• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್‌? ಟಿಕೆಟ್ ಬೆಲೆ ಹೆಚ್ಚಿಸಲು BMRCL ಸಿದ್ಧತೆ!?

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್‌? ಟಿಕೆಟ್ ಬೆಲೆ ಹೆಚ್ಚಿಸಲು BMRCL ಸಿದ್ಧತೆ!?

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಆರ್ಥಿಕ ವೆಚ್ಚ ಮತ್ತು ಸಾಲದ ಬಡ್ಡಿ ಹೊರೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ BMRCL ಶೇ.5ರಷ್ಟು ದರ ಹೆಚ್ಚಳಕ್ಕೆ ಮುಂದಾಗುವ ಸಾಧ್ಯತೆ ಇದೆ. 2025–26ನೇ ಸಾಲಿನಲ್ಲಿ ನಿಗಮದ ಆದಾಯ ₹1,624.62 ಕೋಟಿ ಇದ್ದರೂ, ಹಣಕಾಸು ವೆಚ್ಚ ₹1,793.03 ಕೋಟಿಗೆ ತಲುಪಿದೆ. ಪ್ರಯಾಣಿಕರ ಸಂಖ್ಯೆ ಮತ್ತು ಟಿಕೆಟ್ ಆದಾಯ ಹೆಚ್ಚಾದರೂ, ವಿದೇಶಿ ಸಾಲದ ವಿನಿಮಯ ನಷ್ಟ ಹಾಗೂ ಬಡ್ಡಿ ವೆಚ್ಚ ನಿಗಮದ ಮೇಲೆ ಒತ್ತಡ ಹೆಚ್ಚಿಸಿವೆ.

Written ByPuttaraj K Alur
Published: Nov 24, 2026, 12:43 IST|Updated: Nov 24, 2026, 12:55 IST
joinshare
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್‌? ಟಿಕೆಟ್ ಬೆಲೆ ಹೆಚ್ಚಿಸಲು BMRCL ಸಿದ್ಧತೆ!?
Image Credit: Namma Metro

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಮತ್ತೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸ್ತಿದೆಯಾ ರಾಜ್ಯ ಸರ್ಕಾರ?.....

ಮತ್ತೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸ್ತಿದೆಯಾ ರಾಜ್ಯ ಸರ್ಕಾರ?.....

2

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್‌? ಟಿಕೆಟ್ ಬೆಲೆ ಹೆಚ್ಚಿಸಲು BMRCL ಸಿದ್ಧತೆ!?

3

ಸಿನಿಮಾ ರಂಗಕ್ಕೆ ಕಿಯಾರಾ ಅಡ್ವಾಣಿ ಗುಡ್‌ಬೈ? ಟಾಕ್ಸಿಕ್ ಬೆಡಗಿ ಕೊಟ್ಟ ಸ್ಪಷ್ಟನೆ ಏನು?

4

ಸಿಎಂ ಡಿ.ಕೆ.ಶಿವಕುಮಾರ್‌ ಜಪಾನ್ ಪ್ರವಾಸ: ರಾಜ್ಯದಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಬಹುದು?

5

ಚಿಕ್ಕಮಗಳೂರಿನಲ್ಲಿ ಲೋಕಾಯುಕ್ತ ದಾಳಿ 8 ADLR ಕಚೇರಿಗಳ ಮೇಲೆ ಏಕಕಾಲಕ್ಕೆ ರೇಡ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Namma Metro Ticket Fare Hike: ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ಜೀವನಾಡಿಯಾಗಿರುವ 'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆ ಶಾಕ್ ಕಾದಿದೆ. ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ತನ್ನ ಹಣಕಾಸು ವೆಚ್ಚದ ಭಾರವನ್ನ ತಾಳಲಾರದೆ ಮತ್ತೆ ಟಿಕೆಟ್ ದರ ಏರಿಕೆ ಮಾಡಲು ಮುಂದಾಗಿದೆ. ರೂಪಾಯಿ ಮೌಲ್ಯ ಕುಸಿತ, ಸಾಲದ ಮೇಲಿನ ಬಡ್ಡಿ ಮತ್ತು ವಿದೇಶಿ ವಿನಿಮಯ ನಷ್ಟದಿಂದ ನಿಗಮಕ್ಕೆ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿದ್ದು, ಪ್ರಯಾಣಿಕರ ಮೇಲೆ ಹೊರೆ ಹಾಕುವುದು ಅನಿವಾರ್ಯವಾಗಿದೆ.

ಮೆಟ್ರೋ ಟಿಕೆಟ್ ದರ ಎಷ್ಟು ಹೆಚ್ಚಾಗಬಹುದು?

ಮೂಲಗಳ ಪ್ರಕಾರ, BMRCL ಮೆಟ್ರೋ ಟಿಕೆಟ್ ದರವನ್ನ ಶೇ.5ರಷ್ಟು ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ದರ ನಿಗದಿ ಸಮಿತಿಯ (FFC) ನಿಯಮದ ಪ್ರಕಾರ, ಪ್ರತಿ ವರ್ಷ ಗರಿಷ್ಠ ಶೇ.5ರ ಮಿತಿಯಲ್ಲಿ ಟಿಕೆಟ್ ದರ ಪರಿಷ್ಕರಣೆ ಮಾಡಲು ಅವಕಾಶವಿದೆ. ಇದೇ ನಿಯಮದಡಿ ಈ ಹಿಂದೆ ಫೆಬ್ರವರಿ 9, 2026ರಂದು ಕೂಡ ಶೇ.5ರಷ್ಟು (₹1 ರಿಂದ ₹5ರವರೆಗೆ) ದರ ಹೆಚ್ಚಿಸಲಾಗಿತ್ತು. ಇದೀಗ ಮುಂದಿನ ವರ್ಷವೂ ಅದೇ ರೀತಿ ಶೇ.5ರಷ್ಟು ದರ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಒಂದೇ ವರ್ಷದಲ್ಲಿ ಹಣಕಾಸು ವೆಚ್ಚ ಬರೋಬ್ಬರಿ ಶೇ.219.66ರಷ್ಟು (ಸುಮಾರು ಶೇ.220) ಹೆಚ್ಚಾಗಿದೆ. 2025-26ನೇ ಸಾಲಿನಲ್ಲಿ BMRCLನ ಒಟ್ಟು ಆದಾಯ ₹1,624.62 ಕೋಟಿ ಇದ್ದರೆ, ಕೇವಲ ಹಣಕಾಸು ವೆಚ್ಚವೇ ₹1,793.03 ಕೋಟಿ ತಲುಪಿದೆ. ಹೀಗಾಗಿ ಆದಾಯಕ್ಕಿಂತ ಸಾಲ ಮತ್ತು ಬಡ್ಡಿ ವೆಚ್ಚವೇ ಹೆಚ್ಚಾಗಿ ನಿಗಮ ನಷ್ಟದ ಸುಳಿಗೆ ಸಿಲುಕಿದೆ. ಮುಂದಿನ ದಿನಗಳಲ್ಲಿ BMRCLನ ಸಾಲದ ಹೊರೆ ಇನ್ನಷ್ಟು ಹೆಚ್ಚಾಗಲಿದೆ.

ಮಾರ್ಚ್ 2028ರ ವೇಳೆಗೆ ನಿಗಮದ ಒಟ್ಟು ಬಾಕಿ ಸಾಲ ₹56,087.49 ಕೋಟಿಗೆ ತಲುಪುವ ಅಂದಾಜಿದೆ. ವಿದೇಶಿ ಸಾಲದ ವಿನಿಮಯ ದರ ನಷ್ಟ ಮತ್ತು ಭದ್ರತಾ ವೆಚ್ಚಗಳನ್ನ ಕೇಂದ್ರ ಸರ್ಕಾರವೂ ಹಂಚಿಕೊಳ್ಳಬೇಕು ಹಾಗೂ ವಿನಿಮಯ ನಷ್ಟ ತಡೆಯಲು 'ಹೆಡ್ಜಿಂಗ್' ವ್ಯವಸ್ಥೆಗೆ ನೆರವು ನೀಡಬೇಕೆಂದು ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

ವಿಶೇಷ ಅಂದ್ರೆ ಈ ಹಿಂದೆ ಟಿಕೆಟ್ ದರ ಏರಿಕೆಯಾಗಿದ್ದರೂ 2025–26ನೇ ಸಾಲಿನಲ್ಲಿ ಮೆಟ್ರೋ ಬಳಸುವ ಪ್ರಯಾಣಿಕರ ಸಂಖ್ಯೆ ಶೇ.12.42ರಷ್ಟು ಹೆಚ್ಚಾಗಿದೆ. ಇದರಿಂದ ಟಿಕೆಟ್ ಆದಾಯ ಕೂಡ ಶೇ.49ರಷ್ಟು ಏರಿಕೆಯಾಗಿ ₹1,125 ಕೋಟಿ ತಲುಪಿದೆ. ಆದರೆ ರೂಪಾಯಿ ಮೌಲ್ಯ ಕುಸಿತ ಮತ್ತು ವಿದೇಶಿ ಸಾಲದ ಬಡ್ಡಿಯ ಹೊರೆ ಈ ಎಲ್ಲಾ ಆದಾಯವನ್ನ ನುಂಗಿ ಹಾಕುತ್ತಿದ್ದು, ಮತ್ತೊಮ್ಮೆ ಬೆಂಗಳೂರಿಗರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಆದಾಯದಲ್ಲೂ ಏರಿಕೆ!

ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2025–26ನೇ ಹಣಕಾಸು ವರ್ಷದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಶೇ.12.2ರಷ್ಟು ಏರಿಕೆಯಾಗಿ 31 ಕೋಟಿ ಪ್ರಯಾಣಿಕರ ಪ್ರಯಾಣ ದಾಖಲಾಗಿದೆ. ದಿನವೊಂದಕ್ಕೆ ಸರಾಸರಿ 8.5 ಲಕ್ಷ ಮಂದಿ ಮೆಟ್ರೋ ಬಳಸಿದ್ದಾರೆ. ಟಿಕೆಟ್ ಮೂಲಕ ಬಂದ ಆದಾಯವೂ ಶೇ.49ರಷ್ಟು ಹೆಚ್ಚಳವಾಗಿ ₹1,125.58 ಕೋಟಿಗೆ ತಲುಪಿದೆ. ಟಿಕೆಟ್ ಆದಾಯದ ಹೊರತಾಗಿಯೂ ಜಾಹೀರಾತು, ಮೆಟ್ರೋ ನಿಲ್ದಾಣಗಳಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆ, ಪಾರ್ಕಿಂಗ್ ಸೇರಿದಂತೆ ಇತರ ಮೂಲಗಳಿಂದಲೂ BMRCL ಆದಾಯ ಗಳಿಸುತ್ತಿದೆ. 2025–26ರಲ್ಲಿ ಈ ರೀತಿಯ ಟಿಕೆಟ್ ಹೊರತಾದ ಆದಾಯ ₹88.5 ಕೋಟಿಗೆ ಏರಿಕೆಯಾಗಿದೆ. 

ಪ್ರಮುಖ ಅಂಕಿ-ಅಂಶಗಳು 

- 2025–26ರಲ್ಲಿ ಸರಾಸರಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 8.5 ಲಕ್ಷ.
- ಟಿಕೆಟ್ ಆದಾಯ ₹1,125.58 ಕೋಟಿ.
- ಟಿಕೆಟ್ ಹೊರತಾದ ಆದಾಯ ₹88.5 ಕೋಟಿ.
- ಮೆಟ್ರೋ ರೈಲುಗಳ ಸಮಯಪಾಲನೆ ಶೇ.99.8ರಷ್ಟಿತ್ತು.

Add Zee News as a Preferred Source
TAGS:
Kannada News