• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /‌300 ಜನರ ಕುಟುಂಬಕ್ಕೆ ವೋಟ್‌ಗಳೇ ಇಲ್ಲ.. ಚುನಾವಣಾ ಆಯೋಗದ ವಿರುದ್ಧ‌ ಪ್ರಕಾಶ್‌ ರಾಜ್ ಕಿಡಿ

‌300 ಜನರ ಕುಟುಂಬಕ್ಕೆ ವೋಟ್‌ಗಳೇ ಇಲ್ಲ.. ಚುನಾವಣಾ ಆಯೋಗದ ವಿರುದ್ಧ‌ ಪ್ರಕಾಶ್‌ ರಾಜ್ ಕಿಡಿ

ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಬಂದು ನಮ್ಮ ಮನೆ ಮುಂದೆ ವೋಟ್ ಕೊಡಿ ಅಂತಾ ಕೈಮುಗಿದು ಕೇಳುತ್ತಾರೆ. ಆದರೆ, ಇಂದು ಜನರೇ ಕಚೇರಿಗಳ ಎದುರು ಹೋಗಿ ನಮ್ಮ ವೋಟ್ ಡಿಲೀಟ್ ಮಾಡಬೇಡಿ ಎಂದು ಬೇಡುವ ದುಸ್ಥಿತಿ ನಿರ್ಮಾಣ.

Written ByBhimappa
Published: Oct 08, 2026, 01:54 PM IST|Updated: Oct 08, 2026, 02:08 PM IST
joinshare
‌300 ಜನರ ಕುಟುಂಬಕ್ಕೆ ವೋಟ್‌ಗಳೇ ಇಲ್ಲ.. ಚುನಾವಣಾ ಆಯೋಗದ ವಿರುದ್ಧ‌ ಪ್ರಕಾಶ್‌ ರಾಜ್ ಕಿಡಿ
Image Credit: Prakash Raj

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನನಗೆ ಸ್ಟಿಂಗ್ ಆಪರೇಷನ್ ಮಾಡಿದವರು ಯಾರು ಅಂತ ಗೊತ್ತು : ಸಿಎಂ ಸಂಚಲನ ಹೇಳಿಕೆ

ನನಗೆ ಸ್ಟಿಂಗ್ ಆಪರೇಷನ್ ಮಾಡಿದವರು ಯಾರು ಅಂತ ಗೊತ್ತು : ಸಿಎಂ ಸಂಚಲನ ಹೇಳಿಕೆ

2

ವಾವ್ಹ್ ಬ್ಯೂಟಿಫುಲ್‌ ಲವ್‌ಸ್ಟೋರಿ.. ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೆಚ್ಚುಗೆ

3

ರೈಲ್ವೆಯಲ್ಲಿ 3,548 ಹುದ್ದೆಗಳಿಗೆ ಬಂಪರ್ ನೇಮಕಾತಿ! ಪದವೀಧರರಿಗೆ ಸುವರ್ಣಾವಕಾಶ; ಇಂದಿನಿಂದಲೇ ಅರ್ಜಿ ಸಲ್ಲಿಸಿ

