• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತರಾಷ್ಟ್ರೀಯ
  • /ಒಮಾನ್‌ನಲ್ಲಿ ಇಂಡಿಯನ್‌ ಆಯಿಲ್‌ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿ, ಇಬ್ಬರು ನಾವಿಕರು ನಾಪತ್ತೆ

ಒಮಾನ್‌ನಲ್ಲಿ ಇಂಡಿಯನ್‌ ಆಯಿಲ್‌ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿ, ಇಬ್ಬರು ನಾವಿಕರು ನಾಪತ್ತೆ

ಒಮಾನ್‌ನಲ್ಲಿ ಭಾರತೀಯ ತೈಲ ಟ್ಯಾಂಕರ್‌ ಮೇಲೆ ಡ್ರೋನ್‌ ಮೂಲಕ ದಾಳಿ ನಡೆಸಲಾಗಿದ್ದು, ಈ ದಾಳಿಯಲ್ಲಿ ಹಲವರನ್ನು ರಕ್ಷಿಸಲಾಗಿದ್ದು, ಇಬ್ಬರು ಸಿಬ್ಬಂದಿ ನಾಪತ್ತೆ ಆಗಿರುವುದಾಗಿ ವರದಿ ಆಗಿದೆ. ಈ ಸಂಬಂಧ ಶೋಧ ಕಾರ್ಯಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

Written ByYashaswini V
Published: Oct 12, 2026, 09:42 AM IST|Updated: Oct 12, 2026, 09:48 AM IST
joinshare
ಒಮಾನ್‌ನಲ್ಲಿ ಇಂಡಿಯನ್‌ ಆಯಿಲ್‌ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿ, ಇಬ್ಬರು ನಾವಿಕರು ನಾಪತ್ತೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಪ್ರೇಮದ ಊರಲಿ’ ಸಿನಿಮಾದ ತಪಸ್ವಿನಿ ಪೂಣಚ್ಚಗೆ ರಶ್ಮಿಕಾ ಫಿದಾ! ಹೇಳಿದ್ದೇನು ಗೊತ್ತಾ?

ಪ್ರೇಮದ ಊರಲಿ’ ಸಿನಿಮಾದ ತಪಸ್ವಿನಿ ಪೂಣಚ್ಚಗೆ ರಶ್ಮಿಕಾ ಫಿದಾ! ಹೇಳಿದ್ದೇನು ಗೊತ್ತಾ?

2

ಹಿರಿಯೂರು ಉಪಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಟಿಕೆಟ್ ಕದನ! ಹೆಚ್‌ಡಿಕೆ ಜೊತೆ ಚರ್ಚೆಗೆ ಕಮಲ ನಾಯಕರು ಸಜ್ಜು

3

ಒಮಾನ್‌ನಲ್ಲಿ ಇಂಡಿಯನ್‌ ಆಯಿಲ್‌ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿ, ಇಬ್ಬರು ನಾವಿಕರು ನಾಪತ್ತೆ

4

ದಿನ ಭವಿಷ್ಯ 12-10-2026: ಸೋಮವಾರದಂದು ವಿಷ್ಕಂಭ ಯೋಗ.. ಈ ರಾಶಿಯವರು ಜಾಗರೂಕರಾಗಿರಿ!

5

ಸ್ಟಿಂಗ್ ಆಪರೇಷನ್‌ನ ‘ಮಾಂತ್ರಿಕ’ ಯಾರು? ಫೈವ್‌ಸ್ಟಾರ್ ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಒಮಾನ್‌ನ ಸೊಹಾರ್‌ ಕರಾವಳಿಯಲ್ಲಿ ಲಂಗರು ಹಾಕಲಾಗಿದ್ದ ಭಾರತೀಯ ತೈಲ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿ ಒಂಬತ್ತು ಭಾರತೀಯ ನಾವಿಕರನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆ ಆಗಿದ್ದಾರೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಹಾರ್ಮುಜ್‌ ಜಲಸಂಧಿಯಲ್ಲಿ ಸಂಚರಣೆಗೆ ತಡೆ ಉಂಟು ಮಾಡುವ ಹಡಗುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇರಾನ್‌ ನೌಕಾಪಡೆ ಎಚ್ಚರಿಕೆ ನೀಡಿದೆ.

ಭಾರತೀಯ ನಾವಿಕರ ಸುರಕ್ಷತೆ ಬಗ್ಗೆ ಹೆಚ್ಚಿದ ಕಳವಳ:
ಇನ್ನು ಒಮಾನ್‌ ಕರಾವಳಿಯಲ್ಲಿ ಒಟ್ಟು 11 ಭಾರತೀಯ ನಾವಿಕರನ್ನು ಹೊತ್ತು ಸಾಗುತ್ತಿದ್ದ ಭಾರತದ ಎಂಟಿ ಪೆಟ್ರೋ ಡಾಲ್ಫಿನ್‌ ಎಂಬ ಹೆಸರಿನ ತೈಲ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿಯಲ್ಲಿ ಇದುವರೆಗೂ ಒಂಬತ್ತು ನಾವಿಕರನ್ನು ಸೇವ್‌ ಮಾಡಲಾಗಿದ್ದು, ಇಬ್ಬರು ನಾವಿಕರು ನಾಪತ್ತೆಯಾಗಿದ್ದಾರೆ. ನಾಪತ್ತೆ ಆಗಿರುವ ನಾವಿಕರಿಗಾಗಿ ಸ್ಥಳೀಯ ಕರಾವಳಿ ಕಾವಲು ಪಡೆ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಆದಾಗ್ಯೂ, ಭಾರತೀಯ ತೈಲ ಟ್ಯಾಂಕರ್‌ ಗುರಿಯಾಗಿಸಿ ನಡೆಸಿರುವ ಡ್ರೋನ್‌ ದಾಳಿಯು ಭಾರತೀಯ ನಾವಿಕರ ಸುರಕ್ಷತೆ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.

ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೋವಾಲ್‌ ಭಾನುವಾರ ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರ ಈ ರೀತಿ ಬರೆದುಕೊಂಡಿದ್ದಾರೆ.

ಅಕ್ಟೋಬರ್ 11 ರಂದು, 11 ಮಂದಿ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ 'MT PETRO DOLPHIN' ಟ್ಯಾಂಕರ್ ಮೇಲೆ ಸೊಹಾರ್ ಆಂಕೊರೇಜ್ (Sohar Anchorage) ಬಳಿ ಡ್ರೋನ್ ದಾಳಿ ನಡೆಯಿತು.

ನಮ್ಮ ಒಂಬತ್ತು ಮಂದಿ ಭಾರತೀಯ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು ಅವರು ಸುರಕ್ಷಿತವಾಗಿದ್ದಾರೆ; ಆದರೆ, ಇಬ್ಬರು ಭಾರತೀಯ ಪ್ರಜೆಗಳು ಸದ್ಯಕ್ಕೆ ನಾಪತ್ತೆಯಾಗಿದ್ದಾರೆ.

ಸ್ಥಳೀಯ ಕರಾವಳಿ ರಕ್ಷಕ ಪಡೆಯಿಂದ (Coast Guard) ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಚುರುಕಾಗಿ ನಡೆಯುತ್ತಿವೆ. ನಡೆಯುತ್ತಿರುವ ರಕ್ಷಣಾ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡಲು ಹಾಗೂ ನಾಪತ್ತೆಯಾದ ನಮ್ಮ ಸಿಬ್ಬಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ನಾವು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

⚠️ IMPORTANT UPDATE ⚠️ On Oct 11, tanker MT PETRO DOLPHIN, carrying 11 Indian seafarers, was subjected to a drone attack at Sohar Anchorage. While nine of our Indian crew members have been successfully rescued and are safe, two Indian nationals currently remain missing. Search-and-rescue operations are actively underway by the local Coast Guard. We are continuously coordinating with all relevant authorities to fully support the ongoing rescue efforts and ensure every possible action is taken to safely locate our missing personnel.

— Sarbananda Sonowal (@sarbanandsonwal) October 11, 2026

ಒಮಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದಿಸದ್ದಾರೆ.

ಹಾರ್ಮುಜ್‌ನಲ್ಲೂ ಹಡಗುಗಳ ಮೇಲೆ ದಾಳಿ:
ಅಕ್ಟೋಬರ್ 11 ಭಾನುವಾರದ ದಿನ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (IRGC) ನೌಕಾಪಡೆ ಹಾರ್ಮುಜ್‌ ಜಲಸಂಧಿಯಲ್ಲಿ ದೊಡ್ಡ ತೈಲ ಟ್ಯಾಂಕರ್‌ಗಳು ಹಾದುಹೋಗುವುದನ್ನು ತೋರಿಸುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭೂಗಣಿಯೊಂದನ್ನು ಹೊಡೆದು ಸ್ಫೋಟಗೊಂಡ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನಿನ ಕಡೆಯವರು ಮಾಹಿತಿ ನೀಸಿದ್ದಾರೆ.

⚡️JUST IN: An Oil Tanker near Oman has been Struck by Drones According to local sources, the vessel passed through the Strait of Hormuz without Iran's permission and was struck near Oman https://t.co/EINNU0CjGg

— IRAN IRGCC (@IRANIRGCC) October 11, 2026

ಈ ಬಗ್ಗೆ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (IRGC) ಮಾಹಿತಿ ಹಂಚಿಕೊಂಡಿದ್ದು, ಹಡಗು ತನ್‌ ಸಂಚರಣೆ ಮತ್ತು ಸ್ಥಾನೀಕರಣ ವ್ಯವಸ್ಥೆಗಳನ್ನು ಆಫ್‌ ಮಾಡಿತ್ತು. ಅಲ್ಲದೆ, ನಿರ್ಬಂಧಿತ ಮಾರ್ಗದ ಮೂಲಕ ಹಾರ್ಮುಜ್‌ ಜಲಸಂಧಿಯ ಮೂಲಕ ಸಾಗಲು ಪ್ರತ್ನಿಸುತ್ತಿತ್ತು. ಈ ಪ್ರದೇಶದಲ್ಲಿ ತಮ್ಮ ಸಂಚಾರಣೆ ಮತ್ತು ಸ್ಥಾನೀಕರಣ ವ್ಯವಸ್ಥೆಗಳನ್ನು ಆಫ್‌ ಮಾಡುವ ಹಡಗುಗಳನ್ನು ಪ್ರತಿಕೂಲ ಗುರಿಗಳೆಂದು ಪರಿಗಣಿಸಬಹಿಸಿ, ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಇರಾನ್‌ ಪಡೆ ಎಚ್ಚರಿಕೆಯನ್ನೂ ನೀಡಿದೆ. 

Add Zee News as a Preferred Source
TAGS:
World News
India