• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /‎‎ಹೆತ್ತ ತಾಯಿಯನ್ನೇ ಹೊಡೆದು ಕೊಂ*ದ ಮಗ.. ಪೊಲೀಸರ ಮುಂದೆ ಆರೋಪಿ ಹೇಳಿದ 3 ಸತ್ಯಗಳು

‎‎ಹೆತ್ತ ತಾಯಿಯನ್ನೇ ಹೊಡೆದು ಕೊಂ*ದ ಮಗ.. ಪೊಲೀಸರ ಮುಂದೆ ಆರೋಪಿ ಹೇಳಿದ 3 ಸತ್ಯಗಳು

ಈ ಸಾವಿನ ಬಗ್ಗೆ ಸ್ಥಳೀಯವಾಗಿ ಕೆಲವು ಅನುಮಾನಗಳು ವ್ಯಕ್ತವಾಗಿದ್ದವು. ಈ ಮಾಹಿತಿ ತಿಳಿದ ಕೂಡಲೇ ಕಾಡುಗೋಡಿ ಪೊಲೀಸರು ತಕ್ಷಣವೇ ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದರು.

Written ByBhimappa
Published: Oct 08, 2026, 12:34 PM IST|Updated: Oct 08, 2026, 12:45 PM IST
joinshare
‎‎ಹೆತ್ತ ತಾಯಿಯನ್ನೇ ಹೊಡೆದು ಕೊಂ*ದ ಮಗ.. ಪೊಲೀಸರ ಮುಂದೆ ಆರೋಪಿ ಹೇಳಿದ 3 ಸತ್ಯಗಳು
Image Credit: Kadugodi

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಆಕಾಶದಲ್ಲಿ ಮೂಡಲಿದೆ 3,500 ಡ್ರೋನ್‌ಗಳ ನವಿಲು! ಮೈಸೂರು ದಸರಾಗೆ ಗಿನ್ನೆಸ್ ದಾಖಲೆ ಗುರಿ!

ಆಕಾಶದಲ್ಲಿ ಮೂಡಲಿದೆ 3,500 ಡ್ರೋನ್‌ಗಳ ನವಿಲು! ಮೈಸೂರು ದಸರಾಗೆ ಗಿನ್ನೆಸ್ ದಾಖಲೆ ಗುರಿ!

2

ನಾನಾ ಪಾಟೇಕರ್ ಅವರ ಕೊನೆಯ ಆಸೆ ಏನಿತ್ತು ಗೊತ್ತಾ? ನನ್ನ ಫೋಟೋಗೆ ಹಾರ ಹಾಕಬೇಡಿ ಎಂದಿದ್ಯಾಕೆ

3

‎‎ಹೆತ್ತ ತಾಯಿಯನ್ನೇ ಹೊಡೆದು ಕೊಂ*ದ ಮಗ.. ಪೊಲೀಸರ ಮುಂದೆ ಆರೋಪಿ ಹೇಳಿದ 3 ಸತ್ಯಗಳು

4

ಕೇವಲ ₹35 ಸಂಬಳಕ್ಕೆ ಸಿನಿಮಾ ಪೋಸ್ಟರ್ ಬಿಡಿಸುತ್ತಿದ್ದ ಹುಡುಗನೇ ಮುಂದೆ ಚಿತ್ರರಂಗದಲ್ಲಿ ಇತಿಹಾಸ ಬರೆದ!

5

ಮೊಹಮ್ಮದ್ ಶಮಿ ಬಿಗ್‌ ಕಮ್‌ಬ್ಯಾಕ್‌ ಫಿಕ್ಸ್‌.. ಟೀಕೆಗಳಿಗೆ ಟಕ್ಕರ್‌ ಕೊಡಲಿರೋ ಟೀಮ್‌ ಇಂಡಿಯಾದ ಪೇಸರ್

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bangalore Kadugodi Bevinamara Colony: ರಾಜಧಾನಿಯ ಹೊರವಲಯದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 60 ವರ್ಷದ ವೃದ್ಧೆಯೊಬ್ಬರ ಅನುಮಾನಾಸ್ಪದ ಸಾವು ಈಗ ರೋಚಕ ತಿರುವು ಪಡೆದುಕೊಂಡಿದೆ. ಮಂಚದಿಂದ ಬಿದ್ದು ಸಹಜ ಸಾವು ಎಂದು ಬಿಂಬಿಸಿ, ಗುಟ್ಟಾಗಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದ ಕಣ್ಣೀರಿನ ನಾಟಕವಾಡುತ್ತಿದ್ದ ಸ್ವಂತ ಮಗನೇ ತಾಯಿಯ ಕೊಲೆಗಾರ ಎಂಬ ಸತ್ಯವನ್ನು ಕಾಡುಗೋಡಿ ಪೊಲೀಸರು ಪತ್ತೆಹಚ್ಚಿದ್ದಾರೆ. ಪೊಲೀಸರ ಜಾಣ್ಮೆ ಮತ್ತು ಛಲದಿಂದಾಗಿ ಮಣ್ಣಾಗಬೇಕಿದ್ದ ಕೊಲೆ ರಹಸ್ಯವು ಮರಣೋತ್ತರ ಪರೀಕ್ಷಾ ವರದಿಯ ಮೂಲಕ ಹೊರ ಬಿದ್ದಿದೆ.

ಘಟನೆಯ ಹಿನ್ನೆಲೆ ಮತ್ತು ಅಸಹಜ ಸಾವಿನ ನಾಟಕ
ಸೆಪ್ಟೆಂಬರ್ 25 ರಂದು ಕಾಡುಗೋಡಿಯ ಬೇವಿನಮರ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು. ಸೆಪ್ಟೆಂಬರ್ 24 ರ ರಾತ್ರಿ 60 ವರ್ಷದ ವೃದ್ಧೆ ಭಾಗ್ಯಮ್ಮ ಎಂಬವರು ಮೃತಪಟ್ಟಿದ್ದರು. ಮರುದಿನವೇ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರೆಲ್ಲರೂ ಸಿದ್ಧತೆ ನಡೆಸಿದ್ದರು. ಆದರೆ, ಈ ಸಾವಿನ ಬಗ್ಗೆ ಸ್ಥಳೀಯವಾಗಿ ಕೆಲವು ಅನುಮಾನಗಳು ವ್ಯಕ್ತವಾಗಿದ್ದವು. ಈ ಮಾಹಿತಿ ತಿಳಿದ ಕೂಡಲೇ ಕಾಡುಗೋಡಿ ಪೊಲೀಸರು ತಕ್ಷಣವೇ ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದರು.

ಸ್ಥಳಕ್ಕೆ ಬಂದ ಪೊಲೀಸರು, ವೃದ್ಧೆಯ ಸಾವಿನಲ್ಲಿ ಅನುಮಾನವಿದೆ, ಹೀಗಾಗಿ ಮರಣೋತ್ತರ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು. ಆಗ ಎಚ್ಚೆತ್ತುಕೊಂಡ ಕುಟುಂಬಸ್ಥರು ಮತ್ತು ಆರೋಪಿ ಮಗ ಇದು ಅಸಹಜ ಸಾವು, ಅಮ್ಮ ಮಂಚದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಂಬಿಸಲು ಯತ್ನಿಸಿದರು. ಅಂತ್ಯಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಹವಣಿಸುತ್ತಿದ್ದವರನ್ನು ಪೊಲೀಸರು ಸಮಾಧಾನಪಡಿಸಿ, ಮನವೊಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡಿದರು. ಮರಣೋತ್ತರ ಪರೀಕ್ಷೆಯ ಬಳಿಕ ಸಂಜೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಪಿಎಂ ವರದಿಯಲ್ಲಿ ಬಯಲಾಯ್ತು ದಿಗ್ಭ್ರಾಂತಿಕರ ಸತ್ಯ
ಪೊಲೀಸರು ಕಳುಹಿಸಿದ್ದ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಇತ್ತೀಚೆಗೆ ಕಾಡುಗೋಡಿ ಪೊಲೀಸರ ಕೈ ಸೇರಿತು. ವರದಿಯನ್ನು ಪರಿಶೀಲಿಸಿದಾಗ ಪೊಲೀಸರಿಗೆ ದೊಡ್ಡ ಆಘಾತ ಕಾದಿತ್ತು. ವೈದ್ಯಕೀಯ ವರದಿಯಲ್ಲಿ ಸಾವಿಗೆ ಮುಖ್ಯ ಕಾರಣ ಡೆತ್ ಡ್ಯೂ ಟು ಹೆಡ್ ಇಂಜ್ಯೂರಿ ಅಥವಾ ತಲೆಗೆ ಬಲವಾದ ಪೆಟ್ಟು ಬಿದ್ದಿರುವುದು ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ, ವೃದ್ಧೆಯ ದೇಹದ ಒಟ್ಟು 12 ಕಡೆಗಳಲ್ಲಿ ಗಾಯಗಳಾಗಿರುವುದು ಉಲ್ಲೇಖವಾಗಿತ್ತು. ಮಂಚದ ಮೇಲಿಂದ ಬಿದ್ದರೆ ವೃದ್ಧೆಯ ದೇಹದ ಮೇಲೆ ಇಷ್ಟೊಂದು ಗಾಯಗಳಾಗಲು ಹೇಗೆ ಸಾಧ್ಯ? ಎಂಬ ಗಂಭೀರ ಅನುಮಾನ ಪೊಲೀಸರನ್ನು ಕಾಡಿತು.

ಕೂಡಲೇ ಎಚ್ಚೆತ್ತ ಪೊಲೀಸರು ಆ ವೃದ್ಧೆಯ ಅಕ್ಕಪಕ್ಕದ ಮನೆಯವರು ಹಾಗೂ ಸ್ಥಳೀಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಆಗ ಸೆಪ್ಟೆಂಬರ್ 24 ರ ರಾತ್ರಿ ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಗಲಾಟೆ ನಡೆದಿದ್ದ ಬಗ್ಗೆ ಸ್ಫೋಟಕ ಮಾಹಿತಿ ಹೊರಬಂತು. ಈ ಸುಳಿವಿನ ಆಧಾರದ ಮೇಲೆ ವೃದ್ಧೆ ಭಾಗ್ಯಮ್ಮನ ಮೂರನೇ ಪುತ್ರ ಬಾಲಾಜಿಯನ್ನು ಪೊಲೀಸರು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದರು. ಕೊನೆಗೆ ಕಟ್ಟುನಿಟ್ಟಿನ ವಿಚಾರಣೆ ಎದುರು ಬಾಲಾಜಿ ಬಾಯಬಿಟ್ಟಿದ್ದು, ತಾನೇ ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪೊಲೀಸರ ವಿಚಾರಣೆ ವೇಳೆ ಆರೋಪಿ ಬಾಲಾಜಿ ತಾಯಿ ಭಾಗ್ಯಮ್ಮನ ಹತ್ಯೆಗೆ ಮೂರು ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟಿದ್ದಾನೆ:

ಸ್ಥಳೀಯರ ಮಾತು ಮತ್ತು ಆಕ್ರೋಶ: ವ್ಯಕ್ತಿಯೊಬ್ಬ ಮೃತ ಭಾಗ್ಯಮ್ಮನ ಮನೆ ಬಳಿ ಬಂದು ಕುಳಿತುಕೊಳ್ಳುತ್ತಿದ್ದನಂತೆ. ಈ ಕುರಿತು ತಾಯಿ ಹಾಗೂ ಆ ವ್ಯಕ್ತಿಯ ಬಗ್ಗೆ ಏರಿಯಾದಲ್ಲಿ ಜನರು ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರು. ಈ ವಿಚಾರವು ಮಗ ಬಾಲಾಜಿಗೆ ತೀವ್ರ ಅವಮಾನ ಹಾಗೂ ಕೋಪವನ್ನು ತಂದಿತ್ತು.

ತಾಯಿಯ ಕುಡಿತದ ಚಟ: ಗಂಡನ ಸಾವಿನ ಬಳಿಕ ವೃದ್ಧೆ ಭಾಗ್ಯಮ್ಮನಿಗೆ ಮದ್ಯಪಾನ ಮಾಡುವ ಚಟವಿತ್ತು. ಪ್ರತಿದಿನ ಬೆಳಗ್ಗೆಯಿಂದಲೂ ಮದ್ಯಪಾನ ಮಾಡಿ ಮಗನಿಗೆ ಕಿರಿಕಿರಿ ನೀಡುತ್ತಿದ್ದರು ಎಂಬುದು ಆರೋಪಿಯ ವಾದ.

ಅಡವಿಟ್ಟ ಚಿನ್ನದ ವಿಚಾರದಲ್ಲಿ ಜಗಳ: ತಾಯಿಯ 32 ಗ್ರಾಂ ಚಿನ್ನವನ್ನು ಬಾಲಾಜಿ ಅಡಮಾನ ಇಟ್ಟಿದ್ದನು. ಆ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಡುವಂತೆ ತಾಯಿ ಭಾಗ್ಯಮ್ಮ ಪದೇ ಪದೇ ಮಗನಿಗೆ ಜಗಳ ತೆಗೆದು ಒತ್ತಾಯಿಸುತ್ತಿದ್ದರು.

ಈ ಮೂರು ಕಾರಣಗಳಿಂದ ವಿಪರೀತ ಕೋಪಗೊಂಡಿದ್ದ ಬಾಲಾಜಿ, ರಾತ್ರಿ ವೇಳೆ ತಾಯಿಯೊಂದಿಗೆ ಜಗಳವಾಡಿ ಆಕೆಯ ತಲೆಗೆ ಬಲವಾಗಿ ಹೊಡೆದು, ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಈ ರೋಚಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುತ್ರ ಬಾಲಾಜಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಲಿದ್ದಾರೆ. ಸಮಯಪ್ರಜ್ಞೆ ಮೆರೆದು ತನಿಖೆ ನಡೆಸಿದ ಕಾಡುಗೋಡಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
 

Add Zee News as a Preferred Source
TAGS:
Kannada News