• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರ: ಮುಂದಿನ 83 ದಿನ ಕಷ್ಟ ಕೊಡುವಾತನಿಂದಲೇ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ

ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರ: ಮುಂದಿನ 83 ದಿನ ಕಷ್ಟ ಕೊಡುವಾತನಿಂದಲೇ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ

Written ByYashaswini V
Published: Oct 08, 2026, 06:42 AM IST|Updated: Oct 08, 2026, 06:45 AM IST
joinshare
ಜ್ಯೋತಿಷ್ಯದಲ್ಲಿ ಶನಿಯನ್ನು ಕರ್ಮಫಲದಾತ ಎನ್ನಲಾಗುತ್ತದೆ. ಆದರೂ, ಶನಿ ಕೇವಲ ಕಷ್ಟಗಳನ್ನು ಮಾತ್ರ ನೀಡುವುದಿಲ್ಲ.

ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ಮಹಾತ್ಮನು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಕಷ್ಟಕೊಡುವಾತ ಅದೃಷ್ಟದ ಸುರಿಮಳೆಯನ್ನೇ ಸುರಿಸುತ್ತಾನೆ. ವ್ಯಕ್ತಿಯ ಜೀವನದಲ್ಲಿ ಹರ್ಷದ ಹೊನಲನ್ನು ಹರಿಸುತ್ತಾನೆ ಎನ್ನಲಾಗುತ್ತದೆ. 

Shani Nakshatra Change Impact1/6

ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರ

ಹಿಂದೂ ಪಂಚಾಂಗದ ಪ್ರಕಾರ, ಪ್ರಸ್ತುತ ರೇವತಿ ನಕ್ಷತ್ರದಲ್ಲಿರುವ ನ್ಯಾಯದ ದೇವರು ಶನಿ ಅಕ್ಟೋಬರ್‌ 09, 2026ರಂದು ಸಂಜೆ 07:28ಕ್ಕೆ ತನ್ನದೇ ಅಧಿಪತ್ಯದ ಉತ್ತರಾಭಾದ್ರ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಉತ್ತರಾಭಾದ್ರ / ಉತ್ತರ ಭಾದ್ರಪದ ನಕ್ಷತ್ರದ ಅಧಿಪತಿ ಶನಿಯೇ ಆಗಿದ್ದು ಸುಮಾರು 83 ದಿನಗಳವರೆಗೆ ಇದೇ ನಕ್ಷತ್ರದಲ್ಲಿ ಸಂಚರಿಸಲಿರುವ ಶನಿ ಮಹಾತ್ಮ ಈ ಅವಧಿಯಲ್ಲಿ ಐದು ರಾಶಿಯವರ ಜೀವನದ ಅದೃಷ್ಟವನ್ನೇ ಬದಲಿಸಲಿದ್ದಾನೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ...
Shani Nakshatra Change Impact2/6

ವೃಷಭ ರಾಶಿ

ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರವು ವೃಷಭ ರಾಶಿಯವರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದ್ದು, ಇದರಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಈ ಅವಧಿಯಲ್ಲಿ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವ ಸೂಚನೆಗಳಿವೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗಲಿವೆ.
Shani Nakshatra Change Impact3/6

ಮಿಥುನ ರಾಶಿ

ಶನಿ ನಕ್ಷತ್ರ ಪರಿವರ್ತನೆಯು ಮಿಥುನ ರಾಶಿಯ ನಿರುದ್ಯೋಗಿಗಳಿಗೆ ಉತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ಉದ್ಯೋಗಸ್ಥರಿಗೆ ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಆದಾಯದ ಮೂಲಗಳು ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ಥಿರತೆಯನ್ನು ತರುವಲ್ಲಿ ಪರಿಣಾಮಕಾರಿ ಎನ್ನಲಾಗುತ್ತಿದೆ.
Shani Nakshatra Change Impact4/6

ಕನ್ಯಾ ರಾಶಿ

ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಪ್ರವೇಶಿಸುತ್ತಿದ್ದಂತೆ ನಿಮ್ಮ ಕಷ್ಟಗಳೆಲ್ಲವೂ ಮಾಯವಾಗಲಿದ್ದು, ಜೀವನದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗವನ್ನು ಪಡೆಯಲಿದ್ದು ಆರ್ಥಿಕ ಪರಿಸ್ಥಿತಿಯೂ ಸುಧಾರಣೆಗೊಳ್ಳಲಿದೆ.
Shani Nakshatra Change Impact5/6

ತುಲಾ ರಾಶಿ

ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರದೊಂದಿಗೆ ತುಲಾ ರಾಶಿಯವರ ಬದುಕಿನಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆ ಆಗಲಿದ್ದು, ಕೆಲಸ ಕಾರ್ಯಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆ ಆಗಲಿವೆ. ಮನೆಯಲ್ಲಿ ಸುಖ-ಸಂತೋಷ ಇಮ್ಮಡಿಗೊಳ್ಳಲಿದೆ.
Shani Nakshatra Change Impact6/6

ಮಕರ ರಾಶಿ

ಮಕರ ರಾಶಿಯ ಅಧಿಪತಿಯೂ ಆಗಿರುವ ಶನಿ ತನ್ನದೇ ನಕ್ಷತ್ರಕ್ಕೆ ಪ್ರವೇಶಿಸುವುದು ಈ ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿ ಆಗಿರಲಿದೆ. ಈ ಸಮಯದಲ್ಲಿ ವೃತ್ತಿಪರರಿಗೆ ಪ್ರಮೋಷನ್‌ ಸಾಧ್ಯತೆ ಇದ್ದು, ವ್ಯವಹಾರಸ್ಥರಿಗೆ ಹಣದ ಸುರಿಮಳೆಯೇ ಸುರಿಯಲಿದೆ. ದಾಂಪತ್ಯದಲ್ಲಿ ಮೂಡಿದ್ದ ಬಿರುಕು ಸರಿಹೋಗುವ ಸೂಚನೆಗಳಿವೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

Trending

  • News
  • Photos
  • Videos
ಅತ್ತಿಬೆಲೆ ಪೆಟ್ರೋಲ್‌ ಬಂಕ್‌ನಲ್ಲಿ ಅಗ್ನಿ ಅವಘಡ: ನಡೆದಿದ್ದೇನು? ಇಲ್ಲಿದೆ ವಿವರ

ಅತ್ತಿಬೆಲೆ ಪೆಟ್ರೋಲ್‌ ಬಂಕ್‌ನಲ್ಲಿ ಅಗ್ನಿ ಅವಘಡ: ನಡೆದಿದ್ದೇನು? ಇಲ್ಲಿದೆ ವಿವರ

2

Virat Kohli: ಪ್ರೇಮಾನಂದ ಮಹರಾಜರಿಂದ ₹5 ಕೋಟಿ ಪಡೆದಿದ್ದು ನಿಜವೇ? ಕೊನೆಗೂ ಮೌನ ಮುರಿದ ವಿರಾಟ್‌ ಕೊಹ್ಲಿ ಹೇಳಿದ್ದೇನು?

3

ಕರ್ನಾಟಕದಲ್ಲಿ ಬರದ ಆರ್ಭಟ! ಇಂಡಿ, ಚಡಚಣ ಸೇರಿ ಮತ್ತೆ 40 ತಾಲೂಕುಗಳು ಬರಪೀಡಿತ; ಒಟ್ಟು ಸಂಖ್ಯೆ 217ಕ್ಕೆ ಏರಿಕೆ

4

ನೈಸ್‌ ಯೋಜನೆಯಲ್ಲಿ 3 ಪಟ್ಟು ಅಧಿಕ ಟೋಲ್ ವಸೂಲಿ! ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದ ಎಚ್‌ಡಿಕೆ

5

‘ನನ್ನ ಗಂಡನ ಮೊಬೈಲ್‌ನಲ್ಲಿ ಆಕೆಯ ಫೋಟೋಗಳೂ ಸಿಕ್ತು’ : ನಟ ಯುವ ರಾಜ್‌ಕುಮಾರ್‌ ಬಗ್ಗೆ ಶ್ರೀದೇವಿ ಭೈರಪ್ಪ ಪೋಸ್ಟ್‌ ವೈರಲ್

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.