• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!

ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!

ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದ ಚೇತನ ಎಂಬಾಕೆ, ಬಳಿಕ ಲಕ್ಷಾಂತರ ರೂಪಾಯಿ ಸೆಟಲ್‌ಮೆಂಟ್ ಮಾಡಿಕೊಂಡು ಈಗ ತನಗೆ ಸಹಾಯ ಮಾಡಿದ್ದ ಹೋರಾಟಗಾರ್ತಿ ವಿರುದ್ಧವೇ ತಿರುಗಿಬಿದ್ದಿದ್ದು, ಪ್ರಕರಣ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.. ಇಬ್ಬರ ಗಂಡಂದಿರ ಮುದ್ದಿನ ಹೆಂಡತಿಯ ರೋಚಕ ಕಹಾನಿ ಇಲ್ಲಿದೆ..

Reported ByKrishna NKEdited ByKrishna NK
Published: Oct 08, 2026, 06:18 PM IST|Updated: Oct 08, 2026, 06:20 PM IST
joinshare
ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!
Image Credit: Crime News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಜನರೇ ಅಲರ್ಟ್‌ ಆಗಿರಿ..! ನಾಳೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಜನರೇ ಅಲರ್ಟ್‌ ಆಗಿರಿ..! ನಾಳೆ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

2

ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!

3

ಷೇರುಪೇಟೆಯಲ್ಲಿ ಮತ್ತೆ ರಕ್ತಪಾತ: ಸೆನ್ಸೆಕ್ಸ್ 1,045 ಅಂಕ ಕುಸಿತ, ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!

4

ರಾಜಧಾನಿಯಲ್ಲಿ ಸಿಡಿದ ಜೆಂಜಿ ಪವರ್ : SIR ವಿರುದ್ಧ ಕಾಕ್ರೋಚ್‌ 'ಚಪ್ಪಲಿ ಪ್ರತಿಭಟನೆ'!

5

ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ.. ನವದುರ್ಗೆಯರ ಪ್ರತಿಷ್ಠಾಪನೆ, ಆರಾಧನೆ, ನೃತ್ಯ- ಸಂಗೀತ ವೈಭವ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಚಿಕ್ಕಬಳ್ಳಾಪುರ: ನ್ಯಾಯ ಕೊಡಿಸಲು ನಿಂತ ಮಹಿಳಾ ಹೋರಾಟಗಾರ್ತಿಗೇ ಚಳ್ಳೆಹಣ್ಣು ತಿನಿಸಿ, ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಯಲಹಂಕದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಚೇತನಾ ಎಂಬಾಕೆಯ ಹೈಡ್ರಾಮಾ ಈಗ ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಟೀ ಅಂಗಡಿಯಲ್ಲಾದ ಪರಿಚಯ, ಪ್ರೇಮದ ನಾಟಕ 
ಬೆಂಗಳೂರಿನ ಯಲಹಂಕದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಚೇತನಾ, ಅಲ್ಲಿಗೆ ನಿಯಮಿತವಾಗಿ ಬರುತ್ತಿದ್ದ ಮುನಿರಾಜು ಎಂಬುವವರ ಜೊತೆ ಪರಿಚಯ ಬೆಳೆಸಿಕೊಂಡಿದ್ದಳು. ದಿನಕಳೆದಂತೆ ಇಬ್ಬರ ನಡುವಿನ ಪರಿಚಯ ನಿಕಟ ಸಂಬಂಧಕ್ಕೆ ತಿರುಗಿತ್ತು. ಆದರೆ, ಕೆಲ ದಿನಗಳ ನಂತರ ಮುನಿರಾಜು ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ ಚೇತನ, ನ್ಯಾಯ ಕೊಡಿಸುವಂತೆ ಕಣ್ಣೀರಿಡುತ್ತಾ ಮಹಿಳಾ ಹೋರಾಟಗಾರ್ತಿ ನಂದಿನಿ ಅವರ ಬಳಿ ಸಹಾಯಕ್ಕೆ ಬಂದಿದ್ದಳು.

