• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /10,000mAh ಬೃಹತ್ ಬ್ಯಾಟರಿ, 120Hz AMOLED ಡಿಸ್‌ಪ್ಲೇ! ವಿವೋ Y600 5G ಫೋನ್ ಬಿಡುಗಡೆ

10,000mAh ಬೃಹತ್ ಬ್ಯಾಟರಿ, 120Hz AMOLED ಡಿಸ್‌ಪ್ಲೇ! ವಿವೋ Y600 5G ಫೋನ್ ಬಿಡುಗಡೆ

ವಿವೋ ಹೊಸ Y600 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. 10,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300e ಪ್ರೊಸೆಸರ್‌ ಮತ್ತು 50MP ಮುಖ್ಯ ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳು. 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿರುವ ಈ ಫೋನ್‌ನ ಆರಂಭಿಕ ಬೆಲೆ ಚೀನಾದಲ್ಲಿ ಅಂದಾಜು ₹27,000 ಆಗಿದ್ದು, ಮೂರು ಬಣ್ಣಗಳಲ್ಲಿ ಲಭ್ಯವಿದೆ.

Written ByPuttaraj K Alur
Published: Oct 26, 2026, 06:49 PM IST|Updated: Oct 26, 2026, 07:01 PM IST
joinshare
10,000mAh ಬೃಹತ್ ಬ್ಯಾಟರಿ, 120Hz AMOLED ಡಿಸ್‌ಪ್ಲೇ! ವಿವೋ Y600 5G ಫೋನ್ ಬಿಡುಗಡೆ
Image Credit: Vivo Y600 5G

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಮಗೆ ಗ್ರ್ಯಾಂಡ್ ಪ್ರಪೋಸಲ್ ಬೇಕಿರಲಿಲ್ಲ’.. ಮದುವೆ ಚರ್ಚೆಗೆ ರಶ್ಮಿಕಾ ಮಂದಣ್ಣ ಖಡಕ್ ಪ್ರತಿಕ್ರಿಯೆ

ನಮಗೆ ಗ್ರ್ಯಾಂಡ್ ಪ್ರಪೋಸಲ್ ಬೇಕಿರಲಿಲ್ಲ’.. ಮದುವೆ ಚರ್ಚೆಗೆ ರಶ್ಮಿಕಾ ಮಂದಣ್ಣ ಖಡಕ್ ಪ್ರತಿಕ್ರಿಯೆ

2

ಮೊಬೈಲ್ ಬಳಕೆದಾರರೇ... ನವೆಂಬರ್ 1 ರಿಂದ ಬದಲಾಗಿವೆ ಈ ನಿಯಮಗಳು

3

ದಸರಾ ಆಚರಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ.!

4

ಸಲ್ಮಾನ್ ಖಾನ್ ಹೆಸರಲ್ಲಿ ₹2,500 ಕೋಟಿ ಮೆಗಾ ಪ್ರಾಜೆಕ್ಟ್‌! ಐಷಾರಾಮಿ ಗೋಪುರಗಳ ನಿರ್ಮಾಣಕ್ಕೆ ಸಜ್ಜು

5

10,000mAh ಬೃಹತ್ ಬ್ಯಾಟರಿ, 120Hz AMOLED ಡಿಸ್‌ಪ್ಲೇ! ವಿವೋ Y600 5G ಫೋನ್ ಬಿಡುಗಡೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Vivo Y600 5G Smartphone: ಬೃಹತ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಮತ್ತೊಂದು 5G ಸ್ಮಾರ್ಟ್‌ಫೋನ್‌ ಅನ್ನ ಚೀನಾದ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ವಿವೋ ಬಿಡುಗಡೆ ಮಾಡಿದೆ. ಕಂಪನಿಯ Y ಸರಣಿಗೆ ಸೇರ್ಪಡೆಯಾಗಿರುವ ಹೊಸ Vivo Y600 ಫೋನ್‌ 10,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ ಮತ್ತು ವೇಗದ ಚಾರ್ಜಿಂಗ್ ಸೌಲಭ್ಯವನ್ನ ಹೊಂದಿದೆ. ಬಜೆಟ್ ಸ್ನೇಹಿ ಗ್ರಾಹಕರನ್ನ ಗಮನದಲ್ಲಿಟ್ಟುಕೊಂಡು ಪರಿಚಯಿಸಲಾಗಿರುವ ಈ ಫೋನ್‌ ನಾಲ್ಕು RAM ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ.

ಇತ್ತೀಚೆಗೆ ವಿವೋ 10,200mAh ಬ್ಯಾಟರಿ ಹೊಂದಿರುವ Y600s Pro ಮಾದರಿಯನ್ನ ಪರಿಚಯಿಸಿತ್ತು. ಇದೀಗ ಅದೇ ಸರಣಿಯಲ್ಲಿ Vivo Y600 ಅನ್ನ ಬಿಡುಗಡೆ ಮಾಡಿದ್ದು, ದೊಡ್ಡ ಬ್ಯಾಟರಿ ಸಾಮರ್ಥ್ಯ ಇದರ ಪ್ರಮುಖ ವೈಶಿಷ್ಟ್ಯವಾಗಿದೆ.

Vivo Y600 ಬೆಲೆ ಎಷ್ಟು?

ವಿವೋ Y600 ಸ್ಮಾರ್ಟ್‌ಫೋನ್‌ ಚೀನಾದ ಮಾರುಕಟ್ಟೆಯಲ್ಲಿ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ RAM ಮತ್ತು ಆಂತರಿಕ ಸ್ಟೋರೇಜ್ ಆಯ್ಕೆ ಮಾಡಿಕೊಳ್ಳಬಹುದು.

- 6GB RAM + 128GB ಸ್ಟೋರೇಜ್: CNY 1,999, ಅಂದಾಜು ₹27,000
- 8GB RAM + 128GB ಸ್ಟೋರೇಜ್: CNY 2,099, ಅಂದಾಜು ₹28,500
- 6GB RAM + 256GB ಸ್ಟೋರೇಜ್: CNY 2,199, ಅಂದಾಜು ₹30,000
- 8GB RAM + 256GB ಸ್ಟೋರೇಜ್: CNY 2,499, ಅಂದಾಜು ₹33,000

ಈ ಫೋನ್‌ ಸಫೈರ್ ಬ್ಲೂ, ಡೈಮಂಡ್ ಗೋಲ್ಡ್ ಮತ್ತು ಅಬ್ಸಿಡಿಯನ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇಲ್ಲಿ ನೀಡಿರುವ ಭಾರತೀಯ ರೂಪಾಯಿ ಬೆಲೆಗಳು ಚೀನಾದ ಬೆಲೆಯನ್ನ ಆಧರಿಸಿದ ಅಂದಾಜು ಮೊತ್ತಗಳಾಗಿವೆ.

ವಿವೋ Y600ವೈಶಿಷ್ಟ್ಯಗಳು
ಡಿಸ್ಪ್ಲೇ (Display) 6.83 ಇಂಚುಗಳು, AMOLED, 120Hz
ಪ್ರೊಸೆಸರ್ಮೀಡಿಯಾ ಟೆಕ್ ಡೈಮೆನ್ಸಿಟಿ 7300e
ಸ್ಟೋರೇಜ್8 GB + 256 GB
ಬ್ಯಾಟರಿ10000mAh, 44W
ಕ್ಯಾಮೆರಾ50MP, 8MP
OSಆಂಡ್ರಾಯ್ಡ್ 16, ಒರಿಜಿನ್ OS 6

6.83 ಇಂಚಿನ AMOLED ಡಿಸ್‌ಪ್ಲೇ

Vivo Y600 ಫೋನ್‌ 6.83 ಇಂಚಿನ AMOLED ಡಿಸ್‌ಪ್ಲೇಯನ್ನ ಹೊಂದಿದೆ. ಇದರ ರೆಸಲ್ಯೂಶನ್ 2800 x 1260 ಪಿಕ್ಸೆಲ್‌ಗಳಾಗಿದೆ. ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು HDR ತಂತ್ರಜ್ಞಾನವನ್ನ ಬೆಂಬಲಿಸುತ್ತದೆ. ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300e ಪ್ರೊಸೆಸರ್‌ ನೀಡಲಾಗಿದೆ. ಇದು 8GB ವರೆಗೆ LPDDR4X RAM ಮತ್ತು 256GB ವರೆಗೆ UFS 3.1 ಆಂತರಿಕ ಸ್ಟೋರೇಜ್‌ ಹೊಂದಿರುವ ಆಯ್ಕೆಗಳಲ್ಲಿ ಲಭ್ಯವಿದೆ. ಆಪರೇಟಿಂಗ್ ಸಿಸ್ಟಮ್ ವಿಚಾರಕ್ಕೆ ಬಂದರೆ, ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 16 ಆಧಾರಿತ OriginOS 6ನಲ್ಲಿ ಕಾರ್ಯನಿರ್ವಹಿಸುತ್ತದೆ.

10,000mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್

Vivo Y600ನ ಪ್ರಮುಖ ಆಕರ್ಷಣೆ ಇದರ 10,000mAh ಸಾಮರ್ಥ್ಯದ ಬ್ಯಾಟರಿ. ದೊಡ್ಡ ಬ್ಯಾಟರಿಯ ಜೊತೆಗೆ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನೂ ಕಂಪನಿ ಒದಗಿಸಿದೆ. ಇದಲ್ಲದೆ ಈ ಫೋನ್‌ ರಿವರ್ಸ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನ ಬೆಂಬಲಿಸುತ್ತದೆ. ಅಂದರೆ ಹೊಂದಾಣಿಕೆಯ ಇತರ ಸಾಧನಗಳಿಗೆ ಫೋನ್‌ನಿಂದಲೇ ವೈರ್ಡ್ ಸಂಪರ್ಕದ ಮೂಲಕ ಚಾರ್ಜಿಂಗ್ ಒದಗಿಸುವ ಸೌಲಭ್ಯವಿದೆ.

50MP ಕ್ಯಾಮೆರಾ ಮತ್ತು ಇತರ ವೈಶಿಷ್ಟ್ಯಗಳು

ಕ್ಯಾಮೆರಾ ವಿಭಾಗದಲ್ಲಿ Vivo Y600 ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ಮತ್ತೊಂದು ದ್ವಿತೀಯ ಕ್ಯಾಮೆರಾವನ್ನ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಫೋನ್‌ IP64 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಣೆ ಒದಗಿಸುತ್ತದೆ. ಸಂಪರ್ಕ ಸೌಲಭ್ಯಗಳಲ್ಲಿ 5G, Wi-Fi, Bluetooth ಮತ್ತು IR ಬ್ಲಾಸ್ಟರ್ ಸೇರಿವೆ. ಇದರೊಂದಿಗೆ NFC ಹಾಗೂ ಡಿಸ್‌ಪ್ಲೇ ಒಳಗೆ ಅಳವಡಿಸಿರುವ ಫಿಂಗರ್‌ಪ್ರಿಂಟ್ ಸೆನ್ಸರ್‌ ಕೂಡ ಲಭ್ಯವಿದೆ. ಒಟ್ನಲ್ಲಿ Vivo Y600 ಫೋನ್‌ 10,000mAh ಬ್ಯಾಟರಿ, 120Hz AMOLED ಪರದೆ, 5G ಸಂಪರ್ಕ ಮತ್ತು ನಾಲ್ಕು ಸ್ಟೋರೇಜ್ ರೂಪಾಂತರಗಳೊಂದಿಗೆ ಚೀನಾದ ಮಾರುಕಟ್ಟೆಗೆ ಪ್ರವೇಶಿಸಿದೆ. ಶೀಘ್ರವೇ ಇದು ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡುವ ಸಾಧ್ಯತೆ ಇದೆ.

Add Zee News as a Preferred Source
TAGS:
Tech
Kannada News