KPSC Scam updates : ಕೆಪಿಎಸ್.ಸಿ ಹಗರಣದ ತನಿಖೆಗೆ ಹೈ ಕೋರ್ಟ್ ಎಸ್.ಐ.ಟಿ ರಚಿಸಿತ್ತು. ಡಿಜಿಪಿ ಅಲೋಕ್ ಕುಮಾರ್ ರನ್ನ ಮುಖ್ಯಸ್ಥರನ್ನಾಗಿ ಮಾಡಿದ್ದು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್ ಮಟ್ಟಿಲೇರಿತ್ತು. ವಾದ-ಪ್ರತಿವಾದ ಆಲಿಸಿದ ಸುಪ್ರಿಂ ಕೋರ್ಟ್ ದ್ವಿಸದಸ್ಯ ಪೀಠ ಇಬ್ಬರು ಅಧಿಕಾರಿಗಳ ಬದಲಾವಣೆಗೆ ಒಪ್ಪಿದೆ. ಈ ಮೂಲಕ ಡಿಜಿಪಿ ಅಲೋಕ್ ಕುಮಾರ್ ಹಾಗೂ ಡಿಐಜಿ ದಿವ್ಯಾ ಗೋಪಿನಾಥ್ ರನ್ನ ತನಿಖೆಯಿಂದ ಹೊರ ಇಡಲು ಸರ್ಕಾರ ಸಕ್ಸಸ್ ಆಗಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ, ಇಬ್ಬರು ಅಧಿಕಾರಿಗಳ ಬದಲಾವಣೆಗೆ ಒಪ್ಪಿದೆ. ಕೆಪಿಎಸ್ ಸಿ ಉನ್ನತ ಅಧಿಕಾರಿಗಳ ಮೇಲೆಯೇ ತನಿಖೆ ನಡೆಯಬೇಕಿರುವುದರಿಂದ, ಡಿಜಿಪಿ ಬದಲಿಗೆ ಎಡಿಜಿಪಿ ಅಥವಾ ಕೆಳಹಂತದ ಅಧಿಕಾರಿಗಳನ್ನು ನೇಮಿಸುವುದು ಸರಿಯಲ್ಲ. ಎರಡು ವಾರದೊಳಗೆ ಇಬ್ಬರು ಅಧಿಕಾರಿಗಳ ಹೆಸರನ್ನ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಲು ಸುಪ್ರಿಂ ಕೋರ್ಟ್ ಸೂಚಿಸಿದೆ. ಅಲ್ಲಿವರೆಗೂ ಸಿಐಡಿ ಚಾರ್ಜ್ ಶೀಟ್ ಸಲ್ಲಿಸದಂತೆ ನಿರ್ದೇಶಿಸಿದೆ.
ಇನ್ನೂ ಕೆಪಿಎಸ್‌ಸಿ ಅಕ್ರಮ ಪ್ರಕರಣದಲ್ಲಿ ಇ.ಡಿ ತನಿಖೆ ವೇಳೆ ಸ್ಪೋಟಕ ವಿಚಾರ ಬಹಿರಂಗವಾಗಿವೆ. ಪರೀಕ್ಷೆ ಬಳಿಕ ಬಿಡುಗಡೆಯಾಗಿದ್ದ 1:3 ಮೆರಿಟ್ ಲಿಸ್ಟ್ ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡ್ತಿದ್ರಂತೆ. ಐಎಎಸ್ ಅಧಿಕಾರಿ ಗ್ಯಾನೇಂದ್ರ ಇ.ಡಿ ಮುಂದೆ ಈ ಕಳ್ಳಾಟದ ರಹಸ್ಯ ಬಯಲು ಮಾಡಿದ್ದಾನೆ. ಪರೀಕ್ಷೆ ಬಳಿಕ ಬಿಡುಗಡೆಯಾಗುವ ಮೆರಿಟ್ ಲಿಸ್ಟ್‌ನಲ್ಲಿರುವ ಅಭ್ಯರ್ಥಿಗಳ ಅಂಕಗಳು ಮತ್ತು ಅಂತಿಮ ಆಯ್ಕೆಯ ಸಾಧ್ಯತೆಯ ಮಾಹಿತಿ ಗೌಪ್ಯವಾಗಿರಬೇಕಿತ್ತು.. ಆದರೆ, ಈ ಮಾಹಿತಿಯನ್ನೇ ಬಳಸಿಕೊಂಡು ಅಕ್ರಮ ಎಸಗಿರೋದು ಬಹಿರಂಗವಾಗಿದೆ.
ಆಗ ಎಕ್ಸಾಂ ಕಂಟ್ರೋಲರ್ ಆಗಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರನ್ನು ಕೆಲವು ಕೆಪಿಎಸ್‌ಸಿ ಸದಸ್ಯರು ಹಾಗೂ ಅಧಿಕಾರಿಗಳು ಸಂಪರ್ಕಿಸಿ, ಮೆರಿಟ್ ಲಿಸ್ಟ್‌ನಲ್ಲಿ ಯಾರಿಗೆ ಎಷ್ಟು ಅಂಕಗಳಿವೆ, ಅಂತಿಮ ಆಯ್ಕೆಯಾಗುವ ಸಾಧ್ಯತೆ ಯಾರಿಗಿದೆ ಎಂಬ ಮಾಹಿತಿ ಪಡೆದುಕೊಳ್ಳುತ್ತಿದ್ದರು.. ಬಳಿಕ ಅಭ್ಯರ್ಥಿಗಳು ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಅಂತಿಮ ಆಯ್ಕೆಯಾಗುವ ಸಾಧ್ಯತೆ ಇದ್ದರೂ, ತಮ್ಮಿಂದಲೇ ಕೆಲಸ ಸಿಕ್ಕಿದೆ ಎಂದು ಹೇಳಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದರಂತೆ.
ಐಎಎಸ್ ಅಧಿಕಾರಿ ಗ್ಯಾನೇಂದ್ರ ಮಾತ್ರವಲ್ಲದೆ, ಇತರ ಅಧಿಕಾರಿಗಳಿಂದಲೂ ಮೆರಿಟ್ ಲಿಸ್ಟ್ ದುರ್ಬಳಕೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.. ಮೆರಿಟ್ ಲಿಸ್ಟ್ ಅನ್ನು ಕಂಪ್ಯೂಟರ್ ವಿಭಾಗ, ಸಿ-3 ವಿಭಾಗ ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಲಾಗುತ್ತಿತ್ತು.. ಈ ಹಂತದಲ್ಲಿದ್ದ ಅಧಿಕಾರಿಗಳು ಅಭ್ಯರ್ಥಿಗಳ ಆಯ್ಕೆಯ ಸಾಧ್ಯತೆಯ ಮಾಹಿತಿಯನ್ನು ಕೆಲವು ಕೆಪಿಎಸ್‌ಸಿ ಸದಸ್ಯರಿಗೆ ನೀಡುತ್ತಿದ್ದರು.. ಅಷ್ಟೇ ಅಲ್ಲದೆ, ಹಣ ನೀಡಿದ್ದ ಅಭ್ಯರ್ಥಿಗಳಿಗೂ ನೇರವಾಗಿ ಮಾಹಿತಿ ಹಂಚಿಕೊಳ್ಳಲಾಗುತ್ತಿತ್ತು.. ಇಲ್ಲಿ ಗೌಪ್ಯವಾಗಿರಬೇಕಿದ್ದ ಮೆರಿಟ್ ಲಿಸ್ಟ್ ಮಾಹಿತಿಯೇ ಹಣ ಸಂಪಾದನೆಯ ಮಾರ್ಗವಾಗಿತ್ತು. ಈ ಬಗ್ಗೆ ಇ.ಡಿ ಅಧಿಕಾರಿಗಳು ದಾಖಲೆ ಕೆದಕುತ್ತಿದ್ದು, ಅಕ್ರಮ ಪಾಲು ತಿಂದುವರಿಗೆ ಡವ-ಡವ ಶುರುವಾಗಿದೆ.