SOCIAL MEDIA

Newsletter

PARTNER SITES
Select Language Select State

ಬಿಗ್‌ ಬಾಸ್‌ ಮನೆಯಲ್ಲಿ ಸೌಂದರ್ಯ ಯಶಸ್‌ ವರ್ತನೆಗೆ ವೀಕ್ಷಕರ ಆಕ್ರೋಶ!

Bigg Boss Kannada 13: ಬಿಗ್ ಬಾಸ್ ಕನ್ನಡ 13ರ ಮನೆಯಲ್ಲಿ ಯಶಸ್ ಕೃಷ್ಣ, ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ನಡುವಿನ ಸಂಬಂಧದ ವಿಚಾರ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಇದೀಗ ಯಶಸ್ ಹಾಗೂ ಸೌಂದರ್ಯ ನಡುವಿನ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Written By Chetana Devarmani
Published: Oct 07, 2026, 10:44 PM IST | Updated: Oct 07, 2026, 10:47 PM IST
Join

‘ಬಿಗ್ ಬಾಸ್ ಕನ್ನಡ 13’ರಲ್ಲಿ ಕನ್ನಡ ಕಿರುತೆರೆ ನಟ ಯಶಸ್ ಕೃಷ್ಣ ಹಾಗೂ ‘ಸ್ಪ್ಲಿಟ್ಸ್‌ವಿಲ್ಲಾ’ ಖ್ಯಾತಿಯ ಸೌಂದರ್ಯ ಶೆಟ್ಟಿ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಆರಂಭದಿಂದಲೂ ಇವರಿಬ್ಬರ ನಡುವಿನ ಬಾಂಧವ್ಯ ವೀಕ್ಷಕರ ಗಮನ ಸೆಳೆದಿದೆ. ಮತ್ತೊಂದೆಡೆ, ಯಶಸ್ ಹಾಗೂ ಆಸಿಯಾ ನಡುವಿನ ಸ್ನೇಹದ ಬಗ್ಗೆಯೂ ಮನೆಯೊಳಗೆ ಮತ್ತು ಹೊರಗೆ ಚರ್ಚೆ ನಡೆಯುತ್ತಿದೆ.

ಆಸಿಯಾ ಈಗಾಗಲೇ ಯಶಸ್ ತಮ್ಮ ಪಾಲಿಗೆ ಬ್ರದರ್ ರೀತಿಯವರು ಎಂದು ಹೇಳಿಕೊಂಡಿದ್ದಾರೆ. ಆದರೆ ಯಶಸ್ ಹಾಗೂ ಆಸಿಯಾ ನಡುವಿನ ಆತ್ಮೀಯತೆ ಸೌಂದರ್ಯಗೆ ಇಷ್ಟವಾಗುತ್ತಿಲ್ಲ ಎಂಬ ಮಾತುಗಳು ಬಿಗ್ ಬಾಸ್ ಮನೆಯ ಕೆಲವು ಸಂದರ್ಭಗಳಲ್ಲಿ ಕೇಳಿಬಂದಿವೆ. ಈ ನಡುವೆ ಯಶಸ್ ಬಗ್ಗೆ ಸೌಂದರ್ಯ ಮಾಡಿರುವ ಕೆಲವು ಕಾಮೆಂಟ್‌ಗಳೂ ಚರ್ಚೆಗೆ ಕಾರಣವಾಗಿದ್ದವು. ಇದೀಗ ಈ ಎಲ್ಲದರ ನಡುವೆ ನಡೆದಿರುವ ಮತ್ತೊಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸೌಂದರ್ಯ ಅವರು ಯಶಸ್ ಅವರ ಎಡಗೈಗೆ ಕಚ್ಚುತ್ತಿರುವ ದೃಶ್ಯ ಕಾಣಿಸಿಕೊಂಡಿದೆ. ಅದಕ್ಕೆ ಪ್ರತಿಯಾಗಿ ಯಶಸ್ ಕೂಡ ಸೌಂದರ್ಯ ಅವರನ್ನು ಕಚ್ಚಲು ಪ್ರಯತ್ನಿಸಿರುವುದು ವಿಡಿಯೋದಲ್ಲಿದೆ.

ಬಿಗ್ ಬಾಸ್ ಮನೆಯ ಲೈವ್ ಪ್ರಸಾರದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿರುವ ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಕೆಲ ವೀಕ್ಷಕರು ಇಬ್ಬರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೆಲವರು ಕಾಮೆಂಟ್ ಮಾಡುತ್ತಾ, “ಇಷ್ಟೆಲ್ಲಾ ಕಾಂಪ್ಲಿಕೇಷನ್ಸ್ ಯಾಕೆ? ನಂಗೆ ನೀನು ಇಷ್ಟ ಎಂದು ಸೌಂದರ್ಯ ನೇರವಾಗಿ ಹೇಳಬಹುದಿತ್ತು. ಸುಮ್ಮನೆ ಕಾಂಪ್ಲಿಕೇಟ್ ಮಾಡಿ ಇಬ್ಬರೂ ಗಬ್ಬು ಎಬ್ಬಿಸಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬ ನೆಟ್ಟಿಗರು, “ಅದು ಲವ್ ಬೈಟ್ ಅನ್ನೋದಕ್ಕಿಂತ ಹೆಚ್ಚಾಗಿ ಡಾಗ್ ಬೈಟ್ ಆಗಿತ್ತು” ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

ಇದೇ ವೇಳೆ, ಸೌಂದರ್ಯ ಬಗ್ಗೆ ಯಶಸ್ ಬಳಸಿದ್ದರೆನ್ನಲಾದ ಕೆಲವು ಕಠಿಣ ಪದಗಳಿರುವ ಹಳೆಯ ವಿಡಿಯೋ ಕೂಡ ಇದೀಗ ಮತ್ತೆ ವೈರಲ್ ಆಗುತ್ತಿದೆ. ವಿಶೇಷವಾಗಿ “ನಿನ್ನ ಮುಖ ನಾಯಿ ನೆಕ್ಕ” ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದೆ. ಯಶಸ್ ಹೀಗೆ ಹೇಳಿದ್ದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಬಿಗ್ ಬಾಸ್ ಮನೆಯಲ್ಲೇ ಮಂಜ ಅವರು ಯಶಸ್‌ಗೆ ‘ಸ್ತ್ರೀ ವ್ಯಾಮೋಹ’ ಇದೆ ಎಂದು ಹೇಳಿರುವ ವಿಚಾರವೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, “ಸ್ತ್ರೀ ವ್ಯಾಮೋಹ ಇದ್ದಿದ್ದರೆ ಯಾವ ಹುಡುಗಿಯರೂ ಅವರ ಬಳಿ ಹೋಗುತ್ತಿರಲಿಲ್ಲ. ಯಶಸ್ ಬಳಿ ಎಲ್ಲ ಹುಡುಗಿಯರೂ ಸೇಫ್ ಫೀಲ್ ಮಾಡುತ್ತಿದ್ದಾರೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಸೌಂದರ್ಯ ವಿರುದ್ಧವೂ ಕೆಲ ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. “ಯಶಸ್ ತನ್ನ ಪಾಡಿಗೆ ತಾನಿದ್ದರೂ ಸೌಂದರ್ಯ ಬಿಡುತ್ತಿಲ್ಲ”, “ಎಲ್ಲರ ಮುಂದೆ ಯಶಸ್‌ ಕ್ಯಾರೆಕ್ಟರ್ ಹಾಳು ಮಾಡುವುದು, ಹಿಂದೆ ಅಟೆನ್ಷನ್‌ಗಾಗಿ ಆಟವಾಡುವುದು” ಎಂಬ ರೀತಿಯ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಇನ್ನು ಕೆಲವರು ಮುಂದಿನ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಈ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ. ಯಶಸ್–ಸೌಂದರ್ಯ–ಆಸಿಯಾ ನಡುವಿನ ಈ ಟ್ರಯಾಂಗಲ್‌ ಇದೀಗ ಬಿಗ್ ಬಾಸ್ ವೀಕ್ಷಕರಿಗೂ ಕುತೂಹಲದ ವಿಷಯವಾಗಿದ್ದು, ವೀಕೆಂಡ್‌ನಲ್ಲಿ ಸುದೀಪ್ ಈ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಸದ್ಯದ ಕುತೂಹಲ.

 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES