• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಹಳೆ ನೆನಪುಗಳಿಗೆ ಹೊಸ ರೂಪ, ಪ್ರೇಕ್ಷಕರಿಗೆ ಭರ್ಜರಿ ಮನರಂಜನಾ ರಸದೌತಣ : ಜೀ ಹೊಸ ರಿಯಾಲಿಟಿ ಶೋಗಳ ಧಮಾಕ

ಹಳೆ ನೆನಪುಗಳಿಗೆ ಹೊಸ ರೂಪ, ಪ್ರೇಕ್ಷಕರಿಗೆ ಭರ್ಜರಿ ಮನರಂಜನಾ ರಸದೌತಣ : ಜೀ ಹೊಸ ರಿಯಾಲಿಟಿ ಶೋಗಳ ಧಮಾಕ

ದೇಶದ ಮನರಂಜನಾ ಲೋಕದ ದೈತ್ಯ ಸಂಸ್ಥೆ 'ಜೀ ಎಂಟರ್‌ಟೈನ್‌ಮೆಂಟ್', ತನ್ನ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲು ವಿವಿಧ ಭಾಷೆಗಳಲ್ಲಿ ಹೊಸ ರಿಯಾಲಿಟಿ ಶೋಗಳು, ಅಡುಗೆ ಕಾರ್ಯಕ್ರಮಗಳು ಮತ್ತು ಜನಪ್ರಿಯ ಹಳೆಯ ಶೋಗಳ ಹೊಸ ಸೀಸನ್‌ಗಳನ್ನು ಪರಿಚಯಿಸುವ ಮೂಲಕ ತನ್ನ ನಾನ್-ಫಿಕ್ಕ್ಷನ್ ಪಟ್ಟಿಯನ್ನು ವಿಸ್ತರಿಸಲು ಸಿದ್ಧವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಟಿವಿ ಜೊತೆಗೆ 'ಜೀ5' ಒಟಿಟಿ ವೇದಿಕೆಯಲ್ಲೂ ಪ್ರಸಾರವಾಗಲಿವೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..

Written ByKrishna NK
Published: Oct 21, 2026, 07:46 PM IST|Updated: Oct 21, 2026, 07:48 PM IST
joinshare
ಹಳೆ ನೆನಪುಗಳಿಗೆ ಹೊಸ ರೂಪ, ಪ್ರೇಕ್ಷಕರಿಗೆ ಭರ್ಜರಿ ಮನರಂಜನಾ ರಸದೌತಣ : ಜೀ ಹೊಸ ರಿಯಾಲಿಟಿ ಶೋಗಳ ಧಮಾಕ
Image Credit: Zee Entertainment

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದಸರಾ ರಜೆ ವಿಸ್ತರಣೆ.. ಎಷ್ಟು ದಿನ ಗೊತ್ತೆ?

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದಸರಾ ರಜೆ ವಿಸ್ತರಣೆ.. ಎಷ್ಟು ದಿನ ಗೊತ್ತೆ?

2

ಲಿಪ್‌ ಬಾಮ್‌ ಹಚ್ಚಿದ್ರೂ ತುಟಿಗಳು ಒಣಗುತ್ತಿವೆಯಾ? ನೀವು ಮಾಡುತ್ತಿರುವ ಈ ತಪ್ಪುಗಳೇ ಕಾರಣ!

3

ಮೇಲ್ನೋಟಕ್ಕೆ ಕಾಣುವುದೆಲ್ಲವೂ ಸತ್ಯವಲ್ಲ.. ಗುಬ್ಬಚ್ಚಿಯ ಗೂಡಿನಲ್ಲಿರುವ ವಿಚಿತ್ರ ಮೊಟ್ಟೆಯ ಕಥೆ!

4

ಮುಂದಿನ ದಸರಾ ಜಂಬೂಸವಾರಿಗೆ ಮುನ್ನ 20 ದಿನ ತಾಲೀಮು ಕಡ್ಡಾಯ : ಸಚಿವ ರಾಮಲಿಂಗ ರೆಡ್ಡಿ

5

ಹಳೆ ನೆನಪುಗಳಿಗೆ ಹೊಸ ರೂಪ, ಪ್ರೇಕ್ಷಕರಿಗೆ ಭರ್ಜರಿ ಮನರಂಜನಾ ರಸದೌತಣ : ಜೀ ಹೊಸ ರಿಯಾಲಿಟಿ ಶೋಗಳ ಧಮಾಕ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮುಂಬೈ: ದೇಶದ ಪ್ರಮುಖ ಕಂಟೆಂಟ್ ಮತ್ತು ತಂತ್ರಜ್ಞಾನ ದೈತ್ಯ ಸಂಸ್ಥೆಯಾದ 'ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್' (Zee Entertainment), ವೀಕ್ಷಕರಿಗೆ ವಿಭಿನ್ನ ಮತ್ತು ಕುಟುಂಬ ಸಮೇತ ಆನಂದಿಸಬಹುದಾದ ಮನರಂಜನೆಯನ್ನು ನೀಡುವ ಸಲುವಾಗಿ ತನ್ನ ನಾನ್-ಫಿಕ್ಕ್ಷನ್ (Non-fiction) ಕಾರ್ಯಕ್ರಮಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದೆ. ವಿವಿಧ ಭಾಷೆಗಳಲ್ಲಿ ಹೊಸ ಶೈಲಿಯ ರಿಯಾಲಿಟಿ ಶೋಗಳು, ಮನರಂಜನಾ ಕಾರ್ಯಕ್ರಮಗಳು ಮತ್ತು ಹಳೆಯ ಜನಪ್ರಿಯ ಶೋಗಳ ಹೊಸ ಸೀಸನ್‌ಗಳನ್ನು ತರಲು ಕಂಪನಿ ಸಜ್ಜಾಗಿದೆ.

ಭಾರತೀಯರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಕಥೆಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಜೀ ಸಂಸ್ಥೆಯು ದಶಕಗಳಿಂದ ಮನರಂಜನಾ ಲೋಕದಲ್ಲಿ ಮುಂಚೂಣಿಯಲ್ಲಿದೆ. 'ಡಾನ್ಸ್ ಇಂಡಿಯಾ ಡಾನ್ಸ್' (Dance India Dance) ಮತ್ತು 'ಸರಿಗಮಪ' (Sa Re Ga Ma Pa) ದಂತಹ ಕಾರ್ಯಕ್ರಮಗಳು ಈಗಾಗಲೇ ದೇಶಾದ್ಯಂತ ದೊಡ್ಡ ಯಶಸ್ಸು ಕಂಡಿವೆ. ಈಗ ವೀಕ್ಷಕರ ಅಭಿರುಚಿಗೆ ತಕ್ಕಂತೆ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲು ಜೀ ಮುಂದಾಗಿದೆ.

ಹೊಸ ಕಾರ್ಯಕ್ರಮಗಳ ಪ್ರಮುಖ ಹೈಲೈಟ್ಸ್
ಅಡುಗೆ ಕಾರ್ಯಕ್ರಮಗಳು (Cookery Shows): ಅಡುಗೆ ಪ್ರಿಯರಿಗಾಗಿ ಹಾಗೂ ಹೊಸ ರುಚಿಗಳನ್ನು ಸವಿಯಲು ಇಷ್ಟಪಡುವವರಿಗಾಗಿ ವಿವಿಧ ಭಾಷೆಗಳಲ್ಲಿ ಹೊಸ ಶೋಗಳು ಮೂಡಿಬರಲಿವೆ. ಕನ್ನಡದಲ್ಲಿ ಜನಪ್ರಿಯವಾಗಿರುವ 'ಒಗ್ಗರಣೆ ಡಬ್ಬಿ' (Oogarane Dabbi) ಸೇರಿದಂತೆ ತೆಲುಗಿನಲ್ಲಿ 'ವಾರೆವಾ' (Varewa), ತಮಿಳಿನಲ್ಲಿ 'ಸಮೈಯಲ್ ಎಕ್ಸ್‌ಪ್ರೆಸ್' (Samaiyal Express) ಮತ್ತು ಮರಾಠಿಯಲ್ಲಿ 'ಕಿಚನ್ ಕಲಾಕರ್' (Kitchen Kalakar) ಪ್ರಸಾರವಾಗಲಿವೆ.

ಸೆಲೆಬ್ರಿಟಿ ಟಾಕ್ ಶೋಗಳು: ಜನಪ್ರಿಯ ನಟ ಆರ್. ಮಾಧವನ್ ನಿರೂಪಣೆಯಲ್ಲಿ ಜನಮೆಚ್ಚಿದ 'ಜೀನಾ ಇಸಿ ಕಾ ನಾಮ್ ಹೈ 2.0' (Jeena Isi Ka Naam Hai 2.0) ಶೋ ಮರಳಿ ಬರಲಿದೆ. ಇದು ವಿವಿಧ ಕ್ಷೇತ್ರಗಳ ದಿಗ್ಗಜರ ಜೀವನದ ಕಥೆಗಳನ್ನು ವೀಕ್ಷಕರ ಮುಂದಿಡಲಿದೆ. ಇದರೊಂದಿಗೆ ತೆಲುಗಿನಲ್ಲಿ 'ದಿ ಮೆಗಾ ಮಲ್ಟಿಪ್ಲೆಕ್ಸ್' ಮತ್ತು ತಮಿಳಿನಲ್ಲಿ 'ಲೆಜೆಂಡ್ಸ್' ಶೋಗಳು ಮನರಂಜನೆ ನೀಡಲಿವೆ.

ಗೇಮ್ ಶೋಗಳು ಮತ್ತು ಹಾಸ್ಯ ಕಾರ್ಯಕ್ರಮಗಳು: ಜೀ ಅನ್ಮೋಲ್‌ನಲ್ಲಿ 'ಲಕ್ಷ್ಪತಿ ದಿದಿಯಾ' ಮತ್ತು ಜೀ ಕೇರಳಂನಲ್ಲಿ 'ಜೋಡಿ ನಂ. 1' ಗೇಮ್ ಶೋಗಳು ಪ್ರಸಾರವಾಗಲಿವೆ. ಹಾಗೆಯೇ, ಬಂಗಾಳದಲ್ಲಿ 'ಮಿರಾಕೆಲ್' ಹಾಗೂ ಮರಾಠಿಯಲ್ಲಿ 'ಚಲಾ ಹಾವಾ ಯೇಉ ದ್ಯಾ' ಹೊಸ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ನಗಿಸಲು ಸಿದ್ಧವಾಗಿವೆ.

ಈ ಹೊಸ ಕಾರ್ಯಕ್ರಮಗಳ ಕುರಿತು ಮಾತನಾಡಿರುವ ಜೀ ಎಂಟರ್‌ಟೈನ್‌ಮೆಂಟ್‌ನ ಚೀಫ್‌ ಕಂಟೆಂಟ್‌ ಆಫೀಸರ್‌ ರಾಘವೇಂದ್ರ ಹುಣಸೂರು ಅವರು, ಭಾರತೀಯರ ಮನೆಗಳಲ್ಲಿ ನಮ್ಮ ಧಾರಾವಾಹಿಗಳು ಒಂದು ಅಭ್ಯಾಸವಾಗಿ ಬದಲಾಗಿದ್ದರೆ, ಕಾರ್ಯಕ್ರಮಗಳು ವೀಕ್ಷಕರನ್ನು ಹೆಚ್ಚು ಸೆಳೆಯುತ್ತಿವೆ.. ವೀಕ್ಷಕರು ಹೆಚ್ಚು ಇಷ್ಟಪಟ್ಟಿದ್ದ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಹೊಸ ರೂಪದಲ್ಲಿ ಮರಳಿ ತರಲಾಗುತ್ತಿದೆ. ನಮ್ಮ ಹೊಸ ಕಾರ್ಯಕ್ರಮಗಳು ಟೆಲಿವಿಷನ್ ಹಾಗೂ 'ಜೀ5' (Zee5) ಒಟಿಟಿ ಪ್ಲಾಟ್‌ಫಾರ್ಮ್ ಎರಡರಲ್ಲೂ ಲಭ್ಯವಿರಲಿದ್ದು, ಡಿಜಿಟಲ್ ವೀಕ್ಷಕರಿಗೆ ಹೆಚ್ಚಿನ ಮನರಂಜನೆ ಸಿಗಲಿದೆ.

ಅಷ್ಟೇ ಅಲ್ಲದೆ, ಸಂಗೀತ, ಹಾಸ್ಯ, ರಸಪ್ರಶ್ನೆ ಹಾಗೂ ಟ್ಯಾಲೆಂಟ್‌ ಶೋಗಳ ಮೂಲಕ ಕಳೆದ ಮೂರು ದಶಕಗಳಿಂದ ಭಾರತೀಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಜೀ ಸಂಸ್ಥೆ, ಮುಂದಿನ ದಿನಗಳಲ್ಲಿ ಇಡೀ ಜಗತ್ತಿಗೆ ಭಾರತೀಯ ಮನರಂಜನೆಯ ಹೊಸ ರೂಪವನ್ನು ಪರಿಚಯ ಮಾಡಿಕೊಡಲಿದೆ ಎಂದು ವಿವರಿಸಿದರು.

ಒಟ್ಟಾರೆಯಾಗಿ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮಗಳೆರಡರಲ್ಲೂ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಜೀ ಸಂಸ್ಥೆಯು ಅತ್ಯಾಕರ್ಷಕ ಕಾರ್ಯಕ್ರಮಗಳ ದೊಡ್ಡ ಪಟ್ಟಿಯನ್ನೇ ತರುತ್ತಿದ್ದು, ಇದು ಭಾರತೀಯ ಮನರಂಜನಾ ಲೋಕದಲ್ಲಿ ಹೊಸ ಸಂಚಲನ ಮೂಡಿಸುವುದು ಖಂಡಿತ.

Add Zee News as a Preferred Source
TAGS:
TV