಡಿ ನಡೆದಿದ್ದು ಘನಘೋರ.

ಹೌದು.. ಸ್ವೀಟ್ ಕಾರ್ನ್ ತಯಾರಿಸುವ ಯಂತ್ರಗಳ ತಯಾರಿ ಮಾಡುವ ಫ್ಯಾಕ್ಟರಿಯನ್ನು ತಮಿಳುನಾಡು ಮೂಲದ ಆನಂದ್ ಇಟ್ಟುಕೊಂಡಿದ್ದ. ಕೇರಳ ಮೂಲದ ಕಿರಣ್ ಆನಂದ್ ಬಳಿ ಕೆಲಸ ಮಾಡುತ್ತಿದ್ದ. ಈ ಆನಂದ್ ಗೆ ಮೂವರು ಮಕ್ಕಳು. ಎಲ್ಲರನ್ನು ಚೆನ್ನಾಗಿ ಓದಿಸಬೇಕು ಎಂಬ ಉದ್ದೇಶದಿಂದ ಮೈಸೂರಲ್ಲಿ ಹಾಸ್ಟೆಲ್ ನಲ್ಲಿಟ್ಟು ಓದಿಸುತ್ತಿದ್ದ. ಆದಾಗಲೇ ಕಿರಣ್ ಹಾಗೂ ಆನಂದನ ಹಿರಿ ಮಗಳ ನಡುವೆ ಸ್ನೇಹ, ಸಂಬಂಧ ಬೆಳೆದುಬಿಟ್ಟಿತ್ತು. ತನ್ನ ಮಗಳ ಜೊತೆ ಸ್ನೇಹ, ಸಲುಗೆಯಿಂದ ಇರುವ ವಿಚಾರ ತಿಳಿದಿದ್ದ ಆನಂದ್ ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಪ್ಲಾನ್ ಮಾಡಿದ್ದ.

ಹೀಗೆ ಮಗಳು ರಜೆಗೆ ಅಂತಾ ಮನೆಗೆ ಬಂದಿದ್ಲು. ಇದೇ ಸರಿಯಾದ ಸಮಯ ಎಂದು ಅರಿತ ಆನಂದ್ ನಿನ್ನೆ ಪತ್ನಿಯನ್ನು ಕರೆದುಕೊಂಡು ತಮಿಳುನಾಡಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಅಪ್ಪ, ಅಮ್ಮ ಮನೆಯಲ್ಲಿ ಇಲ್ಲಾ ಅಂತಾ ಪ್ರಿಯಕರನ ಜೊತೆ ಏಕಾಂತದಲ್ಲಿ ಇರಲು ಯುವತಿ ಕಿರಣ್ ನನ್ನು ಮನೆಗೆ ಕರೆಸಿಕೊಂಡಿದ್ದಳು. ಆದರೆ ತಮಿಳುನಾಡಿಗೆ ಹೋಗ್ತಿವಿ ಎಂದಿದ್ದ ಆನಂದ್ ಕೆಲವೇ ಗಂಟೆಗಳಲ್ಲಿ ವಾಪಸ್ ಬಂದಿದ್ದಾನೆ. ಈ ವೇಳೆ ಮನೆಯಲ್ಲಿ ಮಗಳು ಹಾಗೂ ಕಿರಣ್ ಒಂದೇ ಕೊಠಡಿಯಲ್ಲಿ ಏಕಾಂತದಲ್ಲಿರವುದನ್ನು ಕಂಡು ನಿಗಿನಿಗಿ ಕೆಂಡವಾಗಿದ್ದ‌. ತಕ್ಷಣ ಮಗಳಿಗೆ ಬೈದು ಚಿಕ್ಕಬಳ್ಳಾಪುರದಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಿದ್ದಾನೆ.

ಬಳಿಕ ನನ್ನ ಮಗಳೇ‌ ನಿನಗೆ ಬೇಕಾ ಎಂದು ಕಿರಣ್ ಮೇಲೆ ಬ್ಯಾಟ್ ಹಾಗೂ ಪೈಪ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ನಿನ್ನೆ ಹೊಟ್ಟೆ, ಎದೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಹಲ್ಲೆ ನಡೆಸಿದ ಪರಿಣಾಮ ಕಿರಣ್ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಕಿರಣ್‌ನನ್ನು ಆರೋಪಿ ಆನಂದ್ ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಆಂತರಿಕ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾನೆ.

ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಯಲಹಂಕ ಪೊಲೀಸರು ಆರೋಪಿ ಆನಂದ್‌ನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅದೆನೇ ಹೇಳಿ... ಮಗಳು ಚೆನ್ನಾಗಿ ಓದಿ, ದೊಡ್ಡ ಹೆಸರು ಮಾಡ್ತಾಳೆ ಎಂಬ ಕನಸು ಕಟ್ಟಿಕೊಂಡಿದ್ದ ತಂದೆ ಮಗಳು ಮಾಡಿದ ತಪ್ಪಿನಿಂದ ಕೋಪದ ಕೈಗೆ ಬುದ್ದಿ ಕೊಟ್ಟು ಜೈಲು ಸೇರಿದ್ದು ದುರಂತವೇ ಸರಿ.

Add Zee News as a Preferred Source
TAGS:
Kannada News