• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಆಕಾಶದಲ್ಲಿ ಮೂಡಲಿದೆ 3,500 ಡ್ರೋನ್‌ಗಳ ನವಿಲು! ಮೈಸೂರು ದಸರಾಗೆ ಗಿನ್ನೆಸ್ ದಾಖಲೆ ಗುರಿ!

ಆಕಾಶದಲ್ಲಿ ಮೂಡಲಿದೆ 3,500 ಡ್ರೋನ್‌ಗಳ ನವಿಲು! ಮೈಸೂರು ದಸರಾಗೆ ಗಿನ್ನೆಸ್ ದಾಖಲೆ ಗುರಿ!

ಮೈಸೂರು ದಸರಾ 2026ರ ಸಂಭ್ರಮಕ್ಕೆ ಈ ಬಾರಿ 3,500ಕ್ಕೂ ಹೆಚ್ಚು ಡ್ರೋನ್‌ಗಳ ಅದ್ಧೂರಿ ಪ್ರದರ್ಶನ ಮತ್ತಷ್ಟು ಮೆರುಗು ನೀಡಲಿದೆ. ಎಲ್‌ಇಡಿ ದೀಪಗಳನ್ನ ಹೊಂದಿರುವ ಡ್ರೋನ್‌ಗಳ ಮೂಲಕ ಆಕಾಶದಲ್ಲಿ ಬೃಹತ್ ನವಿಲಿನ ಆಕೃತಿ ಮೂಡಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ. ಅಕ್ಟೋಬರ್ 17, 18, 20 ಮತ್ತು 21ರಂದು ಬನ್ನಿಮಂಟಪದಲ್ಲಿ ನಡೆಯಲಿರುವ ಈ ಡ್ರೋನ್‌ ಶೋ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ.

Written ByPuttaraj K Alur
Published: Oct 08, 2026, 01:31 PM IST|Updated: Oct 08, 2026, 01:51 PM IST
joinshare
ಆಕಾಶದಲ್ಲಿ ಮೂಡಲಿದೆ 3,500 ಡ್ರೋನ್‌ಗಳ ನವಿಲು! ಮೈಸೂರು ದಸರಾಗೆ ಗಿನ್ನೆಸ್ ದಾಖಲೆ ಗುರಿ!
Image Credit: Mysore Dasara Drone Show

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನನಗೆ ಸ್ಟಿಂಗ್ ಆಪರೇಷನ್ ಮಾಡಿದವರು ಯಾರು ಅಂತ ಗೊತ್ತು : ಸಿಎಂ ಸಂಚಲನ ಹೇಳಿಕೆ

ನನಗೆ ಸ್ಟಿಂಗ್ ಆಪರೇಷನ್ ಮಾಡಿದವರು ಯಾರು ಅಂತ ಗೊತ್ತು : ಸಿಎಂ ಸಂಚಲನ ಹೇಳಿಕೆ

2

ವಾವ್ಹ್ ಬ್ಯೂಟಿಫುಲ್‌ ಲವ್‌ಸ್ಟೋರಿ.. ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೆಚ್ಚುಗೆ

3

ರೈಲ್ವೆಯಲ್ಲಿ 3,548 ಹುದ್ದೆಗಳಿಗೆ ಬಂಪರ್ ನೇಮಕಾತಿ! ಪದವೀಧರರಿಗೆ ಸುವರ್ಣಾವಕಾಶ; ಇಂದಿನಿಂದಲೇ ಅರ್ಜಿ ಸಲ್ಲಿಸಿ

4

‌300 ಜನರ ಕುಟುಂಬಕ್ಕೆ ವೋಟ್‌ಗಳೇ ಇಲ್ಲ.. ಚುನಾವಣಾ ಆಯೋಗದ ವಿರುದ್ಧ‌ ಪ್ರಕಾಶ್‌ ರಾಜ್ ಕಿಡಿ

5

ಮಾಫಿ ಸಾಕ್ಷಿ ಪ್ರಶ್ನಿಸುವ ಹಕ್ಕು ಆರೋಪಿಗಿಲ್ಲ : ರೇಣುಕಾಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಪು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mysore Dasara Drone Show: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಆಕಾಶದ ಮೇಲೂ ಅದ್ಧೂರಿ ರಂಗ ಸಿದ್ಧವಾಗುತ್ತಿದೆ. ಸಾವಿರಾರು ಎಲ್‌ಇಡಿ ಡ್ರೋನ್‌ಗಳು ಒಂದೇ ಸಮಯದಲ್ಲಿ ಆಕಾಶಕ್ಕೇರಿ ಬೃಹತ್ ನವಿಲಿನ ಆಕೃತಿ ಮೂಡಿಸುವ ಮೂಲಕ ಪ್ರೇಕ್ಷಕರನ್ನ ಬೆರಗುಗೊಳಿಸಲು ಸಜ್ಜಾಗಿವೆ. 3,500ಕ್ಕೂ ಹೆಚ್ಚು ಡ್ರೋನ್‌ಗಳನ್ನ ಬಳಸಿಕೊಂಡು ನಡೆಯಲಿರುವ ಈ ವಿಶೇಷ ಪ್ರದರ್ಶನದ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಗುರಿಯನ್ನೂ ಹೊಂದಲಾಗಿದೆ.  

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ನೇತೃತ್ವದಲ್ಲಿ ನಡೆಯಲಿರುವ ಈ ಡ್ರೋನ್‌ ಶೋ ಮೈಸೂರು ದಸರಾ 2026ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ. ಅಧಿಕೃತ ದಸರಾ ಕಾರ್ಯಕ್ರಮದ ಪ್ರಕಾರ, ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಕ್ಟೋಬರ್ 17, 18, 20 ಮತ್ತು 21ರಂದು ರಾತ್ರಿ 8 ಗಂಟೆಗೆ ಡ್ರೋನ್‌ ಪ್ರದರ್ಶನ ನಡೆಯಲಿದೆ.  

ಆಕಾಶವೇ ಕ್ಯಾನ್ವಾಸ್; ಮೂಡಲಿದೆ ಬೃಹತ್ ನವಿಲು

ಸಾಮಾನ್ಯ ಪಟಾಕಿ ಪ್ರದರ್ಶನ ಅಥವಾ ಬೆಳಕಿನ ಅಲಂಕಾರಕ್ಕಿಂತ ವಿಭಿನ್ನವಾಗಿ, ನೂರಾರು ಮೀಟರ್‌ಗಳಷ್ಟು ಎತ್ತರದಲ್ಲಿ ಹಾರುವ ಡ್ರೋನ್‌ಗಳ ಸ್ಥಾನವನ್ನ ಅತ್ಯಂತ ನಿಖರವಾಗಿ ನಿಯಂತ್ರಿಸಿ ಆಕಾಶದಲ್ಲೇ ಬೃಹತ್ ಚಿತ್ರಗಳನ್ನ ರೂಪಿಸಲಾಗುತ್ತದೆ. ಈ ಬಾರಿ ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಭವ್ಯ ಆಕೃತಿಯನ್ನ ರೂಪಿಸುವ ಯೋಜನೆ ಗಮನ ಸೆಳೆಯುತ್ತಿದೆ. ಎಲ್‌ಇಡಿ ದೀಪಗಳನ್ನ ಅಳವಡಿಸಿರುವ ಡ್ರೋನ್‌ಗಳು ನಿಗದಿತ ವಿನ್ಯಾಸದಂತೆ ಹಾರಾಟ ನಡೆಸಲಿದ್ದು, ಒಂದೇ ಸಮಯದಲ್ಲಿ ಸಾವಿರಾರು ಬೆಳಕಿನ ಬಿಂದುಗಳು ಸೇರಿ ಆಕಾಶದಲ್ಲಿ ಚಲಿಸುವ ಚಿತ್ರವನ್ನ ನಿರ್ಮಿಸಲಿವೆ. 

ಸುಮಾರು 15 ನಿಮಿಷಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ತಂತ್ರಜ್ಞಾನ, ಬೆಳಕು ಮತ್ತು ದಸರಾ ಸಂಭ್ರಮದ ವಿಶಿಷ್ಟ ಸಂಗಮವನ್ನ ಕಾಣಬಹುದಾಗಿದೆ. ಈ ಪ್ರಯತ್ನದ ಪ್ರಮುಖ ಗುರಿ ಕೇವಲ ಪ್ರೇಕ್ಷಕರ ಮನರಂಜನೆಯಲ್ಲ. ಸಾವಿರಾರು ಡ್ರೋನ್‌ಗಳ ಮೂಲಕ ರೂಪಿಸುವ ಬೃಹತ್ ನವಿಲಿನ ವಿನ್ಯಾಸವನ್ನ ದಾಖಲಿಸಿ, ಗಿನ್ನೆಸ್ ವಿಶ್ವ ದಾಖಲೆಗಾಗಿ ಪ್ರಯತ್ನಿಸುವ ಉದ್ದೇಶವೂ ಇದೆ. ಈ ಸಂಬಂಧ ಸರ್ಕಾರದ ಅನುಮೋದನೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.  

ಮೈಸೂರಿಗೆ ಡ್ರೋನ್‌ ಶೋ ಹೊಸದೇನಲ್ಲ

ಮೈಸೂರು ದಸರಾ ಸಂದರ್ಭದಲ್ಲಿ ಡ್ರೋನ್‌ಗಳ ಮೂಲಕ ಬೃಹತ್ ಆಕೃತಿಗಳನ್ನ ನಿರ್ಮಿಸುವ ಪ್ರಯೋಗ ಈಗಾಗಲೇ ಜನಪ್ರಿಯವಾಗಿದೆ. 2023ರಲ್ಲಿ ಸಾವಿರಾರು ಡ್ರೋನ್‌ಗಳನ್ನ ಬಳಸಿಕೊಂಡು ಆಕಾಶದಲ್ಲಿ ಬೃಹತ್ ಹುಲಿಯ ಆಕೃತಿ ಮೂಡಿಸಲಾಗಿತ್ತು. ಆ ಪ್ರದರ್ಶನ ಗಿನ್ನೆಸ್ ವಿಶ್ವ ದಾಖಲೆಯನ್ನೂ ತನ್ನದಾಗಿಸಿಕೊಂಡಿತ್ತು ಎಂದು ವರದಿಯಾಗಿದೆ. ಈ ಅನುಭವದ ಬಳಿಕ ದಸರಾ ಸಂದರ್ಭದಲ್ಲಿ ಡ್ರೋನ್‌ ಶೋ ಪ್ರೇಕ್ಷಕರ ಪ್ರಮುಖ ಆಕರ್ಷಣೆಯಾಗಿ ಬೆಳೆದಿದೆ. ಹಿಂದಿನ ಪ್ರದರ್ಶನಗಳಲ್ಲಿ ಸೌರವ್ಯೂಹ, ವಿಶ್ವ ಭೂಪಟ, ಸೇನೆ, ನವಿಲು, ಹುಲಿ, ಡಾಲ್ಫಿನ್, ಹದ್ದು, ಶ್ರೀಕೃಷ್ಣನ ಕಾಳಿಂಗ ನೃತ್ಯ, ಅಂಬಾರಿ ಆನೆ, ಕರ್ನಾಟಕದ ನಕ್ಷೆ ಹಾಗೂ ಚಾಮುಂಡೇಶ್ವರಿ ಸೇರಿದಂತೆ ಹಲವು ವಿನ್ಯಾಸಗಳನ್ನ ಆಕಾಶದಲ್ಲಿ ಮೂಡಿಸಲಾಗಿತ್ತು.  

ಈ ಪ್ರದರ್ಶನದ ಹಿಂದೆ ದೆಹಲಿ ಮೂಲದ BotLab Dynamics ಸಂಸ್ಥೆ ತಾಂತ್ರಿಕ ಜವಾಬ್ದಾರಿ ವಹಿಸಿಕೊಂಡಿದೆ. ಇದೇ ಸಂಸ್ಥೆ ಮೈಸೂರು ದಸರಾ ಡ್ರೋನ್‌ ಶೋನಲ್ಲಿ ಹಿಂದೆ ಕೂಡ ಕೆಲಸ ಮಾಡಿದ್ದು, ಸಾವಿರಾರು ಡ್ರೋನ್‌ಗಳ ಮೂಲಕ ಸಿಂಕ್ರೊನೈಸ್‌ಡ್‌ ಲೈಟ್‌ ಶೋಗಳನ್ನ ನಡೆಸಿರುವ ಅನುಭವ ಹೊಂದಿದೆ. ಸಂಸ್ಥೆಯ ಮಾಹಿತಿಯ ಪ್ರಕಾರ, 2025ರ ಮೈಸೂರು ದಸರಾ ಕಾರ್ಯಕ್ರಮದಲ್ಲೂ 3,000 ಡ್ರೋನ್‌ಗಳನ್ನ ಬಳಸಲಾಗಿತ್ತು.  

₹5 ಕೋಟಿ ವೆಚ್ಚದ ಯೋಜನೆ?

ಈ ಬಾರಿಯ ಬೃಹತ್ ಡ್ರೋನ್‌ ಶೋಗೆ ಸುಮಾರು ₹5 ಕೋಟಿ ವೆಚ್ಚವಾಗಬಹುದು ಎಂಬ ಅಂದಾಜು ಇದೆ. ಡ್ರೋನ್‌ಗಳ ವ್ಯವಸ್ಥೆ ಮಾತ್ರವಲ್ಲದೆ, ಅವುಗಳನ್ನ ಏಕಕಾಲದಲ್ಲಿ ನಿಯಂತ್ರಿಸುವ ಸಾಫ್ಟ್‌ವೇರ್, ತಾಂತ್ರಿಕ ಉಪಕರಣಗಳು, ಎಲ್‌ಇಡಿ ಲೈಟಿಂಗ್, ಸುರಕ್ಷತಾ ವ್ಯವಸ್ಥೆ, ವಿನ್ಯಾಸ ಮತ್ತು ತಾಂತ್ರಿಕ ತಜ್ಞರ ವೆಚ್ಚವೂ ಯೋಜನೆಯ ಭಾಗವಾಗಿದೆ. ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಖಾಸಗಿ ಪ್ರಾಯೋಜಕರ ನೆರವು ಪಡೆಯುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ವರದಿಯಾಗಿದೆ. ಆದರೆ ಅಂತಿಮ ವೆಚ್ಚ ಮತ್ತು ಪ್ರಾಯೋಜಕತ್ವದ ವಿವರಗಳು ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ.

ನಾಲ್ಕು ದಿನ ಆಕಾಶದಲ್ಲಿ ಬೆಳಕಿನ ಚಿತ್ತಾರ

ಮೈಸೂರು ದಸರಾ 2026ರ ಅಧಿಕೃತ ಕಾರ್ಯಕ್ರಮದ ಪ್ರಕಾರ ಡ್ರೋನ್‌ ಶೋ ಅಕ್ಟೋಬರ್ 17, 18, 20 ಮತ್ತು 21ರಂದು ನಡೆಯಲಿದೆ. ನಾಲ್ಕೂ ದಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ರಾತ್ರಿ 8 ಗಂಟೆಗೆ ಪ್ರದರ್ಶನ ನಿಗದಿಯಾಗಿದೆ. ಅಕ್ಟೋಬರ್ 20 ಮತ್ತು 21ರಂದು ಪಂಜಿನ ಕವಾಯತು ಕಾರ್ಯಕ್ರಮದ ನಂತರ ಡ್ರೋನ್‌ ಶೋ ನಡೆಯಲಿದೆ. ಅಧಿಕೃತ ದಸರಾ ತಾಣದ ಪ್ರಕಾರ, ಡ್ರೋನ್‌ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ವ್ಯವಸ್ಥೆಯಿದ್ದು, ಟಿಕೆಟ್‌ ಹೊಂದಿರುವವರಿಗೆ ಪ್ರತ್ಯೇಕ ಎನ್‌ಕ್ಲೋಸರ್‌ ವ್ಯವಸ್ಥೆಯೂ ಇದೆ. 17 ಮತ್ತು 18ರ ಡ್ರೋನ್‌ ಶೋಗೆ ಪ್ರತ್ಯೇಕ ಟಿಕೆಟ್‌ ವ್ಯವಸ್ಥೆ ಪ್ರಕಟಿಸಲಾಗಿದ್ದು, ಉಚಿತ ವೀಕ್ಷಣೆಗೆ ಸಾರ್ವಜನಿಕ ಪ್ರದೇಶಗಳೂ ಲಭ್ಯವಿವೆ.  

ಗಿನ್ನೆಸ್ ದಾಖಲೆ ಆಗುತ್ತಾ?

ಸಾವಿರಾರು ಡ್ರೋನ್‌ಗಳು ಒಂದೇ ಸಮಯದಲ್ಲಿ ಹಾರಾಟ ನಡೆಸಿ ನಿಗದಿತ ವಿನ್ಯಾಸವನ್ನ ರೂಪಿಸುವುದು ಅತ್ಯಂತ ನಿಖರವಾದ ತಾಂತ್ರಿಕ ಕಾರ್ಯ. ಡ್ರೋನ್‌ಗಳ ಹಾರಾಟದ ಅಂತರ, ಎತ್ತರ, ಬೆಳಕಿನ ಬಣ್ಣ, ವೇಗ, ವಿನ್ಯಾಸದ ಸಮನ್ವಯ ಮತ್ತು ಸುರಕ್ಷತಾ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ದಾಖಲೆ ಪ್ರಯತ್ನದ ವೇಳೆ ಪ್ರದರ್ಶನವನ್ನ ದಾಖಲಿಸಲು ವಿಶೇಷ ತಂಡವನ್ನೂ ನಿಯೋಜಿಸುವ ಯೋಜನೆ ಇದೆ. ನಿಗದಿತ ಮಾನದಂಡಗಳ ಪರಿಶೀಲನೆ ಪೂರ್ಣಗೊಂಡ ಬಳಿಕವೇ ಗಿನ್ನೆಸ್ ವಿಶ್ವ ದಾಖಲೆಯ ಕುರಿತು ಅಧಿಕೃತ ಘೋಷಣೆ ಸಾಧ್ಯವಾಗಲಿದೆ.

ಮೈಸೂರು ದಸರಾ ಎಂದರೆ ಅರಮನೆಯ ಬೆಳಕು, ಜಂಬೂ ಸವಾರಿ, ಪಂಜಿನ ಕವಾಯತು ಮತ್ತು ಸಾಂಸ್ಕೃತಿಕ ವೈಭವ. ಈ ಬಾರಿ ಅದಕ್ಕೆ ಸಾವಿರಾರು ಡ್ರೋನ್‌ಗಳ ಬೆಳಕಿನ ಚಿತ್ತಾರವೂ ಸೇರ್ಪಡೆಯಾಗುತ್ತಿದೆ. ಆಕಾಶದಲ್ಲಿ ಬೃಹತ್ ನವಿಲು ಮೂಡಿದ ಕ್ಷಣ ಮೈಸೂರು ದಸರಾ 2026ರ ಅತ್ಯಂತ ಹೆಚ್ಚು ಚರ್ಚೆಯಾಗುವ ದೃಶ್ಯಗಳಲ್ಲಿ ಒಂದಾಗುವ ಸಾಧ್ಯತೆಯಿದೆ.

Add Zee News as a Preferred Source
TAGS:
Kannada News