• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಮೈಸೂರಿನಲ್ಲಿ ಕೃಷಿ ಸಂಸ್ಕೃತಿ ಅನಾವರಣ: ನಗಾರಿ ಬಾರಿಸಿ ‘ರೈತ ದಸರಾ'ಗೆ ಚಾಲನೆ ನೀಡಿದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಮೈಸೂರಿನಲ್ಲಿ ಕೃಷಿ ಸಂಸ್ಕೃತಿ ಅನಾವರಣ: ನಗಾರಿ ಬಾರಿಸಿ ‘ರೈತ ದಸರಾ'ಗೆ ಚಾಲನೆ ನೀಡಿದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಮೈಸೂರು ದಸರಾ 2026ರಲ್ಲಿ ನಗಾರಿ ಬಾರಿಸುವ ಮೂಲಕ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ‘ರೈತ ದಸರಾ'ಗೆ ಚಾಲನೆ ನೀಡಿದರು.

Written ByYashaswini V
Published: Oct 16, 2026, 11:49 AM IST|Updated: Oct 16, 2026, 11:51 AM IST
joinshare
ಮೈಸೂರಿನಲ್ಲಿ ಕೃಷಿ ಸಂಸ್ಕೃತಿ ಅನಾವರಣ: ನಗಾರಿ ಬಾರಿಸಿ ‘ರೈತ ದಸರಾ'ಗೆ ಚಾಲನೆ ನೀಡಿದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ! ಇಡಿ ತನಿಖೆಯಲ್ಲಿ ಬಯಲಾಯ್ತು KPSC ನೇಮಕಾತಿ ಅಕ್ರಮದ ಸ್ಫೋಟಕ ರಹಸ್ಯ!

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ! ಇಡಿ ತನಿಖೆಯಲ್ಲಿ ಬಯಲಾಯ್ತು KPSC ನೇಮಕಾತಿ ಅಕ್ರಮದ ಸ್ಫೋಟಕ ರಹಸ್ಯ!

2

ಮೈಸೂರಿನಲ್ಲಿ ಕೃಷಿ ಸಂಸ್ಕೃತಿ ಅನಾವರಣ: ನಗಾರಿ ಬಾರಿಸಿ ‘ರೈತ ದಸರಾ'ಗೆ ಚಾಲನೆ ನೀಡಿದ ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

3

​ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರ

4

ಬೆಳಗ್ಗೆ ಹೊಟ್ಟೆ ಕ್ಲೀನ್‌ ಆಗುತ್ತಿಲ್ಲವೇ? ಮಲಬದ್ಧತೆ ದೂರ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

5

30ರ ರೀಲ್ಸ್‌ ರಾಣಿ ಮದುವೆಯಾದ 75ರ ವೃದ್ಧ; ವಿಡಿಯೋ ನೋಡಿ ಹೊಟ್ಟೆ ಉರಿದಿಕೊಂಡ ಸಿಂಗಲ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮೈಸೂರು: ಆಧುನಿಕ ಕೃಷಿ ಆವಿಷ್ಕಾರಗಳನ್ನು ರೈತ ಸಮುದಾಯ ಹಾಗೂ ನಾಡಿಗೆ ಪರಿಚಯಿಸುವ ಪ್ರಯತ್ನವೇ ರೈತ ದಸರಾ ಆಚರಣೆಯ ವೈಶಿಷ್ಟ್ಯ ಎಂದು ಕೃಷಿ ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ ಅವರು ಹೇಳಿದರು.

ನಗಾರಿ ಬಾರಿಸುವ ಮೂಲಕ ʼರೈತ ದಸರಾʼ ಉದ್ಘಾಟನೆ:
ಮೈಸೂರು ಅರಮನೆ ಎದುರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ರೈತ ದಸರಾ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪರಿಕರಗಳನ್ನು ರೈತರಿಗೆ ಪರಿಚಯಿಸಲು ಇದೊಂದು ಸದವಕಾಶ. ನಾಡಿನಲ್ಲಿ ಬರದ ಛಾಯೆ ಇದ್ದರೂ ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲರೂ ಮುಂದಾಗಬೇಕು. ಆ ನಿಟ್ಟಿನಲ್ಲಿ ಕೃಷಿ ಇಲಾಖೆ ಕೂಡ ಸರ್ವಸನ್ನದ್ಧವಾಗಿದೆ‌ ಎಂದು ಹೇಳಿದರು.

ಮೈಸೂರು ದಸರಾ ಕೇವಲ ಅರಮನೆಗೆ ಸೀಮಿತವಾದ ಹಬ್ಬವಲ್ಲ:
ಮೈಸೂರು ದಸರಾ ಎಂದರೆ ಕೇವಲ ಅರಮನೆಗೆ ಸೀಮಿತವಾದ ಹಬ್ಬವಲ್ಲ. ಇದು ನಾಡಿನ ಸಂಸ್ಕೃತಿಯ ಸಂಕೇತ. ಅನ್ನದಾತ ರೈತನ ದುಡಿಮೆಯ ಸಂಭ್ರಮವೂ ಆಗಿದೆ. ರೈತರ ಗೌರವವನ್ನು ಎತ್ತಿಹಿಡಿಯುವ ಉದ್ದೇಶದಿಂದಲೇ ಬರವಿದ್ದರೂ ರೈತ ದಸರಾ ಆಚರಣೆಯ ಸಂಪ್ರದಾಯ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಸಂಸ್ಕೃತಿ- ತಂತ್ರಜ್ಞಾನದ ಸಮ್ಮಿಲನ: 
ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಕಲೆ, ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ನಾಡಿನ ಜಾನುವಾರು ಸಂಪತ್ತಿನ ಪ್ರದರ್ಶನ ಕಣ್ಮನ ಸೆಳೆಯಿತು.

ಪೂರ್ಣಕುಂಭ ಹೊತ್ತ ಮಹಿಳೆಯರು, ನಂದಿಧ್ವಜ, ನಾದಸ್ವರ ತಂಡಗಳು ಮುಂಚೂಣಿಯಲ್ಲಿದ್ದವು.  ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ನಗಾರಿ, ತಮಟೆ, ಚಿಲಿಪಿಲಿ ಗೊಂಬೆ, ಕೀಲು ಕುದುರೆ, ಟಿಬೇಟಿಯನ್ ನೃತ್ಯ, ಗಿರಿಜನ ಹಾಗೂ ಕೊಡವ ನೃತ್ಯ ತಂಡಗಳು ಕಲಾ ವೈಭವವನ್ನು ಹೆಚ್ಚಿಸಿದವು.

ಕೃಷಿ ವಲಯದ ಪ್ರಗತಿ ಸಾರುವ ವಿದ್ಯುತ್ ಚಾಲಿತ ಟ್ರ್ಯಾಕ್ಟರ್, ಮುಸುಕಿನ ಜೋಳ ಸೈಲೇಜ್ ಚಾಪರ್, ಭತ್ತದ ನಾಟಿ ಯಂತ್ರ, ಸ್ವರಾಜ್ ಕೋಡ್, ಡ್ರೋನ್‌ಗಳು ಹಾಗೂ ಹನಿ ನೀರಾವರಿ ಘಟಕಗಳ ಪ್ರದರ್ಶನ ಗಮನ ಸೆಳೆಯಿತು.

ನಾಡಿನ ತಳಿಗಳಾದ ಹಳ್ಳಿಕಾರ್ ಎತ್ತುಗಳು, ಬಂಡೂರು ಕುರಿ, ಉದ್ದ ಕಿವಿಯ ಮೇಕೆ ತಳಿಗಳು ಮತ್ತು ಸಜ್ಜುಗೊಳಿಸಿದ ಎತ್ತಿನ ಗಾಡಿಗಳು ಕೃಷಿ ಸಂಸ್ಕೃತಿಯ ಬೇರುಗಳನ್ನು ನೆನಪಿಸಿದವು. ರೈತ ದಸರಾ ಉದ್ಘಾಟನೆಗೂ ಮುನ್ನ ಕೃಷಿ ಸಚಿವರು ನಂದಿ ಪೂಜೆ ನೆರವೇರಿಸಿದರು.

ಎತ್ತಿನ ಗಾಡಿ ಓಡಿಸಿದ ಸಚಿವರು: 
ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಎತ್ತಿನ ಗಾಡಿ ಓಡಿಸುವ ಮೂಲಕ‌ ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ಕೋಟೆ ಆಂಜನೇಯ ಸ್ವಾಮಿ‌ ದೇವಸ್ಥಾನದಿಂದ ಹಿಡಿದು ಕೆ.ಆರ್.ವೃತ್ತದವರೆಗೆ ಸ್ವತಃ ಎತ್ತಿನಗಾಡಿ ಓಡಿಸಿ ಗಮನ ಸೆಳೆದರು. ಸಚಿವರ ಮೆರವಣಿಗೆಗೆ ಜಾನಪದ ಕಲಾ ತಂಡಗಳು ಸಾಥ್ ನೀಡಿದವು.

"ಈ ಮೆರವಣಿಗೆಯು ನಮ್ಮ ಕೃಷಿ ಪ್ರಗತಿಯ ಪಥಸಂಚಲನವಾಗಿದೆ. ನಾಡಿಗೆ ಕವಿದಿರುವ ಬರದ ಕತ್ತಲು ದೂರವಾಗಿ, ಎಲ್ಲೆಡೆ ಸುಭಿಕ್ಷೆಯ ಬೆಳಕು ಪಸರಿಸಲಿ" ಎಂದು ಸಚಿವರು ಆಶಿಸಿದರು.

ಉದ್ಘಾಟನಾ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಕೃಷ್ಣರಾಜ‌ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ಚಾಮರಾಜ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ, ಅಂಬೇಡ್ಕರ್ ಅಭಿವೃದ್ಧಿ‌ ನಿಗಮದ ಅಧ್ಯಕ್ಷ ನರೇಂದ್ರ, ಕೃಷಿ ಇಲಾಖೆ ಆಯುಕ್ತರಾದ ಸತೀಶ್, ಕೃಷಿಕ‌ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವಕುಮಾರ್, ರೈತ ದಸರಾ ಉಪಸಮಿತಿ ಉಪಾಧ್ಯಕ್ಷರಾದ ಮಹಾದೇವ್, ಕುಪ್ಪುಸ್ವಾಮಿ, ಯೋಗೇಶ್, ಸತೀಶ್ ಕುಮಾರ್, ಆರ್. ಮಾದೇಶ್, ರವಿ ಪಿ., ಪಿ.ಪಿ.ಮಹಾದೇವ್, ಅಧಿಕಾರೇತರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ. ವಿರೂಪಾಕ್ಷ ಹಾಗೂ ಮತ್ತಿತರರು ಹಾಜರಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವಿ ಕೆ.ಎಚ್. ಅವರು ಎಲ್ಲರನ್ನೂ ರೈತ ದಸರಾಗೆ ಸ್ವಾಗತಿಸಿದರು.
 

Add Zee News as a Preferred Source
TAGS:
Kannada News