• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /Viral Video: ಬಿಹಾರದ ಯುವಕನ ಪ್ರೀತಿಗಾಗಿ ರಷ್ಯಾದಿಂದ ಭಾರತಕ್ಕೆ ಬಂದ ಯುವತಿ! ಗುಡಿಸಲಿನಲ್ಲೂ ಬದುಕಲು ಸೈ ಎಂದ ಜೂಲಿ

Viral Video: ಬಿಹಾರದ ಯುವಕನ ಪ್ರೀತಿಗಾಗಿ ರಷ್ಯಾದಿಂದ ಭಾರತಕ್ಕೆ ಬಂದ ಯುವತಿ! ಗುಡಿಸಲಿನಲ್ಲೂ ಬದುಕಲು ಸೈ ಎಂದ ಜೂಲಿ

ಬಿಹಾರದ ಭಾಗಲ್ಪುರದ ರಾಹುಲ್ ಯಾದವ್‌ ಜೊತೆ ರಷ್ಯಾದಲ್ಲಿ ಪರಿಚಯವಾಗಿ ಪ್ರೀತಿಗೆ ತಿರುಗಿದ ಜೂಲಿ, ಆತನನ್ನ ಮದುವೆಯಾಗಲು ಭಾರತಕ್ಕೆ ಬಂದಿದ್ದಾಳೆ ಎನ್ನಲಾಗಿದೆ. ರಾಹುಲ್‌ನ ಸರಳ ಜೀವನಶೈಲಿಯ ಬಗ್ಗೆಯೂ ತಿಳಿದಿರುವ ಜೂಲಿ, ಐಷಾರಾಮಿ ಬದುಕಿಗಿಂತ ಪ್ರೀತಿ ಮತ್ತು ಸಂತೋಷವೇ ಮುಖ್ಯ ಎಂದು ಹೇಳಿದ್ದಾಳಂತೆ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ್ದು, ನವೆಂಬರ್‌ನಲ್ಲಿ ಭಾರತೀಯ ಸಂಪ್ರದಾಯದಂತೆ ವಿವಾಹ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Written ByPuttaraj K Alur
Published: Oct 15, 2026, 02:22 PM IST|Updated: Oct 15, 2026, 02:38 PM IST
joinshare
Viral Video: ಬಿಹಾರದ ಯುವಕನ ಪ್ರೀತಿಗಾಗಿ ರಷ್ಯಾದಿಂದ ಭಾರತಕ್ಕೆ ಬಂದ ಯುವತಿ! ಗುಡಿಸಲಿನಲ್ಲೂ ಬದುಕಲು ಸೈ ಎಂದ ಜೂಲಿ
Image Credit: Bihar Love Story

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಸ್ಟಿಂಗ್‌ ಹಿಂದೆ "ಜಾನ್ ದೇಂಗೇ ಸಾಬ್" ಎನ್ನುತ್ತಿದ್ದವರ ಕೈವಾಡ ಇದೆ : ಯತ್ನಾಳ್‌ ಸಂಚಲನ ಹೇಳಿಕೆ

ಸ್ಟಿಂಗ್‌ ಹಿಂದೆ "ಜಾನ್ ದೇಂಗೇ ಸಾಬ್" ಎನ್ನುತ್ತಿದ್ದವರ ಕೈವಾಡ ಇದೆ : ಯತ್ನಾಳ್‌ ಸಂಚಲನ ಹೇಳಿಕೆ

2

Viral Video: ಬಿಹಾರದ ಯುವಕನ ಪ್ರೀತಿಗಾಗಿ ರಷ್ಯಾದಿಂದ ಭಾರತಕ್ಕೆ ಬಂದ ಯುವತಿ! ಗುಡಿಸಲಿನಲ್ಲೂ ಬದುಕಲು ಸೈ ಎಂದ ಜೂಲಿ

3

ಕೇಂದ್ರ ಸಚಿವ ಸಂಪುಟದಿಂದ 2 ಪ್ರಮುಖ ನಿರ್ಧಾರ.. DA ಹೆಚ್ಚಳದ ಬಗ್ಗೆ ಮುಂದುವರೆದ ಸಸ್ಪೆನ್ಸ್‌

4

ನವರಾತ್ರಿಯಲ್ಲಿ ಜನಿಸಿದ ಮಕ್ಕಳ ಸ್ವಭಾವ ಹೇಗಿರುತ್ತೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ!

5

'ನಾನು ಬಾಯಿ ಬಿಟ್ರೆ ಮತ್ತೊಮ್ಮೆ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕುʼ! ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Viral Love Story: ಪ್ರೀತಿಗೆ ದೇಶದ ಗಡಿಗಳಿಲ್ಲ, ಭಾಷೆಯ ಅಡೆತಡೆಗಳಿಲ್ಲ, ಶ್ರೀಮಂತಿಕೆ ಮತ್ತು ಬಡತನದ ಲೆಕ್ಕಾಚಾರವೂ ಇಲ್ಲವೆಂಬ ಮಾತಿಗೆ ಸಾಕ್ಷಿಯಂತಿರುವ ಅಪರೂಪದ ಪ್ರೇಮಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಬಿಹಾರದ ಭಾಗಲ್ಪುರ ಜಿಲ್ಲೆಯ ಯುವಕ ರಾಹುಲ್ ಯಾದವ್‌ನನ್ನ ಪ್ರೀತಿಸಿದ ರಷ್ಯಾದ ಯುವತಿ ಜೂಲಿ, ಆತನನ್ನ ಮದುವೆಯಾಗುವ ಉದ್ದೇಶದಿಂದ ಭಾರತಕ್ಕೆ ಬಂದಿದ್ದಾಳೆ ಎನ್ನಲಾಗಿದೆ.

ಐಷಾರಾಮಿ ಜೀವನಕ್ಕಿಂತ ಪ್ರೀತಿ ಮತ್ತು ಸಂತೋಷವೇ ಮುಖ್ಯವೆಂದು ಆಕೆ ಹೇಳಿದ್ದಾಳೆಂಬ ಮಾಹಿತಿ ನೆಟ್ಟಿಗರ ಗಮನ ಸೆಳೆದಿದೆ. ವಿದೇಶದಲ್ಲಿ ಆರಂಭವಾದ ಈ ಪ್ರೇಮಕಥೆ ಇದೀಗ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಹಂತಕ್ಕೆ ತಲುಪಿದೆ ಎನ್ನಲಾಗಿದ್ದು, ಇಬ್ಬರ ಕುಟುಂಬಗಳೂ ಒಪ್ಪಿಗೆ ಸೂಚಿಸಿವೆ ಎಂಬ ವರದಿಗಳು ವೈರಲ್ ಆಗಿವೆ.

ರಷ್ಯಾದಲ್ಲಿ ಪರಿಚಯ, ಸ್ನೇಹದಿಂದ ಪ್ರೀತಿಗೆ ತಿರುಗಿದ ಸಂಬಂಧ

ಬಿಹಾರದ ಭಾಗಲ್ಪುರ ಜಿಲ್ಲೆಯ ರಾಹುಲ್ ಯಾದವ್ ಉದ್ಯೋಗದ ನಿಮಿತ್ತ ರಷ್ಯಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಜೂಲಿಯನ್ನ ಭೇಟಿಯಾಗಿದ್ದಾನೆ ಎನ್ನಲಾಗಿದೆ. ಮೊದಲಿಗೆ ಸ್ನೇಹಿತರಾಗಿ ಪರಿಚಯವಾದ ಇಬ್ಬರ ನಡುವೆ ಕ್ರಮೇಣ ಆತ್ಮೀಯತೆ ಬೆಳೆದಿದ್ದು, ಅದು ಪ್ರೀತಿಗೆ ತಿರುಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್‌ಗೆ ಅಲ್ಲಿನ ಜೀವನದ ನಡುವೆ ಜೂಲಿಯ ಪರಿಚಯವಾಗಿತ್ತು.

ಪರಸ್ಪರ ಒಡನಾಟ ಹೆಚ್ಚಾದಂತೆ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲು ಆರಂಭಿಸಿದರು ಎನ್ನಲಾಗಿದೆ. ಆದರೆ ಕೆಲವು ಸಮಯದ ಬಳಿಕ ರಾಹುಲ್ ತನ್ನ ಊರಾದ ಬಿಹಾರಕ್ಕೆ ಮರಳಬೇಕಾದ ಪರಿಸ್ಥಿತಿ ಎದುರಾಯಿತು. ರಾಹುಲ್ ಭಾರತಕ್ಕೆ ವಾಪಸಾದ ಬಳಿಕವೂ ಇಬ್ಬರ ನಡುವಿನ ಸಂಬಂಧ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ದೂರದ ದೇಶಗಳಲ್ಲಿದ್ದರೂ ಪ್ರೀತಿಯನ್ನ ಉಳಿಸಿಕೊಂಡಿದ್ದ ಈ ಜೋಡಿಯ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

 

A Russian girl followed her love to India after Rahul Yadav from Bihar returned home from Russia. Despite learning that he was in hiding, she insisted on staying with him, and their families have reportedly agreed to get them married in November. ❤️ https://t.co/bcCOl3QJi8

— Ghar Ke Kalesh (@gharkekalesh) October 13, 2026

ಪ್ರಿಯಕರನನ್ನ ಹುಡುಕಿಕೊಂಡು ಭಾರತಕ್ಕೆ ಬಂದ ಜೂಲಿ

 

ರಾಹುಲ್ ಭಾರತಕ್ಕೆ ಮರಳಿದ ಸುಮಾರು ಆರು ತಿಂಗಳ ಬಳಿಕ ಜೂಲಿ ಆತನನ್ನ ಮದುವೆಯಾಗುವ ಉದ್ದೇಶದಿಂದ ಭಾರತಕ್ಕೆ ಬಂದಿದ್ದಾಳೆ ಎನ್ನಲಾಗಿದೆ. ಆಕೆ ತನ್ನ ಕುಟುಂಬದ ಸದಸ್ಯರೊಂದಿಗೆ ಭಾರತಕ್ಕೆ ಬಂದು ರಾಹುಲ್ ಮನೆಗೆ ಭೇಟಿ ನೀಡಿದ್ದಾಳೆ ಎಂಬ ಮಾಹಿತಿ ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡಿದೆ. ವಿದೇಶದಲ್ಲಿ ಬೆಳೆದ ಯುವತಿಯೊಬ್ಬಳು ತನ್ನ ಪ್ರೀತಿಗಾಗಿ ಸಾವಿರಾರು ಕಿಲೋಮೀಟರ್ ದೂರ ಪ್ರಯಾಣಿಸಿ ಭಾರತಕ್ಕೆ ಬಂದಿರುವುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರೇಮಕಥೆಯನ್ನ ‘ಘರ್ ಕೆ ಕಲೇಶ್’ (Ghar Ke Kalesh) ಹೆಸರಿನ ಎಕ್ಸ್ (X) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 

ಗುಡಿಸಲಿನಲ್ಲೂ ಬದುಕಲು ಸಿದ್ಧ ಎಂದ ಯುವತಿ!

ಈ ಪ್ರೇಮಕಥೆಯಲ್ಲಿ ಹೆಚ್ಚು ಗಮನ ಸೆಳೆದಿರುವುದು ಜೂಲಿಯ ಮನೋಭಾವ ಎನ್ನಲಾಗಿದೆ. ರಾಹುಲ್ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆಕೆಗೆ ತಿಳಿಸಿದ್ದಾನೆ. ದೊಡ್ಡ ಮನೆ ಅಥವಾ ಐಷಾರಾಮಿ ಸೌಲಭ್ಯಗಳಿಲ್ಲದೆ, ಸರಳವಾದ ಮನೆಯಲ್ಲಿ ಜೀವನ ನಡೆಸಬೇಕಾಗಬಹುದು ಎಂಬ ವಿಷಯವನ್ನ ಆತ ವಿವರಿಸಿದ್ದಾನಂತೆ. ಇದಕ್ಕೆ ಪ್ರತಿಕ್ರಿಯಿಸಿದ ಜೂಲಿ, ಪ್ರೀತಿಯೇ ಮುಖ್ಯವಾಗಿದ್ದು, ಐಷಾರಾಮಿ ಬದುಕಿಗಿಂತ ಪ್ರೀತಿಸುವ ವ್ಯಕ್ತಿಯೊಂದಿಗೆ ಸಂತೋಷದಿಂದ ಬದುಕುವುದು ತನಗೆ ಮುಖ್ಯ ಎಂಬ ಭಾವನೆ ವ್ಯಕ್ತಪಡಿಸಿದ್ದಾಳಂತೆ. ರಾಹುಲ್‌ನ ಆರ್ಥಿಕ ಸ್ಥಿತಿಗಿಂತ ಆತನ ಮೇಲಿನ ಪ್ರೀತಿಗೆ ಆದ್ಯತೆ ನೀಡಿದ್ದಾಳೆ ಎನ್ನುವ ಈ ಅಂಶವೇ ನೆಟ್ಟಿಗರ ಗಮನ ಸೆಳೆದಿದೆ.  

ಇಬ್ಬರ ಮದುವೆಗೆ ಕುಟುಂಬಗಳ ಒಪ್ಪಿಗೆ?

ರಾಹುಲ್ ಮತ್ತು ಜೂಲಿಯ ಸಂಬಂಧಕ್ಕೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿವೆ ಎಂದು ವೈರಲ್ ವರದಿಗಳಲ್ಲಿ ಹೇಳಲಾಗಿದೆ. ಈಗಾಗಲೇ ಕುಟುಂಬದ ಸದಸ್ಯರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ನವೆಂಬರ್ ತಿಂಗಳಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.

ನೆಟ್ಟಿಗರ ಮನಗೆದ್ದ ಅಪರೂಪದ ಪ್ರೇಮಕಥೆ

ಈ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಿಜವಾದ ಪ್ರೀತಿಗೆ ಗಡಿಗಳಿಲ್ಲವೆಂದು ಕೆಲವರು ಪ್ರತಿಕ್ರಿಯಿಸಿದ್ದರೆ, ಪ್ರೀತಿ ಮತ್ತು ಪರಸ್ಪರ ಹೊಂದಾಣಿಕೆಯೇ ದಾಂಪತ್ಯ ಜೀವನದ ಮುಖ್ಯ ಅಂಶಗಳು ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಈ ಕಥೆಯ ಸತ್ಯಾಸತ್ಯತೆ ಕುರಿತು ಪ್ರಶ್ನೆಗಳನ್ನ ಎತ್ತಿದ್ದಾರೆ. ಒಟ್ನಲ್ಲಿ ರಷ್ಯಾದ ಯುವತಿ ಮತ್ತು ಬಿಹಾರದ ಯುವಕನ ಈ ಪ್ರೇಮಕಥೆ ಅಂತಾರಾಷ್ಟ್ರೀಯ ಸಂಬಂಧಗಳು, ಪ್ರೀತಿ ಮತ್ತು ಜೀವನದ ಆಯ್ಕೆಗಳ ಕುರಿತು ಚರ್ಚೆಗೆ ಕಾರಣವಾಗಿದೆ.

Add Zee News as a Preferred Source
TAGS:
Viral
Kannada News