ವೈದಿಕ ಜ್ಯೋತಿಷ್ಯದಲ್ಲಿ ನೆರಳು, ಛಾಯಾ ಗ್ರಹ ಎನ್ನಲಾಗುವ ಕೇತು ಪ್ರಸ್ತುತ ಮಘಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ಇದರ ಪ್ರಭಾವದಿಂದ ಐದು ರಾಶಿಯವರ ಲಕ್ ಬದಲಾಗಲಿದೆ. ಅವರ ವೃತ್ತಿ ಜೀವನದಲ್ಲಿ ಪ್ರಗತಿ, ವ್ಯವಹಾರದಲ್ಲಿ ಏಳ್ಗೆಯನ್ನು ಕಾಣುವರು ಎನ್ನಲಾಗುತ್ತಿದೆ.
2/6
ಮೇಷ ರಾಶಿ
ಮಘಾ ನಕ್ಷತ್ರದಲ್ಲಿ ಕೇತು ಸಂಚಾರವು ಮೇಷ ರಾಶಿಯ ಜನರಿಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ದೀರ್ಘಾವಧಿಯಿಂದ ತಡೆಯಾಗಿದ್ದ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದೆ. ಹಣಕಾಸಿನ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವ ಸೂಚನೆಗಳಿವೆ. ಉದ್ಯಮಿಗಳಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶಗಳಿವೆ.
3/6
ಸಿಂಹ ರಾಶಿ
ಕೇತು ನಕ್ಷತ್ರ ಪರಿವರ್ತನೆಯು ಸಿಂಹ ರಾಶಿಯ ಜನರಿಗೆ ಕೆಲಸದಲ್ಲಿ ಜವಾಬ್ದಾರಿಗಳನ್ನು ಹೆಚ್ಚಿಸಲಿದೆ. ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳಿದ್ದು, ಮಾಡುವ ಕೆಲಸಗಳಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವ ಸೂಚನೆಗಳಿದ್ದು, ಆದಾಯ ಹೆಚ್ಚಳದ ಹೊಸ ಮಾರ್ಗಗಳು ಗೋಚರಿಸಲಿವೆ.
4/6
ವೃಶ್ಚಿಕ ರಾಶಿ
ಮಘಾ ನಕ್ಷತ್ರದಲ್ಲಿ ಕೇತು ಸಂಚಾರವು ವೃಶ್ಚಿಕ ರಾಶಿಯ ಜನರಿಗೆ ಉದ್ಯೋಗ, ವ್ಯವಹಾರಗಳಲ್ಲಿ ಹೊಸ ಹೊಸ ಅವಕಾಶಗಳು ಒದಗಿ ಬರಲಿವೆ. ನಿರುದ್ಯೋಗಿಗಳಿಗೆ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ. ಹಣಕಾಸಿನ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡು ಬರಲಿದ್ದು, ಬಂಪರ್ ಧನಲಾಭದ ಸೂಚನೆಗಳಿವೆ.
5/6
ಧನು ರಾಶಿ
ಮಘಾ ನಕ್ಷತ್ರದಲ್ಲಿ ಕೇತು ಸಂಚಾರವು ಧನು ರಾಶಿಯವರಿಗೆ ಸ್ಥಗಿತಗೊಂಡಿರುವ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಪ್ರಯೋಜನವನ್ನು ಪಡೆಯುವಿರಿ. ಮನೆಯಲ್ಲೂ ಅನುಕೂಲಕರವಾದ ವಾತಾವರಣ ಇರಲಿದೆ. ಉದ್ಯಮಿಗಳಿಗೆ ಹೊಸ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದ್ದು, ಆದಾಯವೂ ಇಮ್ಮಡಿಗೊಳ್ಳಲಿದೆ.
6/6
ಮೀನ ರಾಶಿ
ಕೇತು ನಕ್ಷತ್ರ ಪರಿವರ್ತನೆಯು ಮೀನ ರಾಶಿಯ ಜನರಿಗೆ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ತರಲಿದ್ದು, ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ವ್ಯಾಪಾರಸ್ಥರಿಗೆ ಪಾಲುದಾರಿಕೆ ವ್ಯವಹಾರಗಳು ಲಾಭದಾಯಕವಾಗಿದ್ದು, ಆದಾಯ ಹೆಚ್ಚಾಗುವುದರಿಂದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.