• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ರೈತರಿಗೆ 2,500 ರೂ. ಯಾವುದಕ್ಕೆ ಸಾಲುತ್ತೆ.. ಸರಿಯಾದ ಪರಿಹಾರ ಕೊಡದಿದ್ರೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ

ರೈತರಿಗೆ 2,500 ರೂ. ಯಾವುದಕ್ಕೆ ಸಾಲುತ್ತೆ.. ಸರಿಯಾದ ಪರಿಹಾರ ಕೊಡದಿದ್ರೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ

ರಾಜ್ಯ ಸರ್ಕಾರ ಕೇವಲ ಕಾಟಾಚಾರಕ್ಕಾಗಿ 2,500 ರೂಪಾಯಿ ಬರ ಪರಿಹಾರ ಘೋಷಣೆ ಮಾಡಿದೆ. ಈ ಹಣ ಯಾವುದಕ್ಕೆ ಸಾಲುತ್ತದೆ. ಯಾವದಕ್ಕೂ ಸಾಕಾಗುವುದಿಲ್ಲ. ರೈತರಿಗೆ ಉಚಿತವಾಗಿ ಬೀಜ ರಸಗೊಬ್ಬರ ವಿತರಣೆ ಮಾಡಬೇಕು

Written ByBhimappa
Published: Oct 09, 2026, 12:04 PM IST|Updated: Oct 09, 2026, 12:07 PM IST
joinshare
ರೈತರಿಗೆ 2,500 ರೂ. ಯಾವುದಕ್ಕೆ ಸಾಲುತ್ತೆ.. ಸರಿಯಾದ ಪರಿಹಾರ ಕೊಡದಿದ್ರೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ
Image Credit: farmers_drought

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ರಹಸ್ಯ ಹುಡುಕಾಟವೇ ಕಲುಷ ಮೂವಿ ಕಥೆ, ಟೀಸರ್‌ ಔಟ್..‌ ಹೊಸ ಪ್ರತಿಭೆಗಳಿಗೆ ಸಾಥ್‌ ಕೊಟ್ಟ D ಮ್ಯೂಸಿಕ್‌

ರಹಸ್ಯ ಹುಡುಕಾಟವೇ ಕಲುಷ ಮೂವಿ ಕಥೆ, ಟೀಸರ್‌ ಔಟ್..‌ ಹೊಸ ಪ್ರತಿಭೆಗಳಿಗೆ ಸಾಥ್‌ ಕೊಟ್ಟ D ಮ್ಯೂಸಿಕ್‌

2

ದಾವಣಗೆರೆ: ಆನ್ ಲೈನ್ ಗೇಮಿಂಗ್‌ಗೆ 13 ವರ್ಷದ ಬಾಲಕ ಬಲಿ

3

ಬೆಂಗಳೂರಿನಲ್ಲಿ ಸಿ-ಸೆಕ್ಷನ್‌ ಬದಲು ನಾರ್ಮಲ್‌ ಡೆಲಿವರಿಗೂ ಆದ್ಯತೆ ನೀಡುವ ವಿಶೇಷ ಆಸ್ಪತ್ರೆ

4

ನಾನಾ ಪಾಟೇಕರ್‌ ಅವರದ್ದು ಸಹಜ ಸಾವು ಅಲ್ಲವೇ! FIR ದಾಖಲಿಸಿದ ಪೊಲೀಸರು, ತನಿಖೆ ಚುರುಕು; ಯಾರ ಮೇಲೆ ಅನುಮಾನ?

5

ಬೀದಿಬದಿ ವ್ಯಾಪಾರಿಗಳಿಂದ ಸರ್ಕಾರಕ್ಕೆ ಬಿಗ್‌ ಚಾಲೆಂಜ್‌!... ಇಂದಿನಿಂದ ಪುಟ್ಪಾತ್‌ ಮೇಲೆ ವ್ಯಾಪಾರ ಮಾಡ್ತೇವೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Ratna Bharat Raitha Samaj demands: ರಾಜ್ಯ ಸರ್ಕಾರ ಶೀಘ್ರದಲ್ಲೇ ಸರಿಯಾದ ಪರಿಹಾರ ಕೊಡದಿದ್ದರೆ ಆಯಾ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕುತ್ತೇವೆ. ಸೋಮವಾರದ ಒಳಗೆ ಅಂದರೆ ಸೆಪ್ಟೆಂಬರ್‌ 12ರ ಒಳಗೆ ಕೊಡದಿದ್ದರೆ ಬಾರ್ ಕೋಲ್ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು. ಬರ ಪರಿಹಾರ ಇನ್ನೂ ಘೋಷಣೆ ಆಗಿಲ್ಲ. ರಾಜ್ಯ ಸರ್ಕಾರ ಕೇವಲ ಕಾಟಾಚಾರಕ್ಕಾಗಿ 2,500 ರೂಪಾಯಿ ಬರ ಪರಿಹಾರ ಘೋಷಣೆ ಮಾಡಿದೆ. ಈ ಹಣ ಯಾವುದಕ್ಕೆ ಸಾಲುತ್ತದೆ. ಯಾವದಕ್ಕೂ ಸಾಕಾಗುವುದಿಲ್ಲ. ರೈತರಿಗೆ ಉಚಿತವಾಗಿ ಬೀಜ ರಸಗೊಬ್ಬರ ವಿತರಣೆ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡರು ಆಗ್ರಹಿಸಿದ್ದಾರೆ. 

ರಾಜ್ಯ ಸರ್ಕಾರ ತನ್ನ ಬರ ಪರಿಹಾರವನ್ನು ತಾನು ಕೊಡಲಿ. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಕೊಡಲಿ. ಆ ಮೇಲೆ ಕೊಡುತ್ತೇವೆ ಎಂದು ಸುಮ್ಮನೆ ಹೇಳಿಕೊಂಡು ಸಮಯ ಕಳೆಯಬಾರದು. ಈಗಾಗಲೇ ರಾಜ್ಯದಲ್ಲಿ ಎಲ್ಲ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಬಿತ್ತನೆ ಆರಂಭ ಆಗಿದೆ. ರೈತರಿಗೆ ಉಚಿತವಾಗಿ ಬೀಜ ರಸಗೊಬ್ಬರ ವಿತರಣೆ ಮಾಡಬೇಕು. ಈ ರೀತಿ ಬೀಜ ರಸಗೊಬ್ಬರ ವಿತರಣೆ ಮಾಡುವುದರಿಂದ ಎಲ್ಲ ರೈತರಿಗೆ ಸಾಕಷ್ಟು ಅನುಕೂಲ ಆಗುತ್ತದೆ. ಕಳ್ಳಾಟದ ನೆಪ ರಾಜ್ಯ ಸರ್ಕಾರ ಆಗಲಿ, ಕೇಂದ್ರ ಸರ್ಕಾರ ಆಗಲಿ ಮಾಡಬಾರದು ಎಂದು ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ಎಲ್ಲ ರೈತರು ಅತ್ಯಂತ ಗಂಭೀರವಾದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಕಾಲುವೆಗಳು, ಹೊಲಗಳಲ್ಲಿದ್ದ ಸಣ್ಣಪುಟ್ಟ ಹೊಂಡಗಳು ಕೂಡ ಬತ್ತಿ ಹೋಗಿವೆ. ಹುಡುಕಿದರೂ ಒಂದು ಹನಿ ನೀರು ಸಿಗಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ ಅಂತಹ ಪರಿಸ್ಥಿತಿ ಇದೆ. ಮೇಯಲು ಹೋಗುವ ದನಗಳಿಗೂ ಹೊಲಗಳಲ್ಲಿ ನೀರು ಇಲ್ಲ. ಹೊಲಗಳಲ್ಲಿ ಬೆಳೆ ಇಲ್ಲದ ಕಾರಣ ರೈತರು ಕೂಲಿ ಹುಡುಕಿಕೊಂಡು ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿ ಮುಂತಾದ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದರು. 

ರೈತರು ಕೃಷಿ ಬಿಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಕೃಷಿ ಬಿಟ್ಟರೇ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡಲು ಬರುವುದಿಲ್ಲ. ಸರ್ಕಾರ ಸರಿಯಾದ ಮಟ್ಟದಲ್ಲಿ ಪರಿಹಾರವನ್ನು ಘೋಷಣೆ ಮಾಡಲೇಬೇಕು. ಇಲ್ಲದಿದ್ರೆ ಹೋರಾಟ ಇನ್ನಷ್ಟು ಪ್ರಬಲವಾಗುತ್ತದೆ. ಮಳೆ ಕೊರತೆ, ಬೆಳೆ ನಷ್ಟ, ಕೃಷಿ ಉತ್ಪಾದನಾ ವೆಚ್ಚದ ಏರಿಕೆ ಆಗಿದೆ. ಹೊಲದಲ್ಲಿ ಬೆಳೆನೇ ಇಲ್ಲ ಅಂದರೆ ಸರ್ಕಾರ ಕೃಷಿಗೆ ಬೇಕಾಗಿರುವಂತಹ ಎಲ್ಲ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ. ಪರಿಹಾರ ಎಂದು ಬಲಗೈಯಿಂದ ಕೊಟ್ಟು, ಬೆಲೆ ಏರಿಕೆ ಮಾಡಿ ಎಡಗೈಯಿಂದ ಸರ್ಕಾರ ಹಿಸ್ಕೊಳ್ಳುತ್ತದೆ. ಇವೆಲ್ಲ ನಿಲ್ಲಬೇಕು. ಕೃಷಿ ಉತ್ತನ್ನಗಳಿಗೆ ಸಮರ್ಪಕ ಬೆಲೆ ದೊರೆಯದ ಕಾರಣ ರೈತರ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರವೇ ರಾಜ್ಯ ಸರ್ಕಾರ ವಿಶೇಷವಾದ ಬರ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕು. ಕೃಷಿ ಸಾಲದ ಬಡ್ಡಿ ಹಾಗೂ ದಂಡ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರವನ್ನು ಯಾವುದೇ ವಿಳಂಬವಿಲ್ಲದೆ ರೈತರ ಖಾತೆಗೆ ಜಮಾ ಮಾಡಬೇಕು. ಮುಂದಿನ ಹಂಗಾಮೆಗೆ ರೈತರಿಗೆ ಬೀಜ, ಗೊಬ್ಬರ, ನೀರಾವರಿ ಸೌಲಭ್ಯಗಳಿಗೆ ವಿಶೇಷ ನೆರವನ್ನು ಸರ್ಕಾರ  ನೀಡಬೇಕು. ರೈತರ ಕೃಷಿ ಉತ್ಪನ್ನಗಳಿಗೆ ಲಾಭದಾಯ. ನ್ಯಾಯಯುತ ಬೆಲೆ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಬರ ಪರಿಹಾರ ಯಾವುದಕ್ಕೂ ಸಾಲಲ್ಲ. ಕೇಂದ್ರ ಸರ್ಕಾರ‌ ಕೂಡ ಕರ್ನಾಟಕದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡರು ಒತ್ತಾಯ ಮಾಡಿದರು. 
 

Add Zee News as a Preferred Source
TAGS:
Kannada News