• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ದೇವೇಗೌಡರ ಕುಟುಂಬ ನಾಶಕ್ಕೆ 600 ಕೋಟಿ ಡೀಲ್ ಆರೋಪ – ಹೆಚ್ಡಿಕೆಗೆ ಸಚಿವ ಕಾಶಪ್ಪನವರ ತಿರುಗೇಟು!

ದೇವೇಗೌಡರ ಕುಟುಂಬ ನಾಶಕ್ಕೆ 600 ಕೋಟಿ ಡೀಲ್ ಆರೋಪ – ಹೆಚ್ಡಿಕೆಗೆ ಸಚಿವ ಕಾಶಪ್ಪನವರ ತಿರುಗೇಟು!

ಕುಮಾರಸ್ವಾಮಿ ಅವರೇ ತಮ್ಮ ಪಾಪದ ಕೊಡ ತುಂಬಿರುವ ಕಾರಣಕ್ಕೇ ಈ ರೀತಿಯೆಲ್ಲಾ ಮಾತನಾಡುತ್ತಿದ್ದಾರೆ. ಯಾರು ಕಳ್ಳರು, ಯಾರು ಸುಳ್ಳರು ಎಂಬುದು ಶೀಘ್ರದಲ್ಲೇ ಎಲ್ಲರಿಗೂ ಗೊತ್ತಾಗಲಿದೆ," ಎಂದು ಕಿಡಿಕಾರಿದ್ದಾರೆ.

Reported ByManjunath NaragundEdited ByManjunath Naragund
Published: Oct 25, 2026, 10:11 PM IST|Updated: Oct 25, 2026, 10:16 PM IST
joinshare
ದೇವೇಗೌಡರ ಕುಟುಂಬ ನಾಶಕ್ಕೆ 600 ಕೋಟಿ ಡೀಲ್ ಆರೋಪ – ಹೆಚ್ಡಿಕೆಗೆ ಸಚಿವ ಕಾಶಪ್ಪನವರ ತಿರುಗೇಟು!
Image Credit: Vijayanand Kashappanavar

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ಆಗ್ರಹ

ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ಆಗ್ರಹ

2

ದೇವೇಗೌಡರ ಕುಟುಂಬ ನಾಶಕ್ಕೆ 600 ಕೋಟಿ ಡೀಲ್ ಆರೋಪ – ಹೆಚ್ಡಿಕೆಗೆ ಸಚಿವ ಕಾಶಪ್ಪನವರ ತಿರುಗೇಟು!

3

ಸಿದ್ದು ಸ್ಟಿಂಗ್ ಕೇಸ್‌ಗೆ ಸ್ಫೋಟಕ ತಿರುವು: ಮುಸುಕುಧಾರಿ ಮಹಿಳೆ ಪತ್ತೆ, ಸಿದ್ದರಾಮಯ್ಯಗೆ ಕ್ಲೀನ್ ಚಿಟ್!

4

ವಿಜಯದಶಮಿಯಂದು ಜಂಬೂಸವಾರಿ ಬೇಡ : ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಜೊತೆ ಸಲಹೆ ನೀಡಿದ ರಾಜಮಾತೆ

5

ಲವರ್‌ ವ್ಯಾಮೋಹ, 5 ತಿಂಗಳ ಹಿಂದಷ್ಟೇ ತಾಳಿ ಕಟ್ಟಿದ್ದ ಗಂಡನ ಕತ್ತು ಸೀಳಿದ ಪತ್ನಿ ಬಂಧನ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬವನ್ನು ನಾಶಪಡಿಸಲು 600 ಕೋಟಿ ರೂಪಾಯಿಗಳ ಭಾರಿ ಡೀಲ್ ನಡೆದಿದೆ ಹಾಗೂ ಇದರ ಹಿಂದೆ ಮುಖ್ಯಮಂತ್ರಿಯವರ ಕೈವಾಡವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದರು. ಕುಮಾರಸ್ವಾಮಿ ಅವರ ಈ ಹೇಳಿಕೆಗೆ ಬಾಗಲಕೋಟೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ವಿಜಯಾನಂದ ಕಾಶಪ್ಪನವರ, ಹೆಚ್‌ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ, "ಕುಮಾರಸ್ವಾಮಿ ಅವರೇ ತಮ್ಮ ಪಾಪದ ಕೊಡ ತುಂಬಿರುವ ಕಾರಣಕ್ಕೇ ಈ ರೀತಿಯೆಲ್ಲಾ ಮಾತನಾಡುತ್ತಿದ್ದಾರೆ. ಯಾರು ಕಳ್ಳರು, ಯಾರು ಸುಳ್ಳರು ಎಂಬುದು ಶೀಘ್ರದಲ್ಲೇ ಎಲ್ಲರಿಗೂ ಗೊತ್ತಾಗಲಿದೆ," ಎಂದು ಕಿಡಿಕಾರಿದ್ದಾರೆ. ಕೊಟ್ಟ ಕುದುರೆ ಏರದವನು ಎಂದಿಗೂ ಶೂರನೂ ಅಲ್ಲ, ಧೀರನೂ ಅಲ್ಲ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಮಂತ್ರಿಯಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುವುದನ್ನು ಬಿಟ್ಟು ದಿನಬೆಳಗಾದರೆ ಸುಮ್ಮನೆ ಆರೋಪ ಮಾಡುವುದೇ ಅವರ ಕಸುಬಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಇರುವುದನ್ನು ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ತೀವ್ರ ಹತಾಶೆಯಿಂದ ಅವರು ಯಾವುದೇ ಆಧಾರವಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಎರಡು ಬಾರಿ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವರಾಗಿರುವ ಹಿರಿಯ ನಾಯಕರೊಬ್ಬರು ಈ ರೀತಿ ಆಧಾರರಹಿತವಾಗಿ ಮಾತನಾಡಬಾರದು ಎಂದು ಹರಿಹಾಯ್ದರು. ಬೆಂಗಳೂರಿನಲ್ಲಿ ಕುಳಿತುಕೊಂಡು ಸ್ಟಿಂಗ್ ಆಪರೇಷನ್ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಬಿಟ್ಟಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದು, ಇವರ ಮಾತುಗಳನ್ನು ಕೇಳಿ ಜನತೆ ರೋಸಿಹೋಗಿದ್ದಾರೆ ಎಂದು ಟೀಕಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮೂಲತಃ ನೋಟಿಫಿಕೇಶನ್ ಮಾಡಿದ್ದೇ ಖುದ್ದು ಕುಮಾರಸ್ವಾಮಿ ಕುಟುಂಬದವರು. ಈಗ ತಮ್ಮ ಸ್ವಂತ ಭೂಮಿ ಹೋಗುತ್ತದೆ ಎಂಬ ಹೊಟ್ಟೆಕಿಚ್ಚಿಗೆ ಅಪ್ಪ, ಮಗ ಹಾಗೂ ಹೆಂಡತಿ ಎಲ್ಲರೂ ಸೇರಿಕೊಂಡು ರಸ್ತೆಗೆಳಿದು ನಾಟಕವಾಡುತ್ತಿದ್ದಾರೆ ಎಂದು ಕಾಶಪ್ಪನವರ ಲೇವಡಿ ಮಾಡಿದರು. ಒಟ್ಟಿನಲ್ಲಿ, ಹೆಚ್‌ಡಿಕೆ ಹಾಗೂ ಆಡಳಿತ ಪಕ್ಷದ ನಾಯಕರ ನಡುವಿನ ಈ ಮಾತಿನುಂಗುರ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ಹೋಗಿ ಮುಟ್ಟಲಿದೆ ಎಂಬ ಕುತೂಹಲ ಮೂಡಿಸಿದೆ.

Add Zee News as a Preferred Source
TAGS:
Kannada News