• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಬಡ್ಡಿ ಹಣಕ್ಕಾಗಿ ಸಾಲಗಾರನಿಗೆ ನರಕಯಾತನೆ... ಬಂಕಾಪುರ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ..!

ಬಡ್ಡಿ ಹಣಕ್ಕಾಗಿ ಸಾಲಗಾರನಿಗೆ ನರಕಯಾತನೆ... ಬಂಕಾಪುರ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ..!

ವಾರದ ಬಡ್ಡಿ ಕಟ್ಟದಿದ್ದಕ್ಕೆ ಸಾಲ ಪಡೆದ ವ್ಯಕ್ತಿಯನ್ನೇ ಕಿಡ್ನಾಪ್‌ ಮಾಡಿ ಆತನಿಗೆ ನರಕಯಾತನೆ ತೋರಿಸಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನಡೆದಿದೆ.

Written ByYashaswini V
Published: Oct 26, 2026, 07:33 AM IST|Updated: Oct 26, 2026, 07:34 AM IST
joinshare
ಬಡ್ಡಿ ಹಣಕ್ಕಾಗಿ ಸಾಲಗಾರನಿಗೆ ನರಕಯಾತನೆ... ಬಂಕಾಪುರ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ..!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
8ನೇ ವೇತನ ಆಯೋಗ: ಮೂಲ ವೇತನದೊಂದಿಗೆ ವಿಲೀನವಾಗುತ್ತಾ ತುಟ್ಟಿಭತ್ಯೆ?

8ನೇ ವೇತನ ಆಯೋಗ: ಮೂಲ ವೇತನದೊಂದಿಗೆ ವಿಲೀನವಾಗುತ್ತಾ ತುಟ್ಟಿಭತ್ಯೆ?

2

ದಿನ ಭವಿಷ್ಯ 26-10-2026: ಹುಣ್ಣಿಯಂದು ವಜ್ರ ಯೋಗ.. ಈ ರಾಶಿಯವರಿಗೆ ಜಾಕ್‌ಪಾಟ್‌

3

ಬಡ್ಡಿ ಹಣಕ್ಕಾಗಿ ಸಾಲಗಾರನಿಗೆ ನರಕಯಾತನೆ... ಬಂಕಾಪುರ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ..!

4

ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ಆಗ್ರಹ

5

ದೇವೇಗೌಡರ ಕುಟುಂಬ ನಾಶಕ್ಕೆ 600 ಕೋಟಿ ಡೀಲ್ ಆರೋಪ – ಹೆಚ್ಡಿಕೆಗೆ ಸಚಿವ ಕಾಶಪ್ಪನವರ ತಿರುಗೇಟು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬಡ್ಡಿ ಹಣಕ್ಕಾಗಿ ಸಾಲಗಾರನಿಗೆ ನರಕಯಾತನೆಯನ್ನೇ ತೋರಿಸಿರುವ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ ಹಾವೇರಿಯ ಬಂಕಾಪುರ ಪಟ್ಟಣದಲ್ಲಿ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.

ಏನಿದು ಘಟನೆ? 
ಮಣಿಕಂಠ ಹಳವಳ್ಳಿ ಎಂಬಾತ ವಾರದ ಬಡ್ಡಿಯಲ್ಲಿ 70 ಸಾವಿರ ಸಾಲ ಪಡೆದಿದ್ದನು. ಸಾಲಕ್ಕೆ ಸಾಲಗಾರನ ಮೇಲೆಯೇ ಬಡ್ಡಿದಾರರು ಕ್ರೌರ್ಯ ಎಸಗಿದ್ದು, ವಾರಕ್ಕೆ 1,500 ರಿಂದ 2 ಸಾವಿರ ವರೆಗೆ ಬಡ್ಡಿ ಕಟ್ಟುತ್ತಿದ್ದ ಮಣಿಕಂಠ, ಕಳೆದ ಕೆಲವು ವಾರದಿಂದ ಬಡ್ಡಿ ಕೊಡದಿದ್ದಕ್ಕೆ ಆರೋಪಿಗಳು ಈ ರೀತಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ.

ವಾರದ ಬಡ್ಡಿ ಕಟ್ಟದಿದ್ದಕ್ಕೆ ಕಿಡ್ಯಾಪ್‌, ಚಿತ್ರಹಿಂಸೆ:
ಹೌದು, ಬಂಕಾಪೂರದಲ್ಲಿ ಮಣಿಕಂಠ ಹಳವಳ್ಳಿ ಎಂಬ ವ್ಯಕ್ತಿಯೊಬ್ಬ ಸಾಲ ಪಡೆದು ವಾರದ ಬಡ್ಡಿ ಕಟ್ಟದಿದ್ದಕ್ಕೆ ಆತನನ್ನು ಕಿಡ್ನ್ಯಾಪ್‌ ಮಾಡಲಾಗಿದ್ದು, ಬಾಯಿಗೆ ಮೂತ್ರ ಸುರಿಸಿ ವಿಕೃತವಾಗಿ ಹ*ಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಕಾಲು ಕಟ್ಟಿ ಹಾಕಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿ‌ ಹೇಯ ಕೃತ್ಯ ಎಸಗಿರುವ ಆರೋಪಿಗಳು, ಮರದ ಕಟ್ಟಿಗೆ, ಪೈಪ್‌ನಿಂದ ಹೊಡೆದು ಸಿಗರೇಟ್‌ನಿಂದ ಸು*ಟ್ಟು ಚಿತ್ರಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ನಡೆದಿದ್ದು ಯಾವಾಗ?
ಅ.16ರಂದು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠನನ್ನು ಕರೆದೊಯ್ದು ಬಡ್ಡಿದಾರರು  ಜನಬೀಡ ಪ್ರದೇಶಕ್ಕೆ ಕರೆದೊಯ್ದು ಬಳಿಕ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ. 4 ದಿನಗಳ ಚಿತ್ರಹಿಂಸೆ ಬಳಿಕ ಆರೋಪಿಗಳಿಂದ ತಪ್ಪಿಸಿಕೊಂಡ ಸಂತ್ರಸ್ತ, ಅಕ್ಟೋಬರ್ 20ರಂದು ಅಪರಿಚಿತ ವ್ಯಕ್ತಿಯ ನೆರವಿನಿಂದ ಆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳೀಯರ ಸಹಾಯದಿಂದ ಕುಟುಂಬಸ್ಥರಿಗೆ ವಿಷಯ ತಿಳಿಸಿದ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಣಿಕಂಠ ಬಳಿಕ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ.

ಮಣಿಕಂಠ ಹಳವಳ್ಳಿ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾಧಿ, ಸುನೀಲ್ ಕತ್ತಿ ವಿರುದ್ಧ ದೂರು ದಾಖಲಿಸಲಾಗಿದೆ. ಈ ನಾಲ್ವರು ಆರೋಪಿಗಳು ವಿರುದ್ಧ ಚಿತ್ರಹಿಂಸೆ ನೀಡಿರೋ ಬಗ್ಗೆ ಬಂಕಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದೇನೇ ಇರಲಿ ಯಾರಾದರೂ ಸಾಲದ ಹಣಕ್ಕೆ ಬಡ್ಡಿ ತಡವಾಗಿರುವುದಕ್ಕೆ ಈ ರೀತಿಯ ಹೇಯ ಕೃತ್ಯ ಎಸಗಿರುವುದು ಮಾತ್ರ ನಿಜಕ್ಕೂ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯ. ಸಾಲ ನೀಡಿದವರು  ತಾವು ಸಾಲಗಾರರಿಗೆ ನೀಡಿರುವ ಹಣವನ್ನು ಮರಳಿ ಪಡೆಯುವುದು ತಪ್ಪಲ್ಲ. ಆದರೆ, ಸಾಲಗಾರನಿಂದ ಅವರ ಹಣ ಹಿಂಪಡೆಯುವ ನೆಪದಲ್ಲಿ ಈ ರೀತಿ ಚಿತ್ರಹಿಂಸೆ ನೀಡುವುದು,  ಬಡ್ಡಿ ಹೆಸರಿನಲ್ಲಿ ಈ ರೀತಿ ಜನರ ರಕ್ತ ಹೀರುವುದು ಸರಿಯಲ್ಲ. 
 

Add Zee News as a Preferred Source
TAGS:
Crime
Kannada News