• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /1 ಷೇರಿಗೆ ಸಿಗಲಿದೆ 5 ಷೇರು! ಮೊದಲ ಬಾರಿಗೆ ಷೇರು ವಿಭಜನೆ ಘೋಷಣೆ; ನ.30 ರೆಕಾರ್ಡ್ ಡೇಟ್

1 ಷೇರಿಗೆ ಸಿಗಲಿದೆ 5 ಷೇರು! ಮೊದಲ ಬಾರಿಗೆ ಷೇರು ವಿಭಜನೆ ಘೋಷಣೆ; ನ.30 ರೆಕಾರ್ಡ್ ಡೇಟ್

ಇಂಟರ್‌ಆರ್ಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಕಂಪನಿ ಮೊದಲ ಬಾರಿಗೆ ಷೇರು ವಿಭಜನೆಗೆ ಮುಂದಾಗಿದ್ದು, ₹10 ಮುಖಬೆಲೆಯ ಒಂದು ಷೇರನ್ನ ₹2 ಮುಖಬೆಲೆಯ ಐದು ಷೇರುಗಳಾಗಿ ಪರಿವರ್ತಿಸಲಿದೆ. ಇದಕ್ಕಾಗಿ ನವೆಂಬರ್ 30, 2026ನ್ನ ರೆಕಾರ್ಡ್ ಡೇಟ್ ಮತ್ತು ಎಕ್ಸ್‌-ಡೇಟ್ ಆಗಿ ನಿಗದಿಪಡಿಸಿದೆ. ಅಂದರೆ ಕಂಪನಿಯ ಒಂದು ಷೇರು ಹೊಂದಿರುವ ಅರ್ಹ ಹೂಡಿಕೆದಾರರಿಗೆ ವಿಭಜನೆಯ ಬಳಿಕ ಐದು ಷೇರುಗಳು ದೊರೆಯಲಿವೆ. ಈ ಮೂಲಕ ಷೇರುಗಳ ಸಂಖ್ಯೆ ಹೆಚ್ಚಾದರೂ ಹೂಡಿಕೆಯ ಒಟ್ಟು ಮೌಲ್ಯದಲ್ಲಿ ತಕ್ಷಣದ ಏರಿಕೆಯಾಗುವುದಿಲ್ಲ.

Written ByPuttaraj K Alur
Published: Nov 24, 2026, 13:04 IST|Updated: Nov 24, 2026, 13:47 IST
joinshare
1 ಷೇರಿಗೆ ಸಿಗಲಿದೆ 5 ಷೇರು! ಮೊದಲ ಬಾರಿಗೆ ಷೇರು ವಿಭಜನೆ ಘೋಷಣೆ; ನ.30 ರೆಕಾರ್ಡ್ ಡೇಟ್
Image Credit: Stock Split

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಮೈಸೂರಲ್ಲಿ ಬುಧವಾರದಂದು ಮಾಂಸ ಮಾರಾಟ ಬಂದ್‌! ಯಾಕೆ ಗೊತ್ತಾ?

ಮೈಸೂರಲ್ಲಿ ಬುಧವಾರದಂದು ಮಾಂಸ ಮಾರಾಟ ಬಂದ್‌! ಯಾಕೆ ಗೊತ್ತಾ?

2

ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಅಟ್ಟಹಾಸ.. ರೈತನ ಮೇಲೆ 500ಕ್ಕೂ ಹೆಚ್ಚು ಹೆಜ್ಜೇನುಗಳ ದಾಳಿ!

3

1 ಷೇರಿಗೆ ಸಿಗಲಿದೆ 5 ಷೇರು! ಮೊದಲ ಬಾರಿಗೆ ಷೇರು ವಿಭಜನೆ ಘೋಷಣೆ; ನ.30 ರೆಕಾರ್ಡ್ ಡೇಟ್

4

ಮತ್ತೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸ್ತಿದೆಯಾ ರಾಜ್ಯ ಸರ್ಕಾರ?.....

5

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್‌? ಟಿಕೆಟ್ ಬೆಲೆ ಹೆಚ್ಚಿಸಲು BMRCL ಸಿದ್ಧತೆ!?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Interarch Stock Split: ಷೇರು ಮಾರುಕಟ್ಟೆ ಹೂಡಿಕೆದಾರರ ಗಮನ ಸೆಳೆಯುವಂತೆ ಇಂಟರ್‌ಆರ್ಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಲಿಮಿಟೆಡ್ ಮೊದಲ ಬಾರಿಗೆ ಷೇರು ವಿಭಜನೆಗೆ ಮುಂದಾಗಿದೆ. ಕಂಪನಿಯು ತನ್ನ ಷೇರುಗಳ ಮುಖಬೆಲೆಯನ್ನ ₹10ರಿಂದ ₹2ಕ್ಕೆ ಇಳಿಸುವ ನಿರ್ಧಾರ ಕೈಗೊಂಡಿದ್ದು, ಇದರಿಂದ ಪ್ರಸ್ತುತ ಇರುವ ಒಂದು ಷೇರು ಐದು ಷೇರುಗಳಾಗಿ ಬದಲಾಗಲಿದೆ. ಈ ಷೇರು ವಿಭಜನೆಗೆ ನವೆಂಬರ್ 30, 2026ರಂದು ರೆಕಾರ್ಡ್ ಡೇಟ್ ಮತ್ತು ಎಕ್ಸ್‌-ಡೇಟ್ ನಿಗದಿಪಡಿಸಲಾಗಿದೆ.

ಮೂಲಸೌಕರ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಟರ್‌ಆರ್ಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಕಂಪನಿಯ ಈ ನಿರ್ಧಾರ ಹೂಡಿಕೆದಾರರ ಗಮನ ಸೆಳೆದಿದೆ. ಆಗಸ್ಟ್ 6, 2026ರಂದು ಕಂಪನಿಯ ಆಡಳಿತ ಮಂಡಳಿ ಷೇರು ವಿಭಜನೆಗೆ ಅನುಮೋದನೆ ನೀಡಿತ್ತು. ನಂತರ ಸೆಪ್ಟೆಂಬರ್ 10ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆಯೂ ದೊರೆತಿದೆ. ಇದೀಗ ನವೆಂಬರ್ 30ರಂದು ಈ ವಿಭಜನೆ ಜಾರಿಗೆ ಬರಲಿದೆ.

₹10ರ ಒಂದು ಷೇರು ₹2ರ ಐದು ಷೇರುಗಳಾಗಲಿದೆ

ಕಂಪನಿಯ ಷೇರು ವಿಭಜನೆಯ ಅನುಪಾತ 1:5 ಆಗಿದೆ. ಅಂದರೆ ಪ್ರಸ್ತುತ ₹10 ಮುಖಬೆಲೆಯ ಒಂದು ಈಕ್ವಿಟಿ ಷೇರನ್ನ ₹2 ಮುಖಬೆಲೆಯ ಐದು ಷೇರುಗಳಾಗಿ ವಿಭಜಿಸಲಾಗುತ್ತದೆ. ಹೀಗಾಗಿ ಹೂಡಿಕೆದಾರರ ಡಿಮ್ಯಾಟ್ ಖಾತೆಯಲ್ಲಿರುವ ಷೇರುಗಳ ಸಂಖ್ಯೆ ಐದು ಪಟ್ಟು ಹೆಚ್ಚಾಗಲಿದೆ. ಉದಾಹರಣೆಗೆ ಒಬ್ಬ ಹೂಡಿಕೆದಾರರ ಬಳಿ ಪ್ರಸ್ತುತ ಇಂಟರ್‌ಆರ್ಕ್ ಕಂಪನಿಯ 10 ಷೇರುಗಳಿದ್ದರೆ, ವಿಭಜನೆಯ ನಂತರ ಅವು 50 ಷೇರುಗಳಾಗಲಿವೆ. ಅದೇ ರೀತಿ 100 ಷೇರುಗಳನ್ನ ಹೊಂದಿರುವವರಿಗೆ 500 ಷೇರುಗಳು ದೊರೆಯಲಿವೆ. ಆದರೆ ಷೇರುಗಳ ಸಂಖ್ಯೆ ಹೆಚ್ಚಾಗುವುದರಿಂದ ಹೂಡಿಕೆಯ ಒಟ್ಟು ಮೌಲ್ಯ ತಕ್ಷಣಕ್ಕೆ ಹೆಚ್ಚಾಗುವುದಿಲ್ಲ. ಷೇರು ವಿಭಜನೆಯ ಅನುಪಾತಕ್ಕೆ ಅನುಗುಣವಾಗಿ ಮಾರುಕಟ್ಟೆ ಬೆಲೆಯಲ್ಲಿಯೂ ಹೊಂದಾಣಿಕೆಯಾಗುತ್ತದೆ.

ನವೆಂಬರ್ 30ರಂದು ರೆಕಾರ್ಡ್ ಡೇಟ್

ಷೇರು ವಿಭಜನೆಯ ಲಾಭ ಪಡೆಯಲು ಅರ್ಹರಾಗಿರುವ ಷೇರುದಾರರನ್ನ ಗುರುತಿಸಲು ಕಂಪನಿಯು ನವೆಂಬರ್ 30, 2026ನ್ನ ರೆಕಾರ್ಡ್ ಡೇಟ್ ಆಗಿ ನಿಗದಿಪಡಿಸಿದೆ. ಇದೇ ದಿನ ಎಕ್ಸ್‌-ಡೇಟ್ ಕೂಡ ಆಗಿದೆ. ಈ ದಿನಾಂಕದ ಆಧಾರದಲ್ಲಿ ಷೇರು ವಿಭಜನೆಗೆ ಅರ್ಹರಾಗಿರುವ ಹೂಡಿಕೆದಾರರನ್ನ ನಿರ್ಧರಿಸಲಾಗುತ್ತದೆ. ಕಂಪನಿಯು ಈ ಹಿಂದೆ ಆಗಸ್ಟ್ 6ರಂದು ಷೇರು ವಿಭಜನೆಯ ಪ್ರಸ್ತಾವನೆ ಪ್ರಕಟಿಸಿತ್ತು. ಅಕ್ಟೋಬರ್ 23ರಂದು ರೆಕಾರ್ಡ್ ಡೇಟ್ ಕುರಿತು ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿತ್ತು. ಇದೀಗ ನವೆಂಬರ್ 30ರಂದು ಷೇರುಗಳ ಮುಖಬೆಲೆ ಬದಲಾವಣೆಯಾಗಲಿದೆ.

ಕಂಪನಿಯ ಎರಡನೇ ತ್ರೈಮಾಸಿಕ ಫಲಿತಾಂಶ ಹೇಗಿದೆ?

ಇಂಟರ್‌ಆರ್ಕ್ ಬಿಲ್ಡಿಂಗ್ ಸೊಲ್ಯೂಷನ್ಸ್ 2026ರ ನವೆಂಬರ್ 4ರಂದು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿತ್ತು. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ₹30.69 ಕೋಟಿ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹32.28 ಕೋಟಿ ಲಾಭ ಗಳಿಸಿತ್ತು. ಈ ಮೂಲಕ ನಿವ್ವಳ ಲಾಭದಲ್ಲಿ ಶೇ.4.93ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ ಕಂಪನಿಯ ಕಾರ್ಯಾಚರಣೆಯ ಆದಾಯದಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹491.09 ಕೋಟಿ ಆದಾಯ ಗಳಿಸಿದ್ದ ಕಂಪನಿ, ಈ ಬಾರಿ ₹505.38 ಕೋಟಿ ಆದಾಯ ದಾಖಲಿಸಿದೆ. ಇದು ಶೇ.2.91ರಷ್ಟು ಹೆಚ್ಚಳವಾಗಿದೆ. ಕಾರ್ಯಾಚರಣಾ ಲಾಭವೂ ಕಳೆದ ವರ್ಷದ ₹41.65 ಕೋಟಿಯಿಂದ ಈ ಬಾರಿ ₹41.71 ಕೋಟಿಗೆ ತಲುಪಿದೆ.

ಐಪಿಒ ಮೂಲಕ ₹600 ಕೋಟಿಗೂ ಅಧಿಕ ಸಂಗ್ರಹ

ಇಂಟರ್‌ಆರ್ಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಈ ಹಿಂದೆ ಇಂಟರ್‌ಆರ್ಕ್ ಬಿಲ್ಡಿಂಗ್ ಪ್ರಾಡಕ್ಟ್ಸ್ ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು. 2024ರ ಆಗಸ್ಟ್‌ನಲ್ಲಿ ಕಂಪನಿಯು ಐಪಿಒ ಬಿಡುಗಡೆ ಮಾಡಿತ್ತು. ಪ್ರತಿ ಷೇರಿಗೆ ₹900ರ ವಿತರಣಾ ಬೆಲೆ ನಿಗದಿಪಡಿಸಿ ಒಟ್ಟು ₹600.29 ಕೋಟಿ ಬಂಡವಾಳ ಸಂಗ್ರಹಿಸಿತ್ತು. ಇದರಲ್ಲಿ ಸುಮಾರು ₹200 ಕೋಟಿ ಹೊಸ ಷೇರುಗಳ ವಿತರಣೆ ಮೂಲಕ ಹಾಗೂ ₹400 ಕೋಟಿ ಆಫರ್ ಫಾರ್ ಸೇಲ್ ಮೂಲಕ ಸಂಗ್ರಹಿಸಲಾಗಿತ್ತು. ಐಪಿಒಗೆ 79.11 ಪಟ್ಟು ಚಂದಾದಾರಿಕೆ ದೊರೆತಿತ್ತು. 2024ರ ಆಗಸ್ಟ್ 26ರಂದು ಕಂಪನಿಯ ಷೇರುಗಳು ಎನ್‌ಎಸ್‌ಇ ಮತ್ತು ಬಿಎಸ್‌ಇಯಲ್ಲಿ ಲಿಸ್ಟಿಂಗ್ ಆಗಿದ್ದವು.

ಷೇರು ಬೆಲೆಯಲ್ಲಿ ಇಳಿಕೆ

ನವೆಂಬರ್ 23, 2026ರಂದು ಎನ್‌ಎಸ್‌ಇಯಲ್ಲಿ ಕಂಪನಿಯ ಷೇರು ₹29 (1.80%) ಇಳಿಕೆಯಾಗಿ ₹1,585.40ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಕಳೆದ ಒಂದು ವಾರದಲ್ಲಿ ಶೇ.5.61ರಷ್ಟು ಕುಸಿತ ಕಂಡಿದ್ದರೆ, ಒಂದು ತಿಂಗಳ ಅವಧಿಯಲ್ಲಿ ಶೇ.6.49ರಷ್ಟು ಏರಿಕೆ ದಾಖಲಿಸಿತ್ತು. 2026ರ ಆರಂಭದಿಂದ ಇಲ್ಲಿಯವರೆಗೆ ಷೇರು ಶೇ.31.13ರಷ್ಟು ಕುಸಿದಿದೆ. ಕಳೆದ ಒಂದು ವರ್ಷದಲ್ಲಿ ಶೇ.36.04ರಷ್ಟು ಇಳಿಕೆ ಕಂಡಿದೆ. ಒಟ್ನಲ್ಲಿ ಇಂಟರ್‌ಆರ್ಕ್ ಬಿಲ್ಡಿಂಗ್ ಸೊಲ್ಯೂಷನ್ಸ್‌ನ ಮೊದಲ ಷೇರು ವಿಭಜನೆ ನವೆಂಬರ್ 30ರಂದು ನಡೆಯಲಿದ್ದು, ₹10 ಮುಖಬೆಲೆಯ ಒಂದು ಷೇರು ₹2 ಮುಖಬೆಲೆಯ ಐದು ಷೇರುಗಳಾಗಿ ಬದಲಾಗಲಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಷೇರು ಹೊಂದಿರುವ ಹೂಡಿಕೆದಾರರು ರೆಕಾರ್ಡ್ ಡೇಟ್ ಮತ್ತು ವಿಭಜನೆಯ ವಿವರಗಳತ್ತ ಗಮನ ಹರಿಸಿದ್ದಾರೆ.

Add Zee News as a Preferred Source
TAGS:
Personal Finance
Kannada News