• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಬೆಂಗಳೂರಿನಲ್ಲಿ ಸಿ-ಸೆಕ್ಷನ್‌ ಬದಲು ನಾರ್ಮಲ್‌ ಡೆಲಿವರಿಗೂ ಆದ್ಯತೆ ನೀಡುವ ವಿಶೇಷ ಆಸ್ಪತ್ರೆ

ಬೆಂಗಳೂರಿನಲ್ಲಿ ಸಿ-ಸೆಕ್ಷನ್‌ ಬದಲು ನಾರ್ಮಲ್‌ ಡೆಲಿವರಿಗೂ ಆದ್ಯತೆ ನೀಡುವ ವಿಶೇಷ ಆಸ್ಪತ್ರೆ

ಗರ್ಭಿಣಿ ಮಹಿಳೆಯರಿಗೆ ಸಿಸೇರಿಯನ್‌ ಇಲ್ಲದೆ ನಾರ್ಮಲ್‌ ಹೆರಿಗೆ ಮಾಡಿಸುವ ಉದ್ದೇಶದಿಂದ ಬೆಂಗಳೂರಿನ ಓವಂ ಆಸ್ಪತ್ರೆಯಲ್ಲಿ ನ್ಯಾಚುರಲ್‌ ಬರ್ತಿಂಗ್‌ ಸೆಂಟರ್‌ ತೆರೆಯಲಾಗಿದೆ.

Written ByYashaswini V
Published: Oct 09, 2026, 12:13 PM IST|Updated: Oct 09, 2026, 12:14 PM IST
joinshare
ಬೆಂಗಳೂರಿನಲ್ಲಿ ಸಿ-ಸೆಕ್ಷನ್‌ ಬದಲು ನಾರ್ಮಲ್‌ ಡೆಲಿವರಿಗೂ ಆದ್ಯತೆ ನೀಡುವ ವಿಶೇಷ ಆಸ್ಪತ್ರೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ದಾವಣಗೆರೆ: ಆನ್ ಲೈನ್ ಗೇಮಿಂಗ್‌ಗೆ 13 ವರ್ಷದ ಬಾಲಕ ಬಲಿ

ದಾವಣಗೆರೆ: ಆನ್ ಲೈನ್ ಗೇಮಿಂಗ್‌ಗೆ 13 ವರ್ಷದ ಬಾಲಕ ಬಲಿ

2

ಬೆಂಗಳೂರಿನಲ್ಲಿ ಸಿ-ಸೆಕ್ಷನ್‌ ಬದಲು ನಾರ್ಮಲ್‌ ಡೆಲಿವರಿಗೂ ಆದ್ಯತೆ ನೀಡುವ ವಿಶೇಷ ಆಸ್ಪತ್ರೆ

3

ನಾನಾ ಪಾಟೇಕರ್‌ ಅವರದ್ದು ಸಹಜ ಸಾವು ಅಲ್ಲವೇ! FIR ದಾಖಲಿಸಿದ ಪೊಲೀಸರು, ತನಿಖೆ ಚುರುಕು; ಯಾರ ಮೇಲೆ ಅನುಮಾನ?

4

ಬೀದಿಬದಿ ವ್ಯಾಪಾರಿಗಳಿಂದ ಸರ್ಕಾರಕ್ಕೆ ಬಿಗ್‌ ಚಾಲೆಂಜ್‌!... ಇಂದಿನಿಂದ ಪುಟ್ಪಾತ್‌ ಮೇಲೆ ವ್ಯಾಪಾರ ಮಾಡ್ತೇವೆ

5

ರೈತರಿಗೆ 2,500 ರೂ. ಯಾವುದಕ್ಕೆ ಸಾಲುತ್ತೆ.. ಸರಿಯಾದ ಪರಿಹಾರ ಕೊಡದಿದ್ರೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರಿನಲ್ಲಿ ಗರ್ಭಿಣಿ ಮಹಿಳೆಯರು ಸಿ-ಸೆಕ್ಷನ್‌ ಎಂದರೆ ಸಿಸೇರಿಯನ್ ಮಾಡಿಸಿ ಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇಲ್ಲೊಂದು ಆಸ್ಪತ್ರೆ ಮಾತ್ರ ತಮ್ಮ ಹಿಂದಿನ ಕಾಲದಂತೆಯೇ ನಾರ್ಮಲ್‌ ಹೆರಿಗೆ ಮಾಡಿಸುವ ಉದ್ದೇಶದಿಂದಲೇ ತಮ್ಮ ಆಸ್ಪತ್ರೆಯ ಒಂದು ಪ್ಲೋರ್ ಅನ್ನೇ ಮೀಸಲಾಗಿಟ್ಟು ಒಂದು ನ್ಯಾಚುರಲ್ ಬರ್ತಿಂಗ್ ಸೆಂಟರ್ ಅನ್ನು ಆರಂಭಿಸಿದೆ. ಅದು ಯಾವ ಆಸ್ಪತ್ರೆ?  ಅಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗಲಿವೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ನಾರ್ಮಲ್‌ ಡೆಲಿವರಿ ಮಾಡಿಸುವ ಆಸ್ಪತ್ರೆ:
ಸಿ-ಸೆಕ್ಷನ್‌ ಪ್ರಕರಣಗಳೇ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಬೆಂಗಳೂರಿನಲ್ಲಿ ನಾರ್ಮಲ್‌ ಡೆಲಿವರಿಗಾಗಿಯೇ ʼನ್ಯಾಚುರಲ್ ಬರ್ತಿಂಗ್ ಸೆಂಟರ್ʼ ಹೆಸರಿನಲ್ಲಿ ವಿಶೇಷ ಫ್ಲೋರ್‌ ತೆರೆದಿರುವ ಈ ಆಸ್ಪತ್ರೆಯ ಹೆಸರು ʼಓವಂ ಆಸ್ಪತ್ರೆʼ. ಬೆಂಗಳೂರಿನ ಔಟರ್ ರಿಂಗ್ ರೋಡ್ ಬಳಿ ಈ ಆಸ್ಪತ್ರೆ 2014 ರಲ್ಲಿ ಆರಂಭವಾಗಿದ್ದು, ಬೆಂಗಳೂರಿನಾದ್ಯಂತ 7 ಬ್ರಾಂಚ್‌ಗಳನ್ನು ಹಾಗೂ ಕ್ಲಿನಿಕ್‌ಗಳನ್ನು ಹೊಂದಿದೆ. ಇದೀಗ ಇದೇ ಮೊದಲ ಬಾರಿಗೆ ಎಂಬಂತೆ ವಾಟರ್ ಬರ್ತಿಂಗ್ ಹಾಗೂ‌ ನ್ಯಾಚುರಲ್ ಬರ್ತಿಂಗ್ ಸೆಂಟರ್ ತೆರೆಯುವ ಮೂಲಕ ಮಹಿಳೆಯರ ಕೋರಿಕೆಯನ್ನು ಈಡೇರಿಸಿದೆ.

ಓವಂ ಆಸ್ಪತ್ರೆಯಲ್ಲಿ ʼವಾಟರ್ ಬರ್ತಿಂಗ್ ಹಾಗೂ‌ ನ್ಯಾಚುರಲ್ ಬರ್ತಿಂಗ್ ಸೆಂಟರ್ʼ ಉದ್ಘಾಟಿಸಿ ಮಾತನಾಡಿದ ಆಸ್ಪತ್ರೆಯ ಅಧ್ಯಕ್ಷರು, ಸಿಇಒ ಹಾಗೂ ಮಕ್ಕಳ ತಜ್ಞ ರಾದ ಡಾ.ಆದರ್ಶ್ ಸೋಮಶೇಖರ್, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸಿಸೇರಿಯನ್‌ ಹೆಚ್ಚಾಗಿದೆ. ಒಂದೆಡೆ ಗರ್ಭಿಣಿ ಮಹಿಳೆಯರಿಗೆ ಸಿ-ಸೆಕ್ಷನ್‌ ಎಂಬುದು ಒತ್ತಡವನ್ನು ಹೆಚ್ಚಿಸಿದರೆ, ಮಹಿಳೆಯರ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಹೆರಿಗೆ ಸಂದರ್ಭದಲ್ಲಿ ಸಿ- ಸೆಕ್ಷನ್‌ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ನಾರ್ಮಲ್‌ ಹೆರಿಗೆಯನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ ಆಸ್ಪತ್ರೆಯಲ್ಲಿ ʼವಾಟರ್ ಬರ್ತಿಂಗ್ ಹಾಗೂ‌ ನ್ಯಾಚುರಲ್ ಬರ್ತಿಂಗ್ ಸೆಂಟರ್ʼ ಅನ್ನು ತೆರೆದಿರುವುದಾಗಿ ತಿಳಿಸಿದರು.

ನ್ಯಾಚುರಲ್‌ ಬರ್ತಿಂಗ್‌ಗೆ ಪೂರಕ ವಾತಾವರಣ:
ನಾರ್ಮಲ್‌ ಡೆಲಿವರಿ ಮಾಡಿಸಲು ನ್ಯಾಚುರಲ್‌ ಬರ್ತಿಂಗ್‌ನಲ್ಲಿ ಹೆರಿಗೆ ಮಾಡಿಸುವಾಗ ಯಾವುದೇ ರೀತಿಯ ಔಷಧಿಗಳನ್ನು ಕೊಡುವುದಿಲ್ಲ. ನಮ್ಮ ಉದ್ದೇಶ ನ್ಯಾಚುರಲ್‌ ಆಗಿ ಹೆರಿಗೆ ಮಾಡಿಸುವುದು. ಇದಕ್ಕೆ ಪೂರಕವಾಗುವಂತೆ ಮಹಿಳೆ ಗರ್ಭಿಣಿ ಆದ ಮೂರು ತಿಂಗಳಿನಿಂದ ಫಿಜೋಥೆರಪಿ, ಯೋಗ, ಕೆಲವು ವ್ಯಾಯಾಮಗಳನ್ನು ಮಾಡಿ ಅವರನ್ನು ನಾರ್ಮಲ್‌ ಹೆರಿಗೆಗೆ ತಯಾರು ಮಾಡಬೇಕಾಗುತ್ತದೆ. ತಮಗೆ ನ್ಯಾಚುರಲ್‌ ಆಗಿಯೇ ಹೆರಿಗೆ ಆಗುತ್ತೆ ಎಂಬ ಕಾನ್ಫಿಡೆನ್ಸ್‌ ಅವರಲ್ಲೇ ಬರುವ ರೀತಿ ಅವರನ್ನು ತಯಾರು ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ 25-35 ರೊಳಗಿನ ಗರ್ಭಿಣಿ ಮಹಿಳೆಯರಲ್ಲಿ ನಾರ್ಮಲ್‌ ಡೆಲಿವರಿ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದು, ಈ ಸಂಬಂಧ ಹೆಚ್ಚಿನ ವಿಚಾರಣೆಗಳು ಕೇಳಿ ಬರುತ್ತಿವೆ.

ನ್ಯಾಚುರಲ್ ಬರ್ತಿಂಗ್ ಒಬ್ಬರಿಂದ ನಡೆಯೋದಿಲ್ಲ, ವೈದ್ಯರು, ಡ್ಯುಟಿ ನರ್ಸಸ್, ಯೋಗ ಇನ್ಸ್ಟ್ರಕಟರ್, ಡೆಲವರಿ ಎಕ್ಸಪರ್ಟ್, ತಾಯಿ ಕೇರ್ ಮಾಡುವವರು ಹೀಗೆ ಗರ್ಭಿಣಿ ಆದ ಮಹಿಳೆಗೆ ಎಲ್ಲಾ ತಂಡದಿಂದಲೂ ಅಗತ್ಯ ಸಹಕಾರವನ್ನು ನೀಡಲಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡರು.

Add Zee News as a Preferred Source
TAGS:
Health Tips