• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದಿನ ಭವಿಷ್ಯ 25 ಅಕ್ಟೋಬರ್ 2026: ವೃಷಭ, ಕರ್ಕಾಟಕ ಸೇರಿ ಈ ರಾಶಿಗಳಿಗೆ ಇಂದು ಅದೃಷ್ಟದ ಬೆಂಬಲ!

ದಿನ ಭವಿಷ್ಯ 25 ಅಕ್ಟೋಬರ್ 2026: ವೃಷಭ, ಕರ್ಕಾಟಕ ಸೇರಿ ಈ ರಾಶಿಗಳಿಗೆ ಇಂದು ಅದೃಷ್ಟದ ಬೆಂಬಲ!

ಶರದ್ ಪೂರ್ಣಿಮೆ ಮತ್ತು ಕೋಜಗರಿ ಪೂಜೆಯ ವಿಶೇಷ ದಿನವಾದ ಇಂದು ವೃಷಭ, ಮಿಥುನ, ಕರ್ಕಾಟಕ, ತುಲಾ ಸೇರಿದಂತೆ ಹಲವು ರಾಶಿಗಳಿಗೆ ಉದ್ಯೋಗ, ಹಣಕಾಸು ಹಾಗೂ ಕುಟುಂಬ ಜೀವನದಲ್ಲಿ ಅನುಕೂಲಕರ ಫಲಗಳ ನಿರೀಕ್ಷೆಯಿದೆ. ಮೇಷ ರಾಶಿಯವರಿಗೆ ಹೊಸ ಕಾರ್ಯಗಳಲ್ಲಿ ಯಶಸ್ಸಿನ ಸಾಧ್ಯತೆಯಿದ್ದರೆ, ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಕನ್ಯಾ ಮತ್ತು ಕುಂಭ ರಾಶಿಯವರು ಅನಗತ್ಯ ವಾದಗಳಿಂದ ದೂರವಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

Written ByPuttaraj K Alur
Published: Oct 25, 2026, 07:14 AM IST|Updated: Oct 25, 2026, 07:36 AM IST
joinshare
ದಿನ ಭವಿಷ್ಯ 25 ಅಕ್ಟೋಬರ್ 2026: ವೃಷಭ, ಕರ್ಕಾಟಕ ಸೇರಿ ಈ ರಾಶಿಗಳಿಗೆ ಇಂದು ಅದೃಷ್ಟದ ಬೆಂಬಲ!
Image Credit: Horoscope Today

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ! ಮುಂದಿನ 4–5 ದಿನ ಭಾರೀ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ! ಮುಂದಿನ 4–5 ದಿನ ಭಾರೀ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

2

ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ?: ಏಕವಚನದಲ್ಲೇ ಕ್ಲಾಸ್ ತಗೊಂಡ ಚಲುವರಾಯಸ್ವಾಮಿ

3

ದಿನ ಭವಿಷ್ಯ 25 ಅಕ್ಟೋಬರ್ 2026: ವೃಷಭ, ಕರ್ಕಾಟಕ ಸೇರಿ ಈ ರಾಶಿಗಳಿಗೆ ಇಂದು ಅದೃಷ್ಟದ ಬೆಂಬಲ!

4

ನಟ ಧನ್ವೀರ್ ಗೌಡ ವಿರುದ್ಧ ಸಾಲು ಸಾಲು ದೂರು! ಎರಡು ಠಾಣೆಗಳಲ್ಲಿ ಎನ್‌ಸಿಆರ್ ದಾಖಲು!

5

ನವೆಂಬರ್ 1ರಿಂದ GST ರೂಲ್ಸ್‌ ಬದಲು? ತೆರಿಗೆದಾರರಿಗೆ ಸಿಹಿಸುದ್ದಿ ನೀಡಲಿದೆಯಾ ಕೇಂದ್ರ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Horoscope Today October 25 2026: ಇಂದು ಭಾನುವಾರ, ಅಶ್ವಿನಿ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯೊಂದಿಗೆ ದಿನ ಆರಂಭವಾಗುತ್ತದೆ. ಬೆಳಗ್ಗೆ 11:57ರವರೆಗೆ ಚತುರ್ದಶಿ ತಿಥಿ ಇರಲಿದ್ದು, ನಂತರ ಪೂರ್ಣಿಮಾ ತಿಥಿ ಆರಂಭವಾಗಲಿದೆ. ಇಂದು ಶರದ್ ಪೂರ್ಣಿಮೆ ಹಾಗೂ ಕೋಜಗರಿ ಪೂಜೆಯೂ ಇರುವುದರಿಂದ ಧಾರ್ಮಿಕ ದೃಷ್ಟಿಯಿಂದ ವಿಶೇಷ ದಿನವಾಗಿದೆ. ಹರ್ಷಣ ಯೋಗ ಸಂಜೆ 5:22ರವರೆಗೆ ಇರಲಿದ್ದು, ರೇವತಿ ನಕ್ಷತ್ರ ಸಂಜೆ 7:22ರವರೆಗೆ ಇರಲಿದೆ. ಇಂದಿನ ಜ್ಯೋತಿಷ್ಯ ಫಲಗಳ ಪ್ರಕಾರ, ಕೆಲವು ರಾಶಿಯವರಿಗೆ ಉದ್ಯೋಗ, ಹಣಕಾಸು, ಕುಟುಂಬ ಮತ್ತು ಆರೋಗ್ಯದ ವಿಚಾರಗಳಲ್ಲಿ ಅನುಕೂಲಕರ ಪರಿಸ್ಥಿತಿ ಎದುರಾಗಬಹುದು. ಇನ್ನು ಕೆಲವು ರಾಶಿಯವರು ನಿರ್ಧಾರಗಳನ್ನ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವುದು ಉತ್ತಮ. ಮೇಷದಿಂದ ಮೀನದವರೆಗಿನ 12 ರಾಶಿಗಳ ಇಂದಿನ ಭವಿಷ್ಯ, ಅದೃಷ್ಟದ ಬಣ್ಣ ಮತ್ತು ಅದೃಷ್ಟದ ಸಂಖ್ಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಪ್ರಗತಿ ಕಾಣುವ ಸಾಧ್ಯತೆಯಿದೆ. ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸಲಿದ್ದು, ಹೊಸ ಕೆಲಸ ಆರಂಭಿಸುವವರಿಗೆ ಯಶಸ್ಸು ದೊರೆಯುವ ನಿರೀಕ್ಷೆಯಿದೆ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿರುವವರು ತಯಾರಿಯನ್ನ ಮುಂದುವರಿಸುವುದು ಉತ್ತಮ. ಆಸ್ತಿಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಆರೋಗ್ಯವೂ ಉತ್ತಮವಾಗಿರಲಿದೆ.

ಅದೃಷ್ಟದ ಬಣ್ಣ: ಪೀಚ್ | ಅದೃಷ್ಟದ ಸಂಖ್ಯೆ: 5

ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಶುಭಕರ ದಿನವಾಗಬಹುದು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಪರಿಹಾರ ದೊರೆಯುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಬಡ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಸಿಗಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಅನಗತ್ಯ ಚಿಂತನೆಗಳನ್ನ ಕಡಿಮೆ ಮಾಡಿ ಕೆಲಸದತ್ತ ಗಮನ ಹರಿಸುವುದು ಉತ್ತಮ. ಹಳೆಯ ಸಾಲ ಮರುಪಾವತಿಸುವ ಸಾಧ್ಯತೆಯಿದ್ದು, ಸಿವಿಲ್ ಎಂಜಿನಿಯರ್‌ಗಳು ಹೊಸ ಯೋಜನೆ ಆರಂಭಿಸಬಹುದು.

ಅದೃಷ್ಟದ ಬಣ್ಣ: ಕಿತ್ತಳೆ | ಅದೃಷ್ಟದ ಸಂಖ್ಯೆ: 6

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ಸಂತಸದ ದಿನವಾಗಿರಲಿದೆ. ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸುವ ಮೂಲಕ ಕುಟುಂಬದವರ ಮೆಚ್ಚುಗೆ ಗಳಿಸಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಸರ್ಕಾರಿ ವಲಯದವರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಂಡರೆ ಬೆಂಬಲ ದೊರೆಯಬಹುದು. ಪ್ರೀತಿಪಾತ್ರರ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗುವ ಸಾಧ್ಯತೆಯಿದೆ. ಆದಾಯ ಹೆಚ್ಚಿಸಿಕೊಳ್ಳಲು ಹೊಸ ಮಾರ್ಗಗಳು ತೆರೆದುಕೊಳ್ಳಬಹುದು.

ಅದೃಷ್ಟದ ಬಣ್ಣ: ಕೆನ್ನೇರಳೆ | ಅದೃಷ್ಟದ ಸಂಖ್ಯೆ: 3

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಇಂದು ಪ್ರಯೋಜನಕಾರಿ ದಿನವಾಗಬಹುದು. ಹಿರಿಯರ ಸಲಹೆಗಳನ್ನ ಪಾಲಿಸುವುದರಿಂದ ಅನುಕೂಲವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವ ನಿರೀಕ್ಷೆಯಿದೆ. ಎಲೆಕ್ಟ್ರಿಷಿಯನ್‌ಗಳು ವ್ಯಾಪಾರದಲ್ಲಿ ಉತ್ತಮ ಲಾಭ ಕಾಣಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದ್ದು, ಸಾಮಾಜಿಕ ಗೌರವ ಹೆಚ್ಚಾಗುವ ಸಾಧ್ಯತೆಯಿದೆ. ಮಕ್ಕಳಿಂದ ಸಂತಸದ ಸುದ್ದಿ ಸಿಗಬಹುದು.

ಅದೃಷ್ಟದ ಬಣ್ಣ: ಮರೂನ್ | ಅದೃಷ್ಟದ ಸಂಖ್ಯೆ: 1

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಸಕಾರಾತ್ಮಕ ದಿನವಾಗಿರಲಿದೆ. ಎಂ.ಟೆಕ್ ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳಲ್ಲಿ ಗೊಂದಲ ಉಂಟಾಗಬಹುದು; ಈ ಸಂದರ್ಭದಲ್ಲಿ ಸೂಕ್ತ ಸಲಹೆ ಪಡೆಯುವುದು ಉತ್ತಮ. ಹೊಸ ಪ್ರಯತ್ನಗಳತ್ತ ಆಸಕ್ತಿ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದ್ದು, ಬಹುಕಾಲದಿಂದ ಬಯಸಿದ ವಸ್ತುವನ್ನ ಖರೀದಿಸುವ ಅವಕಾಶ ಸಿಗಬಹುದು. ಕೆಲಸದ ಸ್ಥಳದಲ್ಲಿ ತಮ್ಮ ಉತ್ತಮ ಚಿತ್ರಣ ರೂಪಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ.

ಅದೃಷ್ಟದ ಬಣ್ಣ: ಹಳದಿ | ಅದೃಷ್ಟದ ಸಂಖ್ಯೆ: 9

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳು ಎದುರಾಗಬಹುದು. ಅನಗತ್ಯ ವಾದಗಳಿಂದ ದೂರವಿರುವುದು ಉತ್ತಮ. ಸ್ನೇಹಿತರಿಂದ ಬೆಂಬಲ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗಬಹುದು; ಅವರಿಂದ ಉಪಯುಕ್ತ ಮಾಹಿತಿ ಸಿಗುವ ಸಾಧ್ಯತೆಯಿದೆ. ವೈವಾಹಿಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದ್ದು, ಸಂಗಾತಿಯೊಂದಿಗೆ ಮನದ ಮಾತುಗಳನ್ನ ಹಂಚಿಕೊಳ್ಳಬಹುದು. ಕುಟುಂಬದಿಂದ ದೂರ ಕೆಲಸ ಮಾಡುತ್ತಿರುವವರಿಗೆ ಸಂಬಂಧಿಕರನ್ನ ಭೇಟಿಯಾಗುವ ಅವಕಾಶ ದೊರೆಯಬಹುದು.

ಅದೃಷ್ಟದ ಬಣ್ಣ: ನೀಲಿ | ಅದೃಷ್ಟದ ಸಂಖ್ಯೆ: 1

ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ಖಾಸಗಿ ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಳವಾಗುವ ಸಾಧ್ಯತೆಯಿದ್ದು, ಆರ್ಥಿಕ ಸ್ಥಿತಿ ಸುಧಾರಿಸಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ. ಧಾರ್ಮಿಕ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸಬಹುದು. ಪ್ರಮುಖ ನಿರ್ಧಾರಗಳಲ್ಲಿ ಕುಟುಂಬದ ಬೆಂಬಲ ದೊರೆಯಲಿದ್ದು, ಆರೋಗ್ಯದ ದೃಷ್ಟಿಯಿಂದ ದಿನ ಉತ್ಸಾಹದಿಂದ ಕೂಡಿರಬಹುದು.

ಅದೃಷ್ಟದ ಬಣ್ಣ: ಹಸಿರು | ಅದೃಷ್ಟದ ಸಂಖ್ಯೆ: 7

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಸಂತಸದ ದಿನವಾಗುವ ಸಾಧ್ಯತೆಯಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೆಲಸದಲ್ಲಿ ಪರಿಶ್ರಮಕ್ಕೆ ತಕ್ಕ ಯಶಸ್ಸು ಸಿಗಬಹುದು. ವ್ಯಾಪಾರದಲ್ಲಿ ನಿಧಾನಗತಿ ಕಡಿಮೆಯಾಗಿ ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ. ಸ್ನೇಹಿತರೊಂದಿಗೆ ಸಣ್ಣ ಸಮಾರಂಭ ಆಯೋಜಿಸಬಹುದು. ಹೊಸ ವಾಹನ ಖರೀದಿಸಲು ಬಯಸುವವರಿಗೆ ದಿನ ಅನುಕೂಲಕರವಾಗಿರಬಹುದು. ಆರೋಗ್ಯವೂ ಉತ್ತಮವಾಗಿರಲಿದೆ.

ಅದೃಷ್ಟದ ಬಣ್ಣ: ಗುಲಾಬಿ | ಅದೃಷ್ಟದ ಸಂಖ್ಯೆ: 1

ಧನು ರಾಶಿ: ಧನು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ದೊರೆಯಬಹುದು. ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ಮಾತನಾಡುವಾಗ ಮೃದುವಾದ ಧೋರಣೆ ಅನುಸರಿಸುವುದು ಸಂಬಂಧವನ್ನ ಉತ್ತಮಗೊಳಿಸಬಹುದು. ಕುಟುಂಬದ ಸಂತೋಷ ಮತ್ತು ಪರಸ್ಪರ ಬಾಂಧವ್ಯ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಬಹುದು. ಮನೆ ನಿರ್ಮಾಣ ಕಾರ್ಯಗಳೂ ವೇಗ ಪಡೆಯುವ ಸಾಧ್ಯತೆಯಿದೆ.

ಅದೃಷ್ಟದ ಬಣ್ಣ: ಗೋಲ್ಡನ್ | ಅದೃಷ್ಟದ ಸಂಖ್ಯೆ: 7

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಸಕಾರಾತ್ಮಕ ಶಕ್ತಿ ತುಂಬಿದ ದಿನವಾಗಿರಲಿದೆ. ಇಷ್ಟದ ವಾಹನ ಖರೀದಿಸುವ ಆಲೋಚನೆ ಮೂಡಬಹುದು. ಮಗಳು ಬಯಸಿದ ಕ್ಷೇತ್ರದಲ್ಲಿ ಆಯ್ಕೆಯಾಗುವ ಸಾಧ್ಯತೆಯಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಆದರೆ ಆತುರದ ನಿರ್ಧಾರಗಳು ತಪ್ಪುಗಳಿಗೆ ಕಾರಣವಾಗಬಹುದಾದ್ದರಿಂದ ಎಚ್ಚರಿಕೆ ಅಗತ್ಯ. ಜೀವನಶೈಲಿಯಲ್ಲಿ ಉತ್ತಮ ಬದಲಾವಣೆಗಳಾಗಬಹುದು. ಮೆಕ್ಯಾನಿಕಲ್ ಎಂಜಿನಿಯರ್‌ಗಳಿಗೆ ಹೊಸ ಗುರಿ ದೊರೆಯಬಹುದು.

ಅದೃಷ್ಟದ ಬಣ್ಣ: ನೇರಳೆ | ಅದೃಷ್ಟದ ಸಂಖ್ಯೆ: 4

ಕುಂಭ ರಾಶಿ: ಕುಂಭ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳಿರಬಹುದು. ಕರಿದ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿರುವುದರಿಂದ ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸುವುದು ಉತ್ತಮ. ರಾಜಕೀಯ ಜವಾಬ್ದಾರಿಗಳು ಹೆಚ್ಚಾಗಬಹುದು. ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳು ದೂರವಾಗುವ ಸಾಧ್ಯತೆಯಿದೆ. ಹಿರಿಯರ ಮಾತುಗಳನ್ನ ತಾಳ್ಮೆಯಿಂದ ಆಲಿಸಬೇಕು. ಸಂಜೆ ಕುಟುಂಬದವರೊಂದಿಗೆ ಶಾಪಿಂಗ್‌ಗೆ ತೆರಳುವ ಅವಕಾಶವಿರಬಹುದು. ವ್ಯಾಪಾರದಲ್ಲಿ ಗ್ರಾಹಕರೊಂದಿಗೆ ಸ್ನೇಹಪರವಾಗಿ ವರ್ತಿಸುವುದು ಉತ್ತಮ.

ಅದೃಷ್ಟದ ಬಣ್ಣ: ಕೆಂಪು | ಅದೃಷ್ಟದ ಸಂಖ್ಯೆ: 5

ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಬಹುದು. ಎಲ್ಲರೊಂದಿಗೂ ಪ್ರೀತಿಯಿಂದ ವರ್ತಿಸಿ, ವಿವೇಕದಿಂದ ನಿರ್ಧಾರಗಳನ್ನ ತೆಗೆದುಕೊಳ್ಳುವುದು ಉತ್ತಮ. ಆದಾಯ ಗಳಿಸಲು ಹೊಸ ಮಾರ್ಗಗಳು ತೆರೆದುಕೊಳ್ಳುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಬರವಣಿಗೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಹಾರ್ಡ್‌ವೇರ್ ವ್ಯಾಪಾರಿಗಳಿಗೆ ಪ್ರಗತಿಯ ಅವಕಾಶವಿದೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳ ಪರಿಚಯ ಹೆಚ್ಚಾಗಬಹುದು. ವೈವಾಹಿಕ ಭಿನ್ನಾಭಿಪ್ರಾಯಗಳು ಪರಿಹಾರವಾಗುವ ಸಾಧ್ಯತೆಯಿದೆ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೂ ದಿನ ಅನುಕೂಲಕರವಾಗಿರಬಹುದು.

ಅದೃಷ್ಟದ ಬಣ್ಣ: ಬೂದು | ಅದೃಷ್ಟದ ಸಂಖ್ಯೆ: 3

Add Zee News as a Preferred Source
TAGS:
Astro Tips
Kannada News