4

‌300 ಜನರ ಕುಟುಂಬಕ್ಕೆ ವೋಟ್‌ಗಳೇ ಇಲ್ಲ.. ಚುನಾವಣಾ ಆಯೋಗದ ವಿರುದ್ಧ‌ ಪ್ರಕಾಶ್‌ ರಾಜ್ ಕಿಡಿ

5

ಮಾಫಿ ಸಾಕ್ಷಿ ಪ್ರಶ್ನಿಸುವ ಹಕ್ಕು ಆರೋಪಿಗಿಲ್ಲ : ರೇಣುಕಾಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಪು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Actor Prakash Raj lashes out at Election Commission: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕೇಂದ್ರ ಚುನಾವಣಾ ಆಯೋಗದ ವಿವಾದಾತ್ಮಕ ಎಸ್‌ಐಆರ್ SIR ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಏಕಾಏಕಿ ಕೈಬಿಟ್ಟಿರುವುದನ್ನು ವಿರೋಧಿಸಿ ಜನತಾ ನ್ಯಾಯಾಲಯ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಖ್ಯಾತ ನಟ ಮತ್ತು ಸಾಮಾಜಿಕ ಕಾರ್ಯಕರ್ತರಾದ ಪ್ರಕಾಶ್ ರಾಜ್, ಕಿಶೋರ್, ಸಿಜೆಪಿ ಪಕ್ಷದ ಮುಖಂಡರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ನೂರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಖ್ಯಾತ ನಟ ಪ್ರಕಾಶ್ ರಾಜ್ ಅವರು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇವತ್ತು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಬಂದು ನಮ್ಮ ಮನೆ ಮುಂದೆ ವೋಟ್ ಕೊಡಿ ಅಂತಾ ಕೈಮುಗಿದು ಕೇಳುತ್ತಾರೆ. ಆದರೆ, ಇಂದು ಜನರೇ ಕಚೇರಿಗಳ ಎದುರು ಹೋಗಿ ನಮ್ಮ ವೋಟ್ ಡಿಲೀಟ್ ಮಾಡಬೇಡಿ ಎಂದು ಬೇಡುವ ದುಸ್ಥಿತಿ ನಿರ್ಮಾಣವಾಗಿದೆ. ಇದು ವೋಟ್ ಚೋರ್ ಗದ್ದೀ ಚೋರ್ ಆಗಿ ಬದಲಾಗಿದೆ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಮಾತನಾಡಿದ ಪ್ರಕಾಶ್ ರಾಜ್ ಅವರು, ನಾವು ಯಾರಿಗೆ ವೋಟ್ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ಡಿಸೈಡ್ ಮಾಡಲು ಹೊರಟಿದೆ. ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳ ಮತಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗುತ್ತಿದೆ. ವೋಟ್ ಹಾಕದವರನ್ನು ಏನು ಮಾಡಲು ಆಗುವುದಿಲ್ಲವಲ್ಲ, ಅದಕ್ಕೆ ಅವರ ವೋಟನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಆದರೆ ನಾವು ಯುವಕರು ಎಚ್ಚೆತ್ತುಕೊಂಡಿದ್ದೇವೆ, ನಾವು ಯಾಮಾರುವುದಿಲ್ಲ. ಎಸ್‌ಐಆರ್ SIR ಪ್ರಕ್ರಿಯೆ ಸಂಪೂರ್ಣವಾಗಿ ರದ್ದಾಗಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್ ಅವರು, ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಟ್ಟರೆ ಮತ್ತೊಬ್ಬ ಅಜ್ಞಾನೇಶ್ ಕುಮಾರ್ ಬರ್ತಾರೆ. ಜ್ಞಾನೇಶ್ ಕುಮಾರ್ ಇಂದು ಮೋದಿ ಮತ್ತು ಶಾ ಅವರ ಮಾತುಗಳನ್ನು ಮಾತ್ರ ಕೇಳುತ್ತಿದ್ದಾರೆ. ಎಲೆಕ್ಷನ್ ಕಮಿಷನ್ ವೋಟ್ ಕ್ಲೀನ್ ಮಾಡುತ್ತಿಲ್ಲ, ಬದಲಿಗೆ ವೋಟರ್‌ಗಳನ್ನು ಡಿಲೀಟ್ ಮಾಡುತ್ತಿದೆ. ನಮ್ಮ ಹಕ್ಕನ್ನು ನಮಗೆ ನೀಡುವವರೆಗೂ ನಾವು ಬಿಡುವುದಿಲ್ಲ. ನಾವು ಯಾವ ರಾಜಕೀಯ ಪಕ್ಷದವರೂ ಅಲ್ಲ, ಸಾಮಾನ್ಯ ಜನರು. ನಮ್ಮ ಯುವಕರು ಹಳ್ಳಿ ಹಳ್ಳಿಗೆ ತೆರಳಿ ಪೂರ್ಣ ಡಾಟಾವನ್ನು ಸಂಗ್ರಹಿಸಿ ತಂದಿದ್ದಾರೆ. ಅದಕ್ಕೇ ನಮ್ಮ ಈ ಹೋರಾಟ ಇಷ್ಟು ಬಲವಾಗಿದೆ ಎಂದು ಆಕ್ರೋಶ ಹೊರ ಹಾಕಿದರು. 

ಬಿಜಾಪುರದಲ್ಲಿ 300 ಕುಟುಂಬಗಳ ಮತ ಡಿಲೀಟ್
ಕರ್ನಾಟಕದಾದ್ಯಂತ ಸಂಚರಿಸಿ ಜನರನ್ನು ಭೇಟಿ ಮಾಡಿರುವ ಅನುಭವ ಹಂಚಿಕೊಂಡರು. ವಿಜಾಪುರದಲ್ಲಿ ಸುಮಾರು 300 ಜನರ ದೊಡ್ಡ ಕುಟುಂಬವೊಂದಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲದಂತಾಗಿದೆ. ಇದರಿಂದಾಗಿ ಅವರಿಗೆ ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳೂ ಸಿಗುತ್ತಿಲ್ಲ. ಅವರ ವೋಟ್‌ಗಳನ್ನು ಕೂಡ ಡಿಲೀಟ್ ಮಾಡಲಾಗಿದೆ. ಇಂತಹ ಭೀಕರ ಅವಾಂತರವನ್ನು ಎಸ್‌ಐಆರ್ SIR ಸೃಷ್ಟಿಸಿದೆ. ಇಂದು ನೈಜ ಸಂತ್ರಸ್ತರು ತಮ್ಮ ಮತದ ಹಕ್ಕನ್ನು ಕಳೆದುಕೊಂಡು ಬೀದಿಗಿಳಿದಿದ್ದಾರೆ ಎಂದು ಪ್ರಕಾಶ್ ರಾಜ್ ಅವರು ಕಳವಳ ವ್ಯಕ್ತಪಡಿಸಿದರು.

'ಜನತಾ ನ್ಯಾಯಾಲಯ'ದ ಪ್ರಮುಖ ಬೇಡಿಕೆಗಳು 
ಫ್ರೀಡಂ ಪಾರ್ಕ್‌ನಲ್ಲಿ ನಡೆದ ಈ ಬೃಹತ್ ಆಂದೋಲನವು 'ಕಕ್ರೋಚ್ ಪಾರ್ಟಿ' ನೇತೃತ್ವದಲ್ಲಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಸಂಘಟಿತಗೊಂಡಿತ್ತು. ಯುವಕ-ಯುವತಿಯರು ಭಿನ್ನ-ವಿಭಿನ್ನವಾಗಿ ಫ್ಲೆಕ್ಸ್‌ಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯ ಸಿಜೆಪಿ ಪಕ್ಷದ ಮುಖಂಡರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮಾತನಾಡಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು. ಪ್ರಜಾಪ್ರಭುತ್ವದ ಮೂಲ ಬೇರನ್ನೇ ಅಲುಗಾಡಿಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ತೀವ್ರತೆಯ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮತದಾರರ ಹಕ್ಕುಗಳ ರಕ್ಷಣೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. 
 

Add Zee News as a Preferred Source
TAGS:
Kannada News