SOCIAL MEDIA

Newsletter

PARTNER SITES
Select Language Select State

ನಂದಿನಿ ಸಮೃದ್ಧಿ ಹಾಲಿನ ದರ ಲೀಟರ್‌ಗೆ 12 ರೂ. ಏರಿಕೆ! ಬೆಲೆ ಹೆಚ್ಚಳದ ಆಧಾರ, ಮಾನದಂಡಗಳೇನು?

ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲು ಅನುಮತಿ ನೀಡಿದೆ. ಆದರೆ ಕೆಎಂಎಫ್‌ ಕೆಲವು ಹಾಲಿನ ದರವನ್ನು ಬರೋಬ್ಬರಿ 12 ರೂ. ಏರಿಕೆ ಮಾಡಿದ್ದು ಇದು ಗ್ರಾಹಕರಲ್ಲಿ ಪ್ರಶ್ನೆ ಹುಟ್ಟುಹಾಕಿದೆ.

Written By Yashaswini V
Published: Nov 02, 2026, 08:48 AM IST | Updated: Nov 02, 2026, 08:49 AM IST
Join

ಮೊದಲೇ ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಇದೀಗ ನಂದಿನ ಹಾಲಿನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಿದೆ. ಆದರೂ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಮ್ಮಂತೆ ರೈತರೂ ಕೂಡ ಜೀವನ ನಡೆಸುವುದು ಕಷ್ಟಕರವಾಗಿದ್ದು, ಇತ್ತೀಚಿನ ಹಾಲಿನ ದರ ಏರಿಕೆಯಿಂದ ನಮ್ಮ ರೈತಾಪಿ ವರ್ಗಕ್ಕೆ ಆರ್ಥಿಕ ಬಲ ಸಿಗಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆ. ಆದರೆ, ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್​ಗೆ 8 ರೂ. ಹೆಚ್ಚಿಸಲು ಅನುಮತಿ ನೀಡಿದೆ. ಕೆಎಂಎಫ್‌ ನಂದಿನಿಯ ಸಾಮಾನ್ಯ ಹಾಲಿನ ದರವನ್ನು ₹8 ಹೆಚ್ಚಿಸಿದ್ದು, ಇತ್ತ ಹೆಚ್ಚು ಫ್ಯಾಟ್ ಹೊಂದಿರುವ ಶುಭಂ ಮತ್ತು ಸಮೃದ್ಧಿ ಹಾಲಿನ ಬೆಲೆಗಳನ್ನು ಪ್ರತಿ ಲೀಟರ್‌ಗೆ ₹12 ಗೆ ಏರಿಸಿದೆ.

ಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್​ಗೆ 8 ರೂ. ಮಾತ್ರ ಹೆಚ್ಚಿಸಿದ್ದರೂ, ಕೆಎಂಎಫ್‌ ಕೆಲವು ಮಾದರಿಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹12 ಹೆಚ್ಚಿಸಿದೆ. ಹಾಗಾಗಿ, ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದನ್ನು ಬಗೆಹರಿಸಲು ಹಾಲಿನ ಉತ್ಪನ್ನಗಳಲ್ಲಿನ ಬೆಲೆ ವ್ಯತ್ಯಾಸಕ್ಕೆ ಕಾರಣ ಏನೆಂಬುದನ್ನು ತಿಳಿಯುವುದು ಅಗತ್ಯವಾಗಿದೆ.  

ಹಾಲಿನ ಬೆಲೆ ವ್ಯತ್ಯಾಸ:
ವಾಸ್ತವವಾಗಿ, ಕೆಎಂಎಫ್‌ ಸಾಮಾನ್ಯ ನಂದಿನಿ ಹಾಲು ಎಂದರೆ ನೀಲಿ ಬಣ್ಣದ ಪ್ಯಾಕೆಟ್‌ನಲ್ಲಿ ಬರುವ ಟೋನ್ಡ್‌ ಹಾಲಿನ ಬೆಲೆಯನ್ನು ಸರ್ಕಾರದ ಅನುಮತಿಯಂತೆ ಪ್ರತಿ ಲೀಟರ್‌ಗೆ ₹8 ಹೆಚ್ಚಿಸಿದೆ. ಇದೇ ವೇಳೆ, ಹೆಚ್ಚು ಫ್ಯಾಟ್‌ ಜೊತೆಗೆ ಬರುವ ನಂದಿನಿಯ ಇನ್ನೆರಡು ಬ್ರಾಂಡ್‌ ಹಾಲುಗಳಾದ ಶುಭಂ ಮತ್ತು ಸಮೃದ್ಧಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹12 ಹೆಚ್ಚಿಸಿದೆ. ಇದೇ ಸಂದರ್ಭದಲ್ಲಿ ನಂದಿನ ಮೊಸರಿನ ಬೆಲೆಯನ್ನೂ ಕೂಡ 14 ರೂ.ಗೆ ಏರಿಕೆ ಮಾಡಿದೆ.

ಹಾಲಿನ ದರ ಏರಿಕೆ ಮಾನದಂಡ:
ಹಾಲು ಒಕ್ಕೂಟಗಳ ನಿಯಮಗಳ ಪ್ರಕಾರ, ಹಾಲಿನ ದರ ಏರಿಕೆಯನ್ನು ಕೇವಲ ಲೀಟರ್‌ ಪ್ರಮಾಣದಲ್ಲಿ ಮಾತ್ರ ಪರಿಷ್ಕರಿಸಲಾಗುವುದಿಲ್ಲ. ಹಾಲಿನ ದರ ಪರಿಷ್ಕರಣೆಗೆ ಅದರಲ್ಲಿರುವ ಜಿಡ್ಡಿನ ಅಂಶವಾದ ಫ್ಯಾಟ್‌ ಮತ್ತು ಎಸ್‌ಎನ್‌ಎಫ್‌ ಎಂದರೆ ಹಾಲಿನಲ್ಲಿರುವ ಘನವಸ್ತು ಪ್ರಮಾಣವನ್ನು ಆಧರಿಸಿ ಬೆಲೆ ನಿರ್ಧರಿಸಲಾಗುತ್ತದೆ. ಈ ಪದ್ಧತಿಯೇ ಹಾಲಿನ ದರ ಏರಿಕೆಯಲ್ಲಿನ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ಲೀಟರ್‌ ಹಾಲಿನ ಬೆಲೆ ₹12 ಹೆಚ್ಚಾಗಲು ಏನು ಕಾರಣ?
ನಂದಿನಿ ನೀಲಿ ಪ್ಯಾಕೆಟ್ ಹಾಲಿನಲ್ಲಿ ಸುಮಾರು 3.0% ಫ್ಯಾಟ್‌ ಇರುತ್ತದೆ ಅದುವೇ ಸಾಮಾನ್ಯ ಟೋನ್ಡ್ ಮಿಲ್ಕ್. ಹಾಗಾಗಿ, ಇದರ ಬೆಲೆ ಸರ್ಕಾರದ ಅನುಮತಿಯಂತೆ ಕೇವಲ ₹8 ಏರಿಕೆ ಆಗಿದೆ. ಆದರೆ, ಶುಭಂ ಮತ್ತು ಸಮೃದ್ಧಿ ಹಾಲಿನಲ್ಲಿ 4.5 ರಿಂದ 6.0% ವರೆಗೆ ಫ್ಯಾಟ್‌ ಇರಲಿದೆ. ಇದುವೇ ಹೈ ಫ್ಯಾಟ್‌ ಹಾಲು. ಹಾಗಾಗೀ ಈ ಹಾಲಿನ ದರಗಳನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ ₹12 ಏರಿಕೆ ಮಾಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ, ಡೈರಿಗಳಲ್ಲಿ ಹಾಲಿನ ಬೆಲೆಯನ್ನು ಕೇವಲ ಲೀಟರ್ ಲೆಕ್ಕದಲ್ಲಿ ನಿಗದಿಪಡಿಸುವುದಿಲ್ಲ. ದರ ಪರಿಷ್ಕರಣೆಯು ಹಾಲಿನ ಗುಣಮಟ್ಟ, ಹಾಲಿನಲ್ಲಿರುವ ಫ್ಯಾಟ್ ಹಾಗೂ ಎಸ್‌ಎನ್‌ಎಫ್ ಪ್ರಮಾಣವನ್ನು ಆಧರಿಸಿರುತ್ತದೆ. ಹಾಗಾಗಿಯೇ, ಅಧಿಯ ಫ್ಯಾಟ್‌ ಯುಕ್ತ ಹಾಲು ಪೂರೈಸುವ ರೈತರಿಗೆ ಸಿಗುವ ಆದಾಯವೂ ಹೆಚ್ಚು ಎಂದು ಹೇಳಿದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES