• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಕೆ.ಆರ್.ಮಾರ್ಕೆಟ್ ಮಾದರಿಯಲ್ಲಿ ಜಯನಗರದಲ್ಲೂ ಅತ್ಯಾಧುನಿಕ ಪಾರ್ಕಿಂಗ್ ನಿರ್ಮಾಣ!

ಕೆ.ಆರ್.ಮಾರ್ಕೆಟ್ ಮಾದರಿಯಲ್ಲಿ ಜಯನಗರದಲ್ಲೂ ಅತ್ಯಾಧುನಿಕ ಪಾರ್ಕಿಂಗ್ ನಿರ್ಮಾಣ!

ಇದು ಜೀ ಕನ್ನಡ ನ್ಯೂಸ್ ಎಕ್ಸ್ ಕ್ಲೂಸಿವ್ ಸ್ಟೋರಿ.. ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬರಲಿದೆ ಹೈಟೆಕ್ ಪಾರ್ಕಿಂಗ್ ವ್ಯವಸ್ಥೆ.. ಕೆ ಆರ್ ಮಾರ್ಕೆಟ್ ಮಾದರಿಯಲ್ಲಿ ಹೈಟೆಕ್ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣಕ್ಕೆ ಬೆಂಗಳೂರು ದಕ್ಷಿಣ ಪಾಲಿಕೆ ಇದೀಗ ಸಜ್ಜಾಗಿದೆ... ಈ ಕುರಿತು ಇಲ್ಲಿದೆ ಫುಲ್ ಡಿಟೈಲ್ಸ್ ...

Written ByKrishna NK
Published: Oct 13, 2026, 06:21 PM IST|Updated: Oct 13, 2026, 06:23 PM IST
joinshare
ಕೆ.ಆರ್.ಮಾರ್ಕೆಟ್ ಮಾದರಿಯಲ್ಲಿ ಜಯನಗರದಲ್ಲೂ ಅತ್ಯಾಧುನಿಕ ಪಾರ್ಕಿಂಗ್ ನಿರ್ಮಾಣ!
Image Credit: Kannada News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಅಕ್ರಮ ಸಂಬಂಧ ಶಂಕೆ, 10 ವರ್ಷ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ ಹ*ತ್ಯೆಗೈದ ಪತಿ..!

ಅಕ್ರಮ ಸಂಬಂಧ ಶಂಕೆ, 10 ವರ್ಷ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ ಹ*ತ್ಯೆಗೈದ ಪತಿ..!

2

ರಾಯಚೂರು ಒಪೆಕ್ ಆಸ್ಪತ್ರೆ ನಿರ್ಲಕ್ಷ್ಯ : ರೋಗಿಯ ತಲೆಯ ಬ್ಯಾಂಡೇಜ್‌ನಲ್ಲಿ ಹುಳುಗಳು ಪತ್ತೆ!

3

ಸಿದ್ದರಾಮಯ್ಯ ಧ್ವನಿ ಅಡಗಿಸಲು ಸಂಚು: ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

4

ಕೆ.ಆರ್.ಮಾರ್ಕೆಟ್ ಮಾದರಿಯಲ್ಲಿ ಜಯನಗರದಲ್ಲೂ ಅತ್ಯಾಧುನಿಕ ಪಾರ್ಕಿಂಗ್ ನಿರ್ಮಾಣ!

5

KPSC ತನಿಖೆಯಿಂದ DGP ಅಲೋಕ್‌ ಕುಮಾರ್‌ ಔಟ್ : 2 ಅಧಿಕಾರಿಗಳ ಬದಲಾವಣೆಗೆ ಸುಪ್ರಿಂ ಕೋರ್ಟ್ ಒಪ್ಪಿಗೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಹಾಲಿ ಕೊಳಚೆ ನೀರು ,ಮೂತ್ರ ವಿಸರ್ಜನೆಯಿಂದ ಗೊಬ್ಬೆದ್ದು ಹೋಗಿರುವ ಜಯನಗರ ಪಾರ್ಕಿಂಗ್ ಜಾಗಕ್ಕೆ ಹೈಟೆಕ್ ಸ್ಪರ್ಷ ಸಿಗಲಿದೆ.. ಈ ಹಿನ್ನಲೆಯಲ್ಲಿ ಬೆಂಗಳೂರು ದಕ್ಷಿಣ ಜಿಬಿಎ ಆಯುಕ್ತ ಕೆ.ಎನ್ ರಮೇಶ್ ನೇತೃತ್ವದಲ್ಲಿ ಪಾರ್ಕಿಂಗ್ ಪ್ಲಾನ್ ರೂಪಿಸಲಾಗಿದೆ. ಪಾಲಿಕೆ ಚೀಫ್ ಇಂಜಿನೀಯರ್ ಬಸವರಾಜ್ ಕಬಾಡೆ ಮಾರ್ಗದರ್ಶನಲ್ಲಿ ಈಗಾಗಲೇ ರೈಟ್ ಪಾರ್ಕಿಂಗ್ ಸಂಸ್ಥೆಗೆ ಟೆಂಡರ್ ಮೂಲಕ ವರ್ಕ್ಆರ್ಡರ್ ನೀಡಲಾಗಿದೆ. 6 ತಿಂಗಳ ಒಳಗೆ ಕೆಆರ್ ಮಾರ್ಕೆಟ್ ಮಾದರಿಯಲ್ಲಿ ಹೈಟೆಕ್ ಪಾರ್ಕಿಂಗ್ ನಿರ್ಮಾಣ ಗುರಿ ಹೊಂದಿದ್ದೇವೆ ಅಂತಾರೆ ಬೆಂಗಳೂರು ದಕ್ಷಿಣ ಪಾಲಿಕೆ ಆಯುಕ್ತ ಕೆ .ಎನ್ ರಮೇಶ್.

ಈ ಹಿಂದೆ ಗೊಬ್ಬೆದ್ದು ಹೋಗಿದ್ದ ಕೆ ಆರ್ ಮಾರ್ಕೆಟ್ ಪಾರ್ಕಿಂಗ್ ಇದೀಗ ಹೈಟೆಕ್ ಪಾರ್ಕಿಂಗ್ ಆಗಿ ನಿರ್ಮಿಸಿರುವ ರೈಟ್ ಪಾರ್ಕಿಂಗ್ ಸಂಸ್ಥೆ ಜಯನಗರ ಪಾರ್ಕಿಂಗ್ ಜಾಗವನ್ನು ಹೈಟೆಕ್ ಮಾಡಲಿದೆ. ಸಿಸಿಟಿವಿ ವ್ಯವಸ್ಥೆ, ಸ್ವಚ್ಚತೆ, ಎಮರ್ಜೆನ್ಸಿ ಅಲಾರಾಮ್ ವ್ಯವಸ್ಥೆ ಇರುವ ಕೆ ಆರ್ ಮಾರ್ಕೆಟ್ ಪಾರ್ಕಿಂಗ್ ಮಾದರಿಯಲ್ಲೇ ಇದೀಗ ಅತ್ಯಂತ ಜನನಿಬಿಡಿ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹೈಟೆಕ್ ಆಗಲಿದೆ..

ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಲೂ ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಪ್ಲಾನ್ ಮಾಡಲಾಗಿದೆ..ಪಾರ್ಕಿಂಗ್ ಲೈನಿಂಗ್ ,ಸಿಸಿಟಿವಿ,ಮೊಬೈಲ್ ನಲ್ಲೇ ಖಾಲಿ ಇರುವ ಪಾರ್ಕಿಂಗ್ ಜಾಗದ ಮಾಹಿತಿ‌ ವಾಹನ ಮಾಲೀಕರಿಗೆ ಸಿಗಲಿದೆ .ಇದಕ್ಕಾಗಿ ಕನಿಷ್ಟ ಶುಲ್ಕಬನಿಗದಿ ಮಾಡಿದ್ದು ಬರುವ ಆದಾಯವನ್ನು ಪಾಲಿಕೆ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ಆಯುಕ್ತ ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಜಯನಗರ ಶಾಂಪಿಂಗ್ ಕಾಂಪ್ಲೆಕ್ಸ್ ನಲ್ಲಿ ಒಟ್ಟು 118 ಕಾರು ಹಾಗು 115 ಬೈಕ್ ಪಾರ್ಕಿಂಗ್ ವ್ಯವಸ್ಥೆ ಹೈಟೆಕ್ ವ್ಯವಸ್ಥೆ ನಿರ್ಮಾಣವಾಗಲಿದೆ. 200 ಕಾರು ಹಾಗು 400 ಕಾರುಗಳ ಪಾರ್ಕಿಂಗ್ ಗೆ ಕೆಆರ್ ಮಾರುಕಟ್ಟೆ ನಲ್ಲಿ ಹೈಟೆಕ್ ಪಾರ್ಕಿಂಗ್ ವ್ಯವಸ್ಥೆಯನ್ನು ರೈಟ್ ಪಾರ್ಕಿಂಗ್ ಸಂಸ್ಥೆ ಜಾರಿಗೆ ತಂದು ಜನಮೆಚ್ಚುಗೆಗೆ ಪಾತ್ರವಾಗಿದೆ. ಅದೇ ರೀತಿಯಲ್ಲಿ ಶೀಘ್ರವೇ ಜಯನಗರ ಶಾಪಿಂಗ್ ಕಾಂಪ್ಯಾಕ್ಟ್ ಗೆ ಹೈಟೆಕ್ ವ್ಯವಸ್ಥೆ ನಿರ್ಮಿಸೋ ಹೊಸ ಸವಾಲನ್ನು ರೈಟ್ ಪಾರ್ಕಿಂಗ್ ಸಂಸ್ಥೆ ಸ್ವೀಕರಿಸಿದೆ..

Add Zee News as a Preferred Source
TAGS:
Kannada News