• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಶಿವಮೊಗ್ಗ
  • /ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಅಟ್ಟಹಾಸ.. ರೈತನ ಮೇಲೆ 500ಕ್ಕೂ ಹೆಚ್ಚು ಹೆಜ್ಜೇನುಗಳ ದಾಳಿ!

ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಅಟ್ಟಹಾಸ.. ರೈತನ ಮೇಲೆ 500ಕ್ಕೂ ಹೆಚ್ಚು ಹೆಜ್ಜೇನುಗಳ ದಾಳಿ!

Honeybees attack :ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಹಿಂಡು ರೈತನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಏಕಿ ಮುಗಿಬಿದ್ದ 500ಕ್ಕೂ ಅಧಿಕ ಹೆಜ್ಜೇನುಗಳು ದೇಹದ ತುಂಬೆಲ್ಲ ಕಚ್ಚಿವೆ. ಹೆಜ್ಜೇನುಗಳ ದಾಳಿಯಿಂದ ರೈತ ತೀವ್ರ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Written ByRamya. R. Gowda
Published: Nov 24, 2026, 13:08 IST|Updated: Nov 24, 2026, 13:21 IST
joinshare
ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಅಟ್ಟಹಾಸ.. ರೈತನ ಮೇಲೆ 500ಕ್ಕೂ ಹೆಚ್ಚು ಹೆಜ್ಜೇನುಗಳ ದಾಳಿ!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಮೈಸೂರಲ್ಲಿ ಬುಧವಾರದಂದು ಮಾಂಸ ಮಾರಾಟ ಬಂದ್‌! ಯಾಕೆ ಗೊತ್ತಾ?

ಮೈಸೂರಲ್ಲಿ ಬುಧವಾರದಂದು ಮಾಂಸ ಮಾರಾಟ ಬಂದ್‌! ಯಾಕೆ ಗೊತ್ತಾ?

2

ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಅಟ್ಟಹಾಸ.. ರೈತನ ಮೇಲೆ 500ಕ್ಕೂ ಹೆಚ್ಚು ಹೆಜ್ಜೇನುಗಳ ದಾಳಿ!

3

1 ಷೇರಿಗೆ ಸಿಗಲಿದೆ 5 ಷೇರು! ಮೊದಲ ಬಾರಿಗೆ ಷೇರು ವಿಭಜನೆ ಘೋಷಣೆ; ನ.30 ರೆಕಾರ್ಡ್ ಡೇಟ್

4

ಮತ್ತೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸ್ತಿದೆಯಾ ರಾಜ್ಯ ಸರ್ಕಾರ?.....

5

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್‌? ಟಿಕೆಟ್ ಬೆಲೆ ಹೆಚ್ಚಿಸಲು BMRCL ಸಿದ್ಧತೆ!?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Honeybees attack :  ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಹಿಂಡು ರೈತನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಏಕಿ ಮುಗಿಬಿದ್ದ 500ಕ್ಕೂ ಅಧಿಕ ಹೆಜ್ಜೇನುಗಳು ದೇಹದ ತುಂಬೆಲ್ಲ ಕಚ್ಚಿವೆ. ಹೆಜ್ಜೇನುಗಳ ದಾಳಿಯಿಂದ ರೈತ ತೀವ್ರ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ರೈತನ ಜೊತೆ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೂ ಹೆಜ್ಜೇನುಗಳು ದಾಳಿ ಮಾಡಿವೆ.

ಚಿಕ್ಕಮಗಳೂರು ಹೊರವಲಯದ ಹಿರೇಕೊಳಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಮಾರ್ ಎಂಬ ರೈತ ಎಂದಿನಂತೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ಜೊತೆ ಇಬ್ಬರು ಕಾರ್ಮಿಕರೂ ಕೆಲಸದಲ್ಲಿ ತೊಡಗಿದ್ದರು. ಆದರೆ ಇದ್ದಕ್ಕಿದ್ದಂತೆ ಹೆಜ್ಜೇನುಗಳ ಹಿಂಡು ದಾಳಿ ಮಾಡಿದೆ.

ನೂರಾರು ಸಂಖ್ಯೆಯಲ್ಲಿ ಬಂದ ಹೆಜ್ಜೇನುಗಳು ರೈತ ಕುಮಾರ್ ಅವರನ್ನು ಸುತ್ತುವರಿದು ದಾಳಿ ನಡೆಸಿವೆ. ಸುಮಾರು 500ಕ್ಕೂ ಅಧಿಕ ಹೆಜ್ಜೇನುಗಳು ಕುಮಾರ್ ಅವರ ದೇಹದ ತುಂಬೆಲ್ಲ ಕಚ್ಚಿವೆ. ಹೆಜ್ಜೇನುಗಳ ದಾಳಿಯಿಂದ ತೀವ್ರ ಅಸ್ವಸ್ಥಗೊಂಡ ಕುಮಾರ್ ಅವರನ್ನು ತಕ್ಷಣ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಕುಮಾರ್ ಜೊತೆ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೂ ಹೆಜ್ಜೇನುಗಳು ದಾಳಿ ನಡೆಸಿವೆ. ಏಕಾಏಕಿ ನಡೆದ ಹೆಜ್ಜೇನುಗಳ ದಾಳಿಯಿಂದ ತೋಟದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೆಜ್ಜೇನುಗಳ ಭೀಕರ ದಾಳಿಗೆ ರೈತ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಮಂಗಳೂರಲ್ಲಿ ಟ್ಯಾಕ್ಸಿ ಚಾಲಕರ ಹೋರಾಟಕ್ಕೆ ಜಯ.. ಅದಾನಿ ಸಂಸ್ಥೆಗೆ ಬಿಸಿ ಮುಟ್ಟಿಸಿದ ಸತ್ಯಾಗ್ರಹ!

ಇತ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟ್ಯಾಕ್ಸಿ ಚಾಲಕರು ಅದಾನಿ ಸಂಸ್ಥೆಯ ವಿರುದ್ಧ ನಡೆಸಿದ ಏಳು ದಿನಗಳ ನಿರಂತರ ಧರಣಿ ಸತ್ಯಾಗ್ರಹ ಯಶಸ್ವಿಯಾಗಿದೆ. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿದ್ದ ಬಂದ್‌ ಅನ್ನು ಟ್ಯಾಕ್ಸಿ ಚಾಲಕರು ಹಿಂಪಡೆದಿದ್ದಾರೆ.

ನವೆಂಬರ್ 15ರಿಂದ 23ರವರೆಗೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಸಮೀಪ ಟ್ಯಾಕ್ಸಿ ಚಾಲಕರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಅದಾನಿ ಸಂಸ್ಥೆಯ ವಿರುದ್ಧ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಭಯ ಜಿಲ್ಲೆಗಳ ಟ್ಯಾಕ್ಸಿ ಚಾಲಕರು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿದ್ದರು.

ಈ ಹೋರಾಟಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಟ್ಯಾಕ್ಸಿ ಸಂಘಟನೆಗಳ ಪದಾಧಿಕಾರಿಗಳು ಕೈಜೋಡಿಸಿದ್ದರು. ಅಲ್ಲದೆ, ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ಕೂಡ ಟ್ಯಾಕ್ಸಿ ಚಾಲಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

ಏಳು ದಿನಗಳ ಕಾಲ ನಡೆದ ನಿರಂತರ ಸತ್ಯಾಗ್ರಹಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಹೋರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಬಂದ್‌ ನಿರ್ಧಾರವನ್ನು ಚಾಲಕರು ಹಿಂಪಡೆದಿದ್ದಾರೆ. ಒಟ್ಟಿನಲ್ಲಿ, ತಮ್ಮ ಹಕ್ಕು ಮತ್ತು ನ್ಯಾಯಯುತ ಬೇಡಿಕೆಗಳಿಗಾಗಿ ಒಂದಾಗಿ ಹೋರಾಟ ನಡೆಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟ್ಯಾಕ್ಸಿ ಚಾಲಕರ ಸತ್ಯಾಗ್ರಹ ಸದ್ಯಕ್ಕೆ ಯಶಸ್ಸು ಕಂಡಿದೆ.

 

Add Zee News as a Preferred Source
TAGS:
Kannada News