• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /‘ನನ್ನ ಗಂಡನ ಮೊಬೈಲ್‌ನಲ್ಲಿ ಆಕೆಯ ಫೋಟೋಗಳೂ ಸಿಕ್ತು’ : ನಟ ಯುವ ರಾಜ್‌ಕುಮಾರ್‌ ಬಗ್ಗೆ ಶ್ರೀದೇವಿ ಭೈರಪ್ಪ ಪೋಸ್ಟ್‌ ವೈರಲ್

‘ನನ್ನ ಗಂಡನ ಮೊಬೈಲ್‌ನಲ್ಲಿ ಆಕೆಯ ಫೋಟೋಗಳೂ ಸಿಕ್ತು’ : ನಟ ಯುವ ರಾಜ್‌ಕುಮಾರ್‌ ಬಗ್ಗೆ ಶ್ರೀದೇವಿ ಭೈರಪ್ಪ ಪೋಸ್ಟ್‌ ವೈರಲ್

Yuva Rajkumar Sridevi Divorce: ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ನಡುವಿನ ಡಿವೋರ್ಸ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಶ್ರೀದೇವಿ ಹಂಚಿಕೊಂಡಿರುವ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Written ByChetana Devarmani
Published: Oct 07, 2026, 10:53 PM IST|Updated: Oct 07, 2026, 10:55 PM IST
joinshare
‘ನನ್ನ ಗಂಡನ ಮೊಬೈಲ್‌ನಲ್ಲಿ ಆಕೆಯ ಫೋಟೋಗಳೂ ಸಿಕ್ತು’ : ನಟ ಯುವ ರಾಜ್‌ಕುಮಾರ್‌ ಬಗ್ಗೆ ಶ್ರೀದೇವಿ ಭೈರಪ್ಪ ಪೋಸ್ಟ್‌ ವೈರಲ್

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
Virat Kohli: ಪ್ರೇಮಾನಂದ ಮಹರಾಜರಿಂದ ₹5 ಕೋಟಿ ಪಡೆದಿದ್ದು ನಿಜವೇ? ಕೊನೆಗೂ ಮೌನ ಮುರಿದ ವಿರಾಟ್‌ ಕೊಹ್ಲಿ ಹೇಳಿದ್ದೇನು?

Virat Kohli: ಪ್ರೇಮಾನಂದ ಮಹರಾಜರಿಂದ ₹5 ಕೋಟಿ ಪಡೆದಿದ್ದು ನಿಜವೇ? ಕೊನೆಗೂ ಮೌನ ಮುರಿದ ವಿರಾಟ್‌ ಕೊಹ್ಲಿ ಹೇಳಿದ್ದೇನು?

2

ಕರ್ನಾಟಕದಲ್ಲಿ ಬರದ ಆರ್ಭಟ! ಇಂಡಿ, ಚಡಚಣ ಸೇರಿ ಮತ್ತೆ 40 ತಾಲೂಕುಗಳು ಬರಪೀಡಿತ; ಒಟ್ಟು ಸಂಖ್ಯೆ 217ಕ್ಕೆ ಏರಿಕೆ

3

ನೈಸ್‌ ಯೋಜನೆಯಲ್ಲಿ 3 ಪಟ್ಟು ಅಧಿಕ ಟೋಲ್ ವಸೂಲಿ! ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದ ಎಚ್‌ಡಿಕೆ

4

‘ನನ್ನ ಗಂಡನ ಮೊಬೈಲ್‌ನಲ್ಲಿ ಆಕೆಯ ಫೋಟೋಗಳೂ ಸಿಕ್ತು’ : ನಟ ಯುವ ರಾಜ್‌ಕುಮಾರ್‌ ಬಗ್ಗೆ ಶ್ರೀದೇವಿ ಭೈರಪ್ಪ ಪೋಸ್ಟ್‌ ವೈರಲ್

5

ಬಿಗ್‌ ಬಾಸ್‌ ಮನೆಯಲ್ಲಿ ಸೌಂದರ್ಯ ಯಶಸ್‌ ವರ್ತನೆಗೆ ವೀಕ್ಷಕರ ಆಕ್ರೋಶ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಸ್ಯಾಂಡಲ್‌ವುಡ್‌ನ ದೊಡ್ಮನೆ ಕುಟುಂಬದ ನಟ ಯುವ ರಾಜ್‌ಕುಮಾರ್ ಮತ್ತು ಅವರ ಪತ್ನಿ ಶ್ರೀದೇವಿ ಭೈರಪ್ಪ ನಡುವಿನ ವೈವಾಹಿಕ ವಿವಾದ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಮೆರಿಕದಲ್ಲಿರುವ ಶ್ರೀದೇವಿ ಭೈರಪ್ಪ ಅವರು ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರೀಲ್ಸ್‌ವೊಂದು ನೆಟ್ಟಿಗರ ಗಮನ ಸೆಳೆದಿದೆ.

ತಮ್ಮ ಹಳೆಯ ಫೋಟೋಗಳನ್ನು ಬಳಸಿಕೊಂಡು ಮಾಡಿರುವ ರೀಲ್ಸ್‌ನಲ್ಲಿ ಶ್ರೀದೇವಿ, ತಮ್ಮ ಪತಿಯ ಮೊಬೈಲ್‌ನಲ್ಲಿ ತಮ್ಮ ಸಾವಿರಾರು ಫೋಟೋಗಳಿದ್ದವು. ಅದನ್ನು ನೋಡಿ ತಾವು ಆತನಿಗೆ ‘ಸ್ಪೆಷಲ್’ ಎಂದು ಭಾವಿಸಿದ್ದೆ. ಆದರೆ, ನಂತರ ಅದೇ ರೀತಿಯ ಫೋಟೋಗಳು ಮತ್ತೊಬ್ಬ ಯುವತಿಯದ್ದೂ ಇರುವುದನ್ನು ಗಮನಿಸಿದಾಗ ಸತ್ಯ ಅರ್ಥವಾಯಿತು ಎಂಬ ಅರ್ಥದಲ್ಲಿ ಬರೆದುಕೊಂಡಿದ್ದಾರೆ.

“ಅವನ ಫೋನ್‌ನಲ್ಲಿ ನನ್ನ ಇಂತಹ 10,000 ಫೋಟೋಗಳಿದ್ದವು. ಅದನ್ನು ನೋಡಿ ನಾನೇ ಆತನಿಗೆ ಸ್ಪೆಷಲ್ ಎಂದು ಭಾವಿಸಿದ್ದೆ. ಆದರೆ ಒಂದು ದಿನ ಆತನ ಗ್ಯಾಲರಿಯಲ್ಲಿ ಮತ್ತೊಬ್ಬ ಹುಡುಗಿಯದ್ದೂ ಇದೇ ರೀತಿಯ ಪೋಸ್ ಮತ್ತು ಫೋಟೋಗಳನ್ನು ನೋಡಿದ ಮೇಲೆ ನನಗೆ ಸತ್ಯ ಗೊತ್ತಾಯಿತು” ಎಂಬರ್ಥದ ಸಾಲುಗಳನ್ನು ಶ್ರೀದೇವಿ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಆ ಯುವತಿಯನ್ನು ಉದ್ದೇಶಿಸಿ, “ನೀನು ಏನೂ ಸ್ಪೆಷಲ್ ಅಲ್ಲ” ಎಂದು ಬರೆದುಕೊಂಡಿರುವ ಶ್ರೀದೇವಿ, ಫೋಟೋಗಳಿಗೆ ಎಷ್ಟೇ ದೃಷ್ಟಿಬೊಟ್ಟು ಎಮೋಜಿ ಹಾಕಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. ಪೋಸ್ಟ್‌ನ ಕೊನೆಯಲ್ಲಿ ‘ಡಿಯರ್ ಹಸ್ಬೆಂಡ್’ ಎಂದು ಉಲ್ಲೇಖಿಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಶ್ರೀದೇವಿ ಅವರ ಈ ಪೋಸ್ಟ್‌ ಯಾರನ್ನು ಉದ್ದೇಶಿಸಿ ಮಾಡಲಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಯುವ ರಾಜ್‌ಕುಮಾರ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ‘ಡಿಯರ್ ಹಸ್ಬೆಂಡ್’ ಎಂಬ ಪದ ಬಳಕೆಯಿಂದ ಇದು ಪತಿಗೆ ನೀಡಿದ ಪರೋಕ್ಷ ಸಂದೇಶವೇ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಈ ಪೋಸ್ಟ್‌ಗೆ ನೆಟ್ಟಿಗರಿಂದ ಹಲವು ಪ್ರತಿಕ್ರಿಯೆಗಳು ಬಂದಿವೆ. ಇದೇ ವೇಳೆ ಅಭಿಮಾನಿಯೊಬ್ಬರು, “ಅಪ್ಪು ಸರ್ ಇದ್ದಿದ್ದರೆ ನಿಮ್ಮ ಪರವಾಗಿ ನಿಲ್ಲುತ್ತಿದ್ದರು” ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಶ್ರೀದೇವಿ ಅವರು “100000%” ಎಂದು ಪ್ರತಿಕ್ರಿಯಿಸಿ, ರೆಡ್ ಹಾರ್ಟ್ ಎಮೋಜಿ ಹಾಕಿದ್ದಾರೆ.

ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ನಡುವಿನ ಡಿವೋರ್ಸ್ ವಿವಾದ ಈ ಹಿಂದೆ ಹಲವು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ, ಫೋಟೋಗಳು ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿದ್ದವು. ಇದೀಗ ಶ್ರೀದೇವಿ ಅವರ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ ಮತ್ತೆ ಈ ಪ್ರಕರಣದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಗಮನಿಸಿ: ಶ್ರೀದೇವಿ ಅವರ ಪೋಸ್ಟ್‌ನಲ್ಲಿ ಯುವ ರಾಜ್‌ಕುಮಾರ್ ಅಥವಾ ಯಾವುದೇ ವ್ಯಕ್ತಿಯ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ ಪೋಸ್ಟ್‌ನಲ್ಲಿರುವ ಹೇಳಿಕೆಗಳನ್ನು ಅವರ ವೈಯಕ್ತಿಕ ಸಾಮಾಜಿಕ ಜಾಲತಾಣದ ಹೇಳಿಕೆಯಾಗಿ ಮಾತ್ರ ಪರಿಗಣಿಸಬೇಕು. 

Add Zee News as a Preferred Source
TAGS:
Sandalwood