• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /7000mAh ಬ್ಯಾಟರಿ, 120Hz ಡಿಸ್‌ಪ್ಲೇ; ಕೇವಲ ₹15,999ಕ್ಕೆ OnePlus ಸ್ಮಾರ್ಟ್‌ಫೋನ್‌!

7000mAh ಬ್ಯಾಟರಿ, 120Hz ಡಿಸ್‌ಪ್ಲೇ; ಕೇವಲ ₹15,999ಕ್ಕೆ OnePlus ಸ್ಮಾರ್ಟ್‌ಫೋನ್‌!

₹15,999ರ ಆಫರ್‌ ಬೆಲೆಯಲ್ಲಿ ಲಭ್ಯವಿರುವ OnePlus N6 Lite 4GB+64GB ಮಾದರಿ 7,000mAh ದೊಡ್ಡ ಬ್ಯಾಟರಿ, 6.75 ಇಂಚಿನ 120Hz ಡಿಸ್‌ಪ್ಲೇ ಹಾಗೂ 36 ತಿಂಗಳ Fast & Smooth ಕಾರ್ಯಕ್ಷಮತೆಯೊಂದಿಗೆ ಗಮನ ಸೆಳೆಯುತ್ತಿದೆ. 13MP AI ಕ್ಯಾಮೆರಾ, 2TBವರೆಗೆ ಸ್ಟೋರೇಜ್ ವಿಸ್ತರಣೆ, IP64 ರಕ್ಷಣೆ ಮತ್ತು MIL-STD-810H ಡ್ಯುರಬಿಲಿಟಿಯಂತಹ ವೈಶಿಷ್ಟ್ಯಗಳನ್ನೂ ಹೊಂದಿದೆ. ದೊಡ್ಡ ಬ್ಯಾಟರಿ ಮತ್ತು ದೀರ್ಘಕಾಲದ ಬಳಕೆಯನ್ನ ಬಯಸುವವರಿಗೆ ಈ ಫೋನ್ ಗಮನಾರ್ಹ ಆಯ್ಕೆಯಾಗಬಹುದು.

Written ByPuttaraj K Alur
Published: Oct 08, 2026, 05:46 PM IST|Updated: Oct 08, 2026, 06:00 PM IST
joinshare
7000mAh ಬ್ಯಾಟರಿ, 120Hz ಡಿಸ್‌ಪ್ಲೇ; ಕೇವಲ ₹15,999ಕ್ಕೆ OnePlus ಸ್ಮಾರ್ಟ್‌ಫೋನ್‌!
Image Credit: OnePlus N6 Lite

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಜನರೇ ಅಲರ್ಟ್‌ ಆಗಿರಿ..! ನಾಳೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಜನರೇ ಅಲರ್ಟ್‌ ಆಗಿರಿ..! ನಾಳೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

2

ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!

3

ಷೇರುಪೇಟೆಯಲ್ಲಿ ಮತ್ತೆ ರಕ್ತಪಾತ: ಸೆನ್ಸೆಕ್ಸ್ 1,045 ಅಂಕ ಕುಸಿತ, ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!

4

ರಾಜಧಾನಿಯಲ್ಲಿ ಸಿಡಿದ ಜೆಂಜಿ ಪವರ್ : SIR ವಿರುದ್ಧ ಕಾಕ್ರೋಚ್‌ 'ಚಪ್ಪಲಿ ಪ್ರತಿಭಟನೆ'!

5

ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ.. ನವದುರ್ಗೆಯರ ಪ್ರತಿಷ್ಠಾಪನೆ, ಆರಾಧನೆ, ನೃತ್ಯ- ಸಂಗೀತ ವೈಭವ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

OnePlus N6 Lite Smartphone: ಸ್ಮಾರ್ಟ್‌ಫೋನ್ ಖರೀದಿಸುವಾಗ ದೊಡ್ಡ ಬ್ಯಾಟರಿ, ಉತ್ತಮ ಡಿಸ್‌ಪ್ಲೇ ಹಾಗೂ ದೀರ್ಘಕಾಲದ ಕಾರ್ಯಕ್ಷಮತೆಗೆ ಆದ್ಯತೆ ನೀಡುವ ಗ್ರಾಹಕರಿಗೆ OnePlus N6 Lite ಗಮನ ಸೆಳೆಯುವ ಆಯ್ಕೆಯಾಗಿದೆ. 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಈ ಮಾದರಿಯಲ್ಲಿ 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, 120Hz ರಿಫ್ರೆಶ್‌ ರೇಟ್‌ ಹೊಂದಿರುವ 6.75 ಇಂಚಿನ ಡಿಸ್‌ಪ್ಲೇ ಮತ್ತು MIL-STD-810H ಮಿಲಿಟರಿ-ಗ್ರೇಡ್‌ ಡ್ಯುರಬಿಲಿಟಿ ನೀಡಲಾಗಿದೆ.  

ಪ್ರಸ್ತುತ ಅಮೆಜಾನ್‌ನಲ್ಲಿ ನೀಡಲಾಗಿರುವ ಆಫರ್‌ ವಿವರಗಳ ಪ್ರಕಾರ, ಈ ಫೋನ್‌ನ ಮೂಲ ಬೆಲೆ ₹24,999 ಆಗಿದ್ದು, ಶೇ.36ರಷ್ಟು ರಿಯಾಯಿತಿಯ ಬಳಿಕ ಕೇವಲ ₹15,999ಕ್ಕೆ ಲಭ್ಯವಾಗುತ್ತಿದೆ. ಆದರೆ ಆನ್‌ಲೈನ್‌ ಮಾರಾಟಗಾರರು, ಬ್ಯಾಂಕ್‌ ಆಫರ್‌ಗಳು ಮತ್ತು ಸ್ಟಾಕ್‌ ಆಧರಿಸಿ ಬೆಲೆ ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿಸುವ ಮುನ್ನ ಅಂತಿಮ ಬೆಲೆಯನ್ನ ಪರಿಶೀಲಿಸುವುದು ಉತ್ತಮ.

7,000mAh ಬ್ಯಾಟರಿ ಪ್ರಮುಖ ಆಕರ್ಷಣೆ

OnePlus N6 Liteನ ಪ್ರಮುಖ ವೈಶಿಷ್ಟ್ಯ ಅದರ 7,000mAh ಬ್ಯಾಟರಿ. ಕಂಪನಿಯ ಪರೀಕ್ಷಾ ಮಾಹಿತಿಯ ಪ್ರಕಾರ, ಬಳಕೆಯ ವಿಧಾನವನ್ನ ಅವಲಂಬಿಸಿ ಮೂರು ದಿನಗಳವರೆಗೆ ಪವರ್ ನೀಡುವ ಸಾಮರ್ಥ್ಯವನ್ನ ಹೊಂದಿದೆ. ಒಂದು ಚಾರ್ಜ್‌ನಲ್ಲಿ 49.7 ಗಂಟೆಗಳವರೆಗೆ ಕರೆ, 26.8 ಗಂಟೆಗಳವರೆಗೆ YouTube ವಿಡಿಯೋ ಪ್ಲೇಬ್ಯಾಕ್, 14.4 ಗಂಟೆಗಳ ವಿಡಿಯೋ ಕಾಲಿಂಗ್ ಮತ್ತು 8.47 ಗಂಟೆಗಳ ಗೇಮಿಂಗ್‌ವರೆಗೆ ಬ್ಯಾಟರಿ ಬ್ಯಾಕಪ್ ಸಿಗಬಹುದು ಎಂದು OnePlus ತಿಳಿಸಿದೆ. ನೈಜ ಬಳಕೆಯಲ್ಲಿ ನೆಟ್‌ವರ್ಕ್, ಆ್ಯಪ್‌ಗಳು ಮತ್ತು ಬಳಕೆಯ ಪ್ರಮಾಣಕ್ಕೆ ಅನುಗುಣವಾಗಿ ಬ್ಯಾಟರಿ ಅವಧಿ ಬದಲಾಗಬಹುದು. ಬ್ಯಾಟರಿಯ ಆರೋಗ್ಯವನ್ನೂ ದೀರ್ಘಕಾಲ ಕಾಪಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಬ್ಯಾಟರಿ ಹಲವು ವರ್ಷಗಳ ದೈನಂದಿನ ಬಳಕೆಯ ನಂತರವೂ ತನ್ನ ಸಾಮರ್ಥ್ಯದ ದೊಡ್ಡ ಭಾಗವನ್ನ ಉಳಿಸಿಕೊಳ್ಳುವಂತೆ ರೂಪಿಸಲಾಗಿದೆ.

120Hz ರಿಫ್ರೆಶ್‌ ರೇಟ್‌ನ ದೊಡ್ಡ ಡಿಸ್‌ಪ್ಲೇ

OnePlus N6 Liteನಲ್ಲಿ 17.15 ಸೆಂ.ಮೀ. ಅಂದರೆ 6.75 ಇಂಚಿನ HD+ LCD ಡಿಸ್‌ಪ್ಲೇ ಇದೆ. ಇದು ಗರಿಷ್ಠ 120Hz ರಿಫ್ರೆಶ್‌ ರೇಟ್‌ ಬೆಂಬಲಿಸುತ್ತದೆ. ಸ್ಕ್ರೋಲಿಂಗ್‌, ವಿಡಿಯೋ ವೀಕ್ಷಣೆ ಹಾಗೂ ಸಾಮಾನ್ಯ ಬಳಕೆಯ ಸಂದರ್ಭದಲ್ಲಿ ಹೆಚ್ಚಿನ ಫ್ಲೂಯಿಡಿಟಿ ನೀಡಲು 60Hz, 90Hz ಮತ್ತು 120Hz ನಡುವೆ ಡಿಸ್‌ಪ್ಲೇ ರಿಫ್ರೆಶ್‌ ರೇಟ್‌ ಬದಲಾಯಿಸಿಕೊಳ್ಳುವ ವ್ಯವಸ್ಥೆಯೂ ಇದೆ. ಡಿಸ್‌ಪ್ಲೇಗೆ Aqua Touch ಸೌಲಭ್ಯವಿದ್ದು, ಕೈಗಳು ತೇವವಾಗಿದ್ದಾಗಲೂ ಟಚ್‌ ಪ್ರತಿಕ್ರಿಯೆ ಸುಗಮವಾಗಿರಲು ಸಹಾಯ ಮಾಡುತ್ತದೆ. ಹೊರಾಂಗಣ ಬಳಕೆಗೆ 700 ನಿಟ್ಸ್‌ ಟಿಪಿಕಲ್‌ ಬ್ರೈಟ್‌ನೆಸ್‌ ಮತ್ತು HBMನಲ್ಲಿ 900 ನಿಟ್ಸ್‌ವರೆಗೆ ಬ್ರೈಟ್‌ನೆಸ್‌ ನೀಡಲಾಗಿದೆ.  

36 ತಿಂಗಳ Fast & Smooth ಅನುಭವ

ಸ್ಮಾರ್ಟ್‌ಫೋನ್‌ನಲ್ಲಿ UNISOC T7250 ಆಕ್ಟಾ-ಕೋರ್ ಪ್ರೊಸೆಸರ್‌ ಅಳವಡಿಸಲಾಗಿದೆ. ಜೊತೆಗೆ 4GB ಭೌತಿಕ RAM ಮತ್ತು 64GB UFS 2.2 ಸ್ಟೋರೇಜ್‌ ಇದೆ. RAM Expansion ಮೂಲಕ ಹೆಚ್ಚುವರಿ ವರ್ಚುವಲ್ RAM ಬಳಸುವ ಅವಕಾಶವಿದ್ದು, ಗರಿಷ್ಠ 2TBವರೆಗೆ microSD ಕಾರ್ಡ್‌ ಮೂಲಕ ಸ್ಟೋರೇಜ್‌ ವಿಸ್ತರಿಸಬಹುದು. ಕಂಪನಿಯ ಪ್ರಕಾರ, OnePlus N6 Lite ಅನ್ನು 36 ತಿಂಗಳ Fast & Smooth ಅನುಭವ ನೀಡುವ ರೀತಿಯಲ್ಲಿ ಆಪ್ಟಿಮೈಸ್ ಮಾಡಲಾಗಿದೆ. ಇದರ ಉದ್ದೇಶ ದೀರ್ಘಕಾಲದ ಬಳಕೆಯಲ್ಲೂ ಫೋನ್‌ನ ಮೂಲ ಕಾರ್ಯಕ್ಷಮತೆ ಮತ್ತು ಪ್ರತಿಕ್ರಿಯಾಶೀಲತೆಯನ್ನ ಕಾಪಾಡುವುದು.