ಮದುವೆ ಮಾಡಿಸಿದ ಹೋರಾಟಗಾರ್ತಿ, ಕಾದಿತ್ತು ಬಿಗ್ ಶಾಕ್
ಚೇತನಳ ಅಳಲನ್ನು ಸತ್ಯವೆಂದು ನಂಬಿದ ಹೋರಾಟಗಾರ್ತಿ ನಂದಿನಿ, ಮುನಿರಾಜುನನ್ನು ಕರೆಸಿ ಇಬ್ಬರಿಗೂ ಕಾನೂನುಬದ್ಧವಾಗಿ ವಿವಾಹ ಮಾಡಿಸಿ ನ್ಯಾಯ ಒದಗಿಸಿದ್ದರು. ಆದರೆ ಅಸಲಿ ಕಥೆ ಮದುವೆಯ ನಂತರ ಬಯಲಾಗಿದೆ. ಚೇತನ ತನಗೆ ಈಗಾಗಲೇ ನವೀನ್ ಎಂಬುವವನ ಜೊತೆ ಮೊದಲ ಮದುವೆಯಾಗಿದ್ದ ಸತ್ಯವನ್ನು ಸಂಪೂರ್ಣವಾಗಿ ಮುಚ್ಚಿಟ್ಟಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಹೋರಾಟಗಾರ್ತಿ ನಂದಿನಿ ತೀವ್ರ ದಿಗ್ಭ್ರಮೆಗೊಂಡಿದ್ದಾರೆ. ಇತ್ತ ಮೊದಲ ಗಂಡ ನವೀನ್ ಪ್ರತ್ಯಕ್ಷನಾಗುತ್ತಿದ್ದಂತೆ, "ಮೊದಲ ಗಂಡ ಜೀವಂತವಾಗಿರುವಾಗ ಈಕೆ ನನಗೆ ಬೇಡ" ಎಂದು ಎರಡನೇ ಗಂಡ ಮುನಿರಾಜು ಹಿಂದೆ ಸರಿದಿದ್ದಾನೆ.

1.10 ಲಕ್ಷ ರೂ. ಸೆಟಲ್‌ಮೆಂಟ್ ಮತ್ತು ಉಲ್ಟಾ ಹೊಡೆದ ಚೇತನ
ಇಷ್ಟೆಲ್ಲಾ ನಾಟಕದ ಬಳಿಕವೂ ಸುಮ್ಮನಿರದ ಚೇತನಾ, ಎರಡನೇ ಗಂಡ ಮುನಿರಾಜುನಿಂದ 1 ಲಕ್ಷ 10 ಸಾವಿರ ರೂಪಾಯಿ ಪಡೆದುಕೊಂಡು ವಿಷಯವನ್ನು ಸೆಟಲ್‌ಮೆಂಟ್ ಮಾಡಿಕೊಂಡಿದ್ದಳು. ಆದರೆ, ಈ ಹಣದ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡುತ್ತಿದ್ದಂತೆ, ತನಗೆ ಆಸರೆ ನೀಡಿ ನ್ಯಾಯ ಕೊಡಿಸಿದ ಹೋರಾಟಗಾರ್ತಿ ನಂದಿನಿ ವಿರುದ್ಧವೇ ಚೇತನ ತಿರುಗಿಬಿದ್ದಿದ್ದಾಳೆ.

ಹಣಕ್ಕಾಗಿ ನಂದಿನಿ ಅವರಿಗೆ ಕಿರುಕುಳ ನೀಡಲು ಪ್ರಾರಂಭಿಸಿ ಗಲಾಟೆ ಮಾಡಿದ್ದಾಳೆ. ಸಹಾಯ ಮಾಡಿದ ಕೈಗೇ ಚಳ್ಳೆಹಣ್ಣು ತಿನಿಸಿ ಹೈಡ್ರಾಮಾ ಸೃಷ್ಟಿಸಿರುವ ಈಕೆಯ ಕೃತ್ಯದ ವಿರುದ್ಧ ಇದೀಗ ಚಿಕ್ಕಬಳ್ಳಾಪುರ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Add Zee News as a Preferred Source
TAGS:
Kannada News