ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಲೆಟರ್ ಟಾಸ್ಕ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮನೆಯವರಿಂದ ಬಂದಿರುವ ಲೆಟರ್ ಅನ್ನು ಪಡೆಯಲು ಸ್ಪರ್ಧಿಗಳ ಹೋರಾಟ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಈ ಹಿಂದೆ ನಡೆದ ಟಾಸ್ಕ್‌ನಲ್ಲಿ ಕ್ಯಾಪ್ಟನ್ ಜಗದೀಶ್ ಗೆ ನಿರಾಸೆಯಾಗಿತ್ತು. ಇದೀಗ ಬಿಗ್ ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಈ ಬಾರಿ ಜಗದೀಶ್ ಮಾತ್ರವಲ್ಲದೆ ಸೋನಿಕಾ ಅವರಿಗೂ ಮನೆಯವರಿಂದ ಬಂದ ಪತ್ರ ಪಡೆಯುವ ಅವಕಾಶ ಸಿಕ್ಕಿದೆ. ಹೀಗಾಗಿ ಮನೆಯ ಸದಸ್ಯರು ಈ ಸವಾಲನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಕಳೆದ ಎರಡು ತಿಂಗಳಿಂದ ಕುಟುಂಬದವರಿಂದ ದೂರ ಉಳಿದಿದ್ದು ಇದೀಗ ಅವರಿಗೆ ಮನೆಯವರ ಪತ್ರ ಸಿಕ್ಕಿರುವುದು ಭಾವನಾತ್ಮಕ ಕ್ಷಣಗಳಿಗೆ ಕಾರಣವಾಗಿದೆ. ಆದರೆ ಈ ಪತ್ರಗಳನ್ನು ನೇರವಾಗಿ ಸ್ಪರ್ಧಿಗಳ ಕೈಗೆ ನೀಡದೆ, ಮನೆಯವರ ಲೆಟರ್ ಪಡೆಯಲು ವಿವಿಧ ಟಾಸ್ಕ್‌ಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ನ ಬಿಗ್ ಬಾಸ್ ನೀಡಿದ್ದಾರೆ.
ಕ್ಯಾಪ್ಟನ್ ಜಗದೀಶ್‌ಗೆ ಸಿಗದ ಲೆಟರ್!
ಈ ಹಿಂದೆ ನಡೆದ ಲೆಟರ್ ಟಾಸ್ಕ್‌ನಲ್ಲಿ ಕ್ಯಾಪ್ಟನ್ ಜಗದೀಶ್ ಗೆ ಜಯ ಸಿಕ್ಕಿರಲಿಲ್ಲ. ಹೀಗಾಗಿ ಮನೆಯವರಿಂದ ಬಂದಿರುವ ಸಂದೇಶವನ್ನು ಓದುವ ಅವಕಾಶ ಅವರ ಕೈತಪ್ಪಿತ್ತು. ಇದರಿಂದ ನಿರಾಸೆಗೊಂಡಿದ್ದ ಜಗದೀಶ್ ಗೆ ಇದೀಗ ಬಿಗ್ ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಈ ಬಾರಿ ಸೋನಿಕಾ ಅವರಿಗೂ ಪತ್ರ ಪಡೆಯುವ ಅವಕಾಶ ಸಿಕ್ಕಿರುವುದು ವಿಶೇಷ.
ಈ ಬಾರಿಯ ಟಾಸ್ಕ್ ಸಾಕಷ್ಟು ವಿಭಿನ್ನವಾಗಿದ್ದು, ಟಾಸ್ಕ್‌ನಲ್ಲಿ ಸ್ಪರ್ಧಿಗಳು ಕಣ್ಣಿಗೆ ಪಟ್ಟಿ ಧರಿಸಿ ಬಳಿಕ ಹಗ್ಗಗಳ ಸಹಾಯದಿಂದ ಬೋರ್ಡ್ ಮೇಲಿರುವ ಚೆಂಡನ್ನು ನಿಯಂತ್ರಿಸುತ್ತಾ ಸಾಗಿಸಬೇಕು. ಬೋರ್ಡ್‌ನಲ್ಲಿ ಹಲವು ರಂಧ್ರಗಳನ್ನು ಮಾಡಲಾಗಿದ್ದು, ಚೆಂಡು ಯಾವುದೇ ರಂಧ್ರದೊಳಗೆ ಬೀಳದಂತೆ ಎಚ್ಚರಿಕೆಯಿಂದ ಅಂತಿಮ ಗುರಿ ತಲುಪಿಸಬೇಕು. ಈ ವೇಳೆ ಕಣ್ಣಿಗೆ ಪಟ್ಟಿ ಧರಿಸಿರುವ ಸ್ಪರ್ಧಿಗಳಿಗೆ ಉಳಿದ ಮನೆಯ ಸದಸ್ಯರು ಧ್ವನಿಯ ಮೂಲಕ ಮಾರ್ಗದರ್ಶನ ನೀಡಬೇಕಿದೆ.
ಸಣ್ಣ ತಪ್ಪು ಮಾಡಿದರೂ ಚೆಂಡು ರಂಧ್ರದೊಳಗೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಬ್ಬ ಸ್ಪರ್ಧಿಯೂ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಒಬ್ಬರ ಸೂಚನೆಯನ್ನು ಮತ್ತೊಬ್ಬರು ಸರಿಯಾಗಿ ಅರ್ಥಮಾಡಿಕೊಂಡು ಆಟವಾಡುವುದು ಇಲ್ಲಿ ಅತ್ಯಂತ ಮುಖ್ಯವಾಗಿದೆ.
ಮನೆಯವರಿಂದ ಬಂದಿರುವ ಪತ್ರವನ್ನು ಓದಲು ಜಗದೀಶ್ ಮತ್ತು ಸೋನಿಕಾ ಕಾತುರದಿಂದ ಕಾಯುತ್ತಿದ್ದಾರೆ. ಇಷ್ಟು ದಿನ ಕುಟುಂಬದವರನ್ನು ನೋಡದೆ, ಅವರ ಧ್ವನಿ ಕೇಳದೆ ಬಿಗ್ ಬಾಸ್ ಮನೆಯಲ್ಲಿ ದಿನ ಕಳೆಯುತ್ತಿರುವ ಸ್ಪರ್ಧಿಗಳಿಗೆ ಮನೆಯವರ ಸಂದೇಶ ಎಂದರೆ ಅದೊಂದು ಭಾವನಾತ್ಮಕ ಕ್ಷಣವೇ ಸರಿ.
ಹೀಗಾಗಿ ಈ ಬಾರಿ ಟಾಸ್ಕ್ ಗೆಲ್ಲಿಸುವ ಜವಾಬ್ದಾರಿ ಉಳಿದ ಸ್ಪರ್ಧಿಗಳ ಮೇಲಿದೆ. ಕಣ್ಣಿಗೆ ಪಟ್ಟಿ ಧರಿಸಿರುವ ಸದಸ್ಯರಿಗೆ ಸರಿಯಾದ ಮಾರ್ಗದರ್ಶನ ನೀಡಿ ಬಾಲ್ ಅನ್ನು ಗುರಿ ತಲುಪಿಸುವುದು ಮನೆಯವರ ಮುಂದಿರುವ ದೊಡ್ಡ ಸವಾಲಾಗಿದೆ.
ಈ ಟಾಸ್ಕ್‌ನಲ್ಲಿ ಯಾರು ಎಷ್ಟು ಚೆನ್ನಾಗಿ ಹೊಂದಾಣಿಕೆ ಮಾಡಿಕೊಂಡು ಆಡುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿದೆ. ಹಿಂದಿನ ಟಾಸ್ಕ್‌ನಲ್ಲಿ ನಿರಾಸೆ ಅನುಭವಿಸಿದ್ದ ಜಗದೀಶ್ ಅವರಿಗೆ ಈ ಬಾರಿ ಅದೃಷ್ಟ ಒಲಿಯುತ್ತಾ? ಸೋನಿಕಾ ಅವರಿಗೂ ಮನೆಯವರ ಪತ್ರ ಸಿಗುತ್ತಾ? ಅಥವಾ ಸಣ್ಣ ತಪ್ಪಿನಿಂದ ಮತ್ತೆ ಅವಕಾಶ ಕೈತಪ್ಪುತ್ತಾ? ಎಂದು ಕಾದು ನೋಡಬೇಕಿದೆ.