• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ದಾವಣಗೆರೆ: ಆನ್ ಲೈನ್ ಗೇಮಿಂಗ್‌ಗೆ 13 ವರ್ಷದ ಬಾಲಕ ಬಲಿ

ದಾವಣಗೆರೆ: ಆನ್ ಲೈನ್ ಗೇಮಿಂಗ್‌ಗೆ 13 ವರ್ಷದ ಬಾಲಕ ಬಲಿ

ಪ್ರತಿಷ್ಠಿತ ಶಾಲೆಗೆ ಸೇರಿಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದರು. ಆದ್ರೆ ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್‌ಗೆ ಪ್ರಭಾವಿತನಾಗಿದ್ದ ಮಗ ಕೆಲ ಕಿಡಿಗೇಡಿಗಳ ಕೃತ್ಯಕ್ಕೆ ಜೀವ ತೆತ್ತಿದ್ದಾನೆ. ಆ ಬಾಲಕ ಆತ್ಮಹತ್ಯೆಯ ಹಿಂದಿನ ಗೇಮ್‌ ಏನು ? ಅಸಲಿ ಕಾರಣವೇನು ಈ ರಿಪೋರ್ಟ್‌ ನೋಡಿ

Written ByChetana Devarmani
Published: Oct 09, 2026, 12:50 PM IST|Updated: Oct 09, 2026, 12:52 PM IST
joinshare
ದಾವಣಗೆರೆ: ಆನ್ ಲೈನ್ ಗೇಮಿಂಗ್‌ಗೆ 13 ವರ್ಷದ ಬಾಲಕ ಬಲಿ

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ODI ಸರಣಿಗೆ ಟೀಮ್‌ ಇಂಡಿಯಾ ಆಟಗಾರರ ಆಯ್ಕೆ ಯಾವಾಗ.. ಟೂರ್‌ಗೂ ಮೊದಲೇ ಸಸ್ಪೆನ್ಸ್

ODI ಸರಣಿಗೆ ಟೀಮ್‌ ಇಂಡಿಯಾ ಆಟಗಾರರ ಆಯ್ಕೆ ಯಾವಾಗ.. ಟೂರ್‌ಗೂ ಮೊದಲೇ ಸಸ್ಪೆನ್ಸ್

2

Dasara 2026: ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಗುಡ್‌ನ್ಯೂಸ್‌! 3,000 ಹೆಚ್ಚುವರಿ ಬಸ್‌ಗಳ ಸಂಚಾರ

3

ರಹಸ್ಯ ಹುಡುಕಾಟವೇ ಕಲುಷ ಮೂವಿ ಕಥೆ, ಟೀಸರ್‌ ಔಟ್..‌ ಹೊಸ ಪ್ರತಿಭೆಗಳಿಗೆ ಸಾಥ್‌ ಕೊಟ್ಟ D ಮ್ಯೂಸಿಕ್‌

4

Navratri 2026: ಅ.11ರಿಂದ ಹಬ್ಬದ ಸಂಭ್ರಮ! ಆಯುಧ ಪೂಜೆ, ವಿಜಯದಶಮಿಯ ಸಂಪೂರ್ಣ ವಿವರ ಇಲ್ಲಿದೆ

5

ದಾವಣಗೆರೆ: ಆನ್ ಲೈನ್ ಗೇಮಿಂಗ್‌ಗೆ 13 ವರ್ಷದ ಬಾಲಕ ಬಲಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದಾವಣಗೆರೆ: ಅವರು ತಮ್ಮ ಮಗನ ಉಜ್ವಲ ಭವಿಷ್ಯಕ್ಕೆ ಕನಸು ಕಂಡವರು‌‌‌. ಪ್ರತಿಷ್ಠಿತ ಶಾಲೆಗೆ ಸೇರಿಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದರು. ಆದ್ರೆ ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್‌ಗೆ ಪ್ರಭಾವಿತನಾಗಿದ್ದ ಮಗ ಕೆಲ ಕಿಡಿಗೇಡಿಗಳ ಕೃತ್ಯಕ್ಕೆ ಜೀವ ತೆತ್ತಿದ್ದಾನೆ. ಆ ಬಾಲಕ ಆತ್ಮಹತ್ಯೆಯ ಹಿಂದಿನ ಗೇಮ್‌ ಏನು ? ಅಸಲಿ ಕಾರಣವೇನು ಈ ರಿಪೋರ್ಟ್‌ ನೋಡಿ

ಬಾಲಕನ ಮೃತದೇಹ ಎದುರು ಕಣ್ಣೀರಿಡುತ್ತಿರುವ ಪೋಷಕರು.. ಗ್ರಾಮದಲ್ಲಿ ಆವರಿಸಿದ ನೀರವ ಮೌನ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ. ಹೀಗೆ ಶವವಾಗಿ ಮಲಗಿದ ಬಾಲಕನ ಹೆಸರು ಮನೋಜ್ ಟಿ.ಆರ್.. ವಯಸ್ಸು ಜಸ್ಟ್ 13 ವರ್ಷ... ರೈತ ರೇವಣ್ಣ ಟಿ.ಆರ್‌‌. ಎಂಬುವರ ಪುತ್ರರಾಗಿದ್ದ ಮನೋಜ್, ಎಂ.ಎನ್.ಹಳ್ಳಿಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಎಂಟನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ಹೀಗಿದ್ದ ಮನೋಜ್‌ಗೆ ಅದೇ ಗ್ರಾಮದ ಮನು ಎಂಬಾತ ನಿನಗೆ ಮೊಬೈಲ್ ನಲ್ಲಿ ಫ್ರೀ ಫೈರ್ ಗೇಮ್ ಐಡಿ ತಗೆದುಕೊಡ್ತೀನಿ ಅದಕ್ಕೆ ಆರು ಸಾವಿರ ರೂ. ಖರ್ಚಾಗುತ್ತದೆ ಎಂದು ಹಣ ಪಡೆದಿದ್ದ. ಬಳಿಕ ಈ ಆನ್‌ಲೈನ್ ಗೇಮ್‌‌ನಲ್ಲಿ 105ನೇ ಲೆವೆಲ್ ಗೆ ತಲುಪಲು ಒಂದೂವರೆಯಿಂದ ಎರಡೂವರೆ ಲಕ್ಷ ಹಣ ಖರ್ಚಾಗಿದೆ. ಆ ಹಣ ನೀಡದಿದ್ರೆ ನಿನ್ನ ಅಣ್ಣ ಹಾಗೂ ನಿನ್ನನ್ನು ಕೊಲೆ ಮಾಡ್ತೀವಿ ಅಂತಾ ಬೆದರಿಸಿದ್ದಾರೆ‌‌. ಇದರಿಂದ ಹೆದರಿ ಬಾಲಕ ಮನೋಜ್ ಮನೆಯಲ್ಲಿ ತಂದೆ ತನ್ನ ಹಿರಿಯ ಪುತ್ರನ ವಿದ್ಯಾಭ್ಯಾಸಕ್ಕೆ ಎಂದು ಕೂಡಿಟ್ಟಿದ್ದ ನಾಲ್ಕು ಲಕ್ಷ ಹಣವನ್ನು ಹಂತಹಂತವಾಗಿ ಆರೋಪಿಗಳಿಗೆ ನೀಡಿದ್ದಾನೆ. ಅಷ್ಟೇ ಅಲ್ಲದೇ ತನ್ನ ತಂದೆ ಹಾಗೂ ತಾಯಿಯ ಫೋನ್ ಬಳಸಿ ಫೋನ್ ಪೇ ಮೂಲಕ ಆರೋಪಿಗಳಿಗೆ 11 ಸಾವಿರ ಹಣ ವರ್ಗಾಯಿಸಿದ್ದನಂತೆ.

ಯಾವಾಗ ಪೋಷಕರಿಗೆ ಈ ವಿಚಾರ ಗೊತ್ತಾಯಿತೋ ಮನೋಜ್ ತೀವ್ರ ಆತಂಕಗೊಂಡಿದ್ದಾನೆ. ಹೀಗಿದ್ದಾಗ ಅಕ್ಟೋಬರ್ 7ರ ಸಂಜೆ 4 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಮ್‌ನಲ್ಲಿದ್ದ ಫ್ಯಾನ್‌ಗೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಾವಾಗ ಮನೋಜ್ ಆತ್ಮಹತ್ಯೆ ಸುದ್ದಿ ಊರಿನಲ್ಲಿ ಜನಕ್ಕೆ ಗೊತ್ತಾಯ್ತೋ ಆರೋಪಿಗಳ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಮೃತ ಮನೋಜ್ ತಂದೆ ನೀಡಿದ ದೂರಿನ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮನು ಸೇರಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿಸಿದ್ದಾರೆ.

ಇನ್ನು ಗ್ರಾಮಸ್ಥರು ಆನ್ ಲೈನ್ ಗೇಮಿಂಗ್ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬಾಲಕನ ಆನ್‌ಲೈನ್ ಗೇಮಿಂಗ್ ಗೆ ಪ್ರಚೋದಿಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ಲೂಟಿ ಮಾಡಿದ್ದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬಾಳಿ ಬದುಕಬೇಕಿದ್ದ ಮುದ್ದಾದ ಮಗ ಕಣ್ಣಮುಂದೆಯೇ ದುರಂತ ಅಂತ್ಯಕಂಡಿದ್ದು ಪೋಷಕರಿಗೆ ಬರಸಿಡಿಲು ಬಡೆದಂತಾಗಿದೆ. 
 

Add Zee News as a Preferred Source
TAGS:
Kannada News