ಕೇಂದ್ರ ಸರ್ಕಾರವು ಮೊದಲ ಬಾರಿಗೆ ಔಪಚಾರಿಕವಾಗಿ ಕೆಲಸಕ್ಕೆ ಸೇರುವ ಅರ್ಹ ಉದ್ಯೋಗಿಗಳಿಗಾಗಿ ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನೆ (PM-VBRY) ಎಂಬ ವಿಶೇಷ ಕಾರ್ಯಕ್ರಮವನ್ನು ಪರಿಚಯಿಸಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ನಿರ್ವಹಿಸಲ್ಪಡುವ ಈ ಯೋಜನೆಯಡಿ ಅರ್ಹ ಉದ್ಯೋಗಿಗಳಿಗೆ ₹15,000 ವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
PM-VBRY ಯೋಜನೆಯ ಉದ್ದೇಶವೇನು?
ಮೊದಲ ಬಾರಿಗೆ ಔಪಚಾರಿಕವಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳನ್ನು ನೌಕರರ ಭವಿಷ್ಯ ನಿಧಿ (EPF) ವ್ಯವಸ್ಥೆಗೆ ಪ್ರವೇಶಿಸುವ ಅರ್ಹ ಕಾರ್ಮಿಕರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಔಪಚಾರಿಕ ಉದ್ಯೋಗವನ್ನು ಉತ್ತೇಜಿಸುವುದು ಇದರ ಮುಖ್ಯ ಗುರಿ ಆಗಿದೆ. ಆದಾಗ್ಯೂ, ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿಯಲ್ಲಿ ₹15,000 ವರೆಗೆ ಪ್ರೋತ್ಸಾಹ ಧನ ಪಡೆಯಲು ಕೆಲವು ಅರ್ಹತೆಗಳನ್ನು ಹಾಗೂ ಸೇವಾ ಷರತ್ತುಗಳನ್ನು ಪೂರೈಸುವುದು ಅಗತ್ಯವಾಗಿದೆ.
₹15,000 ವರೆಗೆ ಪ್ರೋತ್ಸಾಹ ಧನ ಪಡೆಯಲು ಅರ್ಹತಾ ಮಾನದಂಡ:
ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿಯಲ್ಲಿ, ಉದ್ಯೋಗಿ ಕೇವಲ ಒಂದು ಕಂಪನಿಗೆ ಸೇರುವ ಮೂಲಕ ₹15,000 ಸ್ವಯಂಚಾಲಿತವಾಗಿ ಪಡೆಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದು ನೌಕರರ ವೇತನ ಮಿತಿ, ಅರ್ಹ ಇಪಿಎಫ್ ವೇತನಗಳು, ಉದ್ಯೋಗ ಮತ್ತು ಯೋಜನೆಯ ಅವಶ್ಯಕತೆಗಳ ಅನುಸರಣೆ ಹೀಗೆ ಹಲವು ಅಂಶಗಳನ್ನು ಒಳಗೊಂಡಿದೆ.
* ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯು ಆಗಸ್ಟ್ 1, 2025 ರಿಂದ ಜುಲೈ 31, 2027 ರ ನಡುವೆ ರಚಿಸಲಾದ ಅರ್ಹ ಉದ್ಯೋಗಗಳನ್ನು ಒಳಗೊಂಡಿದೆ.
* ₹ 1 ಲಕ್ಷದವರೆಗೆ ಮಾಸಿಕ ವೇತನ ಗಳಿಸುವ ಉದ್ಯೋಗಿಗಳು ಇತರ ಷರತ್ತುಗಳಿಗೆ ಒಳಪಟ್ಟು ಅರ್ಹತೆ ಪಡೆಯಬಹುದು.
* ಪ್ರೋತ್ಸಾಹಕವು ಒಂದು ತಿಂಗಳ ಅರ್ಹ ಇಪಿಎಫ್ ವೇತನಕ್ಕೆ ಸಮನಾಗಿರುತ್ತದೆ, ಇದನ್ನು ₹ 15,000 ಕ್ಕೆ ಮಿತಿಗೊಳಿಸಲಾಗುತ್ತದೆ.
* ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಯಾರು ಅರ್ಹರು?
ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯ ಭಾಗ ʼಎʼ ಅಡಿಯಲ್ಲಿ ಅರ್ಹತೆ ಪಡೆಯಲು, ಯಾವುದೇ ಉದ್ಯೋಗಿಯು ಮೊದಲ ಬಾರಿಗೆ ಔಪಚಾರಿಕವಾಗಿ ಕೆಲಸಕ್ಕೆ ಸೇರಿದ ಬಳಿಕ ಇಪಿಎಫ್ ಸದಸ್ಯರಾಗಿ ನೋಂದಾಯಿಸಬೇಕು. ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯು 1 ಆಗಸ್ಟ್ 2025 ಮತ್ತು 31 ಜುಲೈ 2027 ರ ನಡುವೆ ಸಂಸ್ಥೆಗಳಿಗೆ ಸೇರುವ ಅರ್ಹ ಉದ್ಯೋಗಿಗಳನ್ನು ಒಳಗೊಳ್ಳುತ್ತದೆ, ಅವರು ನಿಗದಿತ ಸದಸ್ಯತ್ವ, ವೇತನ ಮತ್ತು ಉದ್ಯೋಗ ಪರಿಸ್ಥಿತಿಗಳನ್ನು ಪೂರೈಸಿದಾಗ ₹15,000 ಪ್ರೋತ್ಸಾಹ ಧನ ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ.
ಮೊದಲ ಬಾರಿಗೆ ಇಪಿಎಫ್ ಸದಸ್ಯರು ಎಂದರೆ ಏನು?
ಮೊದಲ ಬಾರಿಗೆ ಇಪಿಎಫ್ ಸದಸ್ಯರು ಎಂದರೆ ಉದ್ಯೋಗಿ ಆಗಸ್ಟ್ 1, 2025 ಕ್ಕಿಂತ ಮೊದಲು ಇಪಿಎಫ್ ಸದಸ್ಯರಾಗಿರಬಾರದು. ಅಂತಹವರು ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯಡಿ ಪ್ರಯೋಜನವನ್ನು ಪಡೆಯಬಹುದು.
ಇಂತಹ ಉದ್ಯೋಗಿಗಳಿಗಷ್ಟೇ ₹15,000 ಪ್ರೋತ್ಸಾಹ ಧನ:
ಯಾವ ಉದ್ಯೋಗಿ 1 ಆಗಸ್ಟ್ 2025 ಮತ್ತು 31 ಜುಲೈ 2027 ರ ನಡುವೆ ಮೊದಲ ಬಾರಿಗೆ ಔಪಚಾರಿಕವಾಗಿ ಕೆಲಸಕ್ಕೆ ಸೇರುತ್ತಾರೋ ಅಂತಹ ಉದ್ಯೋಗಿಗಳಿಗಷ್ಟೇ ₹15,000 ಪ್ರೋತ್ಸಾಹ ಧನ ಸಿಗಲಿದೆ.
₹15,000 ಪ್ರೋತ್ಸಾಹ ಧನ ಪಡೆಯಲು ಮಾಸಿಕ ವೇತನ ಎಷ್ಟಿರಬೇಕು?
ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯಡಿ ₹15,000 ಪ್ರೋತ್ಸಾಹ ಧನ ಪಡೆಯಲು ಯೋಜನೆಯ ವ್ಯಾಖ್ಯಾನಕ್ಕೆ ಒಳಪಟ್ಟು ವೇತನವು ₹ 1 ಲಕ್ಷದವರೆಗೆ ಇರಬೇಕು.
ಪ್ರೋತ್ಸಾಹ ಧನ ಪಾವತಿ ವಿಧಾನ:
ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿಯಲ್ಲಿ ಷರತ್ತುಗಳಿಗೆ ಒಳಪಟ್ಟು ಎರಡು ಕಂತುಗಳಲ್ಲಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ಪಡೆಯಲು ಎಷ್ಟು ದಿನಗಳು ಕೆಲಸ ಮಾಡಿರಬೇಕು?
ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯಲ್ಲಿ ₹15,000ವರೆಗೆ ಪ್ರೋತ್ಸಾಹ ಧನ ಪಡೆಯಲು ಉದ್ಯೋಗದ ಅವಧಿ ಮೊದಲ ಕಂತಿಗೆ ಆರು ತಿಂಗಳು ನಿರಂತರ ಸೇವೆ; ಎರಡನೇ ಕಂತಿಗೆ 12 ತಿಂಗಳು ಪೂರ್ಣಗೊಂಡಿರಬೇಕು.
ಆದಾಗ್ಯೂ, ಎಲ್ಲರಿಗೂ ಕೂಡ ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿ ₹15,000 ಪ್ರೋತ್ಸಾಹ ಧನವೇ ಸಿಗುವುದಿಲ್ಲ. ಈ ಮೊತ್ತವು ಉದ್ಯೋಗಿಯ ಅರ್ಹ ವೇತನವನ್ನು ಆಧರಿಸಿರುತ್ತದೆ.