SOCIAL MEDIA

Newsletter

PARTNER SITES
Select Language Select State

‘ನಾನು ಮದುವೆಯಾಗಿಲ್ಲ ಅಂದಿದ್ರೆ ಕಾವ್ಯ ನನ್ನ ಪತಿಯನ್ನೇ ಮದುವೆಯಾಗ್ತಿದ್ರಂತೆ’: ನಟಿ ಸಂಗೀತಾ ಭಟ್

ಕಾವ್ಯ ಗೌಡ ಅವರು ಸುದರ್ಶನ್ ಅವರನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ ವಿಚಾರಕ್ಕೆ ಸಂಗೀತಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ತಮ್ಮ ಪತಿಯ ವ್ಯಕ್ತಿತ್ವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Written By Chetana Devarmani
Published: Oct 15, 2026, 04:59 PM IST | Updated: Oct 15, 2026, 05:01 PM IST
Join

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ವೀಕ್ಷಕರ ಗಮನ ಸೆಳೆದ ನಟಿ ಸಂಗೀತಾ ಭಟ್ ತಮ್ಮ ಪತಿ ಸುದರ್ಶನ್ ರಂಗಪ್ರಸಾದ್ ಹಾಗೂ ನಟಿ ಕಾವ್ಯ ಗೌಡ ನಡುವಿನ ಆತ್ಮೀಯತೆಯ ಕುರಿತು ಮಾತನಾಡಿದ್ದಾರೆ. ಕಾವ್ಯ ಗೌಡ ಅವರು ಸುದರ್ಶನ್ ಅವರನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ ವಿಚಾರಕ್ಕೆ ಸಂಗೀತಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ತಮ್ಮ ಪತಿಯ ವ್ಯಕ್ತಿತ್ವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 13 ಮನೆಯಿಂದ ಹೊರಬಂದ ಬಳಿಕ ಸಂಗೀತಾ ಭಟ್ ನೀಡಿರುವ ಸಂದರ್ಶನದಲ್ಲಿ ತಮ್ಮ ಮನೆಯ ಅನುಭವಗಳು, ಸಹ ಸ್ಪರ್ಧಿಗಳೊಂದಿಗಿನ ಸ್ನೇಹ, ಪತಿಯೊಂದಿಗಿನ ಬಾಂಧವ್ಯ ಹಾಗೂ ಮುಂದಿನ ಸಿನಿಮಾ ಯೋಜನೆಗಳ ಕುರಿತು ಮಾತನಾಡಿದ್ದಾರೆ. ಈ ವೇಳೆ ಕಾವ್ಯ ಗೌಡ ಅವರ ಹೇಳಿಕೆಯ ಬಗ್ಗೆಯೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕಲರ್ಸ್ ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಕಾವ್ಯ ಗೌಡ ಅವರು ಸುದರ್ಶನ್ ರಂಗಪ್ರಸಾದ್ ಅವರೊಂದಿಗೆ ನಟಿಸಿದ್ದರು. ಈ ಸಂದರ್ಭದಲ್ಲಿ ಸುದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ಹೊಂದಿದ್ದ ಕಾವ್ಯ, ಸಂಗೀತಾ ಅವರನ್ನು ಮದುವೆಯಾಗಿರದಿದ್ದರೆ ತಾವೇ ಸುದರ್ಶನ್ ಅವರನ್ನು ಮದುವೆಯಾಗುತ್ತಿದ್ದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಈ ವಿಚಾರದ ಬಗ್ಗೆ ಸಂದರ್ಶನದಲ್ಲಿ ಪ್ರಶ್ನಿಸಿದಾಗ ಸಂಗೀತಾ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಕಾವ್ಯ ಮತ್ತು ತಾವು ಸುದರ್ಶನ್ ವಿಚಾರವಾಗಿ ತಮಾಷೆ ಮಾಡಿಕೊಳ್ಳುತ್ತಿದ್ದುದಾಗಿ ಅವರು ಹೇಳಿದ್ದಾರೆ. ಆಸಿಯಾ ಅವರೊಂದಿಗೂ ಈ ವಿಷಯದಲ್ಲಿ ತಮಾಷೆಯಾಗಿ ಮಾತನಾಡುತ್ತಿದ್ದೆವು. ಕಾವ್ಯಗೆ ತಮ್ಮ ಪತಿಯೊಂದಿಗೆ ಸಂಬಂಧವಿದೆ ಎಂಬಂತೆ ತಮಾಷೆ ಮಾಡುತ್ತಿದ್ದೆವು. ಆದರೆ, ಜನರು ಈ ಮಾತುಗಳನ್ನು ಯಾವ ರೀತಿ ಸ್ವೀಕರಿಸಿದ್ದಾರೋ ಗೊತ್ತಿಲ್ಲ ಎಂದು ಸಂಗೀತಾ ಸ್ಪಷ್ಟಪಡಿಸಿದ್ದಾರೆ. ತಮ್ಮ ಪತಿಯ ವ್ಯಕ್ತಿತ್ವವನ್ನು ಮೆಚ್ಚಿ ಅವರಂತಹ ಸಂಗಾತಿ ಬೇಕು ಎಂದು ಬೇರೆಯವರು ಹೇಳುವುದು ತಮಗೆ ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದ್ದಾರೆ. ಸುದರ್ಶನ್ ಅವರ ವ್ಯಕ್ತಿತ್ವಕ್ಕೆ ತಕ್ಕಂತಹ ಪತಿ ಎಲ್ಲರಿಗೂ ಸಿಗಬೇಕು ಎಂಬ ಭಾವನೆ ಸಹಜ. ತಮ್ಮ ಪತಿಗೆ ಇಷ್ಟೊಂದು ಬೇಡಿಕೆ ಇದೆ ಎನ್ನುವುದೇ ಖುಷಿ ನೀಡುತ್ತದೆ ಎಂಬರ್ಥದಲ್ಲಿ ಸಂಗೀತಾ ಮಾತನಾಡಿದ್ದಾರೆ. ಈ ಮೂಲಕ ಕಾವ್ಯ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದೆ, ಹಾಸ್ಯಮಯವಾಗಿ ಸ್ವೀಕರಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಕಾವ್ಯ ಗೌಡ ಅವರೊಂದಿಗೆ ಆರಂಭದಲ್ಲಿ ಅಷ್ಟೊಂದು ಪರಿಚಯವಿರಲಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ತಮ್ಮ ಪತಿ ಸುದರ್ಶನ್ ಅವರೊಂದಿಗೆ ಕಾವ್ಯ ಕೆಲಸ ಮಾಡಿದ್ದರಿಂದ ಹುಟ್ಟುಹಬ್ಬದಂತಹ ಸಂದರ್ಭಗಳಲ್ಲಿ ಶುಭಾಶಯ ವಿನಿಮಯವಾಗುತ್ತಿತ್ತು. ಆದರೆ, ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಸಮಯ ಕಳೆದ ಬಳಿಕ ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿದೆ ಎಂದು ತಿಳಿಸಿದ್ದಾರೆ. ಸಂಗೀತಾ ಅವರಿಗೆ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (OCD) ಇರುವುದರಿಂದ ಸ್ವಚ್ಛತೆ ಮತ್ತು ವಸ್ತುಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕಾವ್ಯ ಅವರ ಅಭ್ಯಾಸಗಳು ಇದಕ್ಕಿಂತ ಭಿನ್ನವಾಗಿದ್ದರೂ, ಅದನ್ನು ಜಗಳಕ್ಕೆ ಕಾರಣವಾಗಿಸಿಕೊಳ್ಳಲಿಲ್ಲ. ಬದಲಾಗಿ, ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ಮನೆಯೊಳಗೆ ಒಟ್ಟಿಗೆ ಇದ್ದಿದ್ದಾಗಿ ವಿವರಿಸಿದ್ದಾರೆ.

ಒಂದೇ ಹಾಸಿಗೆಯನ್ನು ಹಂಚಿಕೊಂಡಿದ್ದಾಗ ತಮ್ಮ ಬಟ್ಟೆಗಳನ್ನು ಒಂದು ಕಡೆ, ಕಾವ್ಯ ಅವರ ಬಟ್ಟೆಗಳನ್ನು ಮತ್ತೊಂದು ಕಡೆ ಇಟ್ಟುಕೊಳ್ಳುವ ಮೂಲಕ ಸಮಸ್ಯೆ ಎದುರಾಗದಂತೆ ನೋಡಿಕೊಂಡಿದ್ದರು. ಅಡುಗೆಮನೆಯಲ್ಲಿಯೂ ಕಾವ್ಯ ಬಳಸಿದ ಬಳಿಕ ಸ್ವಚ್ಛಗೊಳಿಸುವ ಕೆಲಸವನ್ನು ತಕ್ಷಣವೇ ಮಾಡುತ್ತಿದ್ದರು. ಪ್ರೀತಿಯಿಂದ ಮಾತನಾಡಿ ಯಾವುದೇ ವಿಚಾರವನ್ನು ಅರ್ಥಮಾಡಿಸಬಹುದು. ಪ್ರತಿಯೊಂದು ವಿಷಯಕ್ಕೂ ಜಗಳವಾಡುವ ಅಗತ್ಯವಿಲ್ಲ ಎಂಬುದು ತಮ್ಮ ನಿಲುವು ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಭಟ್ ಅವರ ವೈಯಕ್ತಿಕ ಜೀವನದಲ್ಲಿನ ಮತ್ತೊಂದು ಮಹತ್ವದ ವಿಚಾರವೆಂದರೆ ಪೈಲಟ್ ಆಗುವ ಸಾಧನೆ. ತಮ್ಮ ಪತಿ ಸುದರ್ಶನ್ ಅವರ 40ನೇ ಹುಟ್ಟುಹಬ್ಬದ ದಿನವೇ ತಾವು ಪೈಲಟ್ ಆದ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ. ಆ ದಿನ ಪತಿಯ ಹುಟ್ಟುಹಬ್ಬಕ್ಕೆ ಜೊತೆಯಾಗಿರಲು ಸಾಧ್ಯವಾಗದಿದ್ದರೂ, ತಮ್ಮ ಸಾಧನೆಯೇ ಅವರಿಗೆ ವಿಶೇಷ ಉಡುಗೊರೆಯಾಯಿತು ಎಂದು ಸಂಗೀತಾ ಹೇಳಿದ್ದಾರೆ.

ತಾವು ಪೈಲಟ್ ಆದಾಗ ಮತ್ತು ಕ್ಯಾಪ್ಟನ್ ಆದಾಗ ಸುದರ್ಶನ್ ತುಂಬಾ ಹೆಮ್ಮೆಪಟ್ಟಿದ್ದರು. ತಮ್ಮ ಸಾಧನೆಯ ಬಗ್ಗೆ ಸಂತೋಷದಿಂದ ಕಣ್ಣೀರು ಹಾಕಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗಿದ್ದಾಗ ಪತಿಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದರಿಂದ ಅವರ ಶರ್ಟ್‌ಗಳನ್ನೇ ಧರಿಸುತ್ತಿದ್ದೆ. ಕಾರ್ಯಕ್ರಮಕ್ಕಾಗಿ ಹೆಚ್ಚಿನ ಶಾಪಿಂಗ್ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬರುವಾಗ ಆಸಿಯಾ ಭಾವುಕರಾಗಿ ಅತ್ತಿದ್ದ ವಿಚಾರದ ಬಗ್ಗೆಯೂ ಸಂಗೀತಾ ಮಾತನಾಡಿದ್ದಾರೆ. ತಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು ಎಂದು ಹೇಳಿರುವ ಅವರು, ಈ ಬಾರಿ ಆಸಿಯಾ ಗೆಲ್ಲುವ ಎಲ್ಲ ಅರ್ಹತೆ ಹೊಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸೀಸನ್‌ನಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಗೆಲ್ಲಬೇಕು ಎಂಬುದು ತಮ್ಮ ಆಸೆ ಎಂದು ಹೇಳಿದ್ದಾರೆ.

ಆಸಿಯಾ ಸಿಂಪಥಿ ಅಥವಾ ವಿಕ್ಟಿಮ್ ಕಾರ್ಡ್ ಬಳಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಗೀತಾ, ಟಾಸ್ಕ್ ಪೂರ್ಣಗೊಳಿಸಲು ಸಾಧ್ಯವಾಗದಿದ್ದಾಗ ಭಾವನೆಗಳು ಹೊರಬರುವುದು ಸಹಜ. ಅಂತಹ ಸಂದರ್ಭಗಳಲ್ಲಿ ಅಳುವುದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮಂಜ ಎಲಿಮಿನೇಷನ್ ಬಗ್ಗೆ ಮಾತನಾಡಿದ ಸಂಗೀತಾ, ಮಂಜ ಮನೆಯಿಂದ ಹೊರಹೋಗುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಅವರು ಬದಲಾಗಬಹುದು ಎಂಬ ಭರವಸೆ ಇತ್ತು. ಆದರೆ, ಮತ್ತೆ ಹಿಂದಿನ ವರ್ತನೆಗೆ ಮರಳಿದರು. ತಮ್ಮ ಮಾತುಗಳೇ ಅವರಿಗೆ ಸಮಸ್ಯೆಯಾದವು. ಮಂಜನಲ್ಲಿ ನಿಜವಾದ ಪ್ರತಿಭೆಯಿದ್ದು, ಅದನ್ನು ಸರಿಯಾಗಿ ಬಳಸಿಕೊಂಡರೆ ಭವಿಷ್ಯದಲ್ಲಿ ಉತ್ತಮವಾಗಿ ಬೆಳೆಯಬಹುದು ಎಂದು ಹೇಳಿದ್ದಾರೆ.

ಬಿಗ್ ಬಾಸ್‌ನಿಂದ ಹೊರಬಂದಿರುವ ಸಂಗೀತಾ ಭಟ್ ಈಗ ತಮ್ಮ ಸಿನಿಮಾ ಕೆಲಸಗಳತ್ತ ಗಮನ ಹರಿಸುತ್ತಿದ್ದಾರೆ. ‘ನಾಕುತಂತಿ’ ಮತ್ತು ‘ಅನಂತ ಪಯಣ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸಿನಿಮಾ ಯೋಜನೆಗಳ ಮೂಲಕ ಪ್ರೇಕ್ಷಕರನ್ನು ಮತ್ತೆ ರಂಜಿಸುವ ಬಯಕೆ ಸಂಗೀತಾ ಭಟ್‌ ಅವರದ್ದಾಗಿದೆ. 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES