• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಲವರ್‌ ವ್ಯಾಮೋಹ, 5 ತಿಂಗಳ ಹಿಂದಷ್ಟೇ ತಾಳಿ ಕಟ್ಟಿದ್ದ ಗಂಡನ ಕತ್ತು ಸೀಳಿದ ಪತ್ನಿ ಬಂಧನ..!

ಲವರ್‌ ವ್ಯಾಮೋಹ, 5 ತಿಂಗಳ ಹಿಂದಷ್ಟೇ ತಾಳಿ ಕಟ್ಟಿದ್ದ ಗಂಡನ ಕತ್ತು ಸೀಳಿದ ಪತ್ನಿ ಬಂಧನ..!

ಮದುವೆಯಾಗಿ ಕೇವಲ ಐದೇ ತಿಂಗಳು ಕಳೆದಿದ್ದರೂ, ಹಳೆ ಪ್ರಿಯಕರನ ಮೇಲಿನ ವ್ಯಾಮೋಹ ಬಿಡಲಾರದ ನವವಿವಾಹಿತೆಯೊಬ್ಬಳು ತನ್ನ ಅಪ್ರಾಪ್ತ ಪ್ರೇಮಿಯ ಜತೆ ಸೇರಿ ಗಂಡನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರೋಚಕ ಕಥೆಯ ಸಂಪೂರ್ಣ ವಿವರ ಇಲ್ಲಿದೆ..

Written ByKrishna NK
Published: Oct 25, 2026, 09:22 PM IST|Updated: Oct 25, 2026, 09:24 PM IST
joinshare
ಲವರ್‌ ವ್ಯಾಮೋಹ, 5 ತಿಂಗಳ ಹಿಂದಷ್ಟೇ ತಾಳಿ ಕಟ್ಟಿದ್ದ ಗಂಡನ ಕತ್ತು ಸೀಳಿದ ಪತ್ನಿ ಬಂಧನ..!
Image Credit: crime news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ಆಗ್ರಹ

ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ಆಗ್ರಹ

2

ದೇವೇಗೌಡರ ಕುಟುಂಬ ನಾಶಕ್ಕೆ 600 ಕೋಟಿ ಡೀಲ್ ಆರೋಪ – ಹೆಚ್ಡಿಕೆಗೆ ಸಚಿವ ಕಾಶಪ್ಪನವರ ತಿರುಗೇಟು!

3

ಸಿದ್ದು ಸ್ಟಿಂಗ್ ಕೇಸ್‌ಗೆ ಸ್ಫೋಟಕ ತಿರುವು: ಮುಸುಕುಧಾರಿ ಮಹಿಳೆ ಪತ್ತೆ, ಸಿದ್ದರಾಮಯ್ಯಗೆ ಕ್ಲೀನ್ ಚಿಟ್!

4

ವಿಜಯದಶಮಿಯಂದು ಜಂಬೂಸವಾರಿ ಬೇಡ : ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಜೊತೆ ಸಲಹೆ ನೀಡಿದ ರಾಜಮಾತೆ

5

ಲವರ್‌ ವ್ಯಾಮೋಹ, 5 ತಿಂಗಳ ಹಿಂದಷ್ಟೇ ತಾಳಿ ಕಟ್ಟಿದ್ದ ಗಂಡನ ಕತ್ತು ಸೀಳಿದ ಪತ್ನಿ ಬಂಧನ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ವಿಜಯಪುರ: ಮದುವೆಯಾದ ಕೇವಲ ಐದೇ ತಿಂಗಳಿಗೆ ಹಳೆ ಪ್ರಿಯಕರನ ಜತೆ ಸೇರಿ ಗಂಡನೊಬ್ಬನ ಭೀಕರವಾಗಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು 23 ವರ್ಷದ ಗಣೇಶ್ ಕೋಲಕಾರ್ ಎಂದು ಗುರುತಿಸಲಾಗಿದೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗಣೇಶ್ ಮತ್ತು ಅಕ್ಷತಾ ಅಲಿಯಾಸ್ ಪೂಜಾ (19) ದಂಪತಿಯ ಮದುವೆಯಾಗಿ ಕೇವಲ ಐದು ತಿಂಗಳು ಕಳೆದಿದ್ದವು. ಆದರೆ ಮದುವೆಯ ನಂತರವೂ ಪೂಜಾ ತನ್ನ ಹಳೆ ಪ್ರಿಯಕರನ ಜತೆಗಿನ ಸಂಪರ್ಕವನ್ನು ಕಡಿದುಕೊಂಡಿರಲಿಲ್ಲ. ಆಕೆ ತನ್ನ ಅಪ್ರಾಪ್ತ ವಯಸ್ಸಿನ ಪ್ರಿಯಕರನೊಂದಿಗೆ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುವುದನ್ನು ಗಂಡ ಗಣೇಶ್ ಗಮನಿಸಿದ್ದನು. ಈ ವಿಷಯವಾಗಿ ದಂಪತಿಗಳ ನಡುವೆ ಪ್ರತಿದಿನವೂ ಜಗಳ ಹಾಗೂ ಗಲಾಟೆಗಳು ನಡೆಯುತ್ತಿದ್ದವು.

ಗಂಡನಿಂದ ನಿತ್ಯದ ಗಲಾಟೆ ಹಾಗೂ ಅಡ್ಡಿ ಹೆಚ್ಚಾಗಿದ್ದರಿಂದ ಹೇಗಾದರೂ ಮಾಡಿ ಗಂಡನ ಕಥೆ ಮುಗಿಸಿದರೆ ಪ್ರಿಯಕರನೊಂದಿಗೆ ಮುಕ್ತವಾಗಿರಬಹುದು ಎಂದು ಪತ್ನಿ ಪೂಜಾ ಕರಾಳ ಸಂಚು ರೂಪಿಸಿದ್ದಾಳೆ. ಈ ಕುರಿತು ಪ್ರಿಯಕರನೊಂದಿಗೂ ಚರ್ಚೆ ನಡೆಸಿದ್ದಾಳೆ.

ಯೋಜನೆಯಂತೆ ಕಳೆದ ಅಕ್ಟೋಬರ್ 21 ರಂದು ತಡರಾತ್ರಿ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದ ಗಣೇಶ್ ಮೇಲೆ ಇವರದ್ದೇ ದುಷ್ಕೃತ್ಯ ನಡೆದಿದೆ. ಪ್ರಿಯಕರನನ್ನು ಕತ್ತಲಲ್ಲಿ ಮನೆಗೆ ಕರೆಸಿಕೊಂಡ ಪೂಜಾ, ಮಲಗಿದ್ದ ಗಣೇಶ್‌ನ ಕುತ್ತಿಗೆಯನ್ನು ಕುಡುಗೋಲು (ಇಳಿಗೆ) ಬಳಸಿ ಭೀಕರವಾಗಿ ಕೊಯ್ದು ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ರಾತ್ರೋರಾತ್ರಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು.

ಮನೆಯಲ್ಲಿ ನಡೆದ ಈ ಭೀಕರ ಹತ್ಯೆಯ ಸುಳಿವು ಪಡೆದ ಮುದ್ದೇಬಿಹಾಳ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಕೇವಲ 24 ಗಂಟೆಗಳ ಒಳಗಾಗಿ ಮಹಾರಾಷ್ಟ್ರ ಗಡಿ ಭಾಗದಲ್ಲಿ ತಲೆಮರೆಸಿಕೊಂಡಿದ್ದ ಹೆಂಡತಿ ಪೂಜಾ ಹಾಗೂ ಆಕೆಯ ಅಪ್ರಾಪ್ತ ಪ್ರಿಯಕರನನ್ನು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧನದ ಬಳಿಕ ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಪೂಜಾ ಹಲವು ಭಯಾನಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾಳೆ. ಕೊಲೆ ಬಳಿಕ ಸ್ಥಳ ಮಹಜರು ಮಾಡಲು ಪೊಲೀಸರು ಆರೋಪಿಯನ್ನು ಗ್ರಾಮಕ್ಕೆ ಕರೆತಂದಾಗ ಆಕ್ರೋಶಗೊಂಡ ಸ್ಥಳೀಯ ಗ್ರಾಮಸ್ಥರು ಆಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಆಕೆಯನ್ನು ನಮ್ಮ ಕೈಗೆ ಕೊಡಿ" ಎಂದು ಆಕ್ರೋಶದಿಂದ ಕೂಗಾಡಿದರು. ಒಟ್ಟಿನಲ್ಲಿ ಹೆಣ್ಣಿನ ಮೋಹ ಹಾಗೂ ದುರ್ಬುದ್ಧಿಯಿಂದಾಗಿ ಮುಗ್ಧ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವುದಕ್ಕೆ ಗ್ರಾಮಸ್ಥರು ಮಮ್ಮಲಗಿ ಮರುಗಿದ್ದಾರೆ. ತಪ್ಪಿತಸ್ಥರಿಗೆ ನ್ಯಾಯಾಲಯದಿಂದ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Add Zee News as a Preferred Source
TAGS:
Crime