AI ಕ್ಯಾಮೆರಾ ವೈಶಿಷ್ಟ್ಯಗಳು

ಫೋಟೋಗ್ರಫಿಗಾಗಿ 13MP ಮುಖ್ಯ ಹಿಂಬದಿ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ PDAF ಮತ್ತು ಆಟೋಫೋಕಸ್‌ ಸೌಲಭ್ಯಗಳಿವೆ. ಫೋನ್ 1080p ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲ ನೀಡುತ್ತದೆ. ಮುಂಭಾಗದಲ್ಲಿ 5MP ಕ್ಯಾಮೆರಾ ಇದೆ. AI ಆಧಾರಿತ ಫೀಚರ್‌ಗಳ ಪೈಕಿ AI Eraser ಮತ್ತು AI Clear Face ಪ್ರಮುಖವಾಗಿವೆ. ಚಿತ್ರದಲ್ಲಿರುವ ಅನಗತ್ಯ ವಸ್ತುಗಳನ್ನ ತೆಗೆದುಹಾಕಲು ಹಾಗೂ ಮುಖದ ಸ್ಪಷ್ಟತೆಯನ್ನ ಸುಧಾರಿಸಲು ಇವು ನೆರವಾಗುತ್ತವೆ ಎಂದು ಕಂಪನಿ ಹೇಳಿದೆ. HI-RES ಮೋಡ್ ಮೂಲಕ ಹೆಚ್ಚಿನ ವಿವರಗಳಿರುವ ಚಿತ್ರಗಳನ್ನ ಪಡೆಯುವ ಆಯ್ಕೆಯೂ ಇದೆ.  

MIL-STD-810H ಡ್ಯುರಬಿಲಿಟಿ, IP64 ರಕ್ಷಣೆ

ದೈನಂದಿನ ಬಳಕೆಯಲ್ಲಿ ಫೋನ್‌ ಹೆಚ್ಚು ಬಾಳಿಕೆ ಬರುವಂತೆ OnePlus N6 Lite ಅನ್ನು MIL-STD-810H ಮಾನದಂಡದ ಪ್ರಕಾರ ಪರೀಕ್ಷಿಸಲಾಗಿದೆ. ಧೂಳು ಮತ್ತು ನೀರಿನ ಚಿಮುಕಾಟದಿಂದ ರಕ್ಷಣೆ ನೀಡಲು IP64 ರೇಟಿಂಗ್‌ ಕೂಡ ಇದೆ. ಒಟ್ನಲ್ಲಿ ₹15,999ರ ಆಫರ್‌ ಬೆಲೆ ಅನ್ವಯಿಸಿದರೆ, ದೊಡ್ಡ ಬ್ಯಾಟರಿ, 120Hz ಡಿಸ್‌ಪ್ಲೇ ಮತ್ತು ದೀರ್ಘಕಾಲದ ಬಳಕೆಗೆ ಒತ್ತು ನೀಡುವ ಮಧ್ಯಮ ಬಜೆಟ್‌ ಗ್ರಾಹಕರಿಗೆ OnePlus N6 Lite ಒಂದು ಗಮನಾರ್ಹ ಆಯ್ಕೆಯಾಗಬಹುದು. ಆದರೆ ಖರೀದಿಸುವ ಮುನ್ನ ಅಂತಿಮ ಮಾರಾಟ ಬೆಲೆ, ಲಭ್ಯವಿರುವ ಆಫರ್‌, ವಾರಂಟಿ ಹಾಗೂ ಸ್ಟೋರೇಜ್‌ ಅಗತ್ಯಗಳನ್ನ ಪರಿಶೀಲಿಸುವುದು ಸೂಕ್ತ.

Add Zee News as a Preferred Source
TAGS:
Tech
Kannada News