• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /1980s AI photo trend ಭಯಾನಕತೆ : ಕ್ಷಣಿಕ ಮೋಜಿನ ಹಿಂದೆ ಅಡಗಿದೆ ಸೈಬರ್ ಬಲೆ, ಭೀಕರ ಪರಿಸರ ವಿನಾಶ

1980s AI photo trend ಭಯಾನಕತೆ : ಕ್ಷಣಿಕ ಮೋಜಿನ ಹಿಂದೆ ಅಡಗಿದೆ ಸೈಬರ್ ಬಲೆ, ಭೀಕರ ಪರಿಸರ ವಿನಾಶ

ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿ ಕ್ಷಣಕ್ಕೊಂದು ಟ್ರೆಂಡ್ ಹುಟ್ಟಿಕೊಳ್ಳುವುದು ಸಹಜ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ 1980ರ ದಶಕದ ರೆಟ್ರೋ ಫೋಟೋಗಳದ್ದೇ ಕಾರುಬಾರು. ಹಳೆಯ ಕಾಲದ ಕ್ಯಾಮೆರಾ ಫಿಲ್ಮ್, ಬೆಲ್ ಬಾಟಮ್ ಪ್ಯಾಂಟ್, ಕರ್ಲಿ ಹೇರ್ ಸ್ಟೈಲ್ ಮತ್ತು ವಿಂಟೇಜ್ ಚಲನಚಿತ್ರಗಳ ಪೋಸ್ಟರ್ ಲುಕ್‌ನಲ್ಲಿ ತಮ್ಮ ಫೋಟೋಗಳನ್ನು ಬದಲಾಯಿಸಿಕೊಳ್ಳುವ ಈ ಎಐ ಕ್ರೇಜ್‌ಗೆ ಜನಸಾಮಾನ್ಯರಿಂದ ಹಿಡಿದು ಸಿನಿಮಾ ತಾರೆಯರು, ರಾಜಕಾರಣಿಗಳವರೆಗೂ ಎಲ್ಲರೂ ಮಾರುಹೋಗಿದ್ದಾರೆ.

Reported ByKrishna NKEdited ByKrishna NK
Published: Sep 12, 2026, 06:56 PM IST|Updated: Sep 17, 2026, 04:04 PM IST
joinshare
1980s AI photo trend ಭಯಾನಕತೆ : ಕ್ಷಣಿಕ ಮೋಜಿನ ಹಿಂದೆ ಅಡಗಿದೆ ಸೈಬರ್ ಬಲೆ, ಭೀಕರ ಪರಿಸರ ವಿನಾಶ
Image Credit: here is the side effects of 80s Retro photo

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

1980s AI photo trend Danger : ಒಂದು ಕ್ಲಿಕ್‌ನಲ್ಲಿ ಸಿದ್ಧವಾಗುವ ಈ ವಿಂಟೇಜ್ ಲುಕ್ ಅನ್ನು ತಮ್ಮ ವಾಟ್ಸಾಪ್ ಸ್ಟೇಟಸ್ ಹಾಗೂ ಇನ್ಸ್ಟಾ ಸ್ಟೋರಿಗಳಲ್ಲಿ ಹಾಕಿ ಸಂಭ್ರಮಿಸುತ್ತಿರುವ ಬಳಕೆದಾರರು, ಇದರ ಹಿಂದೆ ಅಡಗಿರುವ ಭೀಕರ ಅಪಾಯಗಳ ಬಗ್ಗೆ ಕನಿಷ್ಟ ಅರಿವೂ ಇಲ್ಲದೆ ವರ್ತಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಈ ಕಲರ್‌ಫುಲ್‌ ಎಐ ಫೋಟೋಗಳ ಹಿಂದೆ ನಿಮ್ಮ ಖಾಸಗಿ ವಿಚಾರಗಳ ಕಳ್ಳತನ ಮತ್ತು ಕಣ್ಣಿಗೆ ಕಾಣದ ಬೃಹತ್ ಪರಿಸರ ನಾಶವೂ ಅಡಗಿದೆ.

ಒರಿಜಿನಲ್ ಫೇಸ್ ಡೇಟಾ ಕಳ್ಳತನ ಮತ್ತು ಡೀಪ್‌ಫೇಕ್ ಆತಂಕ
ಸ್ವತಃ ಜನರೇ ತಮ್ಮ ಕೈಯಾರೆ ತಾವೇ ಸೈಬರ್ ಕಿರಾತಕರಿಗೆ ತಮ್ಮ ಖಾಸಗಿ ಡಾಟಾ ನೀಡುತ್ತಿದ್ದಾರೆ ಎಂದು ಸೈಬರ್ ಭದ್ರತಾ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಉಚಿತ ಎಐ ಅಪ್ಲಿಕೇಶನ್‌ಗಳಿಗೆ ನೀವು ಅಪ್ಲೋಡ್ ಮಾಡುವ ಹೈ-ರೆಸಲ್ಯೂಶನ್ ಒರಿಜಿನಲ್ ಫೋಟೋಗಳು ನೇರವಾಗಿ ಥರ್ಡ್-ಪಾರ್ಟಿ ಸರ್ವರ್‌ಗಳು ಮತ್ತು ಸೈಬರ್ ವಂಚಕರ ಕೈಸೇರುತ್ತಿವೆ ಅಂತ ಎಚ್ಚರಿಸಿದ್ದಾರೆ..

ಅಡ್ವಾನ್ಸ್ಡ್ ಫೇಸ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನದ ಮೂಲಕ ನಿಮ್ಮ ಫೋಟೋ ಇಟ್ಟುಕೊಂಡು ನಿಮಗೆ ತಿಳಿಯದಂತೆ ಡೇಟಾವನ್ನು ಕದ್ದು, ಅದನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುವ ಅಥವಾ ಡೀಪ್‌ಫೇಕ್ ಅಶ್ಲೀಲ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ಯುವತಿಯರು ಇಂತಹ ಅನಾಮಧೇಯ ಎಐ ಆಪ್‌ಗಳಿಗೆ ತಮ್ಮ ಫೋಟೋಗಳನ್ನು ನೀಡುವ ಮುನ್ನ ನೂರು ಬಾರಿ ಯೋಚಿಸಬೇಕಿದೆ.

ಮೊಬೈಲ್ ಅಕ್ಸೆಸ್ ಪರ್ಮಿಷನ್: ಡಿಜಿಟಲ್ ಐಡೆಂಟಿಟಿಗೆ ಕನ್ನ
80ರ ದಶಕದ ಫೋಟೋ ಎಡಿಟ್ ಮಾಡಿಕೊಳ್ಳುವ ತರಾತುರಿಯಲ್ಲಿ ಸಾರ್ವಜನಿಕರು ಅಪರಿಚಿತ ಆಪ್ ಮತ್ತು ಲಿಂಕ್‌ಗಳನ್ನು ಕ್ಲಿಕ್ ಮಾಡುತ್ತಿರುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೊಸ ಎಐ ಆಪ್ ಡೌನ್ಲೋಡ್ ಮಾಡುವ ಭರದಲ್ಲಿ ಜನರು ಮೊಬೈಲ್‌ನ ಕಾಂಟ್ಯಾಕ್ಟ್ಸ್, ಫೋಟೋ ಗ್ಯಾಲರಿ, ಮೈಕ್ರೋಫೋನ್ ಮತ್ತು ಕ್ಯಾಮೆರಾಗಳಿಗೆ ಕಣ್ಮುಚ್ಚಿ ಪರ್ಮಿಷನ್ ನೀಡುತ್ತಿದ್ದಾರೆ.

ಇದರಿಂದಾಗಿ ನಿಮ್ಮ ಅರಿವಿಲ್ಲದೆಯೇ ಮೊಬೈಲ್‌ನಲ್ಲಿರುವ ಖಾಸಗಿ ವಿಡಿಯೋಗಳು, ಬ್ಯಾಂಕಿಂಗ್ ವಿವರಗಳು ಮತ್ತು ಗೌಪ್ಯ ದಾಖಲೆಗಳು ಸೈಬರ್ ಹ್ಯಾಕರ್‌ಗಳ ಪಾಲಾಗುತ್ತಿವೆ. ಟ್ರೆಂಡಿಂಗ್ ಕ್ರೇಜ್ ಅನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ನಿಮ್ಮ ಡಿಜಿಟಲ್ ಐಡೆಂಟಿಟಿಯನ್ನೇ ಕದಿಯುವ ಹುನ್ನಾರ ನಡೆಸಿದ್ದು, ಯಾವುದೇ ರೀತಿಯ ಅನಾಮಧೇಯ ಲಿಂಕ್ ಅಥವಾ ಸುರಕ್ಷಿತವಲ್ಲದ ಆಪ್‌ಗಳನ್ನು ಬಳಸಬೇಡಿ ಎಂದು ಸೈಬರ್ ಕ್ರೈಮ್ ಪೊಲೀಸರು ಎಚ್ಚರಿಸಿದ್ದಾರೆ.

ಅಗಾಧ ಪ್ರಮಾಣದ ವಿದ್ಯುತ್ ಬಳಕೆ ಮತ್ತು ಸರ್ವರ್ ಮೇಲೆ ಒತ್ತಡ
ಮೊಬೈಲ್ ಪರದೆಯ ಮೇಲೆ ಕೇವಲ 2 ಸೆಕೆಂಡುಗಳಲ್ಲಿ ಉಚಿತವಾಗಿ ಬರುವ ಈ ರೆಟ್ರೋ ಚಿತ್ರಗಳ ಹಿಂದೆ ಪರಿಸರಕ್ಕೆ ಆಗುತ್ತಿರುವ ಹಾನಿ ಊಹಿಸಲೂ ಅಸಾಧ್ಯ. ಒಂದು ಸಾಮಾನ್ಯ ಎಐ ಚಿತ್ರವನ್ನು ಜನರೇಟ್ ಮಾಡಲು 0.01 ರಿಂದ 0.29 ಕಿಲೋವ್ಯಾಟ್‌ನಷ್ಟು ವಿದ್ಯುತ್ ಬೇಕಾಗುತ್ತದೆ.

ಕೋಟ್ಯಂತರ ಬಳಕೆದಾರರು ಒಂದೇ ಸಮಯದಲ್ಲಿ ಮುಗಿಬಿದ್ದಾಗ ದೈತ್ಯ ಜಿಪಿಯು ಸರ್ವರ್‌ಗಳ ಮೇಲೆ ಭಾರೀ ಒತ್ತಡ ಬೀಳುತ್ತದೆ. ಹಿಂದೆ ಘಿಬ್ಲಿ ಟ್ರೆಂಡ್ ವೇಳೆ ಸರ್ವರ್‌ಗಳು ಕ್ರ್ಯಾಶ್ ಆಗಿ, ಸ್ವತಃ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮನ್ ಅವರೇ ಬಳಕೆದಾರರಲ್ಲಿ ಸಂಯಮದಿಂದ ಬಳಸುವಂತೆ ಮನವಿ ಮಾಡಬೇಕಾಯಿತು. ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ವರದಿಯ ಪ್ರಕಾರ, 2030ರ ವೇಳೆಗೆ ಬೃಹತ್ ಎಐ ಡೇಟಾ ಸೆಂಟರ್‌ಗಳ ವಿದ್ಯುತ್ ಬೇಡಿಕೆ ಪ್ರಸ್ತುತಕ್ಕಿಂತ ದುಪ್ಪಟ್ಟಾಗಲಿದೆ.

ಅಂತರ್ಜಲ ಬತ್ತಿಸುತ್ತಿರುವ ಎಐ  
ವಿದ್ಯುತ್ ಬಳಕೆಯ ಜೊತೆಗೆ ಎಐ ತಂತ್ರಜ್ಞಾನದ ಅತಿಭೀಕರ ಮುಖವೆಂದರೆ ಕುಡಿಯುವ ನೀರಿನ ಅಪಾರ ಬಳಕೆ. ಎಐ ಪ್ರೊಸೆಸ್ ಮಾಡುವ ದೈತ್ಯ ಸರ್ವರ್‌ಗಳನ್ನು ನಿರಂತರವಾಗಿ ತಂಪಾಗಿಸಲು ಭೂಮಿಯ ಕೋಟಿಗಟ್ಟಲೆ ಲೀಟರ್ ಶುದ್ಧ ನೀರನ್ನು ಬಳಸಲಾಗುತ್ತಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಕೇವಲ ಜಿಪಿಟಿ-3 ಮಾದರಿಯ ತರಬೇತಿಗಾಗಿ ಬರೋಬ್ಬರಿ 7 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರು ವ್ಯಯವಾಗಿದೆ. ನಾವು ಎಐ ತಂತ್ರಜ್ಞಾನಕ್ಕೆ ನೀಡುವ ಕೇವಲ 20 ರಿಂದ 50 ಫೋಟೋ ಕಮಾಂಡ್‌ಗಳು ಅಥವಾ ಪ್ರಶ್ನೆಗಳಿಗೆ ಅರ್ಧ ಲೀಟರ್ ಶುದ್ಧ ನೀರು ಆವಿಯಾಗಿ ಹೋಗುತ್ತದೆ. ನಿಮ್ಮ 2 ಸೆಕೆಂಡಿನ ಮೋಜು ಭೂಮಿಯ ಅಂತರ್ಜಲವನ್ನು ನಿರಂತರವಾಗಿ ಬತ್ತಿಸುತ್ತಿದ್ದು, ಮುಂಬರುವ ದಿನಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಸುವ ಅಪಾಯವಿದೆ.

ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ 
ಕ್ಷಣಿಕ ಲೈಕ್ಸ್, ಕಾಮೆಂಟ್ಸ್ ಮತ್ತು ಸೋಶಿಯಲ್ ಮೀಡಿಯಾ ಕ್ರೇಜ್‌ಗಾಗಿ ನಾವಿಂದು ನಮ್ಮ ಅಮೂಲ್ಯವಾದ ವೈಯಕ್ತಿಕ ಖಾಸಗಿತನ ಮತ್ತು ಪರಿಸರ ಎರಡನ್ನೂ ಬಲಿಗೊಡುತ್ತಿದ್ದೇವೆ. 'ಮತ್ತೊಬ್ಬರು ಮಾಡಿದರು' ಎಂಬ ಕಾರಣಕ್ಕೆ ಕುರುಡಾಗಿ ಇಂತಹ ಟ್ರೆಂಡ್‌ಗಳ ಬೆನ್ನುಬೀಳುವ ಬದಲು, ನಮ್ಮ ಫೇಸ್ ಡೇಟಾ ಯಾರ ಪಾಲಾಗುತ್ತಿದೆ ಮತ್ತು ಈ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಭೂಮಿಯ ಸಂಪನ್ಮೂಲಗಳು ಹೇಗೆ ಬರಿದಾಗುತ್ತಿವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಡಿಜಿಟಲ್ ಜಗತ್ತಿನಲ್ಲಿ ನಾವು ವಹಿಸುವ ಸಣ್ಣ ಎಚ್ಚರಿಕೆಯ ಹೆಜ್ಜೆಯೇ ನಮ್ಮ ಸೈಬರ್ ಭದ್ರತೆ ಮತ್ತು ಭೂಮಿಯ ರಕ್ಷಣೆಗೆ ಅಡಿಪಾಯ.

ಗಮನದಲ್ಲಿಡಬೇಕಾದ ಸಂಗತಿ

ಕಳೆದ ಕೆಲವು ತಿಂಗಳುಗಳ ಹಿಂದೆ ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ್‌, ಐಶ್ವ ರ್ಯಾ ರೈ, ರಮ್ಯಾ ಸೇರಿದಂತೆ ಹಲವಾರು ನಟಿಯರನ್ನು ಕೆಟ್ಟ ರೀತಿ ಬಿಂಬಿಸುವ  ಫೋಟೋಗಳನ್ನು AI ಮೂಲಕ ಸೃಷ್ಟಿಸಿ ಹಂಚಿಕೊಳ್ಳಲಾಗಿತ್ತು. ಈ ಪ್ರಕರಣಗಳನ್ನು ಭೇದಿಸಿದಾಗ ತಿಳಿದು ಬಂದಿದ್ದು, ವಿದ್ಯಾವಂತರೇ ಇಂತಹ ಕೆಟ್ಟ ಕೆಲಸವನ್ನು ಮಾಡಿದ್ದು. ಹೀಗಾಗಿ, ವಿದ್ಯಾರ್ಥಿಗಳ ಕೈಗೆ ನಿಯಂತ್ರಿಸಲ್ಪಡುವ ತಂತ್ರಜ್ಞಾನವನ್ನು ನೀಡುವುದು ಸೂಕ್ತ. ಅಲ್ಲಿ ಕೇವಲ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳಿದ್ರೆ ಉತ್ತಮ. 

ಒಟ್ಟಿನಲ್ಲಿ ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆದಂತೆ, ಕೆಲವೊಂದಿಷ್ಟು ಉಪಯೋಗಗಳ ಜೊತೆ ಅಷ್ಟೇ ಅಪಾಯವೂ ಕಾದಿದೆ. ಇಂದಿನ AI ಯುಗದಲ್ಲಿ ಬಹಳ ಜಾಗರೂಕತೆಯಿಂದ ನಾವು ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕಕೊಳ್ಳಬೇಕಿದೆ. ಅಲ್ಲದೆ, ಮಕ್ಕಳ ಮೇಲೆ ಪೋಷಕರು ಸದಾ ಒಂದು ಕಣ್ಣಿಟ್ಟು ಅವರು ಸುರಕ್ಷಿತವಾಗಿ AI ಬಳಸುವಂತೆ ನೋಡಿಕೊಳ್ಳುವುದು ತುಂಬಾ ಉತ್ತಮ.

Add Zee News as a Preferred Source
TAGS:
Cyber Crime