• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದಸರಾ ರಜೆ ವಿಸ್ತರಣೆ.. ಎಷ್ಟು ದಿನ ಗೊತ್ತೆ?

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದಸರಾ ರಜೆ ವಿಸ್ತರಣೆ.. ಎಷ್ಟು ದಿನ ಗೊತ್ತೆ?

ಕರಾವಳಿಯ ವಿಜೃಂಭಣೆಯ ದಸರಾ ಹಬ್ಬದ ಮೆರವಣಿಗೆ ಹಾಗೂ ಪೋಷಕರ ಮನವಿಯನ್ನು ಪರಿಗಣಿಸಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಹಬ್ಬವನ್ನ ಮುಗಿಸಿ ಊರಿಗೆ ಮರಳಲು ಹಾಗೂ ಶಾಲೆಗೆ ಹಾಜರಾಗಲು ಆಗುವ ತೊಂದರೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 21, 2026, 08:52 PM IST|Updated: Oct 21, 2026, 09:01 PM IST
joinshare
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದಸರಾ ರಜೆ ವಿಸ್ತರಣೆ.. ಎಷ್ಟು ದಿನ ಗೊತ್ತೆ?
Image Credit: Karnataka Dasara Holiday

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಷೇರು ಮಾರುಕಟ್ಟೆಯಲ್ಲಿ AI ಕ್ರಾಂತಿ : ಹೂಡಿಕೆದಾರರಿಗೆ ಈ ತಂತ್ರಜ್ಞಾನ ನಿಜಕ್ಕೂ ಸಹಕಾರಿಯೇ?

ಷೇರು ಮಾರುಕಟ್ಟೆಯಲ್ಲಿ AI ಕ್ರಾಂತಿ : ಹೂಡಿಕೆದಾರರಿಗೆ ಈ ತಂತ್ರಜ್ಞಾನ ನಿಜಕ್ಕೂ ಸಹಕಾರಿಯೇ?

2

ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮಹತ್ವದ ಸಭೆ : ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರದ ಹೆಜ್ಜೆ

3

ಮನೆಯ ಮುಂದೆ ನಿಂಬೆ ಮರ ಇರುವುದು ಒಳ್ಳೆಯದೇ

4

ದ್ವೇಷ ಮರೆತು ಸಾಮರಸ್ಯ ಬೆಳೆಸೋಣ, ರೈತ-ಯುವಕರ ಬದುಕು ಬೆಳಗಲಿ : ಸಿಎಂ ಡಿ.ಕೆ. ಶಿವಕುಮಾರ್

5

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದಸರಾ ರಜೆ ವಿಸ್ತರಣೆ.. ಎಷ್ಟು ದಿನ ಗೊತ್ತೆ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಂಗಳೂರು: ಸಾಲು ಸಾಲು ದಸರಾ ರಜೆಗಳ ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಘೋಷಿಸಲಾಗಿದ್ದ ರಜೆಯನ್ನು ಮುಂದುವರಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಕ್ಟೋಬರ್ 22ರ ಗುರುವಾರದಂದು ಕೂಡ ರಜೆ ನೀಡಿ ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ರಜೆ ವಿಸ್ತರಣೆಗೆ ಕಾರಣವೇನು?
ಕರಾವಳಿ ಭಾಗದಲ್ಲಿ ಐತಿಹಾಸಿಕ ಹಾಗೂ ವಿಜೃಂಭಣೆಯ ದಸರಾ ಹಬ್ಬವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗುತ್ತದೆ. ದಸರಾ ಹಬ್ಬದ ಪೂಜೆ ಹಾಗೂ ಬೃಹತ್ ಶೋಭಾಯಾತ್ರೆ ಅಥವಾ ಮೆರವಣಿಗೆಯು ಅಂತಿಮ ದಿನದಂದು ತಡರಾತ್ರಿಯವರೆಗೆ ವಿಜೃಂಭಣೆಯಿಂದ ನಡೆಯುತ್ತದೆ. ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಕೇವಲ ಹಿರಿಯರಷ್ಟೇ ಅಲ್ಲದೆ, ಅಸಂಖ್ಯ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಪೋಷಕರು ಕೂಡ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

ಹಬ್ಬದ ರಜೆಗಳ ನಿಮಿತ್ತ ದೂರದ ಊರುಗಳಿಗೆ ಅಥವಾ ಪ್ರವಾಸಿ ತಾಣಗಳಿಗೆ ತೆರಳಿರುವ ಮಕ್ಕಳು ಮತ್ತು ಅವರ ಪೋಷಕರು ವಾಪಸ್ ತಮ್ಮ ಸ್ವಗ್ರಾಮಗಳಿಗೆ ಅಥವಾ ವಾಸಸ್ಥಳಕ್ಕೆ ತಲುಪುವುದು ತಡವಾಗುತ್ತದೆ. ಹೀಗಿರುವಾಗ, ಅಂತಿಮ ದಿನದ ರಾತ್ರಿ ಮೆರವಣಿಗೆಯಲ್ಲಿ ಭಾಗವಹಿಸಿ ಮನೆಗೆ ತಲುಪಿದ ಮರುದಿನವೇ ಅಂದರೆ ಅಕ್ಟೋಬರ್ 22ರಂದು ಎಂದಿನಂತೆ ಶಾಲೆಗಳು ಪುನಾರಂಭಗೊಂಡರೆ, ಮಕ್ಕಳಿಗೆ ಬೆಳಿಗ್ಗೆಯೇ ಶಾಲೆಗೆ ಹಾಜರಾಗುವುದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಕಷ್ಟವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ದಸರಾ ರಜೆಯನ್ನು ಮತ್ತಷ್ಟು ದಿನ ವಿಸ್ತರಿಸಬೇಕು ಎಂದು ಅನೇಕ ಪೋಷಕರು ಹಾಗೂ ಸಾರ್ವಜನಿಕರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮತ್ತು ನೇರವಾಗಿ ಮನವಿ ಮಾಡಿಕೊಂಡಿದ್ದರು.

ಪೋಷಕರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ
ಸಾರ್ವಜನಿಕರು ಮತ್ತು ಪೋಷಕರ ಕೂಗಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಕ್ಕಳ ಆರೋಗ್ಯ ಹಾಗೂ ಅನುಕೂಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹತ್ವದ ತೀರ್ಮಾನ ಕೈಗೊಂಡಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 21ರವರೆಗೆ ಮಾತ್ರ ನಿಗದಿಯಾಗಿದ್ದ ದಸರಾ ರಜೆಯನ್ನು, ಹೆಚ್ಚುವರಿಯಾಗಿ ಒಂದು ದಿನ ಅಂದರೆ ಅಕ್ಟೋಬರ್ 22ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ಮಕ್ಕಳಿಗೆ ರಜೆ ನೀಡಿರುವುದರಿಂದ ಪಾಠ-ಪ್ರವಚನಗಳಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ನೋಡಿಕೊಳ್ಳಲು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚುವರಿಯಾಗಿ ಘೋಷಿಸಲಾದ ಈ ಒಂದು ದಿನದ ರಜೆ ಅವಧಿಯನ್ನು ಮುಂದಿನ ದಿನಗಳಲ್ಲಿ ವಿಶೇಷ ತರಗತಿಗಳ ಮೂಲಕ ಅಥವಾ ರಜಾ ದಿನಗಳಲ್ಲಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ಸರಿದೂಗಿಸಿ ಕ್ರಮವಹಿಸುವಂತೆ ಎಲ್ಲಾ ಶಾಲೆಗಳ ಮುಖ್ಯೋಪಧ್ಯಾಯರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಒಟ್ಟಾರೆಯಾಗಿ, ಹೆಚ್ಚುವರಿ ರಜೆಯ ಸಿಹಿಸುದ್ದಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮಕ್ಕಳಿಗೆ ಹಬ್ಬದ ಖುಷಿಯನ್ನು ಮತ್ತಷ್ಟು ದಿನಗಳ ಕಾಲ ಆನಂದಿಸಲು ಸುಸಾವಕಾಶ ಸಿಕ್ಕಂತಾಗಿದೆ.

Add Zee News as a Preferred Source
TAGS:
Kannada News