• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ದಾವಣಗೆರೆ: ಆನ್‌ಲೈನ್‌ ಗೇಮಿಂಗ್ ಸೈಬರ್‌ ವಂಚನೆಗೆ‌ 13 ವರ್ಷದ ಬಾಲಕ ಬ*ಲಿ

ದಾವಣಗೆರೆ: ಆನ್‌ಲೈನ್‌ ಗೇಮಿಂಗ್ ಸೈಬರ್‌ ವಂಚನೆಗೆ‌ 13 ವರ್ಷದ ಬಾಲಕ ಬ*ಲಿ

ಆನ್‌ಲೈನ್‌ ಗೇಮ್‌ ಆಸೆಗೆ 13 ವರ್ಷದ ಬಾಲಕ ಜೀವ ಕಳೆದುಕೊಂಡಿರುವ ಘಟನೆ ದಾವಣಗೆರೆಯ ಚನ್ನಗಿರಿಯಲ್ಲಿ ನಡೆದಿದೆ.

Written ByYashaswini V
Published: Oct 09, 2026, 11:15 AM IST|Updated: Oct 09, 2026, 11:17 AM IST
joinshare
ದಾವಣಗೆರೆ: ಆನ್‌ಲೈನ್‌ ಗೇಮಿಂಗ್ ಸೈಬರ್‌ ವಂಚನೆಗೆ‌ 13 ವರ್ಷದ ಬಾಲಕ ಬ*ಲಿ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬೆಂಗಳೂರಿನಲ್ಲಿ ಸಿ-ಸೆಕ್ಷನ್‌ ಬದಲು ನಾರ್ಮಲ್‌ ಡೆಲಿವರಿಗೂ ಆದ್ಯತೆ ನೀಡುವ ವಿಶೇಷ ಆಸ್ಪತ್ರೆ

ಬೆಂಗಳೂರಿನಲ್ಲಿ ಸಿ-ಸೆಕ್ಷನ್‌ ಬದಲು ನಾರ್ಮಲ್‌ ಡೆಲಿವರಿಗೂ ಆದ್ಯತೆ ನೀಡುವ ವಿಶೇಷ ಆಸ್ಪತ್ರೆ

2

ನಾನಾ ಪಾಟೇಕರ್‌ ಅವರದ್ದು ಸಹಜ ಸಾವು ಅಲ್ಲವೇ! FIR ದಾಖಲಿಸಿದ ಪೊಲೀಸರು, ತನಿಖೆ ಚುರುಕು; ಯಾರ ಮೇಲೆ ಅನುಮಾನ?

3

ಬೀದಿಬದಿ ವ್ಯಾಪಾರಿಗಳಿಂದ ಸರ್ಕಾರಕ್ಕೆ ಬಿಗ್‌ ಚಾಲೆಂಜ್‌!... ಇಂದಿನಿಂದ ಪುಟ್ಪಾತ್‌ ಮೇಲೆ ವ್ಯಾಪಾರ ಮಾಡ್ತೇವೆ

4

ರೈತರಿಗೆ 2,500 ರೂ. ಯಾವುದಕ್ಕೆ ಸಾಲುತ್ತೆ.. ಸರಿಯಾದ ಪರಿಹಾರ ಕೊಡದಿದ್ರೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ

5

ರಾಜ್ಯದ 5 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ.. ಬೆಂಗಳೂರಲ್ಲೂ ಮಳೆ ಸಾಧ್ಯತೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದಾವಣಗೆರೆ: ಆನ್‌ಲೈನ್ ಗೇಮ್‌ ಆಸೆಗೆ 8ನೇ ತರಗತಿ ವಿದ್ಯಾರ್ಥಿ ಬಲಿಯಾದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ. 13 ವರ್ಷದ 8ನೇ ತರಗತಿ ವಿದ್ಯಾರ್ಥಿಯೇ ಆನ್‌ಲೈನ್ ಗೇಮ್ ನಿಂದ ಆ**ತ್ಮಹ**ತ್ಯೆ ಮಾಡಿಕೊಂಡಿರುವ ದುರ್ದೈವಿ ಎನ್ನಲಾಗಿದೆ.

ಆನ್‌ಲೈನ್ ಗೇಮ್‌ ಐಡಿ ಹೆಸರಿನಲ್ಲಿ ಬೆದರಿಕೆ:
ಲಭ್ಯವಿರುವ ಮಾಹಿತಿಗಳ ಪ್ರಕಾರ, ಆನ್‌ಲೈನ್ ಗೇಮ್‌ ಐಡಿ ನೀಡುವುದಾಗಿ ನಂಬಿಸಿದ್ದ ಸೈಬರ್‌ ವಂಚಕರು 13 ವರ್ಷದ ಬಾಲಕನಿಂದ ಹಂತ ಹಂತವಾಗಿ ಸುಮಾರು 4 ಲಕ್ಷದ 11 ಸಾವಿರ ರೂಪಾಯಿವರೆಗೆ ಹಣ ವಸೂಲಿ ಮಾಡಿದ್ದರು. ಹಣ ನೀಡದಿದ್ದರೆ ಆತನ ಜೊತೆಗೆ ಅವನ ಅಣ್ಣನನ್ನೂ ಕೊ*ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ವಂಚಕರ ಬೆದರಿಕೆಯಿಂದ ಮನನೊಂದಿದ್ದ ಬಾಲಕ:
ಸೈಬರ್‌ ವಂಚಕರ ನಿರಂತರ ಬೆದರಿಕೆಯಿಂದ ಮನನೊಂದಿದ್ದ ಬಾಲಕ ಸೆಪ್ಟೆಂಬರ್‌ 7ರಂದು  ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆ*ತ್ಮಹ**ತ್ಯೆಗೆ ಶರಣಾಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಬಾಲಕನ ಸಾ*ವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅದೇನೆ ಇರಲಿ ಒಂದೆಡೆ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವ ಬದಲು ಮಕ್ಕಳು ಆನ್‌ಲೈನ್‌ ಗೇಮ್‌ ಚಟಕ್ಕೆ ಈ ರೀತಿ ಬ*ಲಿ ಆಗುತ್ತಿರುವುದು ನಿಜಕ್ಕೂ ದುರಂತವೇ ಸರಿ.

ಪೋಷಕರು ತಮ್ಮ ಮಕ್ಕಳಿಗೆ ಬೇಕಾಗಿರುವ ಮೊಬೈಲ್‌, ಲ್ಯಾಪ್‌ಟಾಪ್‌ ರೀತಿಯ ಎಲ್ಲಾ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಮಕ್ಕಳು ಏನು ಮಾಡುತ್ತಿದ್ದಾರೆ? ಅವರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆಯೂ ಗಮನವಹಿಸಬೇಕು. ಈ ವಯಸ್ಸಿನಲ್ಲಿ ಮಕ್ಕಳು ತಪ್ಪು ಮಾಡುವುದು, ಅಡ್ಡ ದಾರಿ ಹಿಡಿಯುವುದು ಸಹಜವೇ. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿ, ಅವರಿಗೆ ಸರಿ ತಪ್ಪುಗಳ ಬಗ್ಗೆ ತಿಳಿ ಹೇಳಿ. ಎಂತದ್ದೇ ಸಂದರ್ಭದಲ್ಲೂ ಪೋಷಕರು ನಿಮ್ಮೊಂದಿಗೆ ಇರುತ್ತಾರೆ ಎಂಬುದನ್ನು ಮನವರಿಕೆ ಮಾಡಿಸಿ. ಸಮಸ್ಯೆ ಯಾವುದೇ ಆದರೂ ನಾವು ಅದನ್ನು ಬಗೆಹರಿಸೋಣ. ನಿಮ್ಮ ಜೊತೆಗೆ ಸದಾ ನಾವು ಇರುತ್ತೇವೆ ಎಂಬ ವಿಶ್ವಾಸ ಬರುವಂತೆ ಮಾಡುವುದು ತಂದೆ ತಾಯಿಯರ ಜವಾಬ್ದಾರಿ ಆಗಿದೆ. ಆಗಷ್ಟೇ ಇಂತಹ ದುರಂತಗಳನ್ನು ತಪ್ಪಿಸಬಹುದಾಗಿದೆ. ಒಮ್ಮೆ ಮಕ್ಕಳಿಗೆ ತಪ್ಪಿನ ಬಗ್ಗೆ ಅರಿವಾದರೆ ಅವರು ಮುಂದೆ ತಪ್ಪು ದಾರಿಯಲ್ಲಿ ಹೆಜ್ಜೆ ಹಾಕುವುದನ್ನು ಬಿಡಬಹುದು. ಕೇವಲ ಮೋಜು ಮಸ್ತಿಯೇ ಜೀವನವಲ್ಲ. ನಮ್ಮ ಕಾಲ ಮೇಲೆ ನಾವು ನಿಲ್ಲುವುದನ್ನು ಕಲಿಯಬೇಕು. ಬದುಕು ನಾವಂದುಕೊಂಡಷ್ಟು ಸುಖದ ಹಾದಿ ಆಗಿರುವುದಿಲ್ಲ. ಜೀವನದಲ್ಲಿ ಏಳು-ಬೀಳುಗಳು ಇದ್ದೇ ಇರುತ್ತವೆ. ಜೀವನದಲ್ಲಿ ಎದುರಾಗಬಹುದಾದ ಬೆಟ್ಟದಂತಹ ಸಮಸ್ಯೆಗಳನ್ನು ನಿಭಾಯಿಸಲು, ಕಲ್ಲು ಮುಳ್ಳಿನ ಹಾದಿಯಲ್ಲಿ ಹೆಜ್ಜೆ ಹಾಕಲು ಆತ್ಮವಿಶ್ವಾಸ ಮುಖ್ಯ ಎನ್ನುವ ಜೀವನದ ಪಾಠವನ್ನು ಮಕ್ಕಳಿಗೆ ಪೋಷಕರಿಗಿಂತ ಉತ್ತಮವಾಗಿ ಯಾರೂ ಕಲಿಸಲು ಸಾಧ್ಯವಿಲ್ಲ. ಹಣ ಹೋದರೆ ಸಂಪಾದಿಸಬಹುದು, ಆದರೆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಲ್ಲವೇ...

Add Zee News as a Preferred Source
TAGS:
Cyber Crime
Crime