• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ವಿರೋಧದ ನಡುವೆಯೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ... ಮಂಡ್ಯ ರೈತರ ತೀವ್ರ ವಿರೋಧ

ವಿರೋಧದ ನಡುವೆಯೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ... ಮಂಡ್ಯ ರೈತರ ತೀವ್ರ ವಿರೋಧ

ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿಗೆ ಸಿದ್ಧತೆ ನಡೆಸಿರುವ ರಾಜ್ಯ ಸರ್ಕಾರದ ವಿರುದ್ದ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ.

Written ByYashaswini V
Published: Oct 15, 2026, 05:14 PM IST|Updated: Oct 15, 2026, 05:17 PM IST
joinshare
ವಿರೋಧದ ನಡುವೆಯೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ... ಮಂಡ್ಯ ರೈತರ ತೀವ್ರ ವಿರೋಧ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
KMF ಬ್ರಹ್ಮಾಂಡ ಭ್ರಷ್ಟಾಚಾರ : ರಾಬಕೊವಿ ಹಾಲು ಒಕ್ಕೂಟದಲ್ಲಿ ₹16.5 ಕೋಟಿ ಅವ್ಯವಹಾರ ಆರೋಪ

KMF ಬ್ರಹ್ಮಾಂಡ ಭ್ರಷ್ಟಾಚಾರ : ರಾಬಕೊವಿ ಹಾಲು ಒಕ್ಕೂಟದಲ್ಲಿ ₹16.5 ಕೋಟಿ ಅವ್ಯವಹಾರ ಆರೋಪ

2

ನಾನು ಗಂಡಸ್ತನದಿಂದ ಮಾತಾಡ್ತಿದ್ದೇನೆ, ನಿಮ್ಮ ತರಹ ಹೇಡಿ ಕೆಲಸ ಮಾಡ್ತೀಲ್ಲ : ಸಿಎಂ, ಗೃಹ ಸಚಿವರ ವಿರುದ್ಧ ಹೆಚ್‌ಡಿಕೆ ಕಿಡಿ

3

ವಿರೋಧದ ನಡುವೆಯೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ... ಮಂಡ್ಯ ರೈತರ ತೀವ್ರ ವಿರೋಧ

4

‘ನಾನು ಮದುವೆಯಾಗಿಲ್ಲ ಅಂದಿದ್ರೆ ಕಾವ್ಯ ನನ್ನ ಪತಿಯನ್ನೇ ಮದುವೆಯಾಗ್ತಿದ್ರಂತೆ’: ನಟಿ ಸಂಗೀತಾ ಭಟ್

5

ಮುಖ್ಯಮಂತ್ರಿ ಡಿಕೆಶಿ, ಒಬ್ಬ ಕೆಟ್ಟ ಪತ್ರಕರ್ತ ಹೂಡಿದ ಸಂಚಿಗೆ ಸಿದ್ದರಾಮಯ್ಯ ಬಲಿ : ಹೆಚ್‌ಡಿಕೆ ಆರೋಪ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ದಸರಾ ಅಂಗವಾಗಿ ಕೆಆರ್‌ಎಸ್‌ನಲ್ಲಿ ʼಕಾವೇರಿ ಆರತಿʼ ಮಾಡಲು ಸಜ್ಜಾಗಿರುವುದಕ್ಕೆ ಮಂಡ್ಯ ರೈತರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಇಂದು ಪ್ರತಿಭಟನೆ ನಡೆಸಿದ ಅನ್ನದಾರು ಹಾಗೂ ಕನ್ನಡಪರ ಸಂಘಟನೆಗಳು ಕಪ್ಪು ಪಟ್ಟಿ ಕಟ್ಟಿ ಕಾವೇರಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ನಡೆಸಿದರು.

ಮಂಡ್ಯದ ಡಿಸಿ ಕಚೇರಿ ಎದುರಿನ ಕಾವೇರಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ರೈತರು, ಬಳಿಕ ಹಳೆ ಬೆಂ-ಮೈ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಸರಾ ಅಂಗವಾಗಿ ನಾಳೆಯಿಂದ (ಅ.16) ಕೃಷ್ಣ ರಾಜ ಸಾಗರ ಎಂದರೆ ಕೆಆರ್‌ಎಸ್‌ ನಲ್ಲಿ ಕಾವೇರಿ ಆರತಿ ಮಾಡಲು ಹೊರಟಿರುವ ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶದ ಮಾತುಗಳನ್ನಾಡಿದ ಮಂಡ್ಯದ ಅನ್ನದಾತರು ಹಾಗೂ ಕನ್ನಡಪರ ಸಂಘಟನೆಗಳು ಕೆಆರ್‌ಎಸ್‌ನಲ್ಲಿ ಯಾವುದೇ ಕಾರಣಕ್ಕೂ ʼಕಾವೇರಿ ಆರತಿʼ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. 
ಕೋರ್ಟ್ ನಲ್ಲಿ ಮಧ್ಯಂತರ ಆದೇಶ ಇದ್ದರೂ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿಗೆ ಸರ್ಕಾರ ಹಠ ಬಿದ್ದಿದೆ ಎಂದು ರೈತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ತಕ್ಷಣವೇ ಕಾವೇರಿ ಆರತಿ ನಿಲ್ಲಿಸುವಂತೆ ಆಗ್ರಹ:
ಭೀಕರ ಬರಗಾಲದ ಸಂದರ್ಭದಲ್ಲಿ ಮೋಜು ಮಸ್ತಿಗಾಗಿ ಕಾವೇರಿ ಆರತಿ ಮಾಡ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಈ ಕಾವೇರಿ ಆರತಿ ಸ್ಥಗಿತಗೊಳಸಿ, ಕನ್ನಂಬಾಡಿ ಅಣೆಕಟ್ಟನ್ನು ಉಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ಮೌಢ್ಯ ಬಿತ್ತುವ ಬದಲು ಅಭಿವೃದ್ಧಿ ಕೆಲಸ ಮಾಡುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ರೈತರಿಗೆ ಭಿಕ್ಷೆಯಂತೆ ಪರಿಹಾರ... ಮೋಜು ಮಸ್ತಿಗೆ ಕೋಟ್ಯಾಂತರ ರೂ. ವ್ಯರ್ಥ:
ಕೋಟ್ಯಾಂತರ ರೂ. ಖರ್ಚು ಮಾಡಿ ಕಾವೇರಿ ಆರತಿ ಮಾಡುವುದು ಸರಿಯಲ್ಲ. ಕನ್ನಂಬಾಡಿ ಕಟ್ಟೆಯಲ್ಲಿ ನೀರೇ ಇಲ್ಲ. ಇದು ತಮಿಳುನಾಡಿಗೆ ನೀರು ಬಿಡುವ ಹುನ್ನಾರ. ರೈತರಿಗೆ ಭಿಕ್ಷೆಯಂತೆ ಪರಿಹಾರ ಕೊಟ್ಟು ಇವರ ಮೋಜು ಮಸ್ತಿಗೆ ಕೋಟ್ಯಾಂತರ ರೂ. ಖರ್ಚು ಮಾಡ್ತಾರೆ ಎಂದು ಮಂಡ್ಯ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕನ್ನಡಪರ ಹೋರಾಟಗಾರ ನಾಗಣ್ಣಗೌಡರು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ನಿಜಕ್ಕೂ ರೈತರ ಪಾಲಿಗೆ ರಣಹದ್ದುಗಳೇ ಆಗಿದ್ದಾರೆ. ಕಾವೇರಿ ಆರತಿ ಮಾಡಬಾರದು ಎಂದು ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಸಹ ಹಿಂಬಾಗಿಲ ಮೂಲಕ ಇಂದು ಕಾವೇರಿ ಆರತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೂರು ಅಡಿಗೆ ನೀರು ಕುಸಿದಿದೆ. ರೈತರು ಬೆಳೆದಿರುವ ಬೆಳೆಗೆ ನೀರಿಲ್ಲ. ಪ್ರತಿನಿತ್ಯ ತಮಿಳುನಾಡಿನ ಕಿರುಕುಳ ನಡೆಯುತ್ತಿದೆ. ಇದ್ಯಾವುದಕ್ಕೂ ನ್ಯಾಯ ಕೊಡಿಸಲು ಆಗದಿರುವ ರಾಜ್ಯ ಸರ್ಕಾರ ಈಗ ಕಾವೇರಿ ಆರತಿ ಮಾಡಲು ಹೊರಟಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ತಮ್ಮ ಜಿಲ್ಲೆಯ ಸಚಿವರುಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ನಾಯಕಿ ಸುನಂದಾ ಜಯರಾಮ್, ಜೈ ಕರ್ನಾಟಕ ಪರಿಷತ್ತ್ ರಾಜ್ಯಾಧ್ಯಕ್ಷ ನಾರಾಯಣ್, ಕನ್ನಡ ಸೇನೆ ಜಿಲ್ಲಾದ್ಯಕ್ಷ ಮಂಜುನಾಥ್, ನಾಗಣ್ಣಗೌಡ, ಸೇರಿದಂತೆ ಹಲವು ರೈತರು ಭಾಗಿ ಆಗಿದ್ದರು. 

Add Zee News as a Preferred Source
TAGS:
Kannada News