• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ನೈಸ್‌ ಯೋಜನೆಯಲ್ಲಿ 3 ಪಟ್ಟು ಅಧಿಕ ಟೋಲ್ ವಸೂಲಿ! ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದ ಎಚ್‌ಡಿಕೆ

ನೈಸ್‌ ಯೋಜನೆಯಲ್ಲಿ 3 ಪಟ್ಟು ಅಧಿಕ ಟೋಲ್ ವಸೂಲಿ! ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದ ಎಚ್‌ಡಿಕೆ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೈಸ್‌ ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡಿದ್ದು, ₹1,583.76 ಕೋಟಿ ಮೂಲ ಯೋಜನಾ ವೆಚ್ಚದ ನೈಸ್‌ ಯೋಜನೆಯಲ್ಲಿ 2008ರಿಂದ 2025ರವರೆಗೆ ₹4,756.48 ಕೋಟಿ ಟೋಲ್‌ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಹೈಕೋರ್ಟ್‌ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿಲ್ಲ ಎಂದು ಉಲ್ಲೇಖಿಸಿದ ಅವರು, ಯೋಜನೆ ಪೂರ್ಣಗೊಳ್ಳದೆ ಟೋಲ್‌ ವಸೂಲಿ ಮುಂದುವರಿಸುವುದು ಸರಿಯಲ್ಲ ಎಂದು ಆರೋಪಿಸಿ, ತಕ್ಷಣ ಟೋಲ್‌ ಸಂಗ್ರಹ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

Written ByPuttaraj K Alur
Published: Oct 07, 2026, 10:53 PM IST|Updated: Oct 07, 2026, 11:13 PM IST
joinshare
ನೈಸ್‌ ಯೋಜನೆಯಲ್ಲಿ 3 ಪಟ್ಟು ಅಧಿಕ ಟೋಲ್ ವಸೂಲಿ! ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದ ಎಚ್‌ಡಿಕೆ
Image Credit: NICE Road Toll

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
Virat Kohli: ಪ್ರೇಮಾನಂದ ಮಹರಾಜರಿಂದ ₹5 ಕೋಟಿ ಪಡೆದಿದ್ದು ನಿಜವೇ? ಕೊನೆಗೂ ಮೌನ ಮುರಿದ ವಿರಾಟ್‌ ಕೊಹ್ಲಿ ಹೇಳಿದ್ದೇನು?

Virat Kohli: ಪ್ರೇಮಾನಂದ ಮಹರಾಜರಿಂದ ₹5 ಕೋಟಿ ಪಡೆದಿದ್ದು ನಿಜವೇ? ಕೊನೆಗೂ ಮೌನ ಮುರಿದ ವಿರಾಟ್‌ ಕೊಹ್ಲಿ ಹೇಳಿದ್ದೇನು?

2

ಕರ್ನಾಟಕದಲ್ಲಿ ಬರದ ಆರ್ಭಟ! ಇಂಡಿ, ಚಡಚಣ ಸೇರಿ ಮತ್ತೆ 40 ತಾಲೂಕುಗಳು ಬರಪೀಡಿತ; ಒಟ್ಟು ಸಂಖ್ಯೆ 217ಕ್ಕೆ ಏರಿಕೆ

3

ನೈಸ್‌ ಯೋಜನೆಯಲ್ಲಿ 3 ಪಟ್ಟು ಅಧಿಕ ಟೋಲ್ ವಸೂಲಿ! ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದ ಎಚ್‌ಡಿಕೆ

4

‘ನನ್ನ ಗಂಡನ ಮೊಬೈಲ್‌ನಲ್ಲಿ ಆಕೆಯ ಫೋಟೋಗಳೂ ಸಿಕ್ತು’ : ನಟ ಯುವ ರಾಜ್‌ಕುಮಾರ್‌ ಬಗ್ಗೆ ಶ್ರೀದೇವಿ ಭೈರಪ್ಪ ಪೋಸ್ಟ್‌ ವೈರಲ್

5

ಬಿಗ್‌ ಬಾಸ್‌ ಮನೆಯಲ್ಲಿ ಸೌಂದರ್ಯ ಯಶಸ್‌ ವರ್ತನೆಗೆ ವೀಕ್ಷಕರ ಆಕ್ರೋಶ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

NICE Road Toll: ಬೆಂಗಳೂರಿನ ನೈಸ್‌ (NICE) ರಸ್ತೆ ಯೋಜನೆ ಮತ್ತೆ ರಾಜಕೀಯ ಹಾಗೂ ಕಾನೂನು ಚರ್ಚೆಯ ಕೇಂದ್ರಬಿಂದುವಾಗಿದೆ. ನೈಸ್ ಯೋಜನೆಯ ಮೂಲ ವೆಚ್ಚ ₹1,583.76 ಕೋಟಿ ಆಗಿದ್ದರೂ, 2008ರಿಂದ 2025ರವರೆಗೆ ಸಂಸ್ಥೆಯು ₹4,756.48 ಕೋಟಿ ಟೋಲ್‌ ಹಣ ಸಂಗ್ರಹಿಸಿದೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್‌ ನಾಯಕ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಯೋಜನೆ ಪೂರ್ಣಗೊಳ್ಳದಿದ್ದರೂ ಟೋಲ್‌ ಸಂಗ್ರಹ ಮುಂದುವರಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ತಕ್ಷಣವೇ ಟೋಲ್‌ ಸಂಗ್ರಹವನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.  

ಜೆಡಿಎಸ್‌ ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ನೈಸ್‌ ಸಂಸ್ಥೆ ಮೂಲ ಒಪ್ಪಂದಗಳ ನಿಯಮಗಳನ್ನ ಉಲ್ಲಂಘಿಸಿ ಟೋಲ್‌ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದರು. ತಮ್ಮ ಹೇಳಿಕೆಯ ಪ್ರಕಾರ, 2008-09ರಲ್ಲಿ ವರ್ಷಕ್ಕೆ ₹5.59 ಕೋಟಿ ಇದ್ದ ಟೋಲ್‌ ಆದಾಯವು 2024-25ರ ವೇಳೆಗೆ ₹734.97 ಕೋಟಿಗೆ ಏರಿಕೆಯಾಗಿದೆ. 2008ರಿಂದ 2025ರವರೆಗೆ ಒಟ್ಟು ₹4,756.48 ಕೋಟಿ ಟೋಲ್‌ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.

ಯೋಜನಾ ವೆಚ್ಚಕ್ಕಿಂತ ಮೂರು ಪಟ್ಟು ಟೋಲ್‌?

 

📍ಬೆಂಗಳೂರು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (#NICE ) ಯೋಜನೆ ಹೆಸರಿನಲ್ಲಿ ರಸ್ತೆ ಅಪೂರ್ಣವಾಗಿದ್ದರೂ ಅಕ್ರಮವಾಗಿ ಟೋಲ್ ಸುಲಿಗೆ ಮಾಡುತ್ತಿರುವ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಟೋಲ್ ಸುಲಿಗೆ ವಿರುದ್ಧ ಗೌರವಾನ್ವಿತ ಹೈಕೋರ್ಟ್ ಕಟುವಾದ ಅಭಿಪ್ರಾಯ ದಾಖಲಿಸಿದ್ದರೂ, ಇದಕ್ಕೆ ಗೌರವಾನ್ವಿತ ಸುಪ್ರೀಂ ಕೋರ್ಟ್ ತಡೆಯಾಜ್ನೆ ನೀಡದೇ ಇದ್ದರೂ ಇನ್ನೂ ರಸ್ತೆ ಸುಂಕ ವಸೂಲಿ ಮಾಡುತ್ತಿರುವುದು ಅಕ್ರಮ. ನೈಸ್ ರಸ್ತೆ ಮೂಲ ಯೋಜನಾ ವೆಚ್ಚವೇ ₹1,583,76 ಕೋಟಿ. ಆದರೆ, ಈವರೆಗೆ ₹4,756.48 ಕೋಟಿ ಟೋಲ್ ಹಣ ವಸೂಲಿ ಮಾಡಿದೆ ಆ ಕಂಪನಿ. ಹೀಗಾಗಿ ತಕ್ಷಣವೇ ಟೋಲ್ ವಸೂಲಿ ನಿಲ್ಲಿಸಬೇಕು. ಅದಕ್ಕೆ ರಾಜ್ಯ ಸರಕಾರವೂ ತುರ್ತು ಕ್ರಮ ವಹಿಸಬೇಕು. ಸಾರ್ವಜನಿಕರು ಕೂಡ ಯಾವುದೇ ಕಾರಣಕ್ಕೂ ಟೋಲ್ ಪಾವತಿ ಮಾಡಬಾರದು ಎಂದು ಆಗ್ರಹಿಸುತ್ತೇನೆ. ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡ ಅವರು, ಶ್ರೀ ಚೌಡರೆಡ್ಡಿ ತೂಪಲ್ಲಿ ಅವರು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷರಾದ ಶ್ರೀ ಹೆಚ್.ಎಂ.ರಮೇಶ್ ಗೌಡರು,ರಾಜ್ಯ ವಕ್ತಾರರಾದ ಶ್ರೀ ಹೆಚ್.ಎನ್. ದೇವರಾಜು ಮುಂತಾದವರು ಉಪಸ್ಥಿತರಿದ್ದರು. #NiceLootsKarnataka #NothingNice #StopNiceToll

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 7, 2026

 ಕುಮಾರಸ್ವಾಮಿ ಅವರ ಪ್ರಮುಖ ವಾದವೆಂದರೆ, ನೈಸ್‌ ಯೋಜನೆಯ ಮೂಲ ಯೋಜನಾ ವೆಚ್ಚವೇ ₹1,583.76 ಕೋಟಿ. ಆದರೆ ಇದುವರೆಗೆ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿರುವ ಟೋಲ್‌ ಮೊತ್ತ ₹4,756.48 ಕೋಟಿ. ಅಂದರೆ ಮೂಲ ಯೋಜನಾ ವೆಚ್ಚದ ಸುಮಾರು ಮೂರು ಪಟ್ಟು ಮೊತ್ತವನ್ನ ಟೋಲ್‌ ಮೂಲಕ ಸಂಗ್ರಹಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಯೋಜನೆಯ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಳ್ಳದೆ ಸಂಚಾರಕ್ಕೆ ರಸ್ತೆ ತೆರವುಗೊಳಿಸಿ ಟೋಲ್‌ ಸಂಗ್ರಹ ಆರಂಭಿಸಲಾಗಿದೆ ಎಂಬುದು ತಮ್ಮ ಆರೋಪದ ಪ್ರಮುಖ ಅಂಶ ಎಂದು ಕುಮಾರಸ್ವಾಮಿ ಹೇಳಿದರು. ಟೋಲ್‌ ಸಂಗ್ರಹಕ್ಕೆ ಸಂಬಂಧಿಸಿದ ಷರತ್ತುಗಳನ್ನ ನೈಸ್‌ ಸಂಸ್ಥೆ ಪಾಲಿಸಿಲ್ಲ ಎಂದು ಅವರು ದೂರಿದರು.

 

TCA–FWA ಒಪ್ಪಂದ ಉಲ್ಲಂಘನೆ ಆರೋಪ

2000ರ ಸೆಪ್ಟೆಂಬರ್ 4ರಂದು ರಾಜ್ಯ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಹಾಗೂ ನೈಸ್‌ ಸಂಸ್ಥೆಯ ನಡುವೆ ಟೋಲ್‌ ಕನ್ಸೆಷನ್‌ ಅಗ್ರಿಮೆಂಟ್‌ (TCA) ನಡೆದಿತ್ತು ಎಂದು ಕುಮಾರಸ್ವಾಮಿ ಹೇಳಿದರು. ಇದಕ್ಕೂ ಮೊದಲು 1997ರ ಏಪ್ರಿಲ್ 3ರಂದು ಸರ್ಕಾರ ಮತ್ತು ನೈಸ್‌ ನಡುವೆ ಫ್ರೇಮ್‌ವರ್ಕ್‌ ಅಗ್ರಿಮೆಂಟ್‌ (FWA) ಆಗಿತ್ತು. TCA ಹಾಗೂ FWA ನಡುವೆ ಯಾವುದೇ ಸಂಘರ್ಷ ಉಂಟಾದರೆ ಮೂಲ FWAಯ ನಿಯಮಗಳೇ ಅಂತಿಮವಾಗಬೇಕು ಎಂಬ ಒಪ್ಪಂದವಿತ್ತು ಎಂದು ಅವರು ವಿವರಿಸಿದರು. ನಾಲ್ಕು ಪಥದ ಕಾಂಕ್ರೀಟ್‌ ರಸ್ತೆ, ಸರ್ವಿಸ್‌ ರಸ್ತೆ ಹಾಗೂ ನಿರ್ವಹಣಾ ಪ್ರದೇಶಗಳನ್ನ ನಿರ್ಮಿಸಿದ ನಂತರವೇ ಟೋಲ್‌ ಸಂಗ್ರಹಿಸಬೇಕಿತ್ತು ಎಂಬುದು ಒಪ್ಪಂದದ ಷರತ್ತು ಎಂದು ಅವರು ಹೇಳಿದರು. ಆದರೆ ಈ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸದೇ 2008ರಿಂದ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂಬುದು ಕುಮಾರಸ್ವಾಮಿ ಅವರ ಆರೋಪ.

 

ನೈಸ್ ರಸ್ತೆ ಯೋಜನೆಯ ಮೂಲ ಚೌಕಟ್ಟು ಒಪ್ಪಂದದಲ್ಲಿ (Frame work agreement) ನಡೆದಿರುವ ಉಲ್ಲಂಘನೆಗಳು, ಅಕ್ರಮಗಳು ಅಗಣಿತ. #FWA ಅನ್ನು ಪಕ್ಕಕ್ಕೆ ಇಟ್ಟು #ODP ಮಾಡಿಕೊಂಡು ಇಡೀ ಯೋಜನೆಯನ್ನು ಹಳಿ ತಪ್ಪಿಸಲಾಯಿತು. ಅದಕ್ಕೆ ಕಾರಣರು ಯಾರು? ಈ ಎಲ್ಲಾ ಒಳಸಂಚುಗಳ ಹಿಂದಿರುವ ಪಿತಾಮಹ ಯಾರು? ದಾಖಲೆಗಳೇ ಹೇಳುತ್ತಿವೆ. ಹೆಚ್.ಟಿ.ಸೋಮಶೇಖರ್ ರೆಡ್ಡಿ ಪ್ರಕರಣದಲ್ಲಿ ನೈಸ್ ಸಂಸ್ಥೆಯು ಸುಪ್ರೀಂ ಕೋರ್ಟ್ ಮುಂದೆ ಪೆರಿಫೆರಲ್ ರಸ್ತೆಗೆ 2,193 ಎಕರೆ ಸೇರಿ ಒಟ್ಟು 6,999 ಎಕರೆ ಭೂಮಿಯನ್ನು ಮಾತ್ರ ಕೇಳಿತ್ತು. ಇದರಲ್ಲಿ ಕರಾಬು, ಖುಷ್ಕಿ, ತರಿ ಮತ್ತು ತೋಟದ ಜಮೀನು ಇತ್ತೇ ಹೊರತು ಯಾವುದೇ ಕೆರೆ ಜಾಗವನ್ನು ಕೇಳಿರಲಿಲ್ಲ. ಆದರೆ, 2021ರಲ್ಲಿ ಎಂಜಿನಿಯರ್ ಕಪಿಲ್ ಶರ್ಮ ಎಂಬುವವರು ದಿಶಾಂಕ್ ಆಪ್ ಬಳಸಿ ಕೆರೆಗಳನ್ನು ಮುಚ್ಚಿ ರಸ್ತೆ ನಿರ್ಮಿಸಿರುವುದನ್ನು ಪತ್ತೆ ಹಚ್ಚಿ ದೂರು ನೀಡಿದ್ದರು. ಇದು ಬರೀ ಅಕ್ರಮವಲ್ಲ, ದೇಶವೇ ಕಂಡರಿಯದ ಮಹಾಹಗರಣ. #NiceLootsKarnataka #NothingNice #StopNiceToll

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 7, 2026

 ODP ಮೂಲಕ ಅಲೈನ್‌ಮೆಂಟ್ ಬದಲಾವಣೆ?

 

ನೈಸ್‌ ಯೋಜನೆಯ ಔಟ್‌ಲೈನ್‌ ಡೆವಲಪ್‌ಮೆಂಟ್‌ ಪ್ಲಾನ್‌ (ODP) ಬದಲಾವಣೆಯನ್ನೂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 2004ರ ಫೆಬ್ರವರಿ 12ರಂದು ಸಚಿವ ಸಂಪುಟದ ಅನುಮೋದನೆ ಪಡೆಯದೆ ODP ಮೂಲಕ ಯೋಜನೆಯ ಅಲೈನ್‌ಮೆಂಟ್‌ ಬದಲಾಯಿಸಲಾಗಿದೆ ಎಂದು ಅವರು ಆರೋಪಿಸಿದರು. ಮೂಲ ಯೋಜನೆಯಲ್ಲಿ ಪೆರಿಫೆರಲ್‌ ರಸ್ತೆಗೆ 2,193 ಎಕರೆ ಜಮೀನು ನಿಗದಿಯಾಗಿದ್ದರೆ, ನಂತರ ಅದನ್ನ 2,747 ಎಕರೆಗೆ ಹೆಚ್ಚಿಸಲಾಗಿದೆ. ಇದೇ ರೀತಿ ಟೋಲ್‌ ರಸ್ತೆಗೆ ಸಂಬಂಧಿಸಿದ ಜಮೀನಿನ ಪ್ರಮಾಣವನ್ನ 6,999 ಎಕರೆಯಿಂದ 9,468 ಎಕರೆಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಕರ್ನಾಟಕ ಹೈಕೋರ್ಟ್‌ನ ಜುಲೈ 29ರ ತೀರ್ಪಿನಲ್ಲಿ 2004ರ ODP ಮೂಲಕ ಮೂಲ ಯೋಜನೆಯ ಭೂ ಹಂಚಿಕೆಯಲ್ಲಿ ಬದಲಾವಣೆಗಳಾಗಿರುವುದನ್ನ ನ್ಯಾಯಾಲಯ ಪರಿಶೀಲಿಸಿದೆ. ತೀರ್ಪಿನಲ್ಲಿ FWAಯಲ್ಲಿ ರಸ್ತೆ ಘಟಕಗಳಿಗೆ 6,999 ಎಕರೆ ಮೀಸಲಾಗಿದ್ದರೆ, ನಂತರದ ODPಯಲ್ಲಿ ರಸ್ತೆ ಘಟಕಗಳಿಗೆ 9,471 ಎಕರೆ ಅಗತ್ಯವೆಂದು ತೋರಿಸಲಾಗಿತ್ತು ಎಂದು ದಾಖಲಾಗಿದೆ.  

ಕೆರೆಗಳ ಜಾಗ ಬಳಕೆ ಆರೋಪ

ನೈಸ್‌ ಯೋಜನೆಯಡಿ ಕೆರೆಗಳು ಮತ್ತು ಜಲಮೂಲಗಳ ಜಾಗ ಬಳಕೆಯಾಗಿದೆ ಎಂಬ ಆರೋಪವನ್ನೂ ಕುಮಾರಸ್ವಾಮಿ ಮುಂದಿಟ್ಟಿದ್ದಾರೆ. 2021ರಲ್ಲಿ ಎಂಜಿನಿಯರ್‌ ಕಪಿಲ್‌ ಶರ್ಮಾ ಅವರು ದಿಶಾಂಕ್‌ ಆಪ್‌ ಬಳಸಿಕೊಂಡು ಕೆಲವು ಕೆರೆಗಳ ಪ್ರದೇಶದಲ್ಲಿ ರಸ್ತೆ ನಿರ್ಮಿಸಿರುವುದನ್ನ ಪತ್ತೆಹಚ್ಚಿ ದೂರು ನೀಡಿದ್ದರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆರೆಗಳಿಗೆ ಸಂಬಂಧಿಸಿದ ದಾಖಲೆಗಳನ್ನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ ಸಚಿವರು, ಯೋಜನೆಯ ಭೂ ಬಳಕೆ ಕುರಿತು ಮತ್ತಷ್ಟು ತನಿಖೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಕರ್ನಾಟಕ ಹೈಕೋರ್ಟ್‌ನ ತೀರ್ಪಿನಲ್ಲಿಯೂ ಕೆರೆಗಳು, ಜಲಮೂಲಗಳು ಮತ್ತು ಟ್ಯಾಂಕ್‌ಬೆಡ್‌ ಜಮೀನುಗಳ ವಿಚಾರವನ್ನ ನ್ಯಾಯಾಲಯ ಪರಿಗಣಿಸಿದೆ.  

ಹೈಕೋರ್ಟ್‌ ತೀರ್ಪು ಉಲ್ಲೇಖಿಸಿದ ಹೆಚ್‌ಡಿಕೆ

ನೈಸ್‌ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ ಜುಲೈ 29ರಂದು ಮಹತ್ವದ ತೀರ್ಪು ನೀಡಿತ್ತು. ದೀರ್ಘಕಾಲ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದಿದ್ದರೂ ಪರಿಹಾರಧನದ ಕುರಿತು ಕ್ರಮ ಪೂರ್ಣಗೊಂಡಿಲ್ಲವೆಂಬ ಅಂಶ ಸೇರಿದಂತೆ ಯೋಜನೆಯ ಅನುಷ್ಠಾನದಲ್ಲಿ ಉಂಟಾದ ವ್ಯತ್ಯಾಸಗಳನ್ನ ನ್ಯಾಯಾಲಯ ಪರಿಶೀಲಿಸಿತ್ತು. ಈ ತೀರ್ಪನ್ನ ಉಲ್ಲೇಖಿಸಿದ ಕುಮಾರಸ್ವಾಮಿ, ಹೈಕೋರ್ಟ್‌ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿಲ್ಲ ಎಂದು ಹೇಳಿದರು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 2ರಂದು ನಡೆಯಲಿದೆ ಎಂದು ಅವರು ತಿಳಿಸಿದರು. ಇದೇ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹವನ್ನ ಮುಂದುವರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ತಕ್ಷಣವೇ ಅದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸುಪ್ರೀಂಕೋರ್ಟ್‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿಲ್ಲ ಎಂಬ ಅಂಶವನ್ನ ಇತ್ತೀಚಿನ ವರದಿಗಳೂ ಉಲ್ಲೇಖಿಸಿವೆ.  

ಟೋಲ್‌ ಹೊರತಾಗಿ ಬೇರೆ ಆದಾಯದ ಆರೋಪ

ನೈಸ್‌ ಸಂಸ್ಥೆಯು ಮೂಲ FWAಯನ್ನ ಉಲ್ಲಂಘಿಸಿ ಇತರ ಮಾರ್ಗಗಳಲ್ಲಿಯೂ ಆದಾಯ ಗಳಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಅವರ ಪ್ರಕಾರ, ಭೂ ಮಾರಾಟದಿಂದ ₹384 ಕೋಟಿ, ಭೂಮಿ ಮತ್ತು ನಿರ್ಮಾಣ ಯೋಜನೆಗಳ ಜಂಟಿ ಅಭಿವೃದ್ಧಿಗೆ ಮುಂಗಡವಾಗಿ ₹108 ಕೋಟಿ ಹಾಗೂ ಕನ್ವೆನ್ಷನ್‌ ಸೆಂಟರ್‌ಗಳಿಂದ ₹338 ಕೋಟಿ ಆದಾಯ ಗಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಹಣಕಾಸು ವ್ಯವಹಾರಗಳ ಕುರಿತು ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.

6 ವರ್ಷಗಳಲ್ಲಿ ರಸ್ತೆ ಪೂರ್ಣಗೊಳಿಸದಿದ್ದರೆ ಟೋಲ್‌ ಹಿಂಪಡೆಯಬೇಕಿತ್ತೇ?

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ 2002ರ ನವೆಂಬರ್ 4ರಂದು ನಡೆದ ಸಚಿವ ಸಂಪುಟ ನಿರ್ಣಯವನ್ನೂ ಕುಮಾರಸ್ವಾಮಿ ಉಲ್ಲೇಖಿಸಿದರು. ನಾಲ್ಕು ಪಥದ ಕಾಂಕ್ರೀಟ್‌ ರಸ್ತೆ ಕಾಮಗಾರಿಯನ್ನ ಆರು ವರ್ಷಗಳಲ್ಲಿ ಪೂರ್ಣಗೊಳಿಸದಿದ್ದರೆ ಟೋಲ್‌ ಸಂಗ್ರಹವನ್ನ ಹಿಂಪಡೆಯುವ ಷರತ್ತು ಇತ್ತು ಎಂದು ಅವರು ಹೇಳಿದರು. ಹೀಗಾಗಿ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹ ಮುಂದುವರಿಸುವುದಕ್ಕೆ ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದರು.

ಟಿ.ಬಿ. ಜಯಚಂದ್ರ ನಿಲುವಿನ ಬಗ್ಗೆಯೂ ಪ್ರಶ್ನೆ

2016ರಲ್ಲಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ನೈಸ್‌ ಯೋಜನೆಯನ್ನ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಹೆಚ್ಚುವರಿ ಜಮೀನನ್ನ ಹಿಂಪಡೆಯಲು ಶಿಫಾರಸು ಮಾಡಿದ್ದರು ಎಂದು ಕುಮಾರಸ್ವಾಮಿ ಹೇಳಿದರು. 2023ರ ಆಗಸ್ಟ್‌ನಲ್ಲಿ ನೈಸ್‌ ರಸ್ತೆ ಅಗತ್ಯವಿಲ್ಲ ಎಂದು ಹೇಳಿದ್ದ ಜಯಚಂದ್ರ ಅವರು, 2025ರ ಮೇ ತಿಂಗಳಲ್ಲಿ ನೈಸ್‌ ಯೋಜನೆಯನ್ನ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದನ್ನ ಪ್ರಶ್ನಿಸಿದ ಕುಮಾರಸ್ವಾಮಿ, ಇದರ ಹಿಂದೆ ಏನಿದೆ ಎಂಬುದನ್ನ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಹೇಳಿದರು.

‘ಇನ್ನೂ 10 ವರ್ಷ ಟೋಲ್‌ ಏಕೆ?’

ನೈಸ್‌ ರಸ್ತೆಯಲ್ಲಿ ಇನ್ನೂ ಹಲವು ವರ್ಷ ಟೋಲ್‌ ಸಂಗ್ರಹಿಸಬೇಕಿದೆ ಎಂಬ ಅಭಿಪ್ರಾಯಗಳ ಬಗ್ಗೆಯೂ ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಇನ್ನೂ ಹತ್ತು ವರ್ಷ ಟೋಲ್‌ ವಸೂಲಿ ಮಾಡುತ್ತಾರೆ ಎನ್ನುವುದಾದರೆ, ಯಾವ ಆಧಾರದ ಮೇಲೆ?” ಎಂದು ಅವರು ಪ್ರಶ್ನಿಸಿದರು. ನೈಸ್‌ ಯೋಜನೆಗೆ ಸಂಬಂಧಿಸಿದ ಅಕ್ರಮಗಳು ಹಾಗೂ ಟೋಲ್‌ ಸಂಗ್ರಹದ ಕುರಿತು ತಮ್ಮ ಪಕ್ಷ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದೆ ಎಂದು ಹೇಳಿದ ಅವರು, ಈ ಹೋರಾಟಕ್ಕೆ ಇದೀಗ ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಒಟ್ನಲ್ಲಿ ₹1,583.76 ಕೋಟಿ ಮೂಲ ಯೋಜನಾ ವೆಚ್ಚದ ನೈಸ್‌ ಯೋಜನೆಯಲ್ಲಿ ₹4,756.48 ಕೋಟಿ ಟೋಲ್‌ ಸಂಗ್ರಹವಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪ, ಭೂ ಬಳಕೆ, ಯೋಜನಾ ಅಲೈನ್‌ಮೆಂಟ್‌, ಮೂಲ ಒಪ್ಪಂದಗಳ ಅನುಷ್ಠಾನ ಹಾಗೂ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಗೆ ಬಂದಿದೆ. ನೈಸ್‌ ಯೋಜನೆಗೆ ಸಂಬಂಧಿಸಿದ ವಿಚಾರಗಳು ನ್ಯಾಯಾಲಯದಲ್ಲಿ ಮುಂದುವರಿದಿರುವುದರಿಂದ, ಮುಂದಿನ ವಿಚಾರಣೆಯತ್ತ ಇದೀಗ ಗಮನ ನೆಟ್ಟಿದೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಸುರೇಶ್‌ ಗೌಡ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್‌ ಬೆಂಗಳೂರು ಜೆಡಿಎಸ್‌ ಅಧ್ಯಕ್ಷ ಎಚ್‌.ಎಂ.ರಮೇಶ್‌ ಗೌಡ, ರಾಜ್ಯ ವಕ್ತಾರ ಎಚ್‌.ಎನ್‌.ದೇವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Add Zee News as a Preferred Source
TAGS:
Karnataka Politics
Kannada News