• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಷೇರುಪೇಟೆಯಲ್ಲಿ ಮತ್ತೆ ರಕ್ತಪಾತ: ಸೆನ್ಸೆಕ್ಸ್ 1,045 ಅಂಕ ಕುಸಿತ, ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!

ಷೇರುಪೇಟೆಯಲ್ಲಿ ಮತ್ತೆ ರಕ್ತಪಾತ: ಸೆನ್ಸೆಕ್ಸ್ 1,045 ಅಂಕ ಕುಸಿತ, ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!

ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 1,045.46 ಅಂಕಗಳ ಕುಸಿತದೊಂದಿಗೆ 71,593.24 ಅಂಕಗಳಿಗೆ ಇಳಿಕೆಯಾಗಿದೆ. ಇದು ಶೇ.1.44ರಷ್ಟು ಕುಸಿತವಾಗಿದೆ. ಮತ್ತೊಂದೆಡೆ, ನಿಫ್ಟಿ 371.25 ಅಂಕಗಳ ಇಳಿಕೆಯೊಂದಿಗೆ 22,231.80 ಅಂಕಗಳಿಗೆ ತಲುಪಿದ್ದು, ಶೇ.1.64ರಷ್ಟು ಕುಸಿತ ದಾಖಲಿಸಿದೆ.

Written ByPuttaraj K Alur
Published: Oct 08, 2026, 06:11 PM IST|Updated: Oct 08, 2026, 06:26 PM IST
joinshare
ಷೇರುಪೇಟೆಯಲ್ಲಿ ಮತ್ತೆ ರಕ್ತಪಾತ: ಸೆನ್ಸೆಕ್ಸ್ 1,045 ಅಂಕ ಕುಸಿತ, ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!
Image Credit: Stock Market Crash

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಜನರೇ ಅಲರ್ಟ್‌ ಆಗಿರಿ..! ನಾಳೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಜನರೇ ಅಲರ್ಟ್‌ ಆಗಿರಿ..! ನಾಳೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

2

ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!

3

ಷೇರುಪೇಟೆಯಲ್ಲಿ ಮತ್ತೆ ರಕ್ತಪಾತ: ಸೆನ್ಸೆಕ್ಸ್ 1,045 ಅಂಕ ಕುಸಿತ, ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!

4

ರಾಜಧಾನಿಯಲ್ಲಿ ಸಿಡಿದ ಜೆಂಜಿ ಪವರ್ : SIR ವಿರುದ್ಧ ಕಾಕ್ರೋಚ್‌ 'ಚಪ್ಪಲಿ ಪ್ರತಿಭಟನೆ'!

5

ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ.. ನವದುರ್ಗೆಯರ ಪ್ರತಿಷ್ಠಾಪನೆ, ಆರಾಧನೆ, ನೃತ್ಯ- ಸಂಗೀತ ವೈಭವ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Indian Stock Market Crash: ಭಾರತೀಯ ಷೇರುಪೇಟೆಯಲ್ಲಿ ಸತತ ಕುಸಿತ ಮುಂದುವರಿದಿದ್ದು, ಗುರುವಾರದ ವಹಿವಾಟಿನಲ್ಲಿ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ. ಹೂಡಿಕೆದಾರರಲ್ಲಿ ಮಾರಾಟದ ಒತ್ತಡ ಹೆಚ್ಚಾದ ಪರಿಣಾಮ ಸೆನ್ಸೆಕ್ಸ್ ಒಂದೇ ದಿನದಲ್ಲಿ 1,045 ಅಂಕಗಳಿಗೂ ಹೆಚ್ಚು ಕುಸಿದರೆ, ನಿಫ್ಟಿ ಕೂಡ 371 ಅಂಕಗಳಷ್ಟು ಇಳಿಕೆ ಕಂಡಿದೆ. ಇದರ ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ ಸುಮಾರು ₹10.01 ಲಕ್ಷ ಕೋಟಿಯಷ್ಟು ಸಂಪತ್ತು ಒಂದೇ ದಿನ ಕರಗಿಹೋಗಿದೆ. 

ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 1,045.46 ಅಂಕಗಳ ಕುಸಿತದೊಂದಿಗೆ 71,593.24 ಅಂಕಗಳಿಗೆ ಇಳಿಕೆಯಾಗಿದೆ. ಇದು ಶೇ.1.44ರಷ್ಟು ಕುಸಿತವಾಗಿದೆ. ಮತ್ತೊಂದೆಡೆ, ನಿಫ್ಟಿ 371.25 ಅಂಕಗಳ ಇಳಿಕೆಯೊಂದಿಗೆ 22,231.80 ಅಂಕಗಳಿಗೆ ತಲುಪಿದ್ದು, ಶೇ.1.64ರಷ್ಟು ಕುಸಿತ ದಾಖಲಿಸಿದೆ. ಹೀಗಾಗಿ ಗುರುವಾರ ಭಾರತೀಯ ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಮತ್ತೊಂದು ಕಠಿಣ ದಿನವಾಗಿ ಪರಿಣಮಿಸಿದೆ. ಜಾಗತಿಕ ಹಾಗೂ ದೇಶೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದ್ದು, ಬಹುತೇಕ ಪ್ರಮುಖ ಕಂಪನಿಗಳ ಷೇರುಗಳು ಕುಸಿತ ಕಂಡಿವೆ.

ಕುಸಿತಕ್ಕೆ ಪ್ರಮುಖ ಕಾರಣವೇನು?

ಷೇರುಪೇಟೆಯ ಇಂದಿನ ಭಾರೀ ಕುಸಿತಕ್ಕೆ ಹಲವು ಅಂಶಗಳು ಕಾರಣವಾಗಿವೆ. ಪ್ರಮುಖವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ನೀತಿ ನಿಲುವನ್ನ ‘ತಟಸ್ಥ’ದಿಂದ ‘ಮಿತವಾದ ಬಿಗಿಗೊಳಿಸುವಿಕೆ’ (Calibrated Tightening) ಕಡೆಗೆ ಬದಲಿಸಿರುವುದು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಿದೆ. ಇದರ ಜೊತೆಗೆ ಮಧ್ಯಪ್ರಾಚ್ಯದಲ್ಲಿ ಪೂರೈಕೆ ಕುರಿತ ಆತಂಕ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಂಡಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.3.9ರಷ್ಟು ಏರಿಕೆಯಾಗಿ, ದಿನದ ಗರಿಷ್ಠ ಮಟ್ಟದಲ್ಲಿ ಪ್ರತಿ ಬ್ಯಾರೆಲ್‌ಗೆ 104.09 ಡಾಲರ್ ತಲುಪಿದೆ.

ಕಚ್ಚಾ ತೈಲದ ಬೆಲೆ ಏರಿಕೆಯು ಭಾರತದಂತಹ ತೈಲ ಆಮದು ಅವಲಂಬಿತ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಗಿದೆ. ಇದರ ಜೊತೆಗೆ ಆರ್‌ಬಿಐ ನೀತಿ ನಿಲುವಿನ ಬದಲಾವಣೆ ಮತ್ತು ಷೇರುಪೇಟೆಯಲ್ಲಿನ ಮಾರಾಟದ ಒತ್ತಡವೂ ಸೇರಿ ಪ್ರಮುಖ ಸೂಚ್ಯಂಕಗಳು ಕೆಂಪಿನಲ್ಲಿ ವಹಿವಾಟು ಮುಗಿಸುವಂತಾಗಿದೆ.

ಬಹುತೇಕ ಪ್ರಮುಖ ಷೇರುಗಳು ಕುಸಿತ

ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ನಲ್ಲಿ ಪಟ್ಟಿ ಮಾಡಲಾಗಿರುವ ಬಹುತೇಕ ಪ್ರಮುಖ ಕಂಪನಿಗಳ ಷೇರುಗಳು ಇಳಿಕೆ ಕಂಡಿವೆ. ಟೈಟನ್, ಟ್ರೆಂಟ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಕೋಟಕ್ ಬ್ಯಾಂಕ್, ಎಸ್‌ಬಿಐ, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಎನ್‌ಟಿಪಿಸಿ, ಮಾರುತಿ, ಎಲ್‌ & ಟಿ, ಎಟರ್ನಲ್, ರಿಲಯನ್ಸ್, ಪವರ್ ಗ್ರಿಡ್, ಬಿಇಎಲ್, ಇಂಡಿಗೋ, ಅದಾನಿ ಪೋರ್ಟ್ಸ್ ಮತ್ತು ಐಟಿಸಿ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಷೇರುಗಳ ಮೌಲ್ಯ ಕುಸಿದಿದೆ. ಇನ್ನೊಂದೆಡೆ ಕೆಲವೇ ಕೆಲವು ಪ್ರಮುಖ ಷೇರುಗಳು ಮಾತ್ರ ಲಾಭದಲ್ಲಿ ವಹಿವಾಟು ನಡೆಸಿವೆ. ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಲಾಭಾಂಶ ದಾಖಲಿಸಿದವು.

ಕರಗಿದ ಹೂಡಿಕೆದಾರರ ₹10 ಲಕ್ಷ ಕೋಟಿ ಸಂಪತ್ತು! 

ಗುರುವಾರದ ಷೇರುಪೇಟೆ ಕುಸಿತದ ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣ ₹4,70,98,931 ಕೋಟಿ ಇತ್ತು. ಆದರೆ ಗುರುವಾರದ ವಹಿವಾಟಿನ ಅಂತ್ಯಕ್ಕೆ ಈ ಮಾರುಕಟ್ಟೆ ಬಂಡವಾಳೀಕರಣ ₹4,60,97,839 ಕೋಟಿಗೆ ಇಳಿಕೆಯಾಗಿದೆ. ಅಂದರೆ ಒಂದೇ ದಿನದಲ್ಲಿ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಸುಮಾರು ₹10,01,092 ಕೋಟಿ, ಅಂದರೆ ಸರಿಸುಮಾರು ₹10.01 ಲಕ್ಷ ಕೋಟಿ ಒಂದೇ ದಿನ ಇಳಿಕೆಯಾಗಿದೆ. ಇದರಿಂದ ಷೇರುಗಳಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರ ಸಂಪತ್ತಿನ ಮೇಲೂ ಭಾರೀ ಪರಿಣಾಮ ಬೀರಿದೆ.

ಒಟ್ನಲ್ಲಿ ಆರ್‌ಬಿಐ ನೀತಿ ನಿಲುವಿನ ಬದಲಾವಣೆ, ಕಚ್ಚಾ ತೈಲ ಬೆಲೆ ಏರಿಕೆ, ಮಧ್ಯಪ್ರಾಚ್ಯದ ಪೂರೈಕೆ ಆತಂಕ ಮತ್ತು ಮಾರುಕಟ್ಟೆಯಲ್ಲಿನ ಮಾರಾಟದ ಒತ್ತಡ ಭಾರತೀಯ ಷೇರುಪೇಟೆಯ ಮೇಲೆ ಪರಿಣಾಮ ಬೀರಿವೆ. ಇದರ ಪರಿಣಾಮ ಸೆನ್ಸೆಕ್ಸ್ 1,045 ಅಂಕ ಹಾಗೂ ನಿಫ್ಟಿ 371 ಅಂಕಗಳಷ್ಟು ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.

Add Zee News as a Preferred Source
TAGS:
Business
Kannada News