ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿ ಕ್ಷಣಕ್ಕೊಂದು ಟ್ರೆಂಡ್ ಹುಟ್ಟಿಕೊಳ್ಳುವುದು ಸಹಜ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ 1980ರ ದಶಕದ ರೆಟ್ರೋ ಫೋಟೋಗಳದ್ದೇ ಕಾರುಬಾರು. ಹಳೆಯ ಕಾಲದ ಕ್ಯಾಮೆರಾ ಫಿಲ್ಮ್, ಬೆಲ್ ಬಾಟಮ್ ಪ್ಯಾಂಟ್, ಕರ್ಲಿ ಹೇರ್ ಸ್ಟೈಲ್ ಮತ್ತು ವಿಂಟೇಜ್ ಚಲನಚಿತ್ರಗಳ ಪೋಸ್ಟರ್ ಲುಕ್‌ನಲ್ಲಿ ತಮ್ಮ ಫೋಟೋಗಳನ್ನು ಬದಲಾಯಿಸಿಕೊಳ್ಳುವ ಈ ಎಐ ಕ್ರೇಜ್‌ಗೆ ಜನಸಾಮಾನ್ಯರಿಂದ ಹಿಡಿದು ಸಿನಿಮಾ ತಾರೆಯರು, ರಾಜಕಾರಣಿಗಳವರೆಗೂ ಎಲ್ಲರೂ ಮಾರುಹೋಗಿದ್ದಾರೆ.