DK Shivakumar Japan Visit: ಕರ್ನಾಟಕಕ್ಕೆ ವಿದೇಶಿ ಹೂಡಿಕೆಗಳನ್ನ ಆಕರ್ಷಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೈಗೊಂಡಿರುವ ಜಪಾನ್ ಪ್ರವಾಸ ರಾಜ್ಯದ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ವಿಚಾರವಾಗಿ ಗಮನ ಸೆಳೆದಿದೆ. ಜಪಾನ್ನ ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಟೊಯೋಟಾ ಸಂಸ್ಥೆಯೊಂದಿಗೆ ನಡೆದ ಮಾತುಕತೆಗಳು, ರಾಜ್ಯದಲ್ಲಿ ಹೂಡಿಕೆ ವಿಸ್ತರಣೆ ಹಾಗೂ ಹೊಸ ಉತ್ಪಾದನಾ ಚಟುವಟಿಕೆಗಳ ಸಾಧ್ಯತೆಗಳ ಕುರಿತು ನಿರೀಕ್ಷೆ ಮೂಡಿಸಿವೆ.
ಜಪಾನ್ನ ಟೊಯೋಟಾ ಮೋಟೋಮಾಚಿ ಘಟಕಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕಂಪನಿಯ ಪ್ರತಿನಿಧಿಗಳೊಂದಿಗೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಟೊಯೋಟಾ ಕಂಪನಿಯ ಹೂಡಿಕೆಯನ್ನ ವಿಸ್ತರಿಸುವುದು, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು ಮತ್ತು ಹೊಸ ತಂತ್ರಜ್ಞಾನ ಆಧಾರಿತ ವಾಹನಗಳ ಉತ್ಪಾದನೆಯ ಸಾಧ್ಯತೆಗಳು ಈ ಮಾತುಕತೆಯ ಪ್ರಮುಖ ವಿಚಾರಗಳಾಗಿವೆ.
ಹೈಬ್ರಿಡ್ ಟ್ಯಾಕ್ಸಿ ಯೋಜನೆಗೆ ಚರ್ಚೆ
It was a pleasure meeting over 20 trainees from Toyota’s Bidadi facility who are currently in Japan for an internship and specialised training under Toyota’s Global Skill-up programme, along with Minister Shri M. B. Patil. Wishing them a rewarding learning experience in Japan. I hope they return with valuable skills, knowledge and global exposure that will help them build bright careers and contribute to Karnataka’s industrial growth.
— DK Shivakumar (@DKShivakumar) November 23, 2026
ಜಪಾನ್ನಲ್ಲಿ ಜನಪ್ರಿಯವಾಗಿರುವ JPN TAXI ಮಾದರಿಯ LPG-ಹೈಬ್ರಿಡ್ ಟ್ಯಾಕ್ಸಿಯನ್ನ ಕರ್ನಾಟಕದಲ್ಲಿ ಪರಿಚಯಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ. ಈ ವಾಹನವನ್ನ ರಾಜ್ಯದಲ್ಲೇ ಉತ್ಪಾದಿಸುವ ಸಾಧ್ಯತೆಗಳ ಕುರಿತು ಟೊಯೋಟಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಯೋಜನೆ ಸಾಕಾರಗೊಂಡರೆ ವಾಹನ ಉತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳು ರಾಜ್ಯದಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಆದರೆ ಟ್ಯಾಕ್ಸಿ ಪರಿಚಯಿಸುವುದು ಅಥವಾ ಸ್ಥಳೀಯವಾಗಿ ಉತ್ಪಾದಿಸುವ ಕುರಿತು ಯಾವುದೇ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.
ಟೊಯೋಟಾ ಉತ್ಪಾದನಾ ಸಾಮರ್ಥ್ಯ ಹೆಚ್ಚಳದ ಗುರಿ
ಕರ್ನಾಟಕದಲ್ಲಿ ಟೊಯೋಟಾ ಕಂಪನಿಯ ಉತ್ಪಾದನಾ ಚಟುವಟಿಕೆಗಳನ್ನ ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನ 10 ಲಕ್ಷ ವಾಹನಗಳ ಮಟ್ಟಕ್ಕೆ ಹೆಚ್ಚಿಸುವ ಗುರಿಯ ಕುರಿತು ಮಾತುಕತೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಗುರಿ ಮತ್ತು ಹೂಡಿಕೆ ವಿಸ್ತರಣೆಯ ಯೋಜನೆಗಳು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ಬರುತ್ತವೆ ಎಂಬುದು ಗಮನಾರ್ಹವಾಗಿದೆ. ಇದರೊಂದಿಗೆ ಫ್ಲೆಕ್ಸ್-ಫ್ಯೂಯೆಲ್ ವಾಹನಗಳ ಉತ್ಪಾದನೆ ಮತ್ತು ಸಂಬಂಧಿತ ತಂತ್ರಜ್ಞಾನಗಳ ಬಗ್ಗೆಯೂ ಚರ್ಚಿಸಲಾಗಿದೆ. ವಾಹನೋದ್ಯಮದಲ್ಲಿ ಹೊಸ ತಂತ್ರಜ್ಞಾನಗಳಿಗೆ ಉತ್ತೇಜನ ನೀಡುವ ಮೂಲಕ ಕರ್ನಾಟಕವನ್ನ ಪ್ರಮುಖ ಉತ್ಪಾದನಾ ಕೇಂದ್ರವನ್ನಾಗಿ ಬೆಳೆಸುವ ಉದ್ದೇಶವೂ ಈ ಮಾತುಕತೆಯಲ್ಲಿದೆ.
Met with the leadership of Toyota Motor Corporation at their Motomachi Plant in Japan, along with Shri M. B. Patil, Hon’ble Minister for Large & Medium Industries and Infrastructure Development, as part of our investment outreach. Our mission is to bring more investments to Karnataka, create jobs for our youth and make Karnataka the number one state in FDI Inflows. Through our Beyond Bengaluru vision, we are working to take industrial growth, investment and opportunities beyond Bengaluru and across Karnataka. We want every region of our State to be part of Karnataka’s growth story.
— DK Shivakumar (@DKShivakumar) November 23, 2026
ಯುವಕರಿಗೆ ತರಬೇತಿ ಮತ್ತು ಉದ್ಯೋಗಾವಕಾಶ
ಟೊಯೋಟಾ ಕಂಪನಿಯ ಬಿಡದಿ ಘಟಕದಲ್ಲಿ ತರಬೇತಿ ಪಡೆದಿರುವ 20ಕ್ಕೂ ಹೆಚ್ಚು ಐಟಿಐ ಯುವಕರು ಜಪಾನ್ನಲ್ಲಿ ತರಬೇತಿ ಅಥವಾ ಇಂಟರ್ನ್ಶಿಪ್ ಪಡೆಯುತ್ತಿರುವ ವಿಚಾರವೂ ಪ್ರವಾಸದ ಸಂದರ್ಭದಲ್ಲಿ ಗಮನ ಸೆಳೆದಿದೆ. ರಾಜ್ಯದ ಯುವಕರಿಗೆ ಅಂತಾರಾಷ್ಟ್ರೀಯ ಮಟ್ಟದ ಕೈಗಾರಿಕಾ ತರಬೇತಿ ಒದಗಿಸುವ ಪ್ರಯತ್ನಗಳು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಾಗಿವೆ. ಟೊಯೋಟಾ ಕಂಪನಿಯ ಹೂಡಿಕೆ ವಿಸ್ತರಣೆ, ವಾಹನ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮತ್ತು ಹೊಸ ಮಾದರಿಯ ವಾಹನಗಳ ಉತ್ಪಾದನೆಗೆ ಸಂಬಂಧಿಸಿದ ಯೋಜನೆಗಳು ಮುಂದುವರಿದರೆ, ವಾಹನೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಅವಕಾಶ ದೊರೆಯಬಹುದು. ಆದರೆ ಈ ಪ್ರವಾಸದಿಂದ ನಿಖರವಾಗಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಅಂಕಿಅಂಶವನ್ನ ಇನ್ನೂ ಪ್ರಕಟಿಸಲಾಗಿಲ್ಲ.
'ಬಿಯಾಂಡ್ ಬೆಂಗಳೂರು' ಯೋಜನೆಗೂ ಒತ್ತು
Had a productive interaction with Toyota Motor Corporation Chairman, Managing Director and CEO Mr. Masakazu Yoshimura and his senior leadership at the Motomachi Plant in Japan, along with Minister Shri M. B. Patil. We had detailed discussions on Toyota’s plans to expand its manufacturing operations in Karnataka, with the company looking at scaling its vehicle production capacity to one million. I assured them of our Government’s full support and spoke about the possibilities of bringing Toyota’s affordable hybrid taxi model to Karnataka, along with exploring flex-fuel vehicle technology. Our discussions also focused on building skills and creating opportunities through this partnership. I interacted with over 20 trainees from Toyota’s Bidadi facility who are currently in Japan for an internship and specialised training under Toyota’s Global Skill-up programme. This exposure will help them gain valuable skills and knowledge in advanced manufacturing. The visit to the Motomachi Plant and Toyota Kaikan Museum gave us an opportunity to see Japan’s manufacturing capabilities, technological advancements and vision for future mobility at close quarters. Toyota’s approach to innovation, quality and manufacturing offers valuable lessons for Karnataka as we strengthen our own industrial ecosystem. I have invited the Toyota leadership to our upcoming Global Investors Meet. We want to build on this partnership, bring more investments into Karnataka, create new opportunities for our youth and ensure that industrial growth reaches every region of our state.
— DK Shivakumar (@DKShivakumar) November 23, 2026
ಬೆಂಗಳೂರು ಹೊರಭಾಗದಲ್ಲಿಯೂ ಕೈಗಾರಿಕಾ ಹೂಡಿಕೆಗಳನ್ನ ಆಕರ್ಷಿಸುವ 'ಬಿಯಾಂಡ್ ಬೆಂಗಳೂರು' ಯೋಜನೆಯ ಬಗ್ಗೆಯೂ ಜಪಾನ್ನ ಉದ್ಯಮ ವಲಯದೊಂದಿಗೆ ಚರ್ಚಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಮತ್ತು ಹೂಡಿಕೆಗಳನ್ನ ವಿಸ್ತರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಜಾಗತಿಕ ಹೂಡಿಕೆದಾರರನ್ನ ಕರ್ನಾಟಕದತ್ತ ಸೆಳೆಯಲು ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಆಹ್ವಾನ ನೀಡಲಾಗಿದೆ.
ಒಟ್ನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜಪಾನ್ ಪ್ರವಾಸದಲ್ಲಿ ಟೊಯೋಟಾ ಕಂಪನಿಯೊಂದಿಗೆ ನಡೆದ ಮಾತುಕತೆಗಳು ಕರ್ನಾಟಕದ ವಾಹನೋದ್ಯಮ, ಹೂಡಿಕೆ ಮತ್ತು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಹಲವು ಸಾಧ್ಯತೆಗಳನ್ನ ಮುಂದಿಟ್ಟಿವೆ. ಆದರೆ ಹೂಡಿಕೆ ಪ್ರಮಾಣ, ಯೋಜನೆಗಳ ಅನುಷ್ಠಾನ ಮತ್ತು ಉದ್ಯೋಗ ಸೃಷ್ಟಿಯ ನಿಖರ ಸಂಖ್ಯೆ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹೀಗಾಗಿ ಈ ಮಾತುಕತೆಗಳು ಮುಂದಿನ ಹಂತದಲ್ಲಿ ಯಾವ ರೀತಿಯ ಯೋಜನೆಗಳಾಗಿ ರೂಪುಗೊಳ್ಳಲಿವೆ ಎಂಬುದನ್ನ ಕಾದುನೋಡಬೇಕಿದೆ.