• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ?: ಏಕವಚನದಲ್ಲೇ ಕ್ಲಾಸ್ ತಗೊಂಡ ಚಲುವರಾಯಸ್ವಾಮಿ

ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ?: ಏಕವಚನದಲ್ಲೇ ಕ್ಲಾಸ್ ತಗೊಂಡ ಚಲುವರಾಯಸ್ವಾಮಿ

ಸ್ಟಿಂಗ್ ಆಪರೇಷನ್‌ ಕ್ಯಾಸೆಟ್‌ ವಿವಾದದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕ್ಯಾಸೆಟ್‌ ಮಾಡಿಸಿದವರೇ ಈಗ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಬಗ್ಗೆ ಮಾತನಾಡುವುದು ಯಾವ ನೈತಿಕತೆ ಎಂದು ಪ್ರಶ್ನಿಸಿ, ಕುಮಾರಸ್ವಾಮಿ ನಾಚಿಕೆಪಟ್ಟುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

Written ByPuttaraj K Alur
Published: Oct 25, 2026, 08:20 AM IST|Updated: Oct 25, 2026, 08:37 AM IST
joinshare
ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ?: ಏಕವಚನದಲ್ಲೇ ಕ್ಲಾಸ್ ತಗೊಂಡ ಚಲುವರಾಯಸ್ವಾಮಿ
Image Credit: Cheluvarayaswamy

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
FACT CHECK: ರಶ್ಮಿಕಾರನ್ನು ವಿಜಯ್ ಅನ್‌ಫಾಲೋ ಮಾಡಿದ್ದೇಕೆ? ದಾಂಪತ್ಯದಲ್ಲಿ ಬಿರುಕು ಮೂಡಿದ್ದು ನಿಜವೇ!

FACT CHECK: ರಶ್ಮಿಕಾರನ್ನು ವಿಜಯ್ ಅನ್‌ಫಾಲೋ ಮಾಡಿದ್ದೇಕೆ? ದಾಂಪತ್ಯದಲ್ಲಿ ಬಿರುಕು ಮೂಡಿದ್ದು ನಿಜವೇ!

2

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್‌! ಎಸ್ಕೇಪ್‌ ಆದವರಿಗೆ ಬಲೆ ಬೀಸಿದ ಸಿಸಿಬಿ..!

3

ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ! ಮುಂದಿನ 4–5 ದಿನ ಭಾರೀ ಮಳೆ ಮುನ್ಸೂಚನೆ; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

4

ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ?: ಏಕವಚನದಲ್ಲೇ ಕ್ಲಾಸ್ ತಗೊಂಡ ಚಲುವರಾಯಸ್ವಾಮಿ

5

ದಿನ ಭವಿಷ್ಯ 25 ಅಕ್ಟೋಬರ್ 2026: ವೃಷಭ, ಕರ್ಕಾಟಕ ಸೇರಿ ಈ ರಾಶಿಗಳಿಗೆ ಇಂದು ಅದೃಷ್ಟದ ಬೆಂಬಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Chaluvarayaswamy on HD Kumaraswamy: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಹಾಗೂ ಕ್ಯಾಸೆಟ್ ವಿವಾದ ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡುವುದಾಗಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಚಲುವರಾಯಸ್ವಾಮಿ, “ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ? ಮರ್ಯಾದೆ ಇದ್ದಿದ್ದರೆ ಇಂತಹ ಮಾತುಗಳನ್ನಾಡುತ್ತಿರಲಿಲ್ಲ” ಎಂದು ಕಿಡಿಕಾರಿದ್ದಾರೆ.

ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ನಡುವೆಯೇ, ಕುಮಾರಸ್ವಾಮಿ ಅವರು ಸಿದ್ದರಾಮಯ್ಯರನ್ನ ಭೇಟಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತು ಕುಮಾರಸ್ವಾಮಿ ಕೂಡ ಸ್ಪಷ್ಟನೆ ನೀಡಿದ್ದು, ಭವಿಷ್ಯದಲ್ಲಿ ಅನಿವಾರ್ಯ ಪರಿಸ್ಥಿತಿ ಎದುರಾದರೆ ಖಂಡಿತವಾಗಿಯೂ ಭೇಟಿ ಮಾಡುವುದಾಗಿ ಹೇಳಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚಲುವರಾಯಸ್ವಾಮಿ, ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಕ್ಯಾಸೆಟ್ ಮಾಡಿಸಿದವರೇ ಈಗ ನೈತಿಕತೆಯ ಮಾತನಾಡುತ್ತಾರೆ’

ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಕ್ಯಾಸೆಟ್ ವಿಚಾರವನ್ನ ಪ್ರಸ್ತಾಪಿಸಿ ಕುಮಾರಸ್ವಾಮಿ ಅವರ ಹೇಳಿಕೆಯನ್ನ ಪ್ರಶ್ನಿಸಿದ್ದಾರೆ. ಕ್ಯಾಸೆಟ್ ಮಾಡಿಸಿದವರು ಈಗ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವ ಮೊದಲು ನೈತಿಕತೆಯ ಬಗ್ಗೆ ಯೋಚಿಸಬೇಕಿತ್ತು ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು. ಅಲ್ಲದೆ ದೀರ್ಘಕಾಲ ಪ್ರತಿಪಕ್ಷದ ನಾಯಕರಾಗಿಯೂ ಜನರ ವಿಶ್ವಾಸ ಗಳಿಸಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಯಾರು ಸ್ಟಿಂಗ್ ಮಾಡಿದರು, ಕ್ಯಾಸೆಟ್ ಅನ್ನ ಯಾರು ಯಾರಿಗೆ ನೀಡಿದರು ಎಂಬ ವಿಚಾರಗಳು ತನಿಖೆಯ ಮೂಲಕ ಹೊರಬರಲಿವೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯರನ್ನ ಭೇಟಿ ಮಾಡುವುದಾಗಿ ಹೇಳುತ್ತಿರುವ ಕುಮಾರಸ್ವಾಮಿ ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಈ ವಿಚಾರದಲ್ಲಿ ಕುಮಾರಸ್ವಾಮಿ ನಾಚಿಕೆಪಡಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ.

‘ನಾಯಕರನ್ನ ಬೆಳೆಸಿದ ಫ್ಯಾಕ್ಟರಿ ಅವರದ್ದೇನಾ?’

ರಾಜಕೀಯ ನಾಯಕತ್ವದ ವಿಚಾರದಲ್ಲಿಯೂ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕರನ್ನ ಬೆಳೆಸಿದವರು ತಾವೇ ಎಂಬ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಹಾಗೂ ಪಟೇಲ್ ಸೇರಿದಂತೆ ಹಲವು ನಾಯಕರು ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿರಲಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಕುಮಾರಸ್ವಾಮಿ ಅವರೇ ಬಂದು ಪಕ್ಷವನ್ನ ಕಟ್ಟಿದಂತೆ ಹೇಳಿಕೊಳ್ಳುವುದು ಏಕೆ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಸಿದ್ದರಾಮಯ್ಯರಿಗೆ ಏಳು ಕೋಟಿ ಜನರ ನೈತಿಕ ಬೆಂಬಲವಿದೆ’

ಸಿದ್ದರಾಮಯ್ಯ ಅವರ ಬೆಂಬಲಕ್ಕೆ ರಾಜ್ಯದ ಜನರಿದ್ದಾರೆ ಎಂದು ಹೇಳಿದ ಚಲುವರಾಯಸ್ವಾಮಿ, ಇಡೀ ರಾಜ್ಯದ ಏಳು ಕೋಟಿ ಜನರ ನೈತಿಕ ಬೆಂಬಲ ಸಿದ್ದರಾಮಯ್ಯರಿಗೆ ಇದೆ ಎಂದು ಪ್ರತಿಪಾದಿಸಿದ್ದಾರೆ. ವಿಧಾನಸಭೆಯಲ್ಲಿ ಈ ವಿಚಾರವಾಗಿ ಏನು ಚರ್ಚೆಯಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದೂ ಹೇಳಿದ್ದಾರೆ.

ಕ್ಯಾಸೆಟ್ ಬಿಡುಗಡೆ, ಅದರ ಬಗ್ಗೆ ನಡೆದ ಚರ್ಚೆ ಹಾಗೂ ಸಂಬಂಧಿತ ಬೆಳವಣಿಗೆಗಳನ್ನ ಪ್ರಸ್ತಾಪಿಸಿದ ಅವರು, ಈ ವಿಚಾರವನ್ನ ಮತ್ತಷ್ಟು ವಿವಾದಾತ್ಮಕಗೊಳಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಗೊಂದಲ ಸೃಷ್ಟಿಸಿರುವ ಈ ವಿಷಯದಲ್ಲಿ ಕುಮಾರಸ್ವಾಮಿ ಸಿದ್ದರಾಮಯ್ಯರ ನೈತಿಕತೆಯನ್ನ ಪ್ರಶ್ನಿಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

‘ಮೊದಲು ಪ್ರಧಾನಿಯ ಬಳಿ ಹೋಗಿ ರೈತರ ಸಾಲಮನ್ನಾ ಮಾಡಿಸಿ’

ಕುಮಾರಸ್ವಾಮಿ ರೈತರ ಪರ ಇರುವ ನಾಯಕ ಎಂದು ಹೇಳಿಕೊಳ್ಳುವ ವಿಚಾರವನ್ನೂ ಚಲುವರಾಯಸ್ವಾಮಿ ಪ್ರಸ್ತಾಪಿಸಿದ್ದಾರೆ. ಉದ್ಯಮಿಗಳಿಗೆ ಎನ್‌ಡಿಎ ಸರ್ಕಾರ ಸಾಲಮನ್ನಾ ಮಾಡಿರುವುದನ್ನ ಉಲ್ಲೇಖಿಸಿದ ಅವರು, ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ ರೈತರ ಸಾಲಮನ್ನಾ ಮಾಡಿಸುವಂತೆ ಒತ್ತಾಯಿಸಲಿ ಎಂದು ಹೇಳಿದ್ದಾರೆ. ಯಾರನ್ನ ಕರೆದುಕೊಂಡು ಹೋಗುತ್ತಾರೆ ಎಂಬುದು ತಮಗೆ ತಿಳಿದಿಲ್ಲ ಎಂದ ಚಲುವರಾಯಸ್ವಾಮಿ, ಈ ವಿಚಾರವನ್ನ ಬಿಟ್ಟುಬಿಡುವಂತೆ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ. ಕ್ಯಾಸೆಟ್ ಬಿಡುಗಡೆ ಮಾಡಿಸಿ ಮತ್ತೊಂದೆಡೆ ನೈತಿಕತೆಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಸ್ಟಿಂಗ್ ವಿವಾದದ ನಡುವೆ ರಾಜಕೀಯ ವಾಕ್ಸಮರ

ಸ್ಟಿಂಗ್ ಆಪರೇಷನ್ ಹಾಗೂ ಕ್ಯಾಸೆಟ್‌ಗೆ ಸಂಬಂಧಿಸಿದ ಬೆಳವಣಿಗೆಗಳ ನಡುವೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಭೇಟಿಯ ಕುರಿತು ನೀಡಲಾದ ಹೇಳಿಕೆಗಳು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿವೆ. ಈ ವಿಚಾರವಾಗಿ ಚಲುವರಾಯಸ್ವಾಮಿ ನೇರವಾಗಿ ಕುಮಾರಸ್ವಾಮಿ ಅವರನ್ನ ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ.

ಸಿದ್ದರಾಮಯ್ಯರಿಗೆ ಈ ವಿವಾದದಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಚಲುವರಾಯಸ್ವಾಮಿ, ಕ್ಯಾಸೆಟ್ ವಿಚಾರದಲ್ಲಿ ಒಂದು ಕಡೆ ನಡೆದುಕೊಂಡು ಮತ್ತೊಂದೆಡೆ ನೈತಿಕತೆಯ ಬಗ್ಗೆ ಮಾತನಾಡುವುದನ್ನ ಪ್ರಶ್ನಿಸಿದ್ದಾರೆ. ಸ್ಟಿಂಗ್ ಆಪರೇಷನ್ ಕುರಿತು ಸರ್ಕಾರದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಕ್ಯಾಸೆಟ್ ಯಾರಿಂದ ಯಾರಿಗೆ ತಲುಪಿತು ಎಂಬ ವಿವರಗಳು ಹೊರಬರಲಿವೆ ಅಂತಾ ಹೇಳಿದ್ದಾರೆ.

Add Zee News as a Preferred Source
TAGS:
Karnataka Politics
Kannada News