• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಬೆಳಗ್ಗೆ ಹೊಟ್ಟೆ ಕ್ಲೀನ್‌ ಆಗುತ್ತಿಲ್ಲವೇ? ಮಲಬದ್ಧತೆ ದೂರ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

ಬೆಳಗ್ಗೆ ಹೊಟ್ಟೆ ಕ್ಲೀನ್‌ ಆಗುತ್ತಿಲ್ಲವೇ? ಮಲಬದ್ಧತೆ ದೂರ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

ಬೆಳಗ್ಗೆ ಹೊಟ್ಟೆ ಸರಿಯಾಗಿ ಕ್ಲೀನ್‌ ಆಗದಿರುವುದು, ಮಲ ಗಟ್ಟಿಯಾಗುವುದು ಮತ್ತು ಹೊಟ್ಟೆ ಉಬ್ಬರ ಮಲಬದ್ಧತೆಯ ಸಾಮಾನ್ಯ ಲಕ್ಷಣಗಳಾಗಿವೆ. ನಾರಿನಾಂಶವಿರುವ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ಪ್ರತಿದಿನ ವಾಕಿಂಗ್‌ ಮಾಡುವುದು ಹಾಗೂ ನಿಯಮಿತ ಶೌಚ ಅಭ್ಯಾಸದಿಂದ ಈ ಸಮಸ್ಯೆಯನ್ನ ಕಡಿಮೆ ಮಾಡಿಕೊಳ್ಳಬಹುದು. ಸಮಸ್ಯೆ ಪದೇಪದೇ ಕಾಣಿಸಿಕೊಂಡರೆ ವೈದ್ಯರನ್ನ ಸಂಪರ್ಕಿಸುವುದು ಉತ್ತಮ.

Written ByPuttaraj K Alur
Published: Oct 16, 2026, 11:05 AM IST|Updated: Oct 16, 2026, 11:19 AM IST
joinshare
ಬೆಳಗ್ಗೆ ಹೊಟ್ಟೆ ಕ್ಲೀನ್‌ ಆಗುತ್ತಿಲ್ಲವೇ? ಮಲಬದ್ಧತೆ ದೂರ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ
Image Credit: Constipation Relief Tips

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಮೈಸೂರಿನಲ್ಲಿ ಕೃಷಿ ಸಂಸ್ಕೃತಿ ಅನಾವರಣ: ನಗಾರಿ ಬಾರಿಸಿ ‘ರೈತ ದಸರಾ'ಗೆ ಚಾಲನೆ ನೀಡಿದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಮೈಸೂರಿನಲ್ಲಿ ಕೃಷಿ ಸಂಸ್ಕೃತಿ ಅನಾವರಣ: ನಗಾರಿ ಬಾರಿಸಿ ‘ರೈತ ದಸರಾ'ಗೆ ಚಾಲನೆ ನೀಡಿದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

2

​ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ

3

ಬೆಳಗ್ಗೆ ಹೊಟ್ಟೆ ಕ್ಲೀನ್‌ ಆಗುತ್ತಿಲ್ಲವೇ? ಮಲಬದ್ಧತೆ ದೂರ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

4

30ರ ರೀಲ್ಸ್‌ ರಾಣಿ ಮದುವೆಯಾದ 75ರ ವೃದ್ಧ; ವಿಡಿಯೋ ನೋಡಿ ಹೊಟ್ಟೆ ಉರಿದಿಕೊಂಡ ಸಿಂಗಲ್ಸ್!

5

ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್‌ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Constipation Relief Tips: ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ಸರಿಯಾಗಿ ಕ್ಲೀನ್‌ ಆಗದಿರುವುದು, ಮಲವಿಸರ್ಜನೆಗೆ ತೊಂದರೆಯಾಗುವುದು, ಹೊಟ್ಟೆ ಉಬ್ಬರ ಮತ್ತು ಗ್ಯಾಸ್‌ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ಇಂದಿನ ಒತ್ತಡದ ಜೀವನಶೈಲಿ, ಅನಿಯಮಿತ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು ಹಾಗೂ ದೈಹಿಕ ಚಟುವಟಿಕೆಯ ಕೊರತೆ ಮಲಬದ್ಧತೆಗೆ ಕಾರಣವಾಗಬಹುದು. ಆರಂಭದಲ್ಲಿ ಸಾಮಾನ್ಯ ಸಮಸ್ಯೆಯಂತೆ ಕಾಣುವ ಮಲಬದ್ಧತೆ ಪದೇಪದೇ ಕಾಡುತ್ತಿದ್ದರೆ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು. ಆದರೆ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನ ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯನ್ನ ನಿಯಂತ್ರಿಸಲು ಸಾಧ್ಯವಿದೆ.

ಮಲಬದ್ಧತೆ ಸಮಸ್ಯೆ ಏಕೆ ಕಾಣಿಸಿಕೊಳ್ಳುತ್ತದೆ?

ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸವಾದಾಗ ಮಲವಿಸರ್ಜನೆಗೆ ತೊಂದರೆಯಾಗಬಹುದು. ವಿಶೇಷವಾಗಿ ಆಹಾರದಲ್ಲಿ ನಾರಿನಾಂಶದ ಕೊರತೆ, ಸಾಕಷ್ಟು ನೀರು ಕುಡಿಯದಿರುವುದು, ದೈಹಿಕ ಚಟುವಟಿಕೆ ಕಡಿಮೆಯಾಗುವುದು ಹಾಗೂ ಮಲವಿಸರ್ಜನೆಯ ಒತ್ತಡವನ್ನ ತಡೆಹಿಡಿಯುವುದು ಮಲಬದ್ಧತೆಗೆ ಕಾರಣವಾಗಬಹುದು. ಮಲ ಗಟ್ಟಿಯಾಗುವುದು, ಮಲವಿಸರ್ಜನೆಯ ವೇಳೆ ಹೆಚ್ಚು ಒತ್ತಡ ಹಾಕಬೇಕಾಗುವುದು, ಹೊಟ್ಟೆ ಭಾರವಾದ ಅನುಭವ ಹಾಗೂ ಸಂಪೂರ್ಣವಾಗಿ ಮಲವಿಸರ್ಜನೆಯಾಗದ ಭಾವನೆ ಇದರ ಸಾಮಾನ್ಯ ಲಕ್ಷಣಗಳಾಗಿವೆ. ಕೆಲವು ಔಷಧಿಗಳು ಮತ್ತು ಆರೋಗ್ಯ ಸಮಸ್ಯೆಗಳೂ ಮಲಬದ್ಧತೆಗೆ ಕಾರಣವಾಗಬಹುದು.

ಓಂ ಕಾಳು ಮತ್ತು ಕಪ್ಪು ಉಪ್ಪಿನಿಂದ ಪರಿಹಾರ 

ಮಲಬದ್ಧತೆ ನಿವಾರಣೆಗೆ ಓಂ ಕಾಳು ಅಥವಾ ಅಜ್ವೈನ್‌ ಜೊತೆಗೆ ಸ್ವಲ್ಪ ಕಪ್ಪು ಉಪ್ಪನ್ನ ಬೆರೆಸಿ ಸೇವಿಸುವುದು ಸಾಂಪ್ರದಾಯಿಕ ಮನೆಮದ್ದುಗಳಲ್ಲಿ ಒಂದಾಗಿದೆ. ಓಂ ಕಾಳನ್ನ ಜೀರ್ಣಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆ ಹಾಗೂ ಹೊಟ್ಟೆ ಉಬ್ಬರ ಕಡಿಮೆ ಮಾಡಲು ಹಿಂದಿನಿಂದಲೂ ಬಳಸಲಾಗುತ್ತಿದೆ. ಆದರೆ ಓಂ ಕಾಳು ಮತ್ತು ಕಪ್ಪು ಉಪ್ಪಿನ ಮಿಶ್ರಣದಿಂದ ಮಲಬದ್ಧತೆ ಸಂಪೂರ್ಣವಾಗಿ ಗುಣವಾಗುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ. ಕಪ್ಪು ಉಪ್ಪಿನಲ್ಲಿಯೂ ಸೋಡಿಯಂ ಇರುವುದರಿಂದ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಸಮಸ್ಯೆ ಇರುವವರು ಎಚ್ಚರಿಕೆ ವಹಿಸಬೇಕು.

ನಾರಿನಾಂಶವಿರುವ ಆಹಾರ ಹೆಚ್ಚಾಗಿ ಸೇವಿಸಿ

ಮಲಬದ್ಧತೆಯಿಂದ ಪರಿಹಾರ ಪಡೆಯಲು ಆಹಾರದಲ್ಲಿ ನಾರಿನಾಂಶ ಹೆಚ್ಚಿಸುವುದು ಪ್ರಮುಖ ಕ್ರಮವಾಗಿದೆ. ನಾರಿನಾಂಶವು ಮಲದ ಪ್ರಮಾಣ ಮತ್ತು ಮೃದುತ್ವವನ್ನ ಸುಧಾರಿಸಿ ಸುಲಭವಾಗಿ ಮಲವಿಸರ್ಜನೆಯಾಗಲು ನೆರವಾಗುತ್ತದೆ. ಪಪ್ಪಾಯಿ, ಪೇರಳೆ, ಸೇಬು, ಸೊಪ್ಪು, ತರಕಾರಿಗಳು, ಬೇಳೆಕಾಳುಗಳು, ಓಟ್ಸ್‌ ಮತ್ತು ಸಂಪೂರ್ಣ ಧಾನ್ಯಗಳನ್ನ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಆದರೆ ನಾರಿನಾಂಶವನ್ನ ಒಮ್ಮೆಲೇ ಹೆಚ್ಚಿಸುವ ಬದಲು ಕ್ರಮೇಣ ಹೆಚ್ಚಿಸಬೇಕು. ಇಲ್ಲವಾದರೆ ಕೆಲವರಲ್ಲಿ ಹೊಟ್ಟೆ ಉಬ್ಬರ ಮತ್ತು ಗ್ಯಾಸ್‌ ಸಮಸ್ಯೆ ಹೆಚ್ಚಾಗಬಹುದು.

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ

ದೇಹದಲ್ಲಿ ನೀರಿನ ಕೊರತೆಯಾದಾಗ ಮಲ ಗಟ್ಟಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ದಿನವಿಡೀ ಅಗತ್ಯಕ್ಕೆ ತಕ್ಕಷ್ಟು ನೀರು ಕುಡಿಯುವುದು ಮುಖ್ಯ. ಬೆಳಗ್ಗೆ ಎದ್ದ ನಂತರ ಒಂದು ಲೋಟ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬಹುದು. ಉಗುರುಬೆಚ್ಚಗಿನ ನೀರು ಕುಡಿಯುವುದು ಕೆಲವರಿಗೆ ಆರಾಮದಾಯಕವಾಗಿರಬಹುದು. ಆದರೆ ಬಿಸಿನೀರು ಮಾತ್ರವೇ ಮಲಬದ್ಧತೆಗೆ ವಿಶೇಷ ಚಿಕಿತ್ಸೆ ಎಂಬುದಕ್ಕೆ ದೃಢವಾದ ಸಾಕ್ಷ್ಯವಿಲ್ಲ. ಹವಾಮಾನ, ದೈಹಿಕ ಚಟುವಟಿಕೆ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನೀರಿನ ಅಗತ್ಯ ಬದಲಾಗುತ್ತದೆ. ಮೂತ್ರಪಿಂಡ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳಿಂದ ನೀರಿನ ಸೇವನೆಗೆ ಮಿತಿ ವಿಧಿಸಿದ್ದರೆ ವೈದ್ಯರ ಸೂಚನೆ ಪಾಲಿಸಬೇಕು.

ಪ್ರತಿದಿನ ವಾಕಿಂಗ್‌ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ

ದೈಹಿಕ ಚಟುವಟಿಕೆಯ ಕೊರತೆಯೂ ಮಲಬದ್ಧತೆಗೆ ಕಾರಣವಾಗಬಹುದು. ಪ್ರತಿದಿನ ವಾಕಿಂಗ್‌, ಲಘು ವ್ಯಾಯಾಮ ಅಥವಾ ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕರುಳಿನ ಸಹಜ ಚಲನೆಗೆ ನೆರವಾಗಬಹುದು. ವಿಶೇಷವಾಗಿ ಊಟದ ನಂತರ ಸ್ವಲ್ಪ ಹೊತ್ತು ನಡೆಯುವುದು ಜೀರ್ಣಕ್ರಿಯೆಗೆ ಸಹಾಯಕವಾಗಬಹುದು. ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರು ಮಧ್ಯಂತರದಲ್ಲಿ ಎದ್ದು ಓಡಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಮಲವಿಸರ್ಜನೆಗೆ ಸರಿಯಾದ ಸಮಯ ನಿಗದಿಪಡಿಸಿ

ಪ್ರತಿದಿನ ಒಂದೇ ಸಮಯದಲ್ಲಿ ಶೌಚಾಲಯಕ್ಕೆ ಹೋಗುವ ಅಭ್ಯಾಸ ಬೆಳೆಸಿಕೊಳ್ಳುವುದು ಕರುಳಿನ ನಿಯಮಿತ ಕಾರ್ಯನಿರ್ವಹಣೆಗೆ ಸಹಾಯ ಮಾಡಬಹುದು. ವಿಶೇಷವಾಗಿ ಬೆಳಗಿನ ಉಪಾಹಾರದ ನಂತರ ಮಲವಿಸರ್ಜನೆಗೆ ಪ್ರಯತ್ನಿಸುವುದು ಕೆಲವರಿಗೆ ಅನುಕೂಲಕರವಾಗಿರುತ್ತದೆ. ಆದರೆ ಪ್ರತಿಯೊಬ್ಬರೂ ಬೆಳಗ್ಗೆಯೇ ಮಲವಿಸರ್ಜನೆ ಮಾಡಬೇಕು ಎಂಬ ನಿಯಮವಿಲ್ಲ. ಮಲವಿಸರ್ಜನೆ ನೋವಿಲ್ಲದೆ ಮತ್ತು ಹೆಚ್ಚಿನ ಒತ್ತಡವಿಲ್ಲದೆ ನಡೆಯುವುದು ಮುಖ್ಯ. ಮಲವಿಸರ್ಜನೆಯ ಒತ್ತಡ ಬಂದಾಗ ಅದನ್ನ ಅನಗತ್ಯವಾಗಿ ತಡೆಹಿಡಿಯಬಾರದು.

ಮಲಬದ್ಧತೆ ಕಾಣಿಸಿಕೊಂಡರೆ ವೈದ್ಯರನ್ನ ಯಾವಾಗ ಸಂಪರ್ಕಿಸಬೇಕು?

ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೂ ಮಲಬದ್ಧತೆ ಮುಂದುವರಿದರೆ ವೈದ್ಯರನ್ನ ಸಂಪರ್ಕಿಸಬೇಕು. ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು ಅಥವಾ ಮಲವಿಸರ್ಜನೆಯ ಅಭ್ಯಾಸದಲ್ಲಿ ನಿರಂತರ ಬದಲಾವಣೆಯಾಗುವುದು ಕಂಡುಬಂದರೆ ವೈದ್ಯಕೀಯ ತಪಾಸಣೆ ಅಗತ್ಯ. ತೀವ್ರ ಹೊಟ್ಟೆನೋವು, ವಾಂತಿ, ಹೊಟ್ಟೆ ಅತಿಯಾಗಿ ಉಬ್ಬುವುದು ಹಾಗೂ ಮಲ ಅಥವಾ ಗ್ಯಾಸ್‌ ಹೊರಹೋಗದಿರುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಒಟ್ನಲ್ಲಿ ಮಲಬದ್ಧತೆ ನಿವಾರಣೆಗೆ ಕೇವಲ ಮನೆಮದ್ದುಗಳನ್ನ ಅವಲಂಬಿಸುವ ಬದಲು ಸಮತೋಲಿತ ಆಹಾರ, ನಾರಿನಾಂಶ, ಸಾಕಷ್ಟು ನೀರು, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಶೌಚ ಅಭ್ಯಾಸಗಳಿಗೆ ಆದ್ಯತೆ ನೀಡುವುದು ಉತ್ತಮ.

Add Zee News as a Preferred Source
TAGS:
Health Tips
Kannada News