SOCIAL MEDIA

Newsletter

PARTNER SITES
Select Language Select State

ಲೈಸೆನ್ಸ್ ಬೇಡ.. ರಿಜಿಸ್ಟ್ರೇಷನ್ ಇಲ್ಲ... ಕೇವಲ ₹55,459ಕ್ಕೆ 80KM ರೇಂಜ್‌ನ ಎಲೆಕ್ಟ್ರಿಕ್ ಸ್ಕೂಟರ್!

ಸುರಕ್ಷತೆಯ ದೃಷ್ಟಿಯಿಂದ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ವ್ಯವಸ್ಥೆಯನ್ನ ನೀಡಲಾಗಿದೆ. ವಿವಿಧ ರಸ್ತೆ ಪರಿಸ್ಥಿತಿಗಳಲ್ಲಿ ವಾಹನವನ್ನ ನಿಯಂತ್ರಿಸಲು ಈ ಡ್ಯುಯಲ್ ಬ್ರೇಕಿಂಗ್ ವ್ಯವಸ್ಥೆ ನೆರವಾಗುತ್ತದೆ ಎಂದು ಕಂಪನಿ ತಿಳಿಸಿದೆ.

Written By Puttaraj K Alur
Published: Oct 08, 2026, 07:41 PM IST | Updated: Oct 08, 2026, 07:57 PM IST
Image Credit: Mioox Electric Scooter
Join

Mioox Electric Scooter: ಪೆಟ್ರೋಲ್ ಬೆಲೆ ಏರಿಕೆ ಹಾಗೂ ನಗರ ಪ್ರದೇಶಗಳಲ್ಲಿ ಕಡಿಮೆ ವೆಚ್ಚದ ಸಂಚಾರದ ಅಗತ್ಯ ಹೆಚ್ಚುತ್ತಿರುವ ನಡುವೆ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ Mioox ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಒಂದು ಗಮನ ಸೆಳೆಯುತ್ತಿದ್ದು, 48V 35Ah ಲಿಥಿಯಂ ಬ್ಯಾಟರಿ, 60ರಿಂದ 80 ಕಿಲೋಮೀಟರ್‌ವರೆಗೆ ರೇಂಜ್‌ ಮತ್ತು ಗರಿಷ್ಠ 40 ಕಿಮೀ ವೇಗದಂತಹ ವೈಶಿಷ್ಟ್ಯಗಳನ್ನ ಹೊಂದಿದೆ. ಅಮೆಜಾನ್‌ನಲ್ಲಿ ನೀಡಲಾಗಿರುವ ಆಫರ್‌ ಮಾಹಿತಿಯ ಪ್ರಕಾರ, ₹62,999 ಮೂಲ ಬೆಲೆ ಹೊಂದಿರುವ ಈ ಸ್ಕೂಟರ್ ಕೇವಲ ₹55,459ಕ್ಕೆ ಲಭ್ಯವಿದೆ.

80KMವರೆಗೆ ರೇಂಜ್

Mioox Electric Scooterನ ಪ್ರಮುಖ ಆಕರ್ಷಣೆ ಅದರ 48V 35Ah ವಾಟರ್‌ಪ್ರೂಫ್ ಲಿಥಿಯಂ-ಐಯಾನ್ ಬ್ಯಾಟರಿ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 60ರಿಂದ 80 ಕಿಲೋಮೀಟರ್‌ವರೆಗೆ ಪ್ರಯಾಣಿಸಬಹುದು ಎಂದು ಉತ್ಪನ್ನದ ವಿವರದಲ್ಲಿ ಹೇಳಲಾಗಿದೆ. ದಿನನಿತ್ಯದ ನಗರ ಸಂಚಾರ, ಕಚೇರಿಗೆ ಹೋಗುವುದು, ಕಾಲೇಜು ಅಥವಾ ಸಮೀಪದ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಈ ರೇಂಜ್‌ ಉಪಯುಕ್ತವಾಗಬಹುದು. ಆದರೆ ನೈಜ ರೇಂಜ್‌ ರಸ್ತೆ ಪರಿಸ್ಥಿತಿ, ಸವಾರರ ತೂಕ, ವೇಗ, ಟ್ರಾಫಿಕ್‌, ಹವಾಮಾನ ಮತ್ತು ಬ್ಯಾಟರಿ ಬಳಕೆಯ ವಿಧಾನವನ್ನ ಅವಲಂಬಿಸಿ ಬದಲಾಗಬಹುದು.

40KM/H ಗರಿಷ್ಠ ವೇಗ

ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 40 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ವೇಗಕ್ಕಿಂತ ನಗರ ಪ್ರದೇಶದ ದೈನಂದಿನ ಸಂಚಾರಕ್ಕೆ ಆದ್ಯತೆ ನೀಡುವ ಬಳಕೆದಾರರಿಗೆ ಇದು ಗಮನಾರ್ಹ ಆಯ್ಕೆಯಾಗಬಹುದು. ಸ್ಕೂಟರ್‌ನ ತೂಕ ಸುಮಾರು 95 ಕೆ.ಜಿ. ಇದೆ. ಕಡಿಮೆ ತೂಕದ ವಿನ್ಯಾಸದಿಂದ ನಗರ ಪ್ರದೇಶಗಳಲ್ಲಿ ನಿರ್ವಹಣೆ ಸುಲಭವಾಗುವ ಉದ್ದೇಶ ಹೊಂದಿದೆ.

ಡಿಸ್ಕ್ ಮತ್ತು ಡ್ರಮ್ ಬ್ರೇಕ್

ಸುರಕ್ಷತೆಯ ದೃಷ್ಟಿಯಿಂದ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ವ್ಯವಸ್ಥೆಯನ್ನ ನೀಡಲಾಗಿದೆ. ವಿವಿಧ ರಸ್ತೆ ಪರಿಸ್ಥಿತಿಗಳಲ್ಲಿ ವಾಹನವನ್ನ ನಿಯಂತ್ರಿಸಲು ಈ ಡ್ಯುಯಲ್ ಬ್ರೇಕಿಂಗ್ ವ್ಯವಸ್ಥೆ ನೆರವಾಗುತ್ತದೆ ಎಂದು ಕಂಪನಿ ತಿಳಿಸಿದೆ. ರಾತ್ರಿ ಪ್ರಯಾಣಕ್ಕೆ LED ಅಥವಾ LCD ಹೆಡ್‌ಲೈಟ್ ಮತ್ತು ಇಂಡಿಕೇಟರ್‌ಗಳನ್ನ ನೀಡಲಾಗಿದೆ. ಜೊತೆಗೆ ವಿಶಾಲವಾದ ಸೀಟ್ ಇರುವುದರಿಂದ ದೈನಂದಿನ ಪ್ರಯಾಣದಲ್ಲಿ ಹೆಚ್ಚಿನ ಆರಾಮ ನೀಡುವ ಉದ್ದೇಶ ಹೊಂದಿದೆ.

Non-RTO ಮಾದರಿ ಎಂಬ ಹೇಳಿಕೆ

ಈ ಮಾದರಿಯನ್ನ ಮಾರಾಟದ ವಿವರದಲ್ಲಿ ‘Non-RTO’ ಎಲೆಕ್ಟ್ರಿಕ್ ಸ್ಕೂಟರ್ ಎಂದು ಉಲ್ಲೇಖಿಸಲಾಗಿದ್ದು, ಲೈಸೆನ್ಸ್ ಅಥವಾ ನೋಂದಣಿ ಅಗತ್ಯವಿಲ್ಲವೆಂದು ಮಾರಾಟದ ಮಾಹಿತಿಯಲ್ಲಿ ಹೇಳಲಾಗಿದೆ. ಆದರೆ ಇಂತಹ ವಾಹನಗಳಿಗೆ ನಿಯಮಗಳು ಅದರ ಗರಿಷ್ಠ ವೇಗ, ಮೋಟಾರ್ ಸಾಮರ್ಥ್ಯ ಮತ್ತು ವಾಹನದ ವರ್ಗೀಕರಣದ ಮೇಲೆ ಅವಲಂಬಿತವಾಗಿರಬಹುದು. ಹೀಗಾಗಿ ಖರೀದಿಸುವ ಮೊದಲು ನಿಮ್ಮ ರಾಜ್ಯದ ಪ್ರಸ್ತುತ ಸಾರಿಗೆ ನಿಯಮಗಳು ಹಾಗೂ ಮಾರಾಟಗಾರರಿಂದ ನೀಡಲಾಗುವ ದಾಖಲೆಗಳನ್ನ ಪರಿಶೀಲಿಸುವುದು ಮುಖ್ಯ.

2 ವರ್ಷದ ಬ್ಯಾಟರಿ ವಾರಂಟಿ

ವಾರಂಟಿಯ ವಿಷಯದಲ್ಲೂ ಈ ಸ್ಕೂಟರ್ ಗಮನ ಸೆಳೆಯುತ್ತದೆ. ಉತ್ಪನ್ನದ ಮಾಹಿತಿಯ ಪ್ರಕಾರ ಬ್ಯಾಟರಿಗೆ 2 ವರ್ಷ, ಮೋಟಾರ್‌ಗೆ 1 ವರ್ಷ ಮತ್ತು ಚಾರ್ಜರ್‌ಗೆ 1 ವರ್ಷದ ವಾರಂಟಿ ನೀಡಲಾಗುತ್ತಿದೆ. ಜೊತೆಗೆ ವಿವಿಧ ನಗರಗಳಲ್ಲಿ ತಾಂತ್ರಿಕ ಸೇವಾ ಬೆಂಬಲ ಲಭ್ಯವಿದೆ ಎಂದು ತಿಳಿಸಲಾಗಿದೆ.

₹55,459ಕ್ಕೆ ಲಭ್ಯವೇ?

ನೀಡಿರುವ ಆಫರ್ ಮಾಹಿತಿಯ ಪ್ರಕಾರ ₹62,999 ಮೂಲ ಬೆಲೆ ಹೊಂದಿರುವ Mioox Electric Scooterಗೆ ಶೇ.12ರಷ್ಟು ರಿಯಾಯಿತಿ ಬಳಿಕ ₹55,459 ಬೆಲೆಗೆ ಸಿಗುತ್ತಿದೆ. ಆದರೆ ಆನ್‌ಲೈನ್‌ ಮಾರಾಟದಲ್ಲಿ ಬೆಲೆ, ಕೂಪನ್, ಬ್ಯಾಂಕ್ ಆಫರ್ ಮೂಲಕ ನೀವು ಇನ್ನಷ್ಟು ಡಿಸ್ಕೌಂಟ್‌ ಪಡೆಯಬಹುದು. ಹೀಗಾಗಿ ಈ ಎಲ್ಲಾ ಆಫರ್‌ಗಳ ಪ್ರಯೋಜನ ಪಡೆದರೆ ಕಡಿಮೆ ಬಲೆಗೆ ಅತ್ಯುತ್ತಮ ಎಲೆಕ್ಟ್ರಿಕ್‌ ಸ್ಕೂಟರ್‌ಅನ್ನ ಮನೆಗೆ ಕೊಂಡೊಯ್ಯಬಹುದು. 60–80KMವರೆಗೆ ರೇಂಜ್‌, 40KM/H ವೇಗ, 48V 35Ah ಲಿಥಿಯಂ ಬ್ಯಾಟರಿ, ಡ್ಯುಯಲ್ ಬ್ರೇಕ್ ವ್ಯವಸ್ಥೆ ಮತ್ತು ವಾರಂಟಿಯಂತಹ ವೈಶಿಷ್ಟ್ಯಗಳೊಂದಿಗೆ Mioox Electric Scooter ನಗರ ಸಂಚಾರಕ್ಕಾಗಿ ಕಡಿಮೆ ನಿರ್ವಹಣಾ ವೆಚ್ಚದ ಆಯ್ಕೆಯನ್ನ ಹುಡುಕುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES