• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /AC, ಸ್ಲೀಪರ್‌, ಐರಾವತ ಬಸ್‌ ಟಿಕೆಟ್‌ ದರ ಕುರಿತು ಸರ್ಕಾರ ಮಹತ್ವದ ನಿರ್ಧಾರ..!

AC, ಸ್ಲೀಪರ್‌, ಐರಾವತ ಬಸ್‌ ಟಿಕೆಟ್‌ ದರ ಕುರಿತು ಸರ್ಕಾರ ಮಹತ್ವದ ನಿರ್ಧಾರ..!

ರಾಜ್ಯದ ಬಸ್ ಪ್ರಯಾಣಿಕರಿಗೆ ಸರ್ಕಾರ ಶಾಕ್ ನೀಡಿದ್ದು, ನಾಲ್ಕೂ ಸಾರಿಗೆ ನಿಗಮಗಳ ಸಾಮಾನ್ಯ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಈ ಪರಿಷ್ಕೃತ ದರವು ಇಂದು (ನ.04) ರಾತ್ರಿಯಿಂದ ಜಾರಿಗೆ ಬರಲಿದೆ. ಇದರ ನಡುವೆ ಸರ್ಕಾರ ಎಸಿ, ಸ್ಲೀಪರ್ ಹಾಗೂ ಐರಾವತ ದರದ ಕುರಿತು ಮಹತ್ವದ ನಿರ್ಧಾರ ಪ್ರಕಟ ಮಾಡಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written ByKrishna NK
Published: Nov 04, 2026, 03:24 PM IST|Updated: Nov 04, 2026, 03:25 PM IST
joinshare
AC, ಸ್ಲೀಪರ್‌, ಐರಾವತ ಬಸ್‌ ಟಿಕೆಟ್‌ ದರ ಕುರಿತು ಸರ್ಕಾರ ಮಹತ್ವದ ನಿರ್ಧಾರ..!
Image Credit: Bus Ticket Price news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸುವುದು ಹೇಗೆ? ಷೇರು ಮಾರುಕಟ್ಟೆ ಸಂಶೋಧನೆಗೆ ಕ್ವಾಲಾ ಇಂಟೆಲ್‌ನ 7 ಸೂತ್ರಗಳು!

ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸುವುದು ಹೇಗೆ? ಷೇರು ಮಾರುಕಟ್ಟೆ ಸಂಶೋಧನೆಗೆ ಕ್ವಾಲಾ ಇಂಟೆಲ್‌ನ 7 ಸೂತ್ರಗಳು!

2

ದೀಪಾವಳಿಯ ಹಿಂದಿನ ರೋಚಕ ಕಥೆಯೇನು ಗೊತ್ತಾ? ಇಲ್ಲಿದೆ ಮಾಹಿತಿ..

3

ಬೆಟ್ಟದ ನೆಲ್ಲಿಕಾಯಿಯ ರಸವನ್ನು ಇದರಲ್ಲಿ ಬೆರೆಸಿ ತಲೆಗೆ ಹಚ್ಚಿದ್ರೆ ಕಡು ಕಪ್ಪಾಗುತ್ತೆ ಬಿಳಿಕೂದಲು!

4

ಬೀದಿ ಬದಿ ವ್ಯಾಪಾರಿಗಳ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನದ ಭರವಸೆ

5

AC, ಸ್ಲೀಪರ್‌, ಐರಾವತ ಬಸ್‌ ಟಿಕೆಟ್‌ ದರ ಕುರಿತು ಸರ್ಕಾರ ಮಹತ್ವದ ನಿರ್ಧಾರ..!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ರಾಜ್ಯದ ಬಸ್ ಪ್ರಯಾಣಿಕರಿಗೆ ಸರ್ಕಾರವು ಒಂದೇ ಬಾರಿಗೆ ದೊಡ್ಡ ಆಘಾತ ನೀಡಿದೆ. ಹಲವು ವರ್ಷಗಳಿಂದ ನಿರೀಕ್ಷಿಸಲಾಗಿದ್ದ ಸಾರಿಗೆ ಬಸ್‌ಗಳ ಟಿಕೆಟ್ ದರ ಏರಿಕೆ ಅಂತಿಮವಾಗಿ ಅಧಿಕೃತಗೊಂಡಿದ್ದು, ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಪರಿಷ್ಕೃತ ದರಗಳು ಇಂದಿನಿಂದಲೇ (ನ.04) ಅಂದರೆ ಇಂದ ರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸಾಮಾನ್ಯ ಬಸ್‌ಗಳಲ್ಲಿ ಓಡಾಡುವ ಜನಸಾಮಾನ್ಯರಿಗೆ ಈ ದರ ಏರಿಕೆಯ ಬಿಸಿ ತಟ್ಟಿದ್ದರೆ, ಐಷಾರಾಮಿ ಬಸ್‌ ಪ್ರಯಾಣಿಕರಿಗೆ ಸಣ್ಣ ಮಟ್ಟದ ರಿಲೀಫ್ ಸಿಕ್ಕಿದೆ. ಹೌದು, ಈ ಟಿಕೆಟ್ ದರ ಏರಿಕೆಯು ಕೇವಲ ಸಾಮಾನ್ಯ ಸಾರಿಗೆ ಬಸ್‌ಗಳಿಗೆ ಮಾತ್ರ ಅನ್ವಯವಾಗಲಿದ್ದು, ಎಸಿ, ಸ್ಲೀಪರ್ ಹಾಗೂ ಐರಾವತ ಮುಂತಾದ ಐಷಾರಾಮಿ ಬಸ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ದರ ಏರಿಕೆಗೆ ಕಾರಣವೇನು?
ಕಳೆದ ಹತ್ತು ವರ್ಷಗಳಿಂದ ಸಾರಿಗೆ ಸಂಸ್ಥೆಗಳಲ್ಲಿ ಬಸ್ ಟಿಕೆಟ್ ದರವನ್ನು ಗಣನೀಯವಾಗಿ ಏರಿಸಿರಲಿಲ್ಲ. ಡೀಸೆಲ್ ಬೆಲೆ ಏರಿಕೆಯಾಗುತ್ತಾ ಸಾಗಿರುವುದು, ಬಸ್‌ಗಳ ನಿರ್ವಹಣಾ ವೆಚ್ಚ (Maintenance Cost) ವಿಪರೀತವಾಗಿ ಹೆಚ್ಚಾಗಿರುವುದು ಮತ್ತು ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಬೇಕಾದ ಅನಿವಾರ್ಯತೆಯಿಂದಾಗಿ ಈ ದರ ಹೆಚ್ಚಳ ಅನಿವಾರ್ಯವಾಗಿತ್ತು ಎಂದು ಸಚಿವರು ಸರ್ಕಾರದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 98 ರೂಪಾಯಿಯ ಗಡಿ ದಾಟಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಲು ಈ ಹಿಂದೆ ಅತುಲ್ ಥಿವಾರಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಆ ಸಮಿತಿಯು ನೀಡಿದ ವರದಿಯ ಆಧಾರದಲ್ಲೇ ಈಗ ಟಿಕೆಟ್ ದರವನ್ನು ಪರಿಷ್ಕರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಯಾವ ಬಸ್‌ನಲ್ಲಿ ಎಷ್ಟು ಏರಿಕೆಯಾಗಿದೆ?

ಬಿಎಂಟಿಸಿ (BMTC) ಬಸ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಿಎಂಟಿಸಿ ಬಸ್‌ಗಳಲ್ಲಿ ಈ ಹಿಂದೆ ಕನಿಷ್ಠ ದರ 6 ರೂಪಾಯಿ ಇತ್ತು. ಇದೀಗ ಅದನ್ನು ಬಪ್ಟಾತ್ 10 ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಗರಿಷ್ಠ ದರ 35 ರೂಪಾಯಿಯಿಂದ 45 ರೂಪಾಯಿಗೆ ಏರಿಕೆಯಾಗಿದೆ.

ಸಾಮಾನ್ಯ ಸಾರಿಗೆಯಲ್ಲಿ ಗರಿಷ್ಠ ಪ್ರಯಾಣ ದರವನ್ನು ಸುಮಾರು 9 ರೂಪಾಯಿಯವರೆಗೆ ಹೆಚ್ಚಿಸಲಾಗಿದೆ. KSRTC, NWRTC ಹಾಗೂ KKRTC ನಿಗಮಗಳಲ್ಲಿ ಸರಾಸರಿ ಶೇಕಡಾ 23ರಷ್ಟು ಮತ್ತು BMTC ಯಲ್ಲಿ ಶೇಕಡಾ 33 ರಿಂದ 35ರಷ್ಟು ದರ ಏರಿಕೆ ಮಾಡಲಾಗಿದೆ.

ಉದಾಹರಣೆಗೆ, ಮೆಜೆಸ್ಟಿಕ್‌ನಿಂದ ನೆಲಮಂಗಲಕ್ಕೆ ಈ ಹಿಂದೆ 35 ರೂಪಾಯಿ ಇದ್ದ ಬಸ್ ಟಿಕೆಟ್ ದರ ಇನ್ಮುಂದೆ 44 ರೂಪಾಯಿ ಆಗಲಿದೆ. ವಾಯು ವಜ್ರ ಬಸ್‌ಗಳಲ್ಲಿ ಕನಿಷ್ಠ 5 ರೂ. ಹಾಗೂ ಗರಿಷ್ಠ 15 ರೂ.ವರೆಗೆ ಏರಿಕೆ ಮಾಡಲಾಗಿದೆ. ಒಟ್ಟಾರೆ ಶೇಕಡಾವಾರು ಲೆಕ್ಕ ಹಾಕದೆ, ಸ್ಟೇಜ್ ವೈಸ್ (Stage-wise) ದರ ಲೆಕ್ಕ ಹಾಕಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಶಕ್ತಿ ಯೋಜನೆಯಿಂದ ನಷ್ಟವಾಗಿಲ್ಲ: ಸ್ಪಷ್ಟನೆ
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ' ಯೋಜನೆಯಿಂದಲೇ ಸಾರಿಗೆ ನಿಗಮಗಳಿಗೆ ನಷ್ಟವಾಗಿ ಈ ದರ ಏರಿಕೆ ಮಾಡಲಾಗಿದೆ ಎಂಬ ವಾದವನ್ನು ಸಚಿವ ಭೈರತಿ ಸುರೇಶ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರಸ್ತುತ 1,03,600 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 26,125 ಬಸ್‌ಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. 'ಶಕ್ತಿ' ಯೋಜನೆಯಡಿ ಪ್ರತಿದಿನ ಸುಮಾರು 74.4 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ, ಇದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ನೇರವಾಗಿ ನಿಗಮಗಳಿಗೆ ಪಾವತಿಸುತ್ತಿದೆ. ಹೀಗಾಗಿ, ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಯಾವುದೇ ನಷ್ಟ ಸಂಭವಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ, ನಿತ್ಯವೂ ಬಸ್ ಅನ್ನು ನಂಬಿ ಕೆಲಸಕ್ಕೆ, ಕಾಲೇಜಿಗೆ ಮತ್ತು ಊರುಗಳಿಗೆ ಓಡಾಡುವ ಜನಸಾಮಾನ್ಯರ ಜೇಬಿಗೆ ಇದು ದೊಡ್ಡ ಹೊರೆಯಾಗಲಿದೆ. ಡೀಸೆಲ್ ಮತ್ತು ಬಿಡಿಭಾಗಗಳ ಬೆಲೆ ಏರಿಕೆಯ ನೆಪದಲ್ಲಿ ಸರ್ಕಾರ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರದಿಂದ ಜನಸಾಮಾನ್ಯರು ಆತಂಕಗೊಂಡಿದ್ದಾರೆ.

Add Zee News as a Preferred Source
TAGS:
Kannada News