• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ದಸರಾ ಆಚರಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ.!

ದಸರಾ ಆಚರಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ.!

Mysore Dasara: ಮೈಸೂರು ದಸರಾ ಮುಕ್ತಾಯಗೊಂಡ ಬೆನ್ನಲ್ಲೇ ದಸರಾ ಆಚರಣೆ ಹಾಗೂ ಅರಮನೆಯ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Written ByRamya. R. Gowda
Published: Oct 26, 2026, 07:09 PM IST|Updated: Oct 26, 2026, 07:18 PM IST
joinshare
ದಸರಾ ಆಚರಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ.!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಮಕ್ಕಳ ಹಲ್ಲು ಹುಳುಕಾಗದಂತೆ ತಡೆಯುವುದು ಹೇಗೆ? ಪೋಷಕರು ಈ ಸಿಂಪಲ್‌ ಸಲಹೆಗಳನ್ನ ಪಾಲಿಸಿ

ಮಕ್ಕಳ ಹಲ್ಲು ಹುಳುಕಾಗದಂತೆ ತಡೆಯುವುದು ಹೇಗೆ? ಪೋಷಕರು ಈ ಸಿಂಪಲ್‌ ಸಲಹೆಗಳನ್ನ ಪಾಲಿಸಿ

2

ನಮಗೆ ಗ್ರ್ಯಾಂಡ್ ಪ್ರಪೋಸಲ್ ಬೇಕಿರಲಿಲ್ಲ’.. ಮದುವೆ ಚರ್ಚೆಗೆ ರಶ್ಮಿಕಾ ಮಂದಣ್ಣ ಖಡಕ್ ಪ್ರತಿಕ್ರಿಯೆ

3

ಮೊಬೈಲ್ ಬಳಕೆದಾರರೇ... ನವೆಂಬರ್ 1 ರಿಂದ ಬದಲಾಗಿವೆ ಈ ನಿಯಮಗಳು

4

ದಸರಾ ಆಚರಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ.!

5

ಸಲ್ಮಾನ್ ಖಾನ್ ಹೆಸರಲ್ಲಿ ₹2,500 ಕೋಟಿ ಮೆಗಾ ಪ್ರಾಜೆಕ್ಟ್‌! ಐಷಾರಾಮಿ ಗೋಪುರಗಳ ನಿರ್ಮಾಣಕ್ಕೆ ಸಜ್ಜು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mysore Dasara: ಮೈಸೂರು ದಸರಾ ಮುಕ್ತಾಯಗೊಂಡ ಬೆನ್ನಲ್ಲೇ ದಸರಾ ಆಚರಣೆ ಹಾಗೂ ಅರಮನೆಯ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ಪುಟಗಳ ಪತ್ರ ಬರೆದಿರುವ ಅವರು, ಪೊಲೀಸ್ ಇಲಾಖೆಯ ಸಮನ್ವಯದ ಕೊರತೆ, ಜಟ್ಟಿಕಾಳಗದ ಗೊಂದಲ, ಚಿನ್ನದ ಅಂಬಾರಿ ಭದ್ರತೆ ಹಾಗೂ ಅಂಬಾರಿ ಹೊರುವ ಆನೆಯ ಮಾಹಿತಿ ನೀಡುವಲ್ಲಿ ವಿಳಂಬದ ಬಗ್ಗೆ ಆಕ್ಷೇಪಿಸಿದ್ದಾರೆ.


ಮೈಸೂರು ದಸರಾ ಈ ಬಾರಿ ರಾಜವಂಶಸ್ಥರು Vs ಸರ್ಕಾರ ಎಂಬಾತಾಗಿದೆ. ಅರಮನೆಯ ಖಾಸಗಿ ಸ್ಥಳಕ್ಕೆ ಅನಧಿಕೃತ ತಡೆಬೇಲಿ ಹಾಕಿ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಲಾಗಿದೆ ಎಂದು ರಾಜಮಾತೆ ಆರೋಪಿಸಿದ್ದು, ಆಯುಧಪೂಜೆ ಮತ್ತು ವಿಜಯದಶಮಿಯಂದು ರಾಜಮನೆತನದ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಿಲ್ಲದೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ‌, ಚಿನ್ನದ ಅಂಬಾರಿ ರಾಜಮನೆತನದ ಖಾಸಗಿ ಆಸ್ತಿ, ಅದರ ಭದ್ರತೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ಎಚ್ಚರಿಸಿದ್ದಾರೆ.

ಇನ್ನು ಇದಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ರಾಜಮಾತೆಯ ಪತ್ರಕ್ಕೆ ಪ್ರತಿಕ್ರಿಯಿಸಿದ್ದು, ಸರ್ಕಾರ ಆರಂಭದಿಂದಲೂ ರಾಜಮನೆತನದೊಂದಿಗೆ ಸಂಪರ್ಕದಲ್ಲಿದ್ದು, ದಸರಾ ಆಚರಣೆಗೆ ಅಗತ್ಯ ಸಹಕಾರ ನೀಡಿದೆ ಎಂದು ಹೇಳಿದ್ದಾರೆ. ಜಟ್ಟಿಕಾಳಗದ ವಿಚಾರದಲ್ಲಿ ಮಾತ್ರ ಗೊಂದಲ ಉಂಟಾಗಿದ್ದು, ಉಳಿದಂತೆ ಯಾವುದೇ ದೊಡ್ಡ ಸಮಸ್ಯೆ ಆಗಿಲ್ಲ ಎಂದಿದ್ದಾರೆ. ಅಂಬಾರಿ ಬಳಕೆಗೆ ಸರ್ಕಾರ ಹಣ ಪಾವತಿಸುತ್ತದೆ. ಅಂಬಾರಿ ಹೊರುವ ಆನೆಯ ಆಯ್ಕೆಯಲ್ಲಿ ಅರಣ್ಯ ಇಲಾಖೆಯ ನಿರ್ಧಾರ ವಿಳಂಬವಾದ ಕಾರಣ ಮಾಹಿತಿ ನೀಡಲು ತಡವಾಗಿರಬಹುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇನ್ನು ರಾಜಮನೆತನದ ಅಸಮಾಧಾನ ಹಾಗೂ ಸಲಹೆಗಳನ್ನು ಪರಿಶೀಲಿಸಲು ಸರ್ಕಾರ ಸಿದ್ಧವಿದ್ದು, ಅಗತ್ಯವಿದ್ದರೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.ಒಟ್ಟಿನಲ್ಲಿ, ಮೈಸೂರು ದಸರಾ ಮುಗಿದ ಬೆನ್ನಲ್ಲೇ ರಾಜಮನೆತನ ಮತ್ತು ಸರ್ಕಾರದ ನಡುವೆ ಧಾರ್ಮಿಕ ಆಚರಣೆಗಳು, ಪೊಲೀಸ್ ಭದ್ರತೆ, ಚಿನ್ನದ ಅಂಬಾರಿ ಹಾಗೂ ಜಟ್ಟಿಕಾಳಗದ ವಿಚಾರವಾಗಿ ಹೊಸ ಚರ್ಚೆ ಆರಂಭವಾಗಿದ್ದು ಇದು ಮುಂದೆ ಯಾವ ಹಂತಕ್ಕೆ ಹೋಗುತ್ತೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.

Add Zee News as a Preferred Source
TAGS:
Kannada News