• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮುಂದಿನ ದಸರಾ ಜಂಬೂಸವಾರಿಗೆ ಮುನ್ನ 20 ದಿನ ತಾಲೀಮು ಕಡ್ಡಾಯ : ಸಚಿವ ರಾಮಲಿಂಗ ರೆಡ್ಡಿ

ಮುಂದಿನ ದಸರಾ ಜಂಬೂಸವಾರಿಗೆ ಮುನ್ನ 20 ದಿನ ತಾಲೀಮು ಕಡ್ಡಾಯ : ಸಚಿವ ರಾಮಲಿಂಗ ರೆಡ್ಡಿ

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ 'ಸೋಮಣ್ಣ' ಆನೆ ಬೆದರಿ ಓಡಿದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗ ರೆಡ್ಡಿ ಅವರು, ಮುಂದಿನ ವರ್ಷದಿಂದ ಇಂತಹ ಅಚಾತುರ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Written ByKrishna NK
Published: Oct 21, 2026, 08:00 PM IST|Updated: Oct 21, 2026, 08:04 PM IST
joinshare
ಮುಂದಿನ ದಸರಾ ಜಂಬೂಸವಾರಿಗೆ ಮುನ್ನ 20 ದಿನ ತಾಲೀಮು ಕಡ್ಡಾಯ : ಸಚಿವ ರಾಮಲಿಂಗ ರೆಡ್ಡಿ
Image Credit: Ramalinga Reddy Shivamogga news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ದ್ವೇಷ ಮರೆತು ಸಾಮರಸ್ಯ ಬೆಳೆಸೋಣ, ರೈತ-ಯುವಕರ ಬದುಕು ಬೆಳಗಲಿ : ಸಿಎಂ ಡಿ.ಕೆ. ಶಿವಕುಮಾರ್

ದ್ವೇಷ ಮರೆತು ಸಾಮರಸ್ಯ ಬೆಳೆಸೋಣ, ರೈತ-ಯುವಕರ ಬದುಕು ಬೆಳಗಲಿ : ಸಿಎಂ ಡಿ.ಕೆ. ಶಿವಕುಮಾರ್

2

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದಸರಾ ರಜೆ ವಿಸ್ತರಣೆ.. ಎಷ್ಟು ದಿನ ಗೊತ್ತೆ?

3

ಲಿಪ್‌ ಬಾಮ್‌ ಹಚ್ಚಿದ್ರೂ ತುಟಿಗಳು ಒಣಗುತ್ತಿವೆಯಾ? ನೀವು ಮಾಡುತ್ತಿರುವ ಈ ತಪ್ಪುಗಳೇ ಕಾರಣ!

4

ಮೇಲ್ನೋಟಕ್ಕೆ ಕಾಣುವುದೆಲ್ಲವೂ ಸತ್ಯವಲ್ಲ.. ಗುಬ್ಬಚ್ಚಿಯ ಗೂಡಿನಲ್ಲಿರುವ ವಿಚಿತ್ರ ಮೊಟ್ಟೆಯ ಕಥೆ!

5

ಮುಂದಿನ ದಸರಾ ಜಂಬೂಸವಾರಿಗೆ ಮುನ್ನ 20 ದಿನ ತಾಲೀಮು ಕಡ್ಡಾಯ : ಸಚಿವ ರಾಮಲಿಂಗ ರೆಡ್ಡಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿ ಓಡಿದ ಘಟನೆ ಹಿನ್ನೆಲೆಯಲ್ಲಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗ ರೆಡ್ಡಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮುಂದಿನ ವರ್ಷದಿಂದ ದಸರಾ ಜಂಬೂಸವಾರಿ ನಡೆಸುವ ಮೊದಲು ಆನೆಗಳಿಗೆ ಕನಿಷ್ಠ 20 ದಿನಗಳಿಂದ ಒಂದು ತಿಂಗಳವರೆಗೆ ನುರಿತ ಮಾವುತರು ಹಾಗೂ ಕಾವಾಡಿಗರ ನೇತೃತ್ವದಲ್ಲಿ ಕಡ್ಡಾಯವಾಗಿ ತಾಲೀಮು ನಡೆಸುವ ವ್ಯವಸ್ಥೆ ಕಲ್ಪಿಸುವಂತೆ ಅರಣ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ನಡೆದ ಅಚಾತುರ್ಯದ ಕುರಿತು ಸಚಿವ ರಾಮಲಿಂಗ ರೆಡ್ಡಿ ಅವರು ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಘಟನೆಯ ವಿವರಗಳನ್ನು ಪಡೆದುಕೊಂಡರು.

ಜಂಬೂಸವಾರಿ ವೇಳೆ ಆನೆ ಬೆದರಿ ಓಡಲು ಕಾರಣವೇನು? ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿತ್ತೇ? ಸಾರ್ವಜನಿಕರಿಗೆ ಯಾವುದೇ ತೊಂದರೆ ಅಥವಾ ಅಪಾಯ ಉಂಟಾಗಿದೆಯೇ? ಆನೆ ಓಡಿದ ಸಂದರ್ಭದಲ್ಲಿ ವಾಹನಗಳಿಗೆ ಎಷ್ಟು ಹಾನಿಯಾಗಿದೆ? ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆದರು.

ದಸರಾ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಉತ್ಸವಗಳಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಮುಂಚಿತವಾಗಿಯೇ ಸೂಕ್ತ ತರಬೇತಿ ನೀಡುವುದು ಅತ್ಯಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಜಂಬೂಸವಾರಿ ನಡೆಸುವ ಮೊದಲು ಕನಿಷ್ಠ 20 ದಿನಗಳಿಂದ ಒಂದು ತಿಂಗಳವರೆಗೆ ನುರಿತ ಮಾವುತರು ಮತ್ತು ಕಾವಾಡಿಗರ ಮೂಲಕ ಆನೆಗಳಿಗೆ ನಿರಂತರ ತಾಲೀಮು ನೀಡಬೇಕು.

ಜನಸಂದಣಿ, ವಾದ್ಯಗಳ ಸದ್ದು, ಮೆರವಣಿಗೆಯ ವಾತಾವರಣ ಹಾಗೂ ಇತರ ಸಂದರ್ಭಗಳಿಗೆ ಆನೆಗಳನ್ನು ಸಿದ್ಧಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು
ಎಂದು ನಿರ್ದೇಶನ ನೀಡಿದರು.

ದಸರಾ ಜಂಬೂಸವಾರಿ ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮವಷ್ಟೇ ಅಲ್ಲ; ಇದು ಜನರ ಭಾವನೆ, ಸಂಪ್ರದಾಯ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಮಹತ್ವದ ಆಚರಣೆಯಾಗಿದೆ. ಇಂತಹ ಸಂದರ್ಭದಲ್ಲಿ ಆನೆಗಳು ಬೆದರಿ ಓಡುವುದು ಅಥವಾ ಮೆರವಣಿಗೆ ಸ್ಥಗಿತಗೊಳ್ಳುವಂತಹ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುವುದರ ಜೊತೆಗೆ ಜನರ ಭಾವನೆಗಳಿಗೂ ಧಕ್ಕೆಯುಂಟುಮಾಡಬಹುದು.ಹೀಗಾಗಿ, ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯಗಳು ಮರುಕಳಿಸದಂತೆ ಅಧಿಕಾರಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು 
ಎಂದು ಸೂಚನೆ ನೀಡಿದರು.

ಆನೆಗಳ ಆರೋಗ್ಯ, ಮಾನಸಿಕ ಸ್ಥಿತಿ, ತರಬೇತಿ, ಜನಸಂದಣಿ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಜಂಬೂಸವಾರಿಗೆ ನಿಯೋಜಿಸುವ ಪ್ರತಿಯೊಂದು ಆನೆಯ ಸಾಮರ್ಥ್ಯ ಮತ್ತು ಸಿದ್ಧತೆಯನ್ನು ಸಮರ್ಪಕವಾಗಿ ಪರಿಶೀಲಿಸಿದ ಬಳಿಕವೇ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಘಟನೆ ಹಿನ್ನೆಲೆ : ಶಿವಮೊಗ್ಗದಲ್ಲಿ ಜಂಬೂಸವಾರಿ ಮೆರವಣಿಗೆಯ ವೇಳೆ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ 'ಸೋಮಣ್ಣ' ಎಂಬ ಆನೆ ಏಕಾಏಕಿ ಹೆದರಿ ದಿಕ್ಕಾಪಾಲಾಗಿ ಓಡಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಗರದ ಐತಿಹಾಸಿಕ ಕೋಟೆ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ಆರಂಭವಾದ ಜಂಬೂಸವಾರಿಯು ಅಲ್ಲಮಪ್ರಭು ಮೈದಾನದವರೆಗೆ ಸಾಗಬೇಕಿತ್ತು. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮೆರವಣಿಗೆ ಸಾಗುತ್ತಿದ್ದಾಗ, ಬೆಳ್ಳಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಯಾವುದೋ ಸದ್ದು ಅಥವಾ ಜನಸ್ತೋಮದಿಂದ ವಿಚಲಿತಗೊಂಡು ಇದ್ದಕ್ಕಿದ್ದಂತೆ ಹೆದರಿ ಓಡಲು ಆರಂಭಿಸಿತು.

ಆನೆ ಓಡುತ್ತಿದ್ದಂತೆ ರಸ್ತೆ ಬದಿ ನಿಂತಿದ್ದ ಸಾರ್ವಜನಿಕರು ಪ್ರಾಣಭಯದಿಂದ ಓಡಿದರು. ಆನೆ ಓಡಿದ ರಭಸಕ್ಕೆ ರಸ್ತೆ ಬದಿ ನಿಲ್ಲಿಸಲಾಗಿದ್ದ ಒಂದು ಕಾರು ಹಾಗೂ 2-3 ಬೈಕ್‌ಗಳಿಗೆ ಹಾನಿಯಾಗಿದೆ. ಅಲ್ಲದೆ, ಆನೆಯ ಮೇಲಿದ್ದ ಚಾಮುಂಡೇಶ್ವರಿ ದೇವಿಯ ಬೆಳ್ಳಿ ಅಂಬಾರಿ ಕೆಳಗೆ ಬಿದ್ದು ಹಾನಿಗೊಂಡಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಆನೆಯನ್ನು ನಿಯಂತ್ರಿಸಲು ಮಾವುತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇದ್ದಾಗ ಅರಿವಳಿಕೆ ಮದ್ದು ನೀಡಿ ಆನೆಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಯಿತು. ಬಳಿಕ ಆನೆ ಸಹಜ ಸ್ಥಿತಿಗೆ ಮರಳಿತು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಬಾರಿ ಹಲವು ವರ್ಷಗಳಿಂದ ಅಂಬಾರಿ ಹೊರುತ್ತಿದ್ದ 'ಸಾಗರ' ಆನೆಯ ಬದಲಿಗೆ, ಮೊದಲ ಬಾರಿಗೆ 'ಸೋಮಣ್ಣ' ಆನೆಗೆ ಬೆಳ್ಳಿ ಅಂಬಾರಿ ಹೊತ್ತು ಸಾಗುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಈ ಅನಿರೀಕ್ಷಿತ ಘಟನೆಯಿಂದ ದಸರಾ ಸಂಭ್ರಮ ಕೆಲಕಾಲ ಆತಂಕಕ್ಕೆ ತಿರುಗುವಂತಾಯಿತು.

Add Zee News as a Preferred Source
TAGS:
Kannada News