• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ನಂದಿನಿ ಹಾಲಿನ ಬೆಲೆ ಏರಿಕೆ ಎಫೆಕ್ಟ್‌: ಮುಟ್ಟಿದ್ರೆ ಸುಡ್ತಾ ಇದೆ ಕಾಫಿ, ಟೀ ಗ್ಲಾಸ್‌!

ನಂದಿನಿ ಹಾಲಿನ ಬೆಲೆ ಏರಿಕೆ ಎಫೆಕ್ಟ್‌: ಮುಟ್ಟಿದ್ರೆ ಸುಡ್ತಾ ಇದೆ ಕಾಫಿ, ಟೀ ಗ್ಲಾಸ್‌!

ರಾಜ್ಯದಲ್ಲೆಡೆ ಕೆಎಂಎಫ್‌ ಹಾಲಿನ ದರ ಲೀಟರ್‌ಗೆ ಏಕಾಏಕಿ 8 ರೂ.ಗಳಷ್ಟು ಹೆಚ್ಚಳವಾಗಿರುವ ಬೆನ್ನಲ್ಲೇ, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹೋಟೆಲ್‌ಗಳಲ್ಲಿ ಕಾಫಿ ಮತ್ತು ಟೀ ಬೆಲೆ 5 ರೂ.ಗಳಷ್ಟು ಏರಿಕೆ ಮಾಡಲಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.

Written ByPuttaraj K Alur
Published: Nov 02, 2026, 03:05 PM IST|Updated: Nov 02, 2026, 03:30 PM IST
joinshare
ನಂದಿನಿ ಹಾಲಿನ ಬೆಲೆ ಏರಿಕೆ ಎಫೆಕ್ಟ್‌: ಮುಟ್ಟಿದ್ರೆ ಸುಡ್ತಾ ಇದೆ ಕಾಫಿ, ಟೀ ಗ್ಲಾಸ್‌!
Image Credit: (Image Credit: AI Image)

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

2

ರಾಮಾಯಣದ ಇಡೀ ಸಂಭಾವನೆಯನ್ನೇ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೇಣಿಗೆ ಕೊಟ್ಟ ಖ್ಯಾತ ನಟ

3

2026 TVS Radeon ಹೊಸ ಬೈಕ್ ಲಾಂಚ್; ಸ್ಟೈಲಿಶ್‌ ಲುಕ್ ಹೊಂದಿರುವ ಇದರ ಬೆಲೆ ಎಷ್ಟು ಗೊತ್ತಾ?

4

ಇಂದು ನೂರಾರು ಕೋಟಿ ಸಂಭಾವನೆ ಪಡೆವ ಐಶ್ವರ್ಯಾ ರೈ ಬಚ್ಚನ್ 1992ರಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತೇ!

5

ಕೇವಲ ₹1.38 ಲಕ್ಷಕ್ಕೆ 350 ಸಿಸಿ ಬೈಕ್! ಸ್ಟೈಲಿಶ್ ಲುಕ್, ಡೈಲಿ ರೈಡ್‌ಗೂ ಸೂಕ್ತವಾದ ಬೈಕ್‌ಗಳಿವು...

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Karnataka Hotel Price Hike: ರಾಜ್ಯದಾದ್ಯಂತ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಾರಂಭಿಸಿದೆ. ತಣ್ಣನೆಯ ಚಳಿಗೆ ಬಿಸಿ ಬಿಸಿ ಕಾಫಿ-ಟೀ ಕುಡಿಯುವುದಕ್ಕೂ ಯೋಚಿಸುವಂತಹ ಪರಿಸ್ಥಿತಿ ಎದುರಾಗಿದೆ. ಕೆಎಂಎಫ್ ಹಾಲಿನ ದರವನ್ನ ಲೀಟರ್‌ಗೆ ಏಕಾಏಕಿ 8 ರೂ.ಗಳಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ, ಹೋಟೆಲ್‌ಗಳಲ್ಲಿ ಒಂದು ಕಪ್ ಕಾಫಿ ಮತ್ತು ಟೀ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಹೋಟೆಲ್‌ಗಳಲ್ಲಿ ಹೊಸ ದರ ಪಟ್ಟಿ ಜಾರಿಗೆ ಬಂದಿದೆ.

5 ರೂ. ಏರಿಕೆಯಾದ ಕಾಫಿ-ಟೀ ಬೆಲೆ!

ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿದ್ದ 15 ರೂ. ಮಿನಿ ಕಾಫಿ ಮತ್ತು ಟೀ ಬೆಲೆ ಈಗ 20 ರೂ.ಗೆ ಏರಿಕೆ ಕಂಡಿದೆ. ಇನ್ನು 20 ರೂ.ರಷ್ಟಿದ್ದ ಫುಲ್‌ ಕಪ್‌ ಕಾಫಿ ಮತ್ತು ಟೀ ಬೆಲೆ ಇದೀಗ 25 ರೂ. ಗಡಿ ತಲುಪಿದೆ. ಇದರಿಂದ ಪ್ರತಿದಿನ ಹೋಟೆಲ್‌ಗಳಲ್ಲಿ ಕಾಫಿ-ಟೀ ಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ.

ಹೋಟೆಲ್ ಮಾಲೀಕರ ಸಂಘದ ಸ್ಪಷ್ಟನೆ

ಟೀ-ಕಾಫಿ ದರದ ಏರಿಕೆ ಕುರಿತು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, "ಸಾಮಾನ್ಯವಾಗಿ ಹಾಲಿನ ದರ ಲೀಟರ್‌ಗೆ 2 ಅಥವಾ 3 ರೂಪಾಯಿ ಹೆಚ್ಚಾದರೆ ನಾವು ಗ್ರಾಹಕರಿಗೆ ಹೊರೆಯಾಗದಂತೆ ಹೋಟೆಲ್ ದರಗಳನ್ನ ಬದಲಾಯಿಸುತ್ತಿರಲಿಲ್ಲ. ಆದರೆ ಹಾಲಿನ ದರದ ಇತಿಹಾಸದಲ್ಲೇ ಮೊದಲ ಬಾರಿಗೆ ಲೀಟರ್‌ಗೆ ಒಮ್ಮೆಲೇ ಬರೋಬ್ಬರಿ 8 ರೂ.ವನ್ನ ಹೆಚ್ಚಿಸಲಾಗಿದೆ. ಇದರಿಂದ ಹೋಟೆಲ್ ಉದ್ಯಮವನ್ನ ತೀವ್ರ ನಷ್ಟದಿಂದ ಉಳಿಸಿಕೊಳ್ಳಲು ಕಾಫಿ, ಟೀ ಬೆಲೆ ಏರಿಸುವುದು ಅನಿವಾರ್ಯವಾಗಿದೆ" ಅಂತಾ ಆರ್ಥಿಕ ಸಂಕಷ್ಟವನ್ನ ಬಿಚ್ಚಿಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ತಿಂಡಿ-ಊಟವೂ ದುಬಾರಿ!

ಕೇವಲ ಹಾಲು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ದಿನಸಿ ಪದಾರ್ಥಗಳಾದ ಅಕ್ಕಿ, ಬೇಳೆಕಾಳುಗಳು, ಖಾದ್ಯ ತೈಲ ಮತ್ತು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಗಳೂ ಸಹ ಗಗನಕ್ಕೇರಿವೆ. ಈ ಎಲ್ಲಾ ಹೆಚ್ಚುವರಿ ವೆಚ್ಚಗಳನ್ನ ಸರಿದೂಗಿಸಲು ಹೋಟೆಲ್ ಮಾಲೀಕರು ಸಜ್ಜಾಗುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇಡ್ಲಿ, ದೋಸೆ, ರೈಸ್ ಬಾತ್ ಸೇರಿದಂತೆ ಇತರೆ  ತಿಂಡಿ ಮತ್ತು ಮಧ್ಯಾಹ್ನದ ಊಟದ ದರಗಳನ್ನೂ ಕೂಡ ಶೇ.5 ರಿಂದ 10ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಹೊಟೇಲ್‌ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.

ದಿನನಿತ್ಯದ ಖರ್ಚಿನ ಮೇಲೂ ಬೆಲೆ ಏರಿಕೆ ಹೊರೆ!

ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವುದು ಹಲವರ ದಿನಚರಿಯ ಭಾಗವಾಗಿದೆ. ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿದಂತೆ ಅನೇಕರು ಪ್ರತಿದಿನ ಹೋಟೆಲ್‌ಗಳಲ್ಲಿ ಕಾಫಿ-ಟೀ ಸೇವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಒಂದು ಕಪ್‌ಗೆ 5 ರೂ. ಹೆಚ್ಚಳವಾಗಿರುವುದು ಗ್ರಾಹಕರ ಖರ್ಚಿನ ಮೇಲೂ ಪರಿಣಾಮ ಬೀರುವಂತಾಗಿದೆ. ಈ ಹಿಂದೆ 15 ರೂ.ಗೆ ಸಿಗುತ್ತಿದ್ದ ಮಿನಿ ಕಾಫಿ ಅಥವಾ ಟೀಗೆ ಈಗ 20 ರೂ. ಪಾವತಿಸಬೇಕಾಗಿದೆ. ಫುಲ್ ಕಪ್‌ಗೆ 20 ರೂ. ನೀಡುತ್ತಿದ್ದವರು ಇನ್ನು 25 ರೂ. ಖರ್ಚು ಮಾಡಬೇಕಿದೆ. ಒಬ್ಬ ವ್ಯಕ್ತಿಗೆ 5 ರೂ. ಹೆಚ್ಚುವರಿ ವೆಚ್ಚವಾಗುವುದು ಸಣ್ಣ ಮೊತ್ತವಾಗಿ ಕಂಡರೂ, ಪ್ರತಿದಿನ ಕಾಫಿ ಅಥವಾ ಟೀ ಕುಡಿಯುವವರಿಗೆ ತಿಂಗಳ ಲೆಕ್ಕದಲ್ಲಿ ಖರ್ಚು ಹೆಚ್ಚಾಗಲಿದೆ.

ಇನ್ನೊಂದೆಡೆ ಹೋಟೆಲ್ ಉದ್ಯಮದಲ್ಲಿಯೂ ವೆಚ್ಚದ ಒತ್ತಡ ಹೆಚ್ಚಾಗಿದೆ. ಹಾಲಿನ ದರದ ಜೊತೆಗೆ ಅಡುಗೆಗೆ ಬಳಸುವ ಅಗತ್ಯ ವಸ್ತುಗಳು ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆಗಳ ಏರಿಕೆಯೂ ಹೋಟೆಲ್‌ಗಳ ನಿರ್ವಹಣಾ ವೆಚ್ಚದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ-ಟೀ ದರ ಹೆಚ್ಚಳದ ಬೆನ್ನಲ್ಲೇ ತಿಂಡಿ ಮತ್ತು ಊಟದ ಬೆಲೆಯಲ್ಲಿಯೂ ಬದಲಾವಣೆ ಮಾಡುವ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಒಟ್ನಲ್ಲಿ ಕಾಫಿ-ಟೀ ಬೆಲೆ ಏರಿಕೆಯೊಂದಿಗೆ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ದರ ಹೆಚ್ಚಳದ ಸಾಧ್ಯತೆಯೂ ಗ್ರಾಹಕರಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹೊಸ ದರಗಳು ಜಾರಿಯಾದರೆ ಹೋಟೆಲ್‌ಗಳಲ್ಲಿ ತಿಂಡಿ-ಊಟ ಸೇವಿಸುವವರ ಖರ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Add Zee News as a Preferred Source
TAGS:
Karnataka Politics