• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಕೇಂದ್ರ ಸಚಿವ ಸಂಪುಟದಿಂದ 2 ಪ್ರಮುಖ ನಿರ್ಧಾರ.. DA ಹೆಚ್ಚಳದ ಬಗ್ಗೆ ಮುಂದುವರೆದ ಸಸ್ಪೆನ್ಸ್‌

ಕೇಂದ್ರ ಸಚಿವ ಸಂಪುಟದಿಂದ 2 ಪ್ರಮುಖ ನಿರ್ಧಾರ.. DA ಹೆಚ್ಚಳದ ಬಗ್ಗೆ ಮುಂದುವರೆದ ಸಸ್ಪೆನ್ಸ್‌

ನಿನ್ನೆ (ಅ. 14) ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆದರೆ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.

Written ByYashaswini V
Published: Oct 15, 2026, 01:14 PM IST|Updated: Oct 15, 2026, 01:16 PM IST
joinshare
ಕೇಂದ್ರ ಸಚಿವ ಸಂಪುಟದಿಂದ 2 ಪ್ರಮುಖ ನಿರ್ಧಾರ.. DA ಹೆಚ್ಚಳದ ಬಗ್ಗೆ ಮುಂದುವರೆದ ಸಸ್ಪೆನ್ಸ್‌

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
Viral Video: ಬಿಹಾರದ ಯುವಕನ ಪ್ರೀತಿಗಾಗಿ ರಷ್ಯಾದಿಂದ ಭಾರತಕ್ಕೆ ಬಂದ ಯುವತಿ! ಗುಡಿಸಲಿನಲ್ಲೂ ಬದುಕಲು ಸೈ ಎಂದ ಜೂಲಿ

Viral Video: ಬಿಹಾರದ ಯುವಕನ ಪ್ರೀತಿಗಾಗಿ ರಷ್ಯಾದಿಂದ ಭಾರತಕ್ಕೆ ಬಂದ ಯುವತಿ! ಗುಡಿಸಲಿನಲ್ಲೂ ಬದುಕಲು ಸೈ ಎಂದ ಜೂಲಿ

2

ಕೇಂದ್ರ ಸಚಿವ ಸಂಪುಟದಿಂದ 2 ಪ್ರಮುಖ ನಿರ್ಧಾರ.. DA ಹೆಚ್ಚಳದ ಬಗ್ಗೆ ಮುಂದುವರೆದ ಸಸ್ಪೆನ್ಸ್‌

3

ನವರಾತ್ರಿಯಲ್ಲಿ ಜನಿಸಿದ ಮಕ್ಕಳ ಸ್ವಭಾವ ಹೇಗಿರುತ್ತೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ!

4

'ನಾನು ಬಾಯಿ ಬಿಟ್ರೆ ಮತ್ತೊಮ್ಮೆ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕುʼ! ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್!

5

KRS ಡ್ಯಾಂ ನೀರಿನ ಮಟ್ಟ 100 ಅಡಿಗೆ ಕುಸಿತ! ತಮಿಳುನಾಡಿಗೆ ನೀರು ಹರಿವು ಮುಂದುವರಿಕೆ, ರೈತರಲ್ಲಿ ಆತಂಕ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನಿನ್ನೆ (ಅ. 14, ಬುಧವಾರ) ನಡೆದಕೇಂದ್ರ ಸರ್ಕಾರದ ಮಹತ್ವದ ಕ್ಯಾಬಿನೆಟ್‌ ಸಭೆಯಲ್ಲಿ ರೈಲ್ವೆ ಉದ್ಯೋಗಿಗಳಿಗೆ PLB ಪಾವತಿ ಮತ್ತು ಪಿಂಚಣಿ ಯೋಜನೆಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆದಾಗ್ಯೂ, 2026ರ ಎರಡನೇ ಕಂತಿನ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳ ಕುತೂಹಲ ಮಾತ್ರ ಹಾಗೆಯೇ ಉಳಿದಿದೆ.

ಹೌದು, ಅಕ್ಟೋಬರ್ 14 ರ ಬುಧವಾರದಂದು ನಡೆದ ಕೇಂದ್ರ ಕ್ಯಾಬಿನೆಟ್‌ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳದ ಬಗೆಗಿನ ಸಸ್ಪೆನ್ಸ್ ಇನ್ನೂ ಮುಂದುವರೆದಿದೆ. ಆದರೆ, ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ವಿಚಾರಗಳ ಬಗ್ಗೆ ಮೋದಿ ಕ್ಯಾಬಿನೆಟ್‌ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಎರಡು ವಿಚಾರಗಳ ಬಗ್ಗೆ ಮೋದಿ ಸಂಪುಟದ ಮಹತ್ವದ ನಿರ್ಧಾರ:
ಅಕ್ಟೋಬರ್ 14ರಂದು ಮೋದಿ ಕ್ಯಾಬಿನೆಟ್‌ನಲ್ಲಿ ಕೈಗೊಳ್ಳಲಾದ ಎರಡು ಪ್ರಮುಖ ನಿರ್ಧಾರಗಳೆಂದರೆ...
ಮೊದಲನೆಯದಾಗಿ - ರೈಲ್ವೆ ಉದ್ಯೋಗಿಗಳಿಗೆ ಪಿ.ಎಲ್.ಬಿ. ದಸರಾ ಬೋನಸ್‌ ಘೋಷಣೆ
ಎರಡನೆಯದಾಗಿ - ಪಿಂಚಣಿ ಯೋಜನೆಗಳ ಹೆಸರುಗಳಲ್ಲಿನ ಬದಲಾವಣೆ

* ರೈಲ್ವೆ ಉದ್ಯೋಗಿಗಳಿಗೆ ಪಿ.ಎಲ್.ಬಿ. ದಸರಾ ಬೋನಸ್:‌
ಮೋದಿ ಕ್ಯಾಬಿನೆಟ್‌ 2026 ರ ದಸರಾ ಹಬ್ಬಕ್ಕೂ ಮೊದಲೇ ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ಬಂಪರ್‌ ಗುಡ್‌ ನ್ಯೂಸ್‌ ನೀಡಿದ್ದು, 78 ದಿನಗಳ ಕಾರ್ಯಕ್ಷಮತೆ-ಸಂಬಂಧಿತ ಬೋನಸ್ ನೀಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.

ಲಭ್ಯವಿರುವ ಮಾಹಿತಿಗಳ ಪ್ರಕಾರ, ಅರ್ಹ ರೈಲ್ವೆ ನೌಕರರಿಗೆ ಪಿಎಲ್‌ಬಿ (PLB) ಆಗಿ 78 ದಿನಗಳವರೆಗೆ ಪಾವತಿಸಬಹುದಾದ ಗರಿಷ್ಠ ಮೊತ್ತ ₹17,951 ಆಗಿರಲಿದೆ ಎನ್ನಲಾಗಿದೆ.

* ಪಿಂಚಣಿ ಯೋಜನೆಗಳ ಹೆಸರು ಬದಲಾವಣೆ:
ಪಿಂಚಣಿ ಯೋಜನೆಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮೋದಿ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರನ್ವಯ ವೃದ್ಧರು, ವಿಧವೆಯರು ಮತ್ತು ಅಂಗವಿಕಲ ನಾಗರಿಕರಿಗಾಗಿ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ ಮತ್ತು ವಿವಿಧ ಪಿಂಚಣಿ ಯೋಜನೆಗಳ ಹೆಸರನ್ನು ಮರುನಾಮಕರಣ ಮಾಡಲು ಕ್ಯಾಬಿನೆಟ್‌ ಅನುಮೋದನೆ ನೀಡಿದೆ. ಹೊಸ ಹೆಸರುಗಳು PMSSY, PMVPY, PMDPY, PMPLY. ಇದಲ್ಲದೆ ಸಚಿವ ಸಂಪುಟವು ಅಂಗವಿಕಲ ಪಿಂಚಣಿ ಮೊತ್ತವನ್ನು ಸಹ ಹೆಚ್ಚಿಸಲು ನಿರ್ಧರಿಸಿದೆ.

ಕೇಂದ್ರ ನೌಕರರು ಡಿಎ ಹೆಚ್ಚಳ: 
ವಾಸ್ತವವಾಗಿ, ದೇಶಾದ್ಯಂತ ಲಕ್ಷಾಂತರ ಮಂದಿ ಸರ್ಕಾರಿ ನೌಕರರು 2026ರ ಎರಡನೇ ಕಂತಿನ ಡಿಎ ಹಣಕ್ಕಾಗಿ ಕಾತುರಾಗಿ ಕಾಯುತ್ತಿದ್ದಾರೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಏಳನೇ ವೇತನ ಆಯೋಗದ ಸೂತ್ರದ ಆಧಾರದ ಮೇಲೆ ಈ ಬಾರಿ 3% ತುಟ್ಟಿಭತ್ಯೆ ಏರಿಕೆಯನ್ನು ನಿರೀಕ್ಷಿಸಲಾಗಿದೆ. ಈ ಡಿಎ ಹೆಚ್ಚಳವು ಜುಲೈ 1, 2026 ರಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದಲೂ ನಿರೀಕ್ಷಿಸಲಾಗಿದೆ.

ದೀಪಾವಳಿ ವೇಳೆಗೆ ಡಿಎ ಹೆಚ್ಚಳ ಸಾಧ್ಯತೆ:
ಕೇಂದ್ರ ಸರ್ಕಾರಿ ನೌಕರರಿಗೆ ಸಾಮಾನ್ಯವಾಗಿ ದಸರಾ ಸಂದರ್ಭದಲ್ಲಿ ವರ್ಷದ ಎರಡನೇ ಕಂತಿನ ತುಟ್ಟಿಭತ್ಯೆ ಪರಿಷ್ಕರಣೆಯನ್ನು ಘೋಷಿಸಲಾಗುತ್ತಿತ್ತು. ಈ ವರ್ಷ ಅಕ್ಟೋಬರ್ 20 ರಂದು ದಸರಾ ಆಚರಣೆ ಇರಲಿದೆ. ಇದುವರೆಗೂ ಡಿಎ ಪರಿಷ್ಕರಣೆ ಬಗ್ಗೆ ಯಾವುದೇ ಘೋಷಣೆ ಮಾಡಲಾಗಿಲ್ಲ. ಹಾಗಾಗಿ, ಕೇಂದ್ರ ಸರ್ಕಾರದ ಉದ್ಯೋಗಿಗಳು ದೀಪಾವಳಿ ಹಬ್ಬಕ್ಕೂ ಮೊದಲೇ ಡಿಎ ಹೆಚ್ಚಳದ ಬಗ್ಗೆ ಸಿಹಿ ಸುದ್ದಿಯನ್ನು ನಿರೀಕ್ಷಿಸಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇದೀಗ ದೇಶಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಹಾಗೂ ಪಿಂಚಣಿದಾರರ ಚಿತ್ತ ಮುಂದಿನ ಕೇಂದ್ರ ಸಚಿವ ಸಂಪುಟ ಸಭೆಯತ್ತ ನೆಟ್ಟಿದ್ದು ಅಲ್ಲಿಯವರೆಗೂ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಸ್ಪೆನ್ಸ್‌ ಮುಂದುವರೆಯಲಿದೆ.
 

Add Zee News as a Preferred Source
TAGS:
Personal Finance
Indian Railways