SOCIAL MEDIA

Newsletter

PARTNER SITES
Select Language Select State

LPG ಸಬ್ಸಿಡಿ ನಿಮ್ಮ ಅಕೌಂಟ್‌ಗೆ ಜಮಾ ಆಗಿದ್ಯಾ? ಈ ರೀತಿ ಸುಲಭವಾಗಿ ತಿಳಿಯಿರಿ

ಕೇಂದ್ರ ಸರ್ಕಾರದ ಮಹತ್ವದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಅಡಿಯಲ್ಲಿ ಎಲ್‌ಪಿಜಿ ಗ್ಯಾಸ್‌ ಸಂಪರ್ಕ ಹೊಂದಿರುವವರಿಗೆ LPG ಖರೀದಿಯ ಮೇಲೆ 300 ರೂ. ಸಬ್ಸಿಡಿಯನ್ನು ನೀಡಲಾಗುತ್ತದೆ.

Written By Yashaswini V
Published: Oct 13, 2026, 04:36 PM IST | Updated: Oct 13, 2026, 04:38 PM IST
Join

ಕೇಂದ್ರ ಸರ್ಕಾರ ಮಹಿಳೆಯರಿಗಾಗಿಯೇ ಜಾರಿಗೆ ತಂದಿರುವ ಮಹತ್ವದ ಯೋಜನೆ ಎಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY). ಕೇಂದ್ರ ಸರ್ಕಾರವು ಉಜ್ವಲ ಯೋಜನೆ ಅಡಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಂಪರ್ಕ ಹೊಂದಿರುವ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ 300 ರೂ. ಸಬ್ಸಿಡಿಯನ್ನು ಒದಗಿಸುತ್ತದೆ. ಕೆಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರವೂ ಸಹ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಒದಗಿಸುತ್ತವೆ. ನೀವು ಸಿಲಿಂಡರ್‌ ಬುಕ್‌ ಮಾಡಿದ್ದು ಎಲ್‌ಪಿಜಿ ಸಬ್ಸಿಡಿ ಹಣ ಇನ್ನೂ ನಿಮ್ಮ ಖಾತೆಗೆ ಜಮಾ ಆಗಿಲ್ವಾ ಈ ಬಗ್ಗೆ ತಿಳಿಯುವುದು ತುಂಬಾ ಸುಲಭ.

ಎಲ್‌ಪಿಜಿ ಇ-ಕೆವೈಸಿ:
ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನವನ್ನು ಪಡೆಯುಲು ಇ-ಕೆವೈಸಿ ಪೂರ್ಣಗೊಳಿಸುವುದು ಅಗತ್ಯ. ಹಾಗೆಯೇ, ಎಲ್‌ಪಿಜಿ ಸಂಪರ್ಕ ಹೊಂದಿರುವವರು ಸರ್ಕಾರದಿಂದ ನೀಡಲಾಗುವ ರಿಯಾಯಿತಿಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಕೂಡ ಎಲ್‌ಪಿಜಿ ಇ-ಕೆವೈಸಿ ಪೂರ್ಣಗೊಳಿಸುವುದು ಅಗತ್ಯ.

ಎಲ್‌ಪಿಜಿ ಇ-ಕೆವೈಸಿ ಏಕೆ ಅಗತ್ಯ?
ಗಮನಾರ್ಹವಾಗಿ ಸಬ್ಸಿಡಿ ಪಡೆಯುವವರು ಮಾತ್ರವಲ್ಲದೆ ಗೃಹಬಳಕೆ ಸಿಲಿಂಡರ್‌ ಕನೆಕ್ಷನ್‌ ಹೊಂದಿರುವ ಪ್ರತಿಯೊಬ್ಬರೂ ಸಹ ಇ-ಕೆವೈಸಿ ಪೂರ್ಣಗೊಳಿಸುವುದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಎಲ್‌ಪಿಜಿ ವಿತರಣೆಯಲ್ಲಿನ ಅಕ್ರಮವನ್ನು ತಪ್ಪಿಸಲು ಹಾಗೂ ಅರ್ಹ ಜನರಿಗಷ್ಟೇ ಸಬ್ಸಿಡಿ ಪ್ರಯೋಜನವನ್ನು ಪಡೆಯಲು ಮತ್ತು ಬ್ಲಾಕ್‌ ಮಾರ್ಕೆಟ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ ಅನ್ನು ಹೆಚ್ಚಿನ ದರಕ್ಕೆ ಮಾರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಹಕರು ಇ-ಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆದಾಗ್ಯೂ, ವಾಣಿಜ್ಯ ಸಿಲಿಂಡರ್‌ ಬಳಕೆದಾರರಿಗೆ ಈ ನಿಯಮ ಕಡ್ಡಾಯವಲ್ಲ.

ಎಲ್‌ಪಿಜಿ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಏನಾಗುತ್ತೆ?
ಎಲ್‌ಪಿಜಿ ಇ-ಕೆವೈಸಿ ಪೂರ್ಣಗೊಳಿಸದಿದ್ದವರಿಗೆ ಸರ್ಕಾರ ಎಲ್‌ಪಿಜಿ ಬುಕಿಂಗ್‌ನಲ್ಲಿ ನೀಡುವ ಸಬ್ಸಿಡಿ ನಿಧಿಯನ್ನು ಪಡೆಯುವುದಿಲ್ಲ.

ಯಾರಿಗೆಲ್ಲಾ ಸಿಗುತ್ತೆ ಎಲ್‌ಪಿಜಿ ಸಬ್ಸಿಡಿ?   
ಎಲ್‌ಪಿಜಿ ಸಬ್ಸಿಡಿ ಎಲ್ಲರಿಗೂ ಸಿಗುವುದಿಲ್ಲ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಗೆ ಮಾತ್ರವೇ‌ ವರ್ಷಕ್ಕೆ ತಲಾ ನಾಲ್ಕು ಸಿಲಿಂಡರ್‌ಗಳನ್ನು ರೀಫಿಲ್ ಮಾಡಲು 300 ರೂ. ಸಬ್ಸಿಡಿಯನ್ನು ನೀಡಲಾಗುತ್ತಿದೆ. ಆದಾಗ್ಯೂ, ಸಿಲಿಂಡರ್‌ ಬುಕ್‌ ಮಾಡುವಾಗ ಪೂರಿ ಹಣವನ್ನು ಪಾವತಿಸಬೇಕು. ಬಳಿಕ ಸರ್ಕಾರ ನೇರವಾಗಿ ಬ್ಯಾಂಕ್‌ ಖಾತೆಗೆ ಎಲ್‌ಪಿಜಿ ಸಬ್ಸಿಡಿ ಹಣವನನು ಜಮಾ ಮಾಡುತ್ತದೆ.

ಎಲ್‌ಪಿಜಿ ಸಬ್ಸಿಡಿ ಹಣ ನಿಮ್ಮ ಖಾತೆ ಸೇರಿದ್ಯಾ?
ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿ ಆಗಿದ್ದು ಎಲ್‌ಪಿಜಿ  ಸಬ್ಸಿಡಿ ಹಣವನ್ನು ಸ್ವೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಕೆಲವೇ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಪರಿಶೀಲಿಸಬಹುದು.  

ಹಂತ- 1: ಮೊದಲಿಗೆ ಕೇಂದ್ರ ಸರ್ಕಾರದ https://mylpg.in ಪೋರ್ಟಲ್‌ಗೆ ಭೇಟಿ ನೀಡಿ. 
ಹಂತ- 2: ಎಲ್‌ಪಿಜಿ ಆಯ್ಕೆಯನ್ನು ಆರಿಸಿ. ನಂತರ PAHAL ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ 17-ಅಂಕಿಯ LPG ID ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಸಲ್ಲಿಸು ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. 
ಹಂತ- 3: ಮುಂದಿನ ಪರದೆಯಲ್ಲಿ ನಿಮ್ಮ ಎಲ್‌ಪಿಜಿ ಬುಕಿಂಗ್‌ ವಿವರ, ಪಾವತಿ ದಿನಾಂಕ, ಪಾವತಿ ಖಾತೆಗಳಿಗೆ ಜಮಾ ಮಾಡಿದ ದಿನಾಂಕ, ಸಿಲಿಂಡರ್ ಬುಕಿಂಗ್ ದಿನಾಂಕ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೋಡುತ್ತೀರಿ. 
ಹಂತ -4: ಎಲ್‌ಪಿಜಿ ಸಬ್ಸಿಡಿ ಹಣವನ್ನು ಸ್ವೀಕರಿಸಲಾಗಿದೆಯೇ ಎಂದು ತಿಳಿಯಲು ನೀವು ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್‌ ಅನ್ನು ಪರಿಶೀಲಿಸಬಹುದು. ಪಾಸ್‌ಬುಕ್‌ನಲ್ಲಿ ನೀವು LPG ಸಬ್ಸಿಡಿ, PAHAL ಅಥವಾ ನೇರ ಲಾಭ ವರ್ಗಾವಣೆ (DBT) ನಮೂದುಗಳನ್ನು ನೋಡಿದರೆ, ಎಲ್‌ಪಿಜಿ ಸಬ್ಸಿಡಿ ಹಣವನ್ನು ಸ್ವೀಕರಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು.

ಗಮನಿಸಿ: ಎಲ್‌ಪಿಜಿ ಕೆವೈಸಿ ಅನ್ನು ಪೂರ್ಣಗೊಳಿಸದವರಿಗೆ ಸರ್ಕಾರ ಸಬ್ಸಿಡಿ ಹಣವನ್ನು ನಿಲ್ಲಿಸಲಾಗುತ್ತದೆ. ಇದರೊಂದಿಗೆ, ನೀವು KYC ಅನ್ನು ಪೂರ್ಣಗೊಳಿಸಿದರೆ, ಮುಂದಿನ ಸಿಲಿಂಡರ್ ಬುಕಿಂಗ್‌ನಿಂದ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ಎಲ್‌ಪಿಜಿ ಕೆವೈಸಿ ಅನ್ನು ಪೂರ್ಣಗೊಳಿಸುವುದು ಹೇಗೆ?
ನೀವು ಎಲ್‌ಪಿಜಿ ಗ್ರಾಹಕರಾಗಿದ್ದರೆ, ನೀವಿನ್ನೂ ಎಲ್‌ಪಿಜಿ ಕೆವೈಸಿ ಪೂರ್ಣಗೊಳಿಸದಿದ್ದರೆ ಇದಕ್ಕೆ ಹಲವು ಮಾರ್ಗಗಳಿವೆ.
* ನಿಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ಹೋಗಿ ನಿಮ್ಮ ಕೆವೈಸಿ ಅನ್ನು ಪೂರ್ಣಗೊಳಿಸಬಹುದು. 
* ಎರಡನೆಯದಾಗಿ ನಿಮಗೆ ಗ್ಯಾಸ್ ತಲುಪಿಸಲು ಬರುವ ಸಿಬ್ಬಂದಿಯೊಂದಿಗೆ ಇರುವ ಬಯೋಮೆಟ್ರಿಕ್ ಯಂತ್ರದ ಸಹಾಯದಿಂದಲೂ ಎಲ್‌ಪಿಜಿ ಕೆವೈಸಿ ಅನ್ನು ಪೂರ್ಣಗೊಳಿಸಬಹುದು. 
* ಇದಲ್ಲದೆ, ಮೈ ಎಲ್‌ಪಿಜಿ ವೆಬ್‌ಸೈಟ್ ಮೂಲಕ ಅಥವಾ ನಿಮ್ಮ ಗ್ಯಾಸ್ ಕಂಪನಿಗೆ ಸಂಬಂಧಿಸಿದ ಪೋರ್ಟಲ್‌ಗಳು ಮತ್ತು ಅಪ್ಲಿಕೇಶನ್‌ಗಳ ಮೂಲಕ ನಿಮ್ಮ ಕೆವೈಸಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪೂರ್ಣಗೊಳಿಸಬಹುದು. